ಬಿಸಿ ಬಿಸಿ ಸುದ್ದಿ

ಬೆಳೆಗಳಿಗೆ ಸರಕಾರ ವೈಜ್ಞಾನಿಕ ಬೆಂಬಲ ನೀಡಿ ರೈತಾಪಿಗಳಿಗೆ ಸಂಕಷ್ಟದಿಂದ ಪಾರು ಮಾಡಬಹುದು

ಕಲಬುರಗಿ: ರೈತರು ಬೆಳೆಯುವ ಬೆಳೆಗಳಿಗೆ ಸರಕಾರ ವೈಜ್ಞಾನಿಕವಾಗಿ ಬೆಂಬಲ ನೀಡುವುದರ ಮೂಲಕ ರೈತಾಪಿ ವರ್ಗವನ್ನು ಸಂಕಷ್ಟದಿಂದ ಪಾರು ಮಾಡಬಹುದು ಹಾಗೂ ಕೃಷಿ ಕ್ಷೇತ್ರ ಎದುರಿಸುತ್ತಿರುವ ಬಿಕ್ಕಟ್ಟನ್ನು ಕಡಿಮೆಗೊಳಿಸಬಹುದೆಂದು ಪ್ರಗತಿಪರ ರೈತ ಮಹಿಳೆ ಕವಿತಾ ಮಿಶ್ರಾ ಪ್ರತಿಪಾದಿಸಿದರು.

ಶ್ರೀನಿವಾಸ ಸರಡಗಿಯ ಶ್ರೀಗುರು ಚಿಕ್ಕವೀರೇಶ್ವರ ಸಂಸ್ಥಾನ ಹಿರೇಮಠ ಮತ್ತು ಜ್ಞಾನಜ್ಯೋತಿ ಕರಿಯರ್ ಅಕಾಡೆಮಿ ವತಿಯಿಂದ ಕಲಬುರಗಿ ಮಹಾನಗರದ ಸಿದ್ದೇಶ್ವರ ಕಲ್ಯಾಣ ಮಂಟಪದಲ್ಲಿ ಏರ್ಪಡಿಸಿದ ಗುರುವಂದನಾ ಮಹೋತ್ಸವ ಮತ್ತು ವಿವೇಕ ಜ್ಯೋತಿ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಮಿಶ್ರಾ ರವರು ಪ್ರಕೃತಿ ವಿಕೋಪದಿಂದ ಹಾಗೂ ಪ್ರಕೃತಿ ಏರಿಳಿತದಿಂದ ಅತೀವೃಷ್ಟಿ, ಅನಾವೃಷ್ಟಿ ಹೊಡೆತದಿಂದ ಹಾಗೂ ರೈತ ಬೆಳೆದ ಬೆಳೆಗಳಿಗೆ ಬೆಂಬಲ ಬೆಲೆ ಇಲ್ಲದೇ ಇರುವುದರಿಂದ ಕೃಷಿ ಕ್ಷೇತ್ರ ಅತ್ಯಂತ ಆತಂಕದಲ್ಲಿದ್ದು ಈ ಆತಂಕದಿಂದ ರೈತರನ್ನು ಮತ್ತು ಕೃಷಿ ಕ್ಷೇತ್ರವನ್ನು ಪಾರು ಮಾಡುವುದು ಇಂದಿನ ಅತ್ಯಗತ್ಯವಾಗಿದ್ದು ರೈತರ ಆತ್ಮಹತ್ಯೆ ಸೇರಿದಂತೆ ವಲಸೆ ತಡೆಯನ್ನು ಕೂಡಾ ಬೆಂಬಲ ಬೆಲೆ ನೀಡುವುದರ ಮೂಲಕ ತಡೆಯಬಹುದೆಂದು ಹೇಳಿದರು.

ಯುವ ಜನಾಂಗ ಮಹಾನಗರಗಳ ವ್ಯಾಮೋಹಕ್ಕೆ ಬಿದ್ದು ಗ್ರಾಮೀಣ ಸಂಸ್ಕೃತಿ ನೆಲದಿಂದ ದೂರವಾಗುತ್ತಿದ್ದು, ಜನತೆಯ ಮನೋಭಾವ ಕೂಡಾ ಬದಲಾಗಬೇಕಾಗಿದ್ದು ವರನನ್ನು ಹುಡುಕುವ ಸಂದರ್ಭದಲ್ಲಿ ಹೆಣ್ಣು ಹೆತ್ತವರು ವರನಿಗೆ ಹೊಲ ಇರಬೇಕೆನ್ನುತ್ತಾರೆ ಆದರೆ ವರ ಮಾತ್ರ ರೈತನಾಗಿರಬಾರದು ಎಂದು ಭಾವಿಸುತ್ತಾರೆ.  ಇದು ಅತ್ಯಂತ ಖೇದದ ಸಂಗತಿಯಾಗಿದ್ದು, ವರ್ಷದಿಂದ ವರ್ಷಕ್ಕೆ ಒಕ್ಕಲುತನ ಕಡಿಮೆಯಾಗುತ್ತಿರುವುದು ಮತ್ತು ದೊಡ್ಡ ಪ್ರಮಾಣದಲ್ಲಿ ರೈತರು, ಕೃಷಿ ಕೂಲಿ ಕಾರ್ಮಿಕರು ಹಳ್ಳಿಗಳನ್ನು ಬಿಟ್ಟು ಪಟ್ಟಣಗಳನ್ನು ಸೇರುತ್ತಿರುವುದು ಗಂಭೀರವಾದ ವಿಷಯವಾಗಿದ್ದು ಇದನ್ನು ತಡೆಗಟ್ಟದೇ ಇದ್ದರೆ ಭವಿಷ್ಯದಲ್ಲಿ ಆಹಾರಕ್ಕೆ ಆತಂಕ ಎದುರಾಗಲಿದೆ ಎಂದು ವಿವರಿಸಿದರು.

ಸಮಾರಂಭ ಉದ್ಘಾಟಿಸಿ ಮಾತನಾಡಿದ ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕರಾದ ಶ್ರೀ ದತ್ತಾತ್ರೇಯ ಸಿ. ಪಾಟೀಲ ರೇವೂರ ಮಾತನಾಡಿ ಕಲ್ಯಾಣ ಕರ್ನಾಟಕ ಭಾಗದ ವಿದ್ಯಾರ್ಥಿಗಳಿಗೆ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಮಾರ್ಗದರ್ಶನ ಮತ್ತು ತರಬೇತಿ ಅಗತ್ಯವಾಗಿದ್ದು ಈ ನಿಟ್ಟಿನಲ್ಲಿ ಜ್ಞಾನಜ್ಯೋತಿ ಕರಿಯರ್ ಅಕಾಡೆಮಿ ಉತ್ತಮವಾದ ಕಾರ್ಯ ಮಾಡುತ್ತಿದೆ ಎಂದು ಹರ್ಷ ವ್ಯಕ್ತಪಡಿಸಿದ ಅವರು ವಿದ್ಯಾರ್ಥಿಗಳು ಶಿಸ್ತುಬದ್ಧ ಅಧ್ಯಯನ, ಉತ್ತಮ ಚಿಂತನೆ ಮೈಗೂಡಿಸಿಕೊಳ್ಳುವುದರ ಮೂಲಕ ಉತ್ತಮ ನಾಗರಿಕರಾಗಿ ಸಮಾಜ ಕಟ್ಟುವ ಪ್ರಕ್ರಿಯೆಯಲ್ಲಿ ತೊಡಗಿಸಿಕೊಳ್ಳುವಂತೆ ಕರೆ ನೀಡಿದರು.

ಶ್ರೀನಿವಾಸ ಸರಡಗಿಯ ಪೂಜ್ಯ ಶ್ರೀ ಡಾ. ರೇವಣಸಿದ್ದ ಶಿವಾಚಾರ್ಯರು ಸಾನಿಧ್ಯ ವಹಿಸಿದ್ದರು.  ರೇವೂರ ಮತ್ತು ನಾಗಣಸೂರಿನ ಪೂಜ್ಯ ಶ್ರೀ ಶ್ರೀಕಂಠ ಶಿವಾಚಾರ್ಯರು ನೇತೃತ್ವ ವಹಿಸಿದ್ದರು.  ಸಮಾರಂಭದಲ್ಲಿ ಖ್ಯಾತ ಉದ್ದಿಮೆದಾರರಾದ ಡಾ. ಅಶೋಕ ಗುತ್ತೇದಾರ ಬಡದಾಳ, ಪಾಲಿಕೆ ಸದಸ್ಯರಾದ ಮುಖಂಡರಾದ ಚಂದ್ರಶೇಖರ ಪುರಾಣಿಕ ಯಡ್ರಾಮಿ, ಶಿವಾನಂದ ಸಾಹುಕಾರ ಉಪ್ಪಿನ, ವೀರುಪಾಕ್ಷಪ್ಪ ವಗದರ್ಗಿ, ಸಕ್ರೆಪ್ಪಗೌಡ ಪಾಟೀಲ, ಈರಣ್ಣಗೌಡ ಪೊಲೀಸ ಪಾಟೀಲ ಉದನೂರ ವೇದಿಕೆ ಮೇಲೆ ಉಪಸ್ಥಿತರಿದ್ದರು.

ಪಾಲಿಕೆ ಸದಸ್ಯರೂ ಆಗಿರುವ ಸ್ವಾಗತ ಸಮಿತಿ ಅಧ್ಯಕ್ಷರಾದ ಶಿವು ಸ್ವಾಮಿ ಸ್ವಾಗತಿಸಿದರು, ಅಕಾಡೆಮಿ ನಿರ್ದೇಶಕರಾದ ಎನ್.ಎಸ್.ಹಿರೇಮಠ ಪ್ರಾಸ್ತಾವಿಕವಾಗಿ ಮಾತನಾಡಿದರು.  ನಾಗಲಿಂಗಯ್ಯ ಮಠಪತಿ ನಿರೂಪಿಸಿದರು.  ಇದೇ ಸಂದರ್ಭದಲ್ಲಿ ಹಿರಿಯ ಸಾಹಿತಿಗಳಾದ ಎಲ್.ಬಿ.ಕೆ.ಅಲ್ದಾಳ, ನಿವೃತ್ತ ಮುಖ್ಯ ಗುರುಗಳಾದ ಸಿದ್ರಾಮಪ್ಪಾ ದುಲಂಗೆ ಅವರನ್ನು ಸೇರಿದಂತೆ ಅಕಾಡೆಮಿಯಲ್ಲಿ ತರಬೇತಿ ಪಡೆದು ವಿವಿಧ ಸರಕಾರಿ ಇಲಾಖೆಗಳಲ್ಲಿ ಸೇವೆ ಸಲ್ಲಿಸುತ್ತಿರುವವರಿಗೆ ಸತ್ಕರಿಸಲಾಯಿತು.  ಸಮಾರಂಭದಲ್ಲಿ ಸಿದ್ರಾಮಯ್ಯ ಪುರಾಣಿಕ ಕಮಲಾಪೂರ, ಸಂತೋಷ ಆಡೆ, ಸಂಗಯ್ಯ ಹಿರೇಮಠ, ಅಣವೀರಯ್ಯ ಪ್ಯಾಟಿಮನಿ ಕೋಡ್ಲಿ, ಭೀಮಾಶಂಕರ ಚಕ್ಕಿ, ರುದ್ರಯ್ಯ ಹಿರೇಮಠ ಆಳಂದ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

emedialine

Recent Posts

ಮಹಿಳಾ ಸಹಭಾಗಿತ್ವ ಇಲ್ಲದೆ ದೇಶದ ಅಭಿವೃದ್ಧಿ ಅಸಾಧ್ಯ: ಮಾತೋಶ್ರೀ ಡಾ. ಅವ್ವಾಜಿ

ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…

3 hours ago

ತೊಗರಿ ಬೆಳೆ‌ ಹಾನಿ ಪ್ರದೇಶ ವೀಕ್ಷಿಸಿದ ಶಾಸಕ ಅಲ್ಲಮಪ್ರಭು ಪಾಟೀಲ

ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…

13 hours ago

ಕಷ್ಟಗಳಿಗೆ ಕುಗ್ಗದೇ ಸವಾಲಾಗಿ ಸ್ವಿಕರಿಸಿ

ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…

13 hours ago

ಕಲಬುರಗಿ: ಹಾಸ್ಯ ಕಲಾವಿದ ರೇವಣಸಿದ್ಧ ಸ್ವಾಮಿ ದಂಪತಿಗೆ ಗೆಳೆಯರ ಬಳಗದಿಂದ ಸತ್ಕರಿಸಲಾಯಿತು.

ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…

13 hours ago

ಸಾವಿರ ಸೀರೆ ವಿತರಿಸಿ ಸಚಿವ ಪ್ರಿಯಾಂಕ್ ಜನ್ಮದಿನ ಆಚರಣೆ

  ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…

1 day ago

ಮೂರೂ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು: ಕಾರ್ಯಕರ್ತರಿಂದ ವಿಜಯೋತ್ಸವ

ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…

1 day ago