ಸುರಪುರ: ತಾಲೂಕು ಆಡಳಿತ ದಿಂದ ಈ ತಿಂಗಳು ೨೧ ನೇ ತಾರೀಖು ಅಂಬಿಗರ ಚೌಡಯ್ಯನವರ ಜಯಂತಿ ಆಚರಿಸಲಾಗುತ್ತಿದ್ದು,ಜಯಂತಿ ಕಾರ್ಯಕ್ರಮದಲ್ಲಿ ತಾಲೂಕಿನ ಎಲ್ಲಾ ಇಲಾಖೆಗಳ ಅಧಿಕಾರಿಗಳು ಕಡ್ಡಾಯವಾಗಿ ಭಾಗವಹಿಸುವಂತೆ ತಹಸೀಲ್ದಾರ ನಿಂಗಣ್ಣ ಬಿರೆದಾರ ತಿಳಿಸಿದರು.
ನಗರದ ತಹಸೀಲ್ ಕಾರ್ಯಾಲಯದಲ್ಲಿ ಹಮ್ಮಿಕೊಂಡಿದ್ದ ಪೂರ್ವಬಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ,೨೧ ರಂದು ಬೆಳಿಗ್ಗೆ ೯ ಗಂಟೆಗೆ ನಗರದ ಬೋವಿಗಲ್ಲಿಯಲ್ಲಿರುವ ಅಂಬಿಗರ ಚೌಡಯ್ಯನವರ ಕಟ್ಟೆಯಿಂದ ಮೆರವಣಿಗೆ ನಡೆಸಿ ನಂತರ ಶ್ರೀ ಮಹರ್ಷಿ ವಾಲ್ಮೀಕಿ ಭವನದಲ್ಲಿ ೧೧ ಗಂಟೆಗೆ ತಾಲೂಕು ಆಡಳಿತ ದಿಂದ ಜಯಂತಿ ಆಚರಣೆ ನಡೆಯಲಿದೆ.ತಾಲೂಕಿನ ಅನೇಕ ಜನಪ್ರತಿನಿಧಿಗಳು ಹಾಗು ಚೌಡಯ್ಯನವರ ಬಗ್ಗೆ ಉಪನ್ಯಾಸ ಕಾರ್ಯಕ್ರಮ ಜರುಗಲಿದ್ದು ತಾಲೂಕಿನ ಎಲ್ಲಾ ಕಚೇರಿ ಹಾಗು ಶಾಲಾ ಕಾಲೇಜುಗಳು ಮತ್ತು ಗ್ರಾಮ ಪಂಚಾಯತಿ ಕಚೇರಿಗಳಲ್ಲಿ ಬೆಳಿಗ್ಗೆ ೮:೩೦ರ ಒಳಗೆ ಜಯಂತಿ ಆಚರಿಸಿ ನಂತರ ತಾಲೂಕು ಆಡಳಿತದ ಕಾರ್ಯಕ್ರಮದಲ್ಲಿ ಭಾಗವಹಿಸಲು ತಿಳಿಸಿದರು.
ಇದೇ ಸಂದರ್ಭದಲ್ಲಿ ಬೋವಿ ಸಮಾಜದ ಅಧ್ಯಕ್ಷ ಶಿವಣ್ಣ ಕಟ್ಟಿಮನಿ ಮಾತನಾಡಿ,ಪ್ರತಿಬಾರಿ ಯಾವ ಜಯಂತಿಗಳಲ್ಲಿಯೂ ಅನೇಕ ಇಲಾಖೆಗಳ ಅಧಿಕಾರಿಗಳು ಭಾಗವಹಿಸುವುದಿಲ್ಲ.ಇಂದಿನ ಸಭೆಗು ಕೂಡ ಬಂದಿಲ್ಲ ಇದರ ಬಗ್ಗೆ ಕ್ರಮ ಕೈಗೊಳ್ಳಲು ತಿಳಿಸಿದರು.ನಂತರ ನಗರಸಭೆ ಮಾಜಿ ಅಧ್ಯಕ್ಷ ಪಾರಪ್ಪ ಗುತ್ತೇದಾರ ಮಾತನಾಡಿ,ನಗರದಲ್ಲಿ ಎಂಟು ಕಡೆಗಳಲ್ಲಿ ಅಂಬಿಗರ ಚೌಡಯ್ಯನವರ ಕಟ್ಟಿಗಳಿದ್ದು ಅವುಗಳಿಗೆ ಸುಣ್ಣ ಬಣ್ಣ ಬಳಿಸಿ,ಲೈಟ್ ಹಾಕಿಸುವಂತೆ ಸಲಹೆ ನೀಡಿದರು.
ಸಭೆಯಲ್ಲಿ ಗ್ರೇಡ-೨ ತಹಸಿಲ್ದಾರ ಸೂಫಿಯಾ ಸುಲ್ತಾನ,ಪಿಐ ಆನಂದರಾವ್,ಟಿಹೆಚ್‌ಒ ಡಾ: ಆರ್.ವಿ.ನಾಯಕ, ಸಿಡಿಪಿಒ ಲಾಲಸಾಬ್,ಸಮಾಜಕಲ್ಯಾಣಾಧಿಕಾರಿ ಸತ್ಯನಾರಾಯಣ ದರಬಾರಿ,ತಾ.ಪಂ ಎಡಿ ವಿಶ್ವನಾಥ,ಉಪ ಖಜಾನಾಧಿಕಾರಿ ಮೋನಪ್ಪ ಶಿರವಾಳ ಹಾಗು ಬೋವಿ ಸಮಾಜದ ಮುಖಂಡರಾದ ಭಂಡಾರಿ ನಾಟೇಕಾರ,ವಿಷ್ಣು ಗುತ್ತೇದಾರ, ವಕೀಲ ಸಂಗಣ್ಣ ಬಾಕ್ಲಿ,ಬಸವರಾಜ ಅಂಬಿಗೇರ,ವೆಂಕಟೇಶ ಚಟ್ನಳ್ಳಿ,ದೇವಿಂದ್ರಪ್ಪಗೌಡ ಮಾಲಿ ಪಾಟೀಲ,ಭಾಗಣ್ಣ ಕಟ್ಟಿಮನಿ,ಹೊನ್ನಪ್ಪ ತಳವಾರ,ದೇವು ತಳವಾರ,ಮಲ್ಲು ವಿಷ್ಣುಸೇನಾ,ರಮೇಶಗೌಡ,ದೊಡ್ಡಪ್ಪ ಮುದನೂರ,ಭೀಮರಾಯ ತೆಲಗೂರ ಸೇರಿದಂತೆ ಅನೇಕರಿದ್ದರು.
ವೇಮನ ಜಯಂತಿ: ಇದೇ ತಿಂಗಳು ೧೯ನೇ ತಾರೀಖಿನಂದು ಕವಿ ವೇಮನ ಜಯಂತಿಯನ್ನು ಆಚರಿಸುವಂತೆ ತಹಸೀಲ್ದಾರ ನಿಂಗಣ್ಣ ಬಿರೆದಾರ ತಿಳಿಸಿದರು.ತಹಸಿಲ್ ಕಾರ್ಯಾಲಯದಲ್ಲಿ ಗುರುವಾರ ಮದ್ಹ್ಯಾನ ನಡೆದ ಸಭೆಯಲ್ಲಿ ಭಾಗವಹಿಸಿ ಮಾತನಾಡಿ, ಸರಕಾರದ ಆದೇಶದಂತೆ ಈ ವರ್ಷವು ೧೯ ರಂದು ಕವಿ ವೇಮನರ ಜಯಂತಿ ಆಚರಿಸಬೇಕಿದ್ದು,ಬೆಳಿಗ್ಗೆ ೯ ಗಂಟೆಯ ಒಳಗಾಗಿ ಎಲ್ಲಾ ಕಚೇರಿಗಳಲ್ಲಿ ಶಾಲಾ ಕಾಲೇಜು ಹಾಗು ಗ್ರಾಮ ಪಂಚಾಯತಿಗಳಲ್ಲಿ ವೇಮನರ ಜಯಂತಿ ಆಚರಿಸುವಂತೆ ತಿಳಿಸಿದರು.ಗ್ರೇಡ-೨ ತಹಸೀಲ್ದಾರ ಸೂಫಿಯಾ ಸುಲ್ತಾನ,ಪಿಐ ಆನಂದರಾವ್ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳಿದ್ದರು.
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…
ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…
ಚಿಂಚೋಳಿ: ಸಿದ್ದಶ್ರೀ ಕಾರ್ಖಾನೆ ಪ್ರಾರಂಭ ಮಾಡಲು ರೈತರು ಹಗಲು ರಾತ್ರಿ ಎನ್ನದೆ ಬಸವೇಶ್ವರ ಉತ್ತರ ಬಳಿ ಧರಣಿಯಲ್ಲಿ ಹೋರಾಟ ಮಾಡುತ್ತಿದ್ದು.…
ಕಲಬುರಗಿ: ನವೆಂಬರ್ 29 ರಿಂದ 2 ಡಿಸೇಂಬರ್ ವರೆಗೆ ತಮಿಳುನಾಡಿನ ಅಲಗಪ್ಪ ವಿಶ್ವವಿದ್ಯಾಲಯ ಕರೈಕುಡಿಯಲ್ಲಿ ನಡೆಯುವ ದಕ್ಷಿಣ ಭಾರತ ಅಂತರ…
ಕಲಬುರಗಿ: ನಗರದ ವಾರ್ಡ ನಂ.51.ರ ಜೇವರ್ಗಿ ಕಾಲೋನಿ ವಾಟರ್ ಟ್ಯಾಂಕ್ ಹತ್ತಿರದ ಉದ್ಯವನದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ ಖರ್ಗೆ…