ಕಲಬುರಗಿ: ಬಸವ ಸಮಿತಿಯಅನುಭವ ಮಂಟಪದಲ್ಲಿ ದಿ.೧೨.೦೧.೨೦೨೦ ರಂದುಲಿಂ.ಶ್ರೀ ಸುಭಾಶ್ಚಂದ್ರಉಪ್ಪಿನ್ ಸ್ಮರಣಾರ್ಥ ಹಮ್ಮಿಕೊಂಡಿರುವ೬೨೨ದತ್ತಿಅನುಭಾವಕಾರ್ಯಕ್ರಮದಲ್ಲಿಆಯ್ದಕ್ಕಿ ಲಕ್ಕಮ್ಮ ಮತ್ತುಕಾಯಕ ಪ್ರಜ್ಞೆ ಎಂಬ ವಿಷಯದ ಮೇಲೆಸ್ಥಳೀಯ ಸರಕಾರಿ ಮಹಾವಿದ್ಯಾಲಯದಕನ್ನಡ ಪ್ರಾಧ್ಯಾಪಕರಾದಡಾ.ಕಲ್ಯಾಣರಾವ ಜಿ. ಪಾಟೀಲಅವರುಉಪನ್ಯಾಸವನ್ನು ನೀಡುತ್ತ ಹೀಗೆ ಅಭಿಪ್ರಾಯವ್ಯಕ್ತಪಡಿಸಿದರು.
ಆಯ್ದಕ್ಕಿ ಲಕ್ಕಮ್ಮ ಮತ್ತು ಮಾರಯ್ಯ ದಂಪತಿಗಳು ರಾಯಚೂರುಜಿಲ್ಲೆಯ ಲಿಂಗಸುಗೂರುತಾಲ್ಲೂಕಿನಗುರುಗುಂಟಾಅಮರೇಶ್ವರ ಪರಿಸರದ ಕಮಲದಿನ್ನಿಯಲ್ಲಿಇದ್ದವರು.ಬಸವಕಲ್ಯಾಣದ ಶರಣರ ಮಹಿಮೆ ಕೇಳಿ ಅಲ್ಲಿಗೆ ಹೋಗಿ ನೆಲೆಸಿದರು.ಮಾರಯ್ಯನವರು ಹೊಲದಲ್ಲಿದುಡಿಯುವಒಕ್ಕಲುತನದೊಂದಿಗೆ, ಹ(ಅ)ಕ್ಕಲು ಕಾಳುಗಳನ್ನು ಆಯ್ದುತಂದುತಮ್ಮ ಬಾಳುವೆಯನ್ನು ಮಾಡುತ್ತಿದ್ದರು. ಅದೇರೀತಿ ಲಕ್ಕಮ್ಮನವರುದಾಸೋಹ ಮಹಾಮನೆಯ ಅಂಗಳದಲ್ಲಿ ಅಕ್ಕಿ ಆರಿಸುವಕಾಯಕ ಮಾಡುತ್ತಿದ್ದರು.
ವೈಯಕ್ತಿಕವಾಗಿ, ಕೌಟುಂಬಿಕವಾಗಿ, ಸಾಮಾಜಿಕವಾಗಿಎಲ್ಲ ರಂಗಗಳಲ್ಲಿಯೂ ಪ್ರತಿಯೊಬ್ಬರೂ ಸಣ್ಣತನ, ಹುಂಬತನ, ಹೊಟ್ಟೆಕಿಚ್ಚುಅಂದರೆದಾರಿದ್ರ್ಯ ಮನೋ-ಸ್ಥಿತಿಯನ್ನು ಬಿಡುವವರೆಗೆಜೀವನದಲ್ಲಿ ನೆಮ್ಮದಿ ಸಾಧ್ಯವೇಇಲ್ಲ. ಪ್ರಯುಕ್ತಕಿಂಚಿಜ್ಞತೆಯನ್ನು ಬಿಟ್ಟು, ನದಿಯೊಳಗೆ ನದಿ ಬೆರೆಯುವಂತೆ, ಸಮಾನತೆಯಿಂದ, ಸಾಮರಸ್ಯದಿಂದ, ಸಂತೃಪ್ತಿಯಿಂದ ಸಮೃದ್ಧಜೀವನ ಸಾಗಿಸಬೇಕು ಎಂಬುದಕ್ಕೆ ಮತ್ತು ಆ ರೀತಿ ನಡೆದು, ನುಡಿದು, ದುಡಿದು ಬದುಕಿರುವುದಕ್ಕೆಜೀವಂತ ನಿದರ್ಶನವಾಗಿದ್ದವರುಬಸವಾದಿ ಶಿವಶರಣರಲ್ಲಿ ಅನೇಕ ಶರಣ ದಂಪತಿಗಳು ಎಂದುಅವರುಅಭಿಪ್ರಾಯಪಟ್ಟರು.
ಸ್ಥಳೀಯ ಪೂಜ್ಯಶ್ರೀದೊಡ್ಡಪ್ಪಅಪ್ಪತಾಂತ್ರಿಕ ಮಹಾವಿದ್ಯಾಲಯದ ಪರೀಕ್ಷಾ ನಿಯಂತ್ರಣಾಧಿಕಾರಿಗಳಾದ ಪ್ರೊ.ರವೀಂದ್ರ ಎಂ. ಲಠ್ಠೆಯವರುಅಧ್ಯಕ್ಷತೆ ವಹಿಸಿ ಮಾತನಾಡಿದರು.ಅವರು ಮಾತನಾಡುತ್ತದತ್ತಿ ದಾನಿಗಳಾದ ಡಾ.ಸುಭಾಶ್ಚಂದ್ರಉಪ್ಪಿನ್‌ಅವರುತಮ್ಮಗುರುಗಳಾಗಿದ್ದವರು.ಸದಾತಮ್ಮ ಹಸನ್ಮುಖಉಪನ್ಯಾಸದಿಂದಜನಪ್ರಿಯ ಶಿಕ್ಷಕರಾಗಿದ್ದವರು.ಅವರು ಹೈ.ಶಿ.ಸಂ.ಯ ಅನೇಕ ಶಿಕ್ಷಣ ಸಂಸ್ಥೆಗಳಲ್ಲಿ ಪ್ರಾಚಾರ್ಯರಾಗಿ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದವರು.ಅವರ ಸ್ಮರಣಾರ್ಥ ಹಮ್ಮಿಕೊಂಡ ಈ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿರುವುದುತಮ್ಮ ಭಾಗ್ಯಎಂದು ಸಂತಸ ವ್ಯಕ್ತಪಡಿಸಿದರು.
ಕಾರ್ಯಕ್ರಮದ ಪ್ರಾರಂಭದಲ್ಲಿ ಶ್ರಿ ಎಂ.ವೈ.ಸುರಪುರಅವರುಚಾಮರಸನ’ಪ್ರಭುಲಿಂಗಲೀಲೆ’ಯಪದಪ್ಯಗಳನ್ನು ಗಮನ ವಾಚನ ಮಾಡಿದರು.ನಂತರವಚನ ಗಾಯನ ನಡೆಸಿಕೊಟ್ಟರು.ಶ್ರೀಮತಿ ಮಹಾದೇವಿ ಉಪ್ಪಿನ್‌ಅವರುಸ್ವಾಗತಿಸಿತಮ್ಮ ಸ್ವರಚಿತ ವಚನಗಳನ್ನು ವಾಚಿಸಿದರು.ಶ್ರೀ ಎಚ್.ಕೆ. ಉದ್ದಂಡಯ್ಯನವರುದತ್ತಿ ದಾನಿಗಳ ಪರಿಚಯ ಮಾಡಿಕೊನೆಯಲ್ಲಿ ಶರಣು ಸಮರ್ಪಣೆ ಸಲ್ಲಿಸಿದರು.
ಕಾರ್ಯಕ್ರಮದಲ್ಲಿಕಲಬುರಗಿ ಬಸವ ಸಮಿತಿಯಉಪಾಧ್ಯಕ್ಷರಾದಡಾ. ಜಯಶ್ರೀದಂಡೆ, ಡಾ. ಬಿ.ಡಿ. ಜತ್ತಿ ವಚನ ಅಧ್ಯಯನ ಮತ್ತು ಸಂಶೋಧನಕೇಂದ್ರದ ನಿರ್ದೇಶಕರಾದಡಾ.ವೀರಣ್ಣದಂಡೆ ಹಾಗೂಉಪ್ಪಿನ್ ಪರಿವಾರದವರು, ನೂರಾರುಜನಆಸಕ್ತರು ಪಾಲ್ಗೊಂಡಿದ್ದರು.ಕಲಬುರಗಿ ಬಸವ ಸಮಿತಿಯಅನುಭವ ಮಂಟಪದಲ್ಲಿ ಪ್ರತಿವಾರ ಹಮ್ಮಿಕೊಳ್ಳುತ್ತಿರುವ ದತ್ತಿ ಉಪನ್ಯಾಸಗಳು ಇತ್ತೀಚೆಗೆ ಬಸವ ಸಮಿತಿಯ ವೆಬ್‌ಸೈಟ್‌ನಲ್ಲಿ ಲೈವ್ ಆಗಿ ಪ್ರಸಾರವಾಗುತ್ತಿರುವುದು ವಿಶೇಷವಾಗಿದೆ.ದೇಶಾದ್ಯಂತ ಮತ್ತುರಾಜ್ಯಾದ್ಯಂತ ಸಾವಿರಾರುಜನರುತತ್ಕಾಲೀಕವಾಗಿ ವೀಕ್ಷಿಸುತ್ತಿರುವುದರಿಂದದತ್ತಿ ಕಾರ್ಯಕ್ರಮಗಳು ಬಹಳ ಜನಪ್ರಿಯವಾಗುತ್ತಿರುವುದುಗಮನಾರ್ಹವಾಗಿದೆ.
ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…