ಬಿಸಿ ಬಿಸಿ ಸುದ್ದಿ

ಹತ್ತನೆ ತರಗತಿಯ ಮಕ್ಕಳಿಗೆ ಸ್ಪೂರ್ತಿದಾಯಕ ಕಾರ್ಯಕ್ರಮ: ಕೌನ ಬನೇಗಾ ಜ್ಞಾನಪತಿ

ಕಲಬುರಗಿ: ಕಲ್ಯಾಣ ಕರ್ನಾಟಕದಲ್ಲಿ ಇದೀಗ ಹತ್ತನೇ ತರಗತಿಯ ಫಲಿತಾಂಶದತ್ತ ಎಲ್ಲರ ಚಿತ್ತವಿದೆ. ಓದಿನ ಮೂಲಕ ಕ್ರಾಂತಿಯನ್ನು ಮಾಡುವ ತರಗತಿಯಿದು. ವಿಧ್ಯಾರ್ಥಿ ಜೀವನದಲ್ಲಿ ಹತ್ತನೆ ತರಗತಿ ಅತ್ಯಂತ ಮಹತ್ವದ ಸ್ಥಾನ ಪಡೆಯುತ್ತದೆ. ಮಕ್ಕಳೆಲ್ಲರೂ ಓದಿ ಭಾರತ ಭವಿಷ್ಯ ಬರೆಯುವ ವ್ಯಕ್ತಿಗಳಾಗಬೇಕು. ಇಂದು ನಾನು ಭಾಗವಹಿಸಿದ ಕೌನ ಬನೇಗಾ ಜ್ಞಾನಪತಿ ಕಾರ್ಯಕ್ರಮವು ಕಲ್ಯಾಣ ಕರ್ನಾಟಕದ ಹತ್ತನೆ ತರಗತಿಯ ಮಕ್ಕಳಿಗೆ ಅತ್ಯಂತ ಸ್ಪೂರ್ತಿದಾಯಕವಾಗಿದೆ ಎಂದು ಶಿಕ್ಷಣ ಪ್ರೇಮಿ ಡಾ.ಬೀರಣ್ಣ ಕಲ್ಲೂರ ಅಭಿಪ್ರಾಯ ವ್ಯಕ್ತಪಡಿಸಿದರು.
ಅವರು ಇಂದು ಪ್ರಜ್ಞಾ ದಿ ಇನ್ಸ್ ಟ್ಯೂಟ್ ಆಫ್ ಲರ್ನಿಂಗ್ ಅರ್ಪಿಸುವ ಕೌನ ಬನೇಗಾ ಜ್ಞಾನಪತಿ ವಿಶಿಷ್ಠವಾದ ರಸಪ್ರಶ್ನೆ ಕಾರ್ಯಕ್ರಮದಲ್ಲಿ ಮಕ್ಕಳಿಗೆ ಬಹುಮಾನ ವಿತರಣೆ ಮಾಡಿ ಮಾತನಾಡಿದರು.

ವಿಶ್ವನಾಥ ಮರತೂರ ಮತ್ತು ಅವರ ಗೆಳೆಯರ ಬಳಗದ ಈ ಕಾರ್ಯಕ್ರಮ ಮಕ್ಕಳ ಪರೀಕ್ಷೆಗೆ ದಾರಿದೀಪವಾಗಲಿದೆ. ಪರೀಕ್ಷೆಯ ಸ್ಪಷ್ಟವಾದ ಮಾಹಿತಿ ನೀಡುತ್ತಿರುವುದು ಶ್ಲಾಘನೀಯ. ಮಕ್ಕಳಲ್ಲಿ ಪರೀಕ್ಷೆಯ ಭಯ ಹೋಗಲಾಡಿಸುವುದರಲ್ಲಿ ಈ ಕಾರ್ಯಕ್ರಮ ಯಶಸ್ವಿಯಾಗುತ್ತಿದೆ ಎಂದರು.

ಈ ಕಾರ್ಯಕ್ರಮವು ಅತ್ಯಂತ ಅರ್ಥಪೂರ್ಣವಾಗಿದೆ. ಹತ್ತನೇಯ ತರಗತಿಯ ಪರೀಕ್ಷೆಯ ಬಗ್ಗೆ ಸೂಕ್ತವಾದ ಮಾಹಿತಿ ಕೊಡಲಾಗುತ್ತಿದೆ. ಗ್ರಾಮೀಣಭಾಗದಲ್ಲಿನ ಮಕ್ಕಳಿಗೆ ಈ ಕಾರ್ಯಕ್ರಮ ಪರೀಕ್ಷಾ ದೃಷ್ಠಿಯಿಂದ ದಾರಿದೀಪವಾಗಲಿದೆ. ಟಿವಿಗಳಲ್ಲಿ ನೋಡಿದಷ್ಟೆ ರುಚಿಕರವಾಗಿದೆ ಈ ಕಾರ್ಯಕ್ರಮ ನಿರೂಪಕ ನಮಗೆ ಪುನಿತರಾಜಕುಮಾರನಂತೆ ಕಾರ್ಯಕ್ರಮ ನಡೆಸಿಕೊಡುತ್ತಾನೆ.                                                                                  – ಶೆಶಿಕಲಾ ಜಮ್ಮನಗೌಡ, ಶಿಕ್ಷಕರು ಸರಕಾರಿ ಕನ್ಯಾಪ್ರೌಢ ಶಾಲೆ ಕಲಬುರಗಿ

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ಕೆ.ಪಿ.ಸಿ.ಸಿ. ಕಾರ್ಯದರ್ಶಿ ದೇವಿಂದ್ರಪ್ಪ ಪುಜಾರಿ ಕೌನ ಬನೇಗಾ ಜ್ಞಾನಪತಿ ಕಾರ್ಯಕ್ರಮ ಅತ್ಯಂತ ಅರ್ಥಪೂರ್ಣವಾಗಿದೆ. ಮಕ್ಕಳಿಗೆ ಪರೀಕ್ಷೆಯ ಬಗ್ಗೆ ಮಾಹಿತಿ ತಿಳಿಸಿಕೊಡುವ ಕೆಲಸ ಮಾಡುತ್ತಿದೆ. ಹೆಚ್ಚು ವಿಧ್ಯಾರ್ಥಿಗಳು ಬಯಸಿದಂತೆ ಅತ್ಯಂತ ರಸವತ್ತಾಗಿ ಕಾರ್ಯಕ್ರಮ ಮಾಡುತ್ತಿದ್ದಾರೆ. ಮಕ್ಕಳಲ್ಲಿ ಸ್ಪರ್ಧಾತ್ಮಕ ಮನೋಭಾವ ಬೆಳೆಸುತ್ತಿರುವ ಕಾರ್ಯಕ್ರಮ ಅತ್ಯಂತ ಯಶಸ್ವಿಯಾಗಿ ಮುನ್ನುಗ್ಗಲಿ ಎಂದು ಹಾರೈಸಿದರು.

ನಮ್ಮ ತರಗತಿಯೊಳಗೆ ಕಲಿಯುವುದಕ್ಕಿಂತ ವಿಭಿನ್ನವಾಗಿ ಈ ಕಾರ್ಯಕ್ರಮದಲ್ಲಿ ವಿಷಯಗಳನ್ನು ತಿಳಿಸಲಾಗುತ್ತಿದೆ. ನನಗೆ ಅತ್ಯಂತ ಖುಷಿಯಾಗಿ ನೋಡಿಕೊಳ್ಳಲಾಗುತ್ತಿದೆ. ಪರೀಕ್ಷೆಯ ಬಗ್ಗೆ ಅತ್ಯಂತ ಮಹತ್ವದ ಮಾಹಿತಿ,ಪ್ರಶ್ನೆ, ಉತ್ತರ ಜೊತೆಗೆ ಮಜವಾಗಿ ಹೇಳಿಕೊಡುವ ಈ ಕಾರ್ಯಕ್ರಮ ನನಗೆ ಬಹಳ ಇಷ್ಟವಾಗುತ್ತದೆ.
– ಭೀಮಾಶಂಕ ನೀಲಕಂಠರಾಯ, ವಿಧ್ಯಾರ್ಥಿ ಮೈಲಾರಲಿಂಗೇಶ್ವರ ಪ್ರೌಢಶಾಲೆ ಪಟ್ಟಣ

ಕಾರ್ಯಕ್ರಮದಲ್ಲಿ ಪ್ರಸ್ತಾವಿಕವಾಗಿ ಮಾತನಾಡಿದ ಶೈಕ್ಷಣಿಕ ಸಂಪನ್ಮೂಲ ವ್ಯಕ್ತಿ ಕೆ.ಎಂ.ವಿಶ್ವನಾಥ ಮರತೂರ ಈ ಕಾರ್ಯಕ್ರಮದಿಂದ ಮಕ್ಕಳಲ್ಲಿ ಸೃಜನಾತ್ಮಕ ಮನೋಭಾವ ಬೆಳೆಸುವ ಪ್ರಯತ್ನ ಮಾಡಲಾಗುತ್ತಿದೆ. ಶೈಕ್ಷಣಿಕವಾಗಿ ನಮ್ಮನ್ನು ನಾವು ತೊಡಗಿಸಿಕೊಳ್ಳುವ ಮೂಲಕ ಮಕ್ಕಳು ಹೆಚ್ಚು ಓದುವಂತೆ ಓದಿದನ್ನು ಅರ್ಥಮಾಡಿಕೊಂಡು ಬರೆಯುವಂತಹ ಪ್ರೋತ್ಸಾಹ ಕೊಡುವುದಕ್ಕೆ ಅವಕಾಶಮಾಡಿಕೊಡುತ್ತಿದ್ದೇವೆ. ಬಹಳ ಮುಖ್ಯವಾಗಿ ಮಕ್ಕಳು ಚನ್ನಾಗಿ ಓದಿ ಪರೀಕ್ಷೆ ಬರೆಯಬೇಕು ಎಂಬ ಮಹತ್ವದ ಉದ್ದೇಶ ಈ ಕಾರ್ಯಕ್ರಮದಿಂದ ಮಾಡಲಾಗುತ್ತಿದೆ. ನನ್ನೆಲ್ಲ ಗೆಳೆಯರ ಬಳಗದ ಪರವಾಗಿ ಈ ಕಾರ್ಯಕ್ರಮ ಆಯೋಜನೆ ಮಾಡಿದ್ದು ಎಲ್ಲರೂ ಪ್ರೀತಿಯಿಂದ ಈ ಕಾರ್ಯದಲ್ಲಿ ತೊಡಗಿದ್ದೇವೆ. ಒಟ್ಟಾರೆ ಹತ್ತನೆ ತರಗತಿಯ ಫಲಿತಾಂಶದಲ್ಲಿ ಸುಧಾರಣೆ ತರುವಲ್ಲಿ ನಮ್ಮದೂ ಚಿಕ್ಕ ಕಾಣಿಕೆ ನಮ್ಮ ಶಿಕ್ಷಣ ಇಲಾಖೆ ನಮ್ಮ ಅನುಭವದ ಆಧಾರದಲ್ಲಿ ಕೊಡಲು ಪ್ರಯತ್ನಿಸುತ್ತಿದ್ದೇವೆ ಎಂದರು.

ಕಾರ್ಯಕ್ರಮದಲ್ಲಿ ಮಾಣಿಕರಾವ್ ಸಕ್ಪಾಲ್ ಮಾತನಾಡುತ್ತಾ ನಮ್ಮ ಶಿಷ್ಯ ಗುರುವನ್ನು ಮೀರಿಸಿ ಬೆಳೆಯುತ್ತಿರುವದು ಹೆಮ್ಮೆಯ ವಿಷಯವಾಗಿದೆ ಇಡಿ ಕಾರ್ಯಕ್ರಮದಲ್ಲಿ ಕೇಳಿರುವ ಎಲ್ಲಾ ಪ್ರಶ್ನೋತ್ತರಗಳು ಪರೀಕ್ಷಾ ದೃಷ್ಠಿಯಿಂದ ಮಹತ್ವ ಪಡೆಯುತ್ತವೆ. ಪರೀಕ್ಷಾ ಮಾಹಿತಿಯು ಉತ್ತಮವಾಗಿ ಕೊಡುತ್ತಿದ್ದಾರೆ ಎಂದರು.

ಇನ್ನೋರ್ವ ವಿಶೇಷ ಅಥಿತಿಯಾಗಿ ಭಾಗವಹಸಿದ ಧರ್ಮರಾಜ ಹೇರೂರ ನಮ್ಮ ಭಾಗದ ಮಕ್ಕಳಿಗೆ ಈ ಕೌನ ಬನೇಗಾ ಜ್ಞಾನಪತಿ ಕಾರ್ಯಕ್ರಮ ಅತ್ಯಂತ ಅವಶ್ಯಕವಾದ ಕಾರ್ಯಕ್ರಮ ಇಂತಹ ಕಾರ್ಯಕ್ರಮಗಳಿಂದ ಮಕ್ಕಳಿಗೆ ಪರೀಕ್ಷಾ ಮಾಹಿತಿ ಸಂಪೂರ್ಣವಾಗಿ ದೊರೆಯಲಿದೆ ಎಂದು ಅಭಿಪ್ರಾಯಪಟ್ಟರು.

ಕೌನ ಬನೇಗಾ ಜ್ಞಾನಪತಿ ಕಾರ್ಯಕ್ರಮದ ಏಳನೇಯ ಸಂಚಿಕೆಯಲ್ಲಿ ಪ್ರಥಮ ಬಹುಮಾನ ೨೦೦೦, ರನ್ನು ಶ್ರೀ ಗೊಲ್ಲಾಳೇಶ್ವರ ಪ್ರೌಢ ಶಾಲೆಯ ವಿಧ್ಯಾರ್ಥಿಗಳು ಪಡೆದರು. ದ್ವಿತಿಯ ಬಹುಮಾನ ೧೦೦೦ ರನ್ನು ಸರಕಾರಿ ಕನ್ಯಾಪ್ರೌಢ ಶಾಲೆ ಕಲಬುರಗಿ ಮತ್ತು ಚೇತನ ಪ್ರೌಢ ಶಾಲೆ ಕಲಬುರಗಿ ಪಡೆದವು. ತೃತೀಯ ಬಹುಮಾ ೫೦೦ ರನ್ನು ಮೈಲಾರಲಿಂಗೇಶ್ವರ ಪ್ರೌಢ ಶಾಲೆ ಪಟ್ಟಣ ವಿಧ್ಯಾರ್ಥಿಗಳು ಪಡೆದರು. ಕಾರ್ಯಕ್ರಮದಲ್ಲಿ ಒಟ್ಟು ೨೧೦ ವಿಧ್ಯಾರ್ಥಿಗಳು, ೨೩ ಶಿಕ್ಷಕರು ಭಾಗವಹಿಸಿದ್ದರು. ಚಾಮರಾಜ್ ದೊಡ್ಡಮನಿ, ಕಾಶಿನಾಥ ಪುಜಾರಿ, ಮಲ್ಲಿನಾಥ ದಾಶೆಟ್ಟಿ, ರಘುನಾಥ, ರಿಯಾಜ ಪಟೇಲ್, ಅಶೋಕ, ಅನಿಲ ಜಾಧವ, ವಿಜಯ ಕುಂಬಾರ, ಇಮಾಮ್ ಪಟೇಲ್, ವಿನೋದ, ಆನಂದ, ವಿಜಯ ಮಿಣಜಗಿ, ಬಸವರಾಜ, ಹೊನ್ನಪ್ಪ, ನಬಿಪಟೇಲ್ ಹಾಜರಿದ್ದರು.

emedialine

Recent Posts

ಮಹಿಳಾ ಸಹಭಾಗಿತ್ವ ಇಲ್ಲದೆ ದೇಶದ ಅಭಿವೃದ್ಧಿ ಅಸಾಧ್ಯ: ಮಾತೋಶ್ರೀ ಡಾ. ಅವ್ವಾಜಿ

ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…

14 hours ago

ತೊಗರಿ ಬೆಳೆ‌ ಹಾನಿ ಪ್ರದೇಶ ವೀಕ್ಷಿಸಿದ ಶಾಸಕ ಅಲ್ಲಮಪ್ರಭು ಪಾಟೀಲ

ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…

24 hours ago

ಕಷ್ಟಗಳಿಗೆ ಕುಗ್ಗದೇ ಸವಾಲಾಗಿ ಸ್ವಿಕರಿಸಿ

ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…

24 hours ago

ಕಲಬುರಗಿ: ಹಾಸ್ಯ ಕಲಾವಿದ ರೇವಣಸಿದ್ಧ ಸ್ವಾಮಿ ದಂಪತಿಗೆ ಗೆಳೆಯರ ಬಳಗದಿಂದ ಸತ್ಕರಿಸಲಾಯಿತು.

ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…

24 hours ago

ಸಾವಿರ ಸೀರೆ ವಿತರಿಸಿ ಸಚಿವ ಪ್ರಿಯಾಂಕ್ ಜನ್ಮದಿನ ಆಚರಣೆ

  ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…

2 days ago

ಮೂರೂ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು: ಕಾರ್ಯಕರ್ತರಿಂದ ವಿಜಯೋತ್ಸವ

ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…

2 days ago