ಬಿಸಿ ಬಿಸಿ ಸುದ್ದಿ

ಗಡಿನಾಡ ಜಿಲ್ಲೆಯ ಜನತೆಗೆ ಗುಡ್ನ್ಯೂಸ್, ಗಣರಾಜ್ಯೋತ್ಸವ ದಿನದಿಂದ ವಿಮಾನ ಹಾರಾಟ..!

ಬೀದರ್: ಜನವರಿ 26 ರಂದು ಗಣರಾಜ್ಯೋತ್ಸವ ದಿನ. ಈ ದಿನ ಈಡಿ ದೇಶದಲ್ಲೇ ಹಬ್ಬದ ವಾತಾವರಣ ಮನೆ ಮಾಡಿರುತ್ತೆ, ಅದರಲ್ಲೂ ಅಂದಿನ ದಿನ ಗಡಿನಾಡು ಬೀದರ್ ಮತ್ತೊಂದು ಐತಿಹಾಸಿಕ ಸಂಭ್ರಮಕ್ಕೆ ಸಾಕ್ಷಿಯಾಗಲಿದೆ, ದಶಕಗಳಿಂದ ಜನರು ಕಂಡಿದ್ದ ಕನಸು ನನಸಾಗುವ ದಿನ ಬಂದಿದೆ. 26 ಕ್ಕೆ ಹಾರಲಿದೆ ನಾಗರಿಕ ವಿಮಾನ..!

ಕಲ್ಯಾಣ ಕರ್ನಾಟಕದ ಜನತೆಯ ಬಹುದೊಡ್ಡ ಕನಸು ಬೀದರ್ ನಿಂದ ನಾಗರಿಕ ವಿಮಾನಯಾನ ಆರಂಭಗೊಳ್ಳಬೇಕೆನ್ನುವುದು.

ತಾಂತ್ರಿಕ ಕಾರಣಗಳಿಂದ ದಶಕಗಳಿಂದ ನೆನೆಗುದಿಗೆ ಬಿದ್ದಿದ್ದ ಕಾಮಗಾರಿ ಪುನಃ ಆರಂಭವಾಗಿದ್ದು, ವಿಮಾನ ಹಾರಾಟಕ್ಕೆ ಇನ್ನೇನು ದಿನಗಣನೆ ಆರಂಭವಾಗಿದೆ. ಜಿಲ್ಲೆಯಲ್ಲಿ ಈಗಾಗಲೇ ವಾಯು ನೆಲೆ ತರಬೇತಿ ಕೇಂದ್ರವಿದ್ದು, ವಿಮಾನಯಾನ ಆರಂಭಕ್ಕೆ 10 ವರ್ಷಗಳ ಹಿಂದೆಯೇ ಕಾಮಗಾರಿ ನಡೆದಿತ್ತು. ಆದ್ರೆ ಅದಕ್ಕೆ ಗ್ರಹಣ ಹಿಡಿದು ಕಾಮಗಾರಿ ಸ್ಥಗಿತಗೊಂಡಿತ್ತು.

ಈಗ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಹೈದ್ರಾಬಾದ್ ನ ಜಿಎಂಆರ್ ಕಂಪನಿ ಜತೆ ಒಡಂಬಡಿಕೆ ಮಾಡಿಕೊಂಡು ವಿಮಾನಯಾನ ಆರಂಭಕ್ಕೆ ಸಿದ್ಧತೆ ನಡೆಸಿದ್ದು ಗಣರಾಜ್ಯೋತ್ಸವ ದಿನದಂದೇ ಬೆಂಗಳೂರು to ಬೀದರ್ ನಡುವೆ ಮೊದಲ ವಿಮಾನ ಹಾರಲಿದೆ.ಮೊದಲ ದಿನ ಎಲ್ಲ ಟಿಕೆಟ್ ಸೋಲ್ಡ್ ಔಟ್ ಇತ್ತ ಹಗಲು ರಾತ್ರಿ ಎನ್ನದೆ ಇಲ್ಲಿನ ಟರ್ಮಿನಲ್ ಸಿದ್ಧತೆಗಾಗಿ ಕಾರ್ಮಿಕರು ಹಾಗೂ ಅಧಿಕಾರಿ ವರ್ಗದವರು ಕಾರ್ಯನಿರ್ವಹಿಸುತ್ತಿದ್ದು, ಟ್ರೂ ಜೆಟ್ ಕಂಪನಿ ವಿಮಾನ ಹಾರಾಟಕ್ಕೆ ಒಪ್ಪಿಕೊಂಡಿದೆ, ಈಗಾಗಲೆ ತನ್ನ ವೆಬ್ ಸೈಟ್ ನಲ್ಲಿ ಟಿಕೆಟ್ ಮಾರಾಟ ಸಹ ಆರಂಭಿಸಿದ್ದು, ಜನವರಿ 26 ರಂದು ಹಾರಲಿರುವ ಮೊದಲ ವಿಮಾನಕ್ಕೆ ಬೆಂಗಳೂರಿನಿಂದ ಬೀದರ್ ಹಾಗೂ ಬೀದರ್ ನಿಂದ ಬೆಂಗಳೂರಿಗೆ ಹಾರುವ ವಿಮಾನದ ಟಿಕೆಟ್ ಗಳೆಲ್ಲ ಸೋಲ್ಡ್ ಔಟ್ ಆಗಿವೆ.

ಹೌದು.. ಬೀದರ್ ನಿಂದ ರಾಜಧಾನಿ ಬೆಂಗಳೂರು ಬರೋಬ್ಬರಿ 700 ಕಿಲೋಮೀಟರ್ ದೂರದಲ್ಲಿದೆ. ಬೀದರ್ ನಿಂದ ಬೆಂಗಳೂರಿಗೆ ಬಸ್ ನಲ್ಲಿ ಪ್ರಯಾಣಿಸಬೇಕೆಂದರೆ ಬರೊಬ್ಬರಿ 1800 ರೂಪಾಯಿ ಹಾಗೂ ರೈಲಿನಲ್ಲಿ ಪ್ರಯಾಣಿಸಬೇಕಿದ್ದರೆ 900 ರೂಪಾಯಿ ಹಣ ನೀಡಿ ಟಿಕೆಟ್ ಕಾದಿರಿಸಿಕೊಳ್ಳಬೇಕಿತ್ತು.

ಅದ್ರಲ್ಲೂ ಬಸ್ ಮತ್ತು ರೈಲಿನಲ್ಲಿ ಪ್ರಯಾಣಿಸಬೇಕಿದ್ದರೆ ಬರೊಬ್ಬರಿ 14 ರಿಂದ16 ಗಂಟೆ ಸಮಯ ಬೇಕಾಗುತ್ತೆ, ಈಗ ಕೇಂದ್ರ ಸರ್ಕಾರದ ಉಡಾನ್ ಯೋಜನೆಯಡಿ ನಾಗರಿಕ ವಿಮಾನಯಾನ ಆರಂಭವಾಗುತ್ತಿದ್ದರಿಂದ ಹಣದ, ಹಾಗೂ ಸಮಯದ ಉಳಿತಾಯ ಕೂಡ ಆಗುತ್ತೆ. ಇದರಿಂದ ಗಡಿಭಾಗದ ಅಭಿವೃದ್ಧಿ ಹಾಗೂ ವಾಣಿಜ್ಯೋದ್ಯಮ ಮತ್ತು ಪ್ರವಾಸೋದ್ಯಮ ಅಭಿವೃದ್ಧಿಯಾಗಲಿದೆ. ದಶಕಗಳಿಂದ ನೆನೆಗುದ್ದಿಗೆ ಬಿದ್ದಿದ್ದ ನಾಗರಿಕ ವಿಮಾನಯಾನ ಸೇವೆ ಆರಂಭವಾಗುತ್ತಿದ್ದು ಗಡಿನಾಡು ಬೀದರ್ ಜಿಲ್ಲೆಯ ಜನತೆಯಲ್ಲಿ ಮತ್ತೊಂದು ಸಂತಸ ಮನೆ ಮಾಡಿದಂತಾಗಿದೆ.

emedialine

Recent Posts

ಸಾವಿರ ಸೀರೆ ವಿತರಿಸಿ ಸಚಿವ ಪ್ರಿಯಾಂಕ್ ಜನ್ಮದಿನ ಆಚರಣೆ

  ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…

13 hours ago

ಮೂರೂ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು: ಕಾರ್ಯಕರ್ತರಿಂದ ವಿಜಯೋತ್ಸವ

ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…

16 hours ago

ಸಿದ್ದಸಿರಿ ಹೋರಾಟ ಪ್ರಾಯೋಜಿತ: ಶರಣು ಪಾಟೀಲ್

ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…

22 hours ago

ಸಿದ್ದ ಶ್ರೀ ಕಾರ್ಖಾನೆ ಪ್ರಾರಂಭವಾಗುವರೆಗೂ ಹೋರಾಟ: ವೀರಣ್ಣ ಗಂಗಾಣಿ

ಚಿಂಚೋಳಿ: ಸಿದ್ದಶ್ರೀ ಕಾರ್ಖಾನೆ ಪ್ರಾರಂಭ ಮಾಡಲು ರೈತರು ಹಗಲು ರಾತ್ರಿ ಎನ್ನದೆ ಬಸವೇಶ್ವರ ಉತ್ತರ ಬಳಿ ಧರಣಿಯಲ್ಲಿ ಹೋರಾಟ ಮಾಡುತ್ತಿದ್ದು.…

22 hours ago

ದಕ್ಷಿಣ ಭಾರತ ಅಂತರ ವಿಶ್ವವಿದ್ಯಾಲಯ ಮಹಿಳೆಯರ ಕಬಡ್ಡಿ ಕ್ರೀಡಾಕೂಟಕ್ಕೆ ಆಯ್ಕೆ

ಕಲಬುರಗಿ: ನವೆಂಬರ್ 29 ರಿಂದ 2 ಡಿಸೇಂಬರ್ ವರೆಗೆ ತಮಿಳುನಾಡಿನ ಅಲಗಪ್ಪ ವಿಶ್ವವಿದ್ಯಾಲಯ ಕರೈಕುಡಿಯಲ್ಲಿ ನಡೆಯುವ ದಕ್ಷಿಣ ಭಾರತ ಅಂತರ…

23 hours ago

ಪ್ರಿಯಾಂಕ್ ಖರ್ಗೆ ಜನ್ಮದಿನ; ರಕ್ತದಾನ ಶಿಬಿರಕ್ಕೆ ಶಾಸಕ ಪಾಟೀಲ ಚಾಲನೆ

ಕಲಬುರಗಿ: ನಗರದ ವಾರ್ಡ ನಂ.51.ರ  ಜೇವರ್ಗಿ ಕಾಲೋನಿ ವಾಟರ್ ಟ್ಯಾಂಕ್ ಹತ್ತಿರದ ಉದ್ಯವನದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ ಖರ್ಗೆ…

1 day ago