ಬಿಸಿ ಬಿಸಿ ಸುದ್ದಿ

ಫೆ.15 ರಂದು ಕನ್ನಡ ಜಾಗೃತಿ ಸಮಾವೇಶ

ಸುರಪುರ: ಕನ್ನಡ ನಾಡು ನುಡಿ ರಕ್ಷಣೆಗೆ ಯಾವಾಗಲು ಕರ್ನಾಟಕ ರಕ್ಷಣಾ ವೇದಿಕೆ ಸದಾ ಭದ್ಧವಾಗಿದೆ ಕನ್ನಡದ ಪರ ಹೋರಾಟಗಳು ಮಾಡುತ್ತಾಬಂದಿದೆ ಕನ್ನಡದ ಊಳಿವಿಗಾಗಿ ಕನ್ನಡ ಜಾಗೃತಿ ಸಮಾವೇಶವನ್ನು ಹಮ್ಮಿಕೊಳ್ಳುತ್ತಾಬಂದಿದೆ ಅದರಂತೆ ಈ ಬಾರಿಯು ಫೆ.೧೫ ರಂದು ಸುರಪುರ ನಗರದಲ್ಲಿ ಸಮಾವೇಶವನ್ನು ಹಮ್ಮಿಕೊಳ್ಳಲಾಗಿದೆ ಎಂದು ಕರ್ನಾಟಕ ರಕ್ಷಣಾ ವೇದಿಕೆ ತಾಲೂಕು ಘಟಕದ ಅಧ್ಯಕ್ಷ ವೆಂಕಟೇಶ ಬೈರಿಮರಡಿ ತಿಳಿಸಿದರು.

ನಗರದ ಪ್ರವಾಸಿ ಮಂದಿರ ಟೇಲರ್ ಮಂಜಿಲ್ ನಲ್ಲಿ ಕ.ರ.ವೇ ತಾಲೂಕು ಘಟಕದ ವತಿಯಿಂದ ಫೆಬ್ರವರಿ ೧೫ ರಂದು ಹಮ್ಮಿಕೊಂಡಿರುವ ಕನ್ನಡಿಗರ ಜಾಗೃತಿ ಸಮಾವೇಶ ಹಾಗೂ ಸಂಸ್ಕೃತಿ ಸಮಾರಂಭದ ಪೂರ್ವಭಾವಿ ಸಭೆಯನ್ನು ಉದ್ಘಾಟಿಸಿ ಮಾತನಾಡಿದ ಅವರು ತಾಲೂಕು ಘಟಕವು ಸುಮಾರು ೧೪ ರ್ವಗಳಿಂದ ನಿರಂತರ ಕನ್ನಡ ನಾಡು ನುಡಿ ನೆಲ ಜಲ ಸಂರಕ್ಷಣೆಯಹೋರಾಟ ಮಾಡುತ್ತಾ ಅನೇಕ ಸಾಮಾಜಿಕ ಧಾರ್ಮಿಕ ಕಾರ್ಯಕ್ರಮಗಳನ್ನು ಮಾಡುತ್ತಾ ಬಂದಿದೆ ಅದರಂತೆ ಕರ್ನಾಟಕದಲ್ಲಿ ಕನ್ನಡಿಗನೇ ಸಾರ್ವಭೌಮ ಎಂಬುದನ್ನು ಸಾಧಿಸಿ ತೋರಿಸಿದ ಕಿರ್ತಿ ಕ.ರ.ವೇ ರಾಜ್ಯಧ್ಯಕ್ಷರಾದ ಟಿ.ಎ.ನಾರಾಯಣಗೌಡರಿಗೆ ಸಲ್ಲುತ್ತದೆ.ಗಡಿ ಕಾವೇರಿ ಕನ್ನಡಿಗಿರ ಮಹಾದಾಯಿ ವಿಷಯವಾಗಿ ಅನೇಕ ಹೋರಾಟ ಮಾಡಿ ಎದುರಾಳಿಗಳಿಗೆ ದಿಟ್ಟ ಉತ್ತರವನ್ನು ನೀಡಿದ್ದಾರೆ ಅಂತಹ ಸಂಘಟನೆ ಇಂದು ನಾಡಿನಾದ್ಯಾಂತ ತನ್ನದೇ ಆದ ೬೫ ಲಕ್ಷಕ್ಕೂ ಹೆಚ್ಚು ಕಾರ್ಯಕರ್ತರು ಹೊಂದಿದ್ದು ಹಾಗೆ ಕ.ರ.ವೇ ತಾಲೂಕ ಘಟಕ ಸುರಪುರವು ಅನೇಕ ರೈತಪರ ನಾಡಪರ ಜನಪರ ಹೋರಾಟ ಮಾಡುವ ಮೂಲಕ ಸುರಪುರದಲ್ಲಿ ಸಂಘಟನೆ ಬಲಿಷ್ಠವಾಗಿ ಬೆಳೆದಿದೆ ಎಂದು ತಿಳಿಸಿದರು.

ಪೆ.೧೫ ರಂದು ಹಮ್ಮಿಕೊಳ್ಳಲಾದ ಕನ್ನಡಿಗರ ಜಾಗೃತಿ ಸಮಾವೇಶ ಹಾಗೂ ಸಂಸ್ಕೃತಿ ಸಮಾರಂಭಕ್ಕೆ ಕ.ರ.ವೇ.ತಾಲ್ಲೂಕ ಹಾಗೂ ವಿವಿಧ ವಲಯ ಹಾಗೂ ಗ್ರಮ ಘಟಕದ ಅಧ್ಯಕ್ಷರು ಶ್ರಮವಹಿಸಿ ಕಾರ್ಯಕ್ರಮ ಯಶಸ್ವಿಗೊಳಿಸಲು ಕರೆ ನೀಡಿದರು.

ಜಿಲ್ಲಾ.ಸಂ. ಕಾರ್ಯದರ್ಶಿ ಭೀಮು ನಾಯಕ ಮಲ್ಲಿಭಾವಿ, ವೆಂಕಟೇಶ ಪ್ಯಾಪ್ಲಿ, ತಾಲ್ಲೂಕ ಪದಧಿಕಾರಿಗಳಾದ ಅಂಬ್ಲಯ್ಯ ಬೇಟೆಗಾರ, ಶ್ರಿನಿವಾಸ ಲಕ್ಷ್ಮೀಪೂರ, ಶ್ರೀನಿವಾಸ ಡಿ ನಾಯಕ, ಹಣಮಂತ ಹಾಲಗೇರ, ಆನಂದ ಮಾಚಗುಂಡಾಳ, ಪ್ರಕಾಶ ಹೆಗ್ಗಣದೊಡ್ಡಿ, ನಗರ ಘಟಕದ ಅಧ್ಯಕ್ಷ ಅನಿಲ್ ಬಿರಾದರ, ಯುವಘಟಕದ ದೇವು ಚಂದಲಾಪೂರ, ಗ್ರಾಮ ಘಟಕದ ಮಲ್ಲು ಬೈರಿಮರಡ್ಡಿ, ಬಲಭೀಮ ಬೋಮನಳ್ಳಿ, ಶಣ್ಮುಖ ಅಡ್ಡೊಡಗಿ, ಭೀಮಣ್ಣ ಬಾದ್ಯಾಪುರ, ಆಂಜನೇಯ ಅಡ್ಡೊಡಗಿ, ಮರೇಪ್ಪ ಬೇವಿನಾಳ, ದೇವಪ್ಪ ಹಾಲಗೇರಾ, ಹಣಮಂತ ಬೈಚಬಾಳ, ತಿರುಪತಿ ಕೂಡ್ಲಿಗಿ, ಪ್ರಭು ಮಂಗಿಹಾಳ, ಶಾಂತಗೌಡ ದೇವಾಪೂರ, ನಿಂಗಪ್ಪ ರುಕ್ಮುಪೂರ, ಭೀಮರಾಯ ಕೋಣಚಪ್ಪಳಿ, ಬಸವರಾಜ್ ನಾಯಿಕೊಡಿ, ಹೋನ್ನಪ್ಪ ಸವಳ ಪಟ್ಟಿ, ಅರ್ಜುನ ಯಕ್ಷಿಂತಿ ಬನ್ನಟಿ, ದೇವಪ್ಪ ಮಾಚಗುಂಡಾಳ ಸೇರಿದಂತೆ ಇನ್ನಿತರರಿದ್ದರು.

emedialine

Recent Posts

ಮಹಿಳಾ ಸಹಭಾಗಿತ್ವ ಇಲ್ಲದೆ ದೇಶದ ಅಭಿವೃದ್ಧಿ ಅಸಾಧ್ಯ: ಮಾತೋಶ್ರೀ ಡಾ. ಅವ್ವಾಜಿ

ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…

3 hours ago

ತೊಗರಿ ಬೆಳೆ‌ ಹಾನಿ ಪ್ರದೇಶ ವೀಕ್ಷಿಸಿದ ಶಾಸಕ ಅಲ್ಲಮಪ್ರಭು ಪಾಟೀಲ

ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…

13 hours ago

ಕಷ್ಟಗಳಿಗೆ ಕುಗ್ಗದೇ ಸವಾಲಾಗಿ ಸ್ವಿಕರಿಸಿ

ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…

13 hours ago

ಕಲಬುರಗಿ: ಹಾಸ್ಯ ಕಲಾವಿದ ರೇವಣಸಿದ್ಧ ಸ್ವಾಮಿ ದಂಪತಿಗೆ ಗೆಳೆಯರ ಬಳಗದಿಂದ ಸತ್ಕರಿಸಲಾಯಿತು.

ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…

13 hours ago

ಸಾವಿರ ಸೀರೆ ವಿತರಿಸಿ ಸಚಿವ ಪ್ರಿಯಾಂಕ್ ಜನ್ಮದಿನ ಆಚರಣೆ

  ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…

1 day ago

ಮೂರೂ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು: ಕಾರ್ಯಕರ್ತರಿಂದ ವಿಜಯೋತ್ಸವ

ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…

1 day ago