ಬಿಸಿ ಬಿಸಿ ಸುದ್ದಿ

ಕಲಬುರಗಿ ಕೇಂದ್ರಿಯ ವಿಶ್ವವಿದ್ಯಾಲಯದ ವಿದ್ಯಾರ್ಥಿಗೆ ಅಂತರಾಷ್ಟ್ರೀಯ ಪ್ರಯಾಣ ವಿದ್ಯಾರ್ಥಿವೇತನ ಪ್ರಶಸ್ತಿ ಪ್ರದಾನ

ಕಲಬುರಗಿ: ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ಭೂವಿಜ್ಞಾನ ವಿಭಾಗದ ಸಂಶೋಧನಾ ವಿದ್ಯಾರ್ಥಿಯಾದ ಪ್ರವೀಣ ಕುಮಾರ ವಿ. ಅವರಿಗೆ ಆಷ್ಟ್ರೀಯಾ ದೇಶದ ಅಂತರಾಷ್ಟ್ರೀಯ ಜಾಗತಿಕ ಸಂಚರಣೆ ಉಪಗ್ರಹ ವ್ಯವಸ್ಥೆಗಳ ಸಮಿತಿಯಿಂದ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ವಿದ್ಯಾರ್ಥಿಗೆ ಅಂತರಾಷ್ಟ್ರೀಯ ಪ್ರಯಾಣ ವಿದ್ಯಾರ್ಥಿವೇತನ ಪ್ರಶಸಿ. ಈ ವರ್ಷ ಈ ಪ್ರಶಸ್ತಿ ಪಡೆದ ಇಬ್ಬರು ವಿದ್ಯಾರ್ಥಿಗಳು ಭಾರತದಾದ್ಯಂತ ಇಬ್ಬರು ಹಾಗೂ ಕರ್ನಾಟಕದಿಂದ ಪ್ರಶಸ್ತಿ ಪಡೆದ ಏಕೈಕ ವಿಧ್ಯಾರ್ಥಿ ಇವರಾಗಿದ್ದಾರೆ. ಭೂಮಿ ಮತ್ತು ಪರಿಸರ ಕುರಿತು ಗಮನಾರ್ಹ ಸಂಶೋಧನೆ ಮಾಡಿದ ವಿದ್ಯಾರ್ಥಿಗಳಿಗೆ ಈ ಪ್ರಶಸ್ತಿ ನೀಡಲಾಗುತ್ತದೆ.

ಇತ್ತಿಚಿಗೆ (೬-೧೦ ಜನೇವರಿ) ಥೈಲ್ಯಾಂಡ್ ದೇಶದ ಪತುಮಥನಿ ಎಂಬಲ್ಲಿ ಏಷ್ಯನ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ಜರುಗಿದ ತರಬೇತಿಯಲ್ಲಿ ಜಾಗತೀಕ ಸಂಚರಣ ಉಪಗ್ರಹ ವ್ಯವಸ್ಥೆಯಲ್ಲಿ ಒಂದು ವಾರದ ತರಬೇತಿಯನ್ನು ಪಡೇದ ನಂತರ ಅವರಿಗೆ ಈ ಪ್ರಶಸ್ತಿಯನ್ನು ನೀಡಲಾಯಿತು. ಈ ಪ್ರಶಸ್ತಿಯನ್ನು ವಿಶ್ವದಾಧ್ಯಂತ ಅರ್ಜಿಯನ್ನು ಕರೆಯಲಾಗಿತ್ತು, ಈ ಆಯ್ಕೇಯಲ್ಲಿ ವಿಶ್ವದಾಧ್ಯಂತ ೧೮ ಜನ, ಭಾರತದಿಂದ ಇಬ್ಬರು ಆಯ್ಕೆಯಾಗಿರುವುದು ಹೆಮ್ಮೆಯ ವಿಷಯವಾಗಿದೆ.

ಈ ಪ್ರಶಸ್ತಿಗೆ ಆಯ್ಕೆ ಮಾಡುವಾಗ ಶಿಕ್ಷಣದ ಹಿನ್ನೆಲೆ ಹಾಗೂ ಸಂಶೋಧನೆಯು ಈ ತರಬೇತಿಗೆ ಸಬಂಧಿಸಿರಬೇಕು, ಈ ತರಬೇತಿಗೆ ಸಂಬಂಧಿಸಿದ ೪-೫ ತರಬೇತಿಗಳನ್ನು ಪಡೆದಿರಬೇಕು. ಬಹುಮುಖ್ಯವಾಗಿ ಜಿಯೋ ಇನ್ಪಾರ್‌ಮೆಟಿಕ್ಸ್ ಮತ್ತು ರಿಮೊಟ್ ಸೆನ್ಸಿಂಗ್ ಬಗ್ಗೆ ಸಾಮಾನ್ಯ ಜ್ಞಾನ ಹೊಂದಿರಬೇಕಾಗಿರುತ್ತದೆ. ಹೀಗೆ ಹೇಳಿದೆ ಪ್ರವಿಣ ಕುಮಾರ ವಿ. ಅವರು ಭೂಮಿ ಮತ್ತು ಪರಿಸರ ವಿಜ್ಞಾನ ಕ್ಷೇತ್ರದಲ್ಲಿ ಗಮನಾರ್ಹ ಕೊಡುಗೆ ನೀಡಿದ್ದಾರೆ, ಅವರು ಕೃತಕ ಪುನರ್ಭತಿ ಕಾರ್ಯ, ಜಲ ಸಂಪನ್ಮೂಲ ನಿರ್ವಹಣೆ, ಹೈಡ್ರಾಲೋಜಿ, ಘನತ್ಯಾಜ್ಯಾ ನಿರ್ವಹಣೆ, ಭೂಮಿಯಲ್ಲಿ ನಿರುತುಂಬುವದು, ನೆಲದ ನಿರಿನ ಮೇಲೆ ಘನ ತ್ಯಾಜ್ಯಗಳ ಪ್ರಭಾವ, ಮಳೆಯಲ್ಲಿ ವ್ಯತ್ಯಾಸ ಹೀಗೆ ಭೂಮಿ ಮತ್ತು ಪರಿಸರ ವಿಜ್ಞಾನ ಇತರ ವಿಷಯಗಳ ಕುರಿತು ಸಂಶೋಧನೆ ಮಾಡಿದ್ದಾರೆ.

ಇದರೊಂದಿಗೆ ಇನ್ನೂ ಅನೇಕ ಪ್ರಶಸ್ತಿ ಪಡೆದಿರುವ ಪ್ರವಿಣ ಕುಮಾರ ವಿ. ತಮ್ಮ ಬಿ.ಎಸ್ಸಿ ಮತ್ತು ಎಮ್.ಎಸ್ಸಿ ಪದವಿಯನ್ನು ಭೂವಿಜ್ಞಾನ ವಿಷಯದಲ್ಲಿ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದಿಂದ ಪಡೆದಿದ್ದಾರೆ. ಪ್ರಸ್ತುತ ಅವರು ಪ್ರೊ.ಮೊಹಮ್ಮದ ಅಸ್ಲಾಂ ಅವರ ಮಾರ್ಗದರ್ಶನದಲ್ಲಿ ಪಿ.ಎಚ್.ಡಿ (ಸಂಶೋದನೆ) ಮಾಡುತ್ತಿದ್ದಾರೆ. ಮಾನ್ಯ ಕುಲಪತಿಗಳಾದ ಪ್ರೊ.ಎಚ್.ಎಮ್.ಮಹೇಶ್ವರಯ್ಯನವರು ಇತನಿಗೆ ಶುಭ ಕೋರಿದ್ದಾರೆ ಹಾಗೂ ಆತನ ಮುಂದಿನ ಭವಿಷ್ಯ ಇನ್ನು ಸಂಶೋಧನಾಮಯವಾಗಿರಲಿ ಎಂದು ಆಶಿಸಿದ್ದಾರೆ. ಅವರು ಮಾತನಾಡಿ ಎಲ್ಲಾ ವಿದ್ಯಾರ್ಥಿಗಳಿಗೆ ಕಲಿಯಲು ಮತ್ತು ಸಂಶೋಧನೆ ಮಾಡಲು ಉತ್ತಮ ಮತ್ತು ಅನುಕೂಲಕರ ವಾತಾವರಣವನ್ನು ಒದಗಿಸಿಕೊಡಲು ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯ ಸದಾ ಪ್ರಯತ್ನಿಸುತ್ತದೆ, ಅಲ್ಲದ ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚು ವಿದ್ಯಾರ್ಥಿಗಳು ಹೀಗೆ ಅನೇಕ ಪ್ರಶಸ್ತಿಗಳನ್ನು ಅವರ ವಿಷಯಗಳಲ್ಲಿ ಪಡೆಯಲಿ ಎಂದು ಆಶಿಸಿದರು. ಇದೆ ಸಂದರ್ಭದಲ್ಲಿ ವಿಶ್ವವಿದ್ಯಾಲಯದ ಸಮ ಕುಲಪತಿಗಳಾದ ಪ್ರೊ.ಜಿ.ಆರ್. ನಾಯಕ, ಕುಲಸಚಿವರಾದ ಪ್ರೊ. ಮಸ್ತಾಕ್ ಅಹಮದ್ ಐ ಪಟೇಲ್, ಭೂವಿಜ್ಞಾನ ನಿಕಾಯದ ಡಿನ್‌ರಾದ ಪ್ರೊ.ಮೊಹಮ್ಮದ ಅಸ್ಲಾಂ ಅವರು ಪ್ರವಿಣ ಕುಮಾರ ಅವರಿಗೆ ಶುಭ ಹಾರೈಸಿದ್ದಾರೆ.

emedialine

Recent Posts

ತೊಗರಿ ಬೆಳೆ‌ ಹಾನಿ ಪ್ರದೇಶ ವೀಕ್ಷಿಸಿದ ಶಾಸಕ ಅಲ್ಲಮಪ್ರಭು ಪಾಟೀಲ

ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…

3 hours ago

ಕಷ್ಟಗಳಿಗೆ ಕುಗ್ಗದೇ ಸವಾಲಾಗಿ ಸ್ವಿಕರಿಸಿ

ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…

3 hours ago

ಕಲಬುರಗಿ: ಹಾಸ್ಯ ಕಲಾವಿದ ರೇವಣಸಿದ್ಧ ಸ್ವಾಮಿ ದಂಪತಿಗೆ ಗೆಳೆಯರ ಬಳಗದಿಂದ ಸತ್ಕರಿಸಲಾಯಿತು.

ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…

3 hours ago

ಸಾವಿರ ಸೀರೆ ವಿತರಿಸಿ ಸಚಿವ ಪ್ರಿಯಾಂಕ್ ಜನ್ಮದಿನ ಆಚರಣೆ

  ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…

20 hours ago

ಮೂರೂ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು: ಕಾರ್ಯಕರ್ತರಿಂದ ವಿಜಯೋತ್ಸವ

ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…

22 hours ago

ಸಿದ್ದಸಿರಿ ಹೋರಾಟ ಪ್ರಾಯೋಜಿತ: ಶರಣು ಪಾಟೀಲ್

ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…

1 day ago