ಕಲಬುರಗಿ: ಭಾರತೀಯ ಕಲೆ, ಸಂಸ್ಕೃತಿ ಮತ್ತು ಪರಂಪರೆಯ ರಾಷ್ಟ್ರೀಯ ಪ್ರತಿಷ್ಠಾನ ನವದೆಹಲಿ ಇವರು ೭ನೇ ತರಗತಿಯಿಂದ ೯ನೇ ತರಗತಿಯ ವಿದ್ಯಾರ್ಥಿಗಳಿಗಾಗಿ ಮಹಾತ್ಮ ಗಾಂಧೀಜಿಯವರ ೧೫೦ನೇ ವರ್ಷಾಚರಣೆ ಅಂಗವಾಗಿ ಇನ್‌ಟ್ಯಾಕನಿಂದ ಪ್ರಬಂಧ ಹಾಗೂ ಚಿತ್ರಕಲಾ ಸ್ಪರ್ಧೆಯನ್ನು ಹಮ್ಮಿಕೊಂಡಿದೆ. ಅದರ ಅಂಗವಾಗಿ ಇನ್‌ಟ್ಯಾಕ್ ಸಂಸ್ಥೆಯು ’ರೋಟರಿ ಕ್ಲಬ್’ ಸಹಯೋಗದೊಂದಿಗೆ ಈ ಕಾರ್ಯಕ್ರಮವನ್ನು ರೋಟರಿ ಶಾಲೆ ಆವರಣದಲ್ಲಿ ಜರುಗಿತು.
ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದ ಇನ್‌ಟ್ಯಾಕ್ ಸಂಯೋಜಕರಾದ ಡಾ. ಶಂಬುಲಿಂಗ ಎಸ್.ವಾಣಿ ಅವರು ಇನ್‌ಟ್ಯಾಕ್ ಸಂಸ್ಥೆಯು ಈ ರೀತಿಯ ಹಲವು ಕಾರ್ಯಕ್ರಮಗಳನ್ನು ವರ್ಷವಿಡಿ ಹಮ್ಮಿಕೊಳ್ಳುತ್ತಾ ಬಂದಿದೆ. ಈ ಸ್ಪರ್ಧೆಯಲ್ಲಿ ಭಾಗವಹಿಸಿದ ಎಲ್ಲಾ ಮಕ್ಕಳಿಗೆ ಪ್ರಮಾಣ ಪತ್ರ, ರಾಜ್ಯ ಮಟ್ಟದಲ್ಕಿ ಆಯ್ಕೆಯಾದ ೧೦೦ ವಿದ್ಯಾರ್ಥಿಗಳಿಗೆ ವಿಶೇಷ ಬಹುಮಾನ ಹಾಗೂ ರಾಷ್ಟ್ರಮಟ್ಟದಲ್ಲಿ ಆಯ್ಕೆಯಾದ ೧೦ ವಿದ್ಯಾರ್ಥಿಗಳಿಗೆ ದೆಹಲಿ ಉಚಿತ ಪ್ರವಾಸವಿದೆ ಎಂದು ತಮ್ಮ ಪ್ರಾಸ್ತಾವಿಕ ನುಡಿಗಳಲ್ಲಿ ಹೇಳಿದರು.
ಕಾರ್ಯಕ್ರಮವನ್ನು ಮಕ್ಕಳ ಸಾಹಿತಿ ಎ.ಕೆ. ರಾಮೇಶ್ವರ ಅವರು ಉಧ್ಘಾಟಿಸಿ, ಮಹಾತ್ಮ ಗಾಂಧೀಜಿಯವರು ೩೯ನೇ ಕಾಂಗ್ರೇಸ ಅಧಿವೇಶನದಲ್ಲಿ ಭಾಗವಹಿಸಲು ಕರ್ನಾಟಕ್ಕೆ ಆಗಮಿಸಿದರು. ಅವರು ಬೆಳಗಾವಿಯಿಂದ ೭ ಕಿ.ಮಿ. ದೂರದಲ್ಲಿರುವ ’ಗುಂದರಗಿ’ ಗ್ರಾಮಕ್ಕೆ ನಡೆದು ಕೊಂಡು ಬಂದ ಸಂಧರ್ಭವನ್ನು ಮಕ್ಕಳಿಗೆ ವಿವರಿಸಿದರು. ಅಲ್ಲದೆ ಗಾಂಧೀಜಿಯವರು ಕಲಬುರಗಿಯ ಶ್ರೀ ಶರಣಬಸವೇಶ್ವರ ದೇವಸ್ಥಾನ, ನೂತನ ವಿದ್ಯಾಲಯ ಹಾಗೂ ಸರ್ದಾರ ವಲ್ಲಭಾಯಿ ಪಟೇಲ್ ವೃತ್ತದಲ್ಲಿ ಕಲಬುರಗಿ ಜನತೆಯನ್ನು ಉದ್ದೇಶಿಸಿ ಮಾತನಾಡಿರುವ ವಿಷಯವನ್ನು ಶ್ರೀ. ಎ.ಕೆ. ರಾಮೇಶ್ವರ ಹೇಳುತ್ತಾ ಗಾಂಧೀಜಿಯವರ ಕುರಿತು ತಾವು ರಚಿಸಿದ ಕವನಗಳನ್ನು ಓದಿದರು.
ವಿಶೇಷ ಉಪನ್ಯಾಸ ನೀಡಲು ಆಗಮಿಸಿದ ಡಾ. ಎಮ್.ಎಸ್.ಬಡಿಗೇರ ಕನ್ನಡ ಪ್ರಾಧ್ಯಾಪಕರು ಸರಕಾರಿ ಮಹಿಳಾ ಕಾಲೇಜು ಕಲಬುರಗಿ ಇವರು ತಮ್ಮ ಉಪನ್ಯಾಸದಲ್ಲಿ ಗಾಂಧೀಜಿಯವರ ಕುರಿತು ಕೇಲವು ಪ್ರಶ್ನೆಗಳನ್ನು ಕೇಳುತ್ತಾ ಮಕ್ಕಳಿಗೆ ಹಲವು ವಿಷಯಗಳನ್ನು ಮನವರಿಕೆ ಮಾಡಿ ಕೊಟ್ಟರು. ಗಾಂಧೀಜಿಯವರು ನೋಡಿದ ಪ್ರಮುಖ ನಾಟಕಗಳಾದ ’ಸತ್ಯ ಹರಿಶ್ಚಂz’, ’ಶ್ರವಣಕುಮಾರ’ ಇವು ಗಾಂಧೀಜಿಯವರ ಮೇಲೆ ಆಳವಾದ ಪ್ರಭಾವ ಬೀರಿರುವ ಪ್ರಯುಕ್ತ ಅವರು ತಮ್ಮ ಜೀವನವನ್ನೆ ಸಂಪೂರ್ಣವಾಗಿ ಬದಲಿಸಿಕೊಂಡ ವಿಷಯವನ್ನು ಡಾ. ಬಡಿಗೇರ ಅವರು ತಮ್ಮ ಉಪನ್ಯಾಸದಲ್ಲಿ ವಿವರಿಸಿದರು. ಮುಖ್ಯ ಅತಿಥಿಗಳಾದ ಶ್ರೀ ಸಂಧ್ಯಾರಾಜ ಸ್ಯಾಮುವೇಲ್ ಅಧ್ಯಕ್ಷರು ರೋಟರಿ ಕ್ಲಬ್ ಕಲಬುರಗಿ. ಹಾಗೂ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿಕೊಂಡ ಡಾ. ಬಿ.ಎಸ್. ಗುಳಶೆಟ್ಟಿಯವರು ಮಾತನಾಡಿದರು.
ಕಾರ್ಯಕ್ರಮದಲ್ಲಿ ಶರಣಬಸವೇಶ್ವರ ವಸತಿ ಶಾಲೆ, ಮಹಾದೇವಿ ಕನ್ಯಾ ಶಾಲೆ, ಅಪ್ಪಾ ಪಬ್ಲಿಕ ಶಾಲೆ, ಶರಣಬಸವೇಶ್ವರ ಪ್ರೌಢ ಶಾಲೆ, ಮಲ್ಲಿಕಾರ್ಜುನ ಖರ್ಗೆ ಶಾಲೆ, ನೂತನ ವಿದ್ಯಾಲಯ ಶಾಲೆ, ಆರಾಧನಾ ಶಾಲೆ, ಸರ್ದಾರ ವಲ್ಲಬಾಯಿ ಪಟೇಲ್ ಶಾಲೆ, ಸೆಂಟ್ ಮೇರಿ ಶಾಲೆ, ರೋಟರಿ ಕ್ಲಬ್ ಶಾಲೆ, ಹಾಗೂ ಇತರ ಶಾಲೆಗಳ ಒಟ್ಟು ೨೫೦ ವಿದ್ಯಾರ್ಥಿಗಳು ಮತ್ತು ಇನ್‌ಟ್ಯಾಕ್ ಸದಸ್ಯರಾದ ಖಾಜಿ ರೀಜವಾನ್ ಸಿದ್ದಿಕಿ, ಡಾ. ಎಮ್.ಎಸ್. ಕುಂಬಾರ ಪ್ರೋ. ಚಂದ್ರಶೇಖರ ಅನಾದಿ, ಡಾ. ಶ್ರೀನಾಥ, ಪ್ರೋ. ಶರಣಪ್ಪ, ಡಾ. ರವಿ ಕುಮಾರ ರೋಟರಿ ಕಬ್ಲ್‌ನ ಸದಸ್ಯರು ಹಾಗೂ ಸಂಶೋಧನಾ ವಿದ್ಯಾರ್ಥಿಗಳು ಭಾಗವಹಿಸಿದರು. ನಿರೂಪಣೆ ಡಾ. ಶಶಿಶೇಖರ ರೆಡ್ಡಿ ಸಹಾಯಕ ಸಂಯೋಜಕರು ಇನ್‌ಟ್ಯಾಕ್ ವಂದನಾರ್ಪಣೆ ಪ್ರೋ. ಚಂದ್ರಶೇಖರ ಅನಾದಿ ನಡೆಸಿಕೊಟ್ಟರು.
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…
ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…