ಕಲಬುರಗಿ: ಶ್ರೀ ಚನ್ನಕೇಶ್ವರ ಶಿಕ್ಷಣ ಮತ್ತು ಗ್ರಾಮೀಣ ಅಭಿವೃದ್ಧಿ ಟ್ರಸ್ಟ್(ರಿ) ವತಿಯಿಂದ ಶ್ರೀ ಚನ್ನೇಶ್ವರ ಉತ್ಸವ-೨೦೧೯ರ ಅಡಿಯಲ್ಲಿ ಏರ್ಪಡಿಸುವ, ಮಾತೋಶ್ರೀ ನಾಗಮ್ಮ ಆಶಪ್ಪ ಬೊಪ್ಪಾಲ್ ಸ್ಮರಣಾರ್ಥ ಕೊಡಮಾಡುವ ರಾಜ್ಯಮಟ್ಟದ ೧೫ನೇ ವರ್ಷದ ಅಕ್ಷರಲೋಕದ ನಕ್ಷತ್ರ ಪ್ರಶಸ್ತಿಗೆ ಡಾ.ಲಿಂಗಣ್ಣ ಗೋನಾಳ ಉಸ್ಮಾನಿಯ ವಿಶ್ವವಿದ್ಯಾಲಯ ಹೈದರಾಬಾದ ರವರ ಸಮಕ್ಷ ವಿಮರ್ಶ ಕೃತಿ ಮತ್ತು ಅಕ್ಬರ್.ಸಿ. ಕಾಲಿಮಿರ್ಚಿ ಕೊಪ್ಪಳ ರವರ ದೇವ್ರ ಮಗಳು ಮತ್ತು ಇತರೆ ಕಥೆಗಳು ಕೃತಿಗಳನ್ನು ಕೆ.ಮೊಗುಲಪ್ಪ ಯಾನಾಗುಂದಿಯವರ ನೇತೃತ್ವದಲ್ಲಿ ಆಯ್ಕೆ ಮಾಡಲಾಗಿದೆ ಎಂದು ಟ್ರಸ್ಟ್ ಸಮಿತಿ ತಿಳಿಸಿದೆ.
ಎರಡು ಕೃತಿಗಳಿಗೆ 5000 ರೂ.ಗಳ ನಗದು ಮತ್ತು ಪ್ರಶಸ್ತಿ ಫಲಕ ಸನ್ಮಾನ ಒಳಗೊಂಡಿದೆ ಎಂದು ತಿಳಿಸಿ ವೈ.ಬಿ.ಕಡಕೋಳ ಬೇಳಗಾಂವ ಜಿಲ್ಲೆ. ಚರಿತ್ರೆಗೊಂದು ಕಿಟಿಕಿ ಕೃತಿ, ಬಸವರಾಜ ಕಲೆಗಾರ ಧಾರವಾಡ ಜಿಲ್ಲೆ, ಸುಡುವ ನೆಲದ ದೃಶ್ಯ ಕಾವ್ಯ , ನಿಷ್ಠಿ ರುದ್ರಪ್ಪ ಬಳ್ಳಾರಿ ಜಿಲ್ಲೆ. ಬುದ್ದ ಷರೀಫ ನಾಟಕ, ಮಹಿಬೂಬ್ ಪಾಷಾ.ಎ.ಮಕಾನದಾರ ಕೊಪ್ಪಳ ಜಿಲ್ಲೆ, ಒಂದೇ ಬಳ್ಳಿಯ ಹೂಗಳು ಕವನ ಸಂಕಲನ ಮತ್ತು ಮಲ್ಲಿಕಾರ್ಜುನ ಪಾಟೀಲ್ ಯಾದಗಿರಿ ಜಿಲ್ಲೆ ಮೂಡದಿರಲಿ ಸ್ನೇಹಕವನ ಸಂಕಲನ ಹಾಗೂ ನಿಂಗಣ್ಣ.ಹ.ದೇಸಾಯಿ ಕೆಂಭಾವಿ ರವರ ಕಲಿಯಿರಿ-ಕಲಿಸಿರಿ ಶೈಕ್ಷಣಿಕ ನಾಟಕ ಕೃತಿಗಳನ್ನು ಆಯ್ಕೆ ಮಾಡಲಾಗಿದೆ.
ಫೆ. 01 ರಂದು ಕಲಬುರಗಿ ಜಿಲ್ಲೆಯ ಸೇಡಂ ತಾಲೂಕಿನ ಅಕ್ಷರಧಾಮ ಮೇದಕನಲ್ಲಿ ಜರಗುವ ಕಲ್ಯಾಣ ಕರ್ನಾಟಕ ಗಡಿನಾಡ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಪ್ರಶಸ್ತಿ ನೀಡಿ ಸನ್ಮಾನಿಸಲಾಗುವುದು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…
ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…