ಬಿಜ್ಜಳನ ಅಂತ್ಯಕ್ಕೆ ಶರಣರುಕಾರಣರಲ್ಲ: ಡಾ. ವೀರಣ್ಣ ದಂಡೆ

ಕಲಬುರಗಿ: ಕಲ್ಯಾಣದ ಸಾಮ್ರಾಟನಾಗಿದ್ದ ೨ನೇ ಬಿಜ್ಜಳನು ಅಧಿಕಾರಕ್ಕೆ ಬಂದುದು ೧೧೬೨ರಲ್ಲಿ. ಅವನ ಆಳ್ವಿಕೆ ಕೊನೆಯಾದುದು ೧೧೬೭ರಲ್ಲಿ. ಆದರೆ ಅವನ ಅಂತ್ಯಕ್ಕೆಜಗದೇವ-ಮೊಲ್ಲಿಬೊಮ್ಮ ಶರಣರು ಕಾರಣರು ಎಂದು ಪಾಲ್ಕುರಿಕೆ ಸೋಮನಾಥ, ಭೀಮಕವಿ ಆದಿಯಾಗಿ ಕನ್ನಡದ ಕವಿಗಳು ಬರೆಯುತ್ತಾರೆ. ಆದರೆ ಬಿಜ್ಜಳನು ೧೧೬೭ರಲ್ಲಿ ತನ್ನ ಮಗ ಸೋವಿದೇವನಿಗೆಅಧಿಕಾರ ಹಸ್ತಾಂತರ ಮಾಡಿದ್ದಾನೆಂದು ಶಾಸನಗಳು ಹೇಳುತ್ತವೆ. ಈ ಮಾತನ್ನು ಖ್ಯಾತ ಇತಿಹಾಸ ತಜ್ಞರಾz ಡಾ. ಪಿ.ಬಿ. ದೇಸಾಯಿ ಅವರು ಬರೆಯುತ್ತಾರೆ ಎಂದು ಡಾ.ವೀರಣ್ಣದಂಡೆ ಅವರು ವಿವರಿಸಿದರು.

ಅನುಭವ ಮಂಟಪದಲ್ಲಿ, ಲಿಂ.ಮಲ್ಲಿಕಾರ್ಜುನ ಬಸಪ್ಪಕಾಮಶೆಟ್ಟಿ ಹಾಗೂ ಲಿಂ. ಅನುಸೂಯಾ ಚನ್ನಬಸಪ್ಪ ತುಪ್ಪದಗದಗ ಇವರ ಸ್ಮರಣಾರ್ಥ ದತ್ತಿ ಕಾರ್ಯಕ್ರಮದಲ್ಲಿ ’ಬಿಜ್ಜಳನ ಕೊಲೆ ಮಾಡಿದರೆಂಬ ಶರಣಜಗದೇವಪ್ಪ ಹಾಗೂ ಮೊಲ್ಲೆಬೊಮ್ಮಯ್ಯ’ ಅವರನ್ನು ಕುರಿತು ಮಾತನಾಡುತ್ತ ಅಭಿಪ್ರಾಯಪಟ್ಟರು.

ಶರಣಜಗದೇವಪ್ಪ ಸಿಂದಗಿ ತಾಲೂಕಿನ ಬಬಲೇಶ್ವರದಲ್ಲಿರುವದೇಸಾಯಿ ಮನೆತನಕ್ಕೆ ಸಂಬಂಧ ಪಟ್ಟವರು. ಮಲ್ಲಿಮೊಮ್ಮಯ್ಯಜಗದೇವಪ್ಪಅಣ್ಣತಮ್ಮಂದಿರೆಂದು ಆ ಮನೆತನದವರು ಭಾವಿಸುತ್ತಾರೆ.ಅದು ಸತ್ಯವಾದುದಲ್ಲ. ಮೊಲ್ಲಿಬೊಮ್ಮಯ್ಯಕೊಪ್ಪಜಿಲ್ಲೆಯಯಲಬುರ್ಗಾತಾಲೂಕಿನರ‍್ಯಾವಣಕಿ ಎಂಬ ಗ್ರಾಮದವರು.ಅಲ್ಲಿಅವರ ಸಮಾಧಿಇದೆ. ರ‍್ಯಾವಣಕಿಯ ಹಿರೇಮಠ ಎಂಬ ಕುಟುಂಬದಜಗಲಿಯ ಮೇಲೆ ಬಿಜ್ಜಳನ ಕೊಲೆಗೆ ಬಳಸಿದರೆಂದು ಹೇಳುವ ಎರಡು ಖಡ್ಗಗಳಿವೆ.

ಮೊಲ್ಲಿಬೊಮ್ಮಯ್ಯರ‍್ಯಾವಣಕಿ ಸಮೀಪದಕಲ್ಲೂರಿನಕಲ್ಲೇಶ್ವರನ ಭಕ್ತರಾಗಿದ್ದರು.ಕಲ್ಲೇಶ್ವರನದೇವಸ್ಥಾನ ೯ನೇ ಶತಮಾನದಿಂದಲೂ ಕಾಳಾಮುಖ ಶೈವಸಂಪ್ರದಾಯದ ಶಿಕ್ಷಣ ಕೇಂದ್ರವಾಗಿತ್ತು.ಮೊಲ್ಲಿಬೊಮ್ಮಯ್ಯನ ಶಿಕ್ಷಣ ಆಗಿದ್ದುಇಲ್ಲಿಯೇ. ಹೀಗಾಗಿ ಅವನು ಇಲ್ಲಿಯೇ ಕಾಳಾಮುಖ ಶೈವಧರ್ಮೀಯ ಶಿಕ್ಷಕನಾಗಿಯೂ ಕೆಲಸ ಮಾಡಿದ್ದಾನೆ. ಕಲ್ಯಾಣಕ್ಕೆ ಹೋಗಿ ಬಂದ ನಂತರ ಅವನು ಕಲ್ಲೇಶ್ವರದೇವಸ್ಥಾನ ಶಿಕ್ಷಣ ಕೇಂದ್ರವನ್ನು ಶರಣ ಸಂಪ್ರದಾಯದ ಪ್ರಚಾರಕ್ಕಾಗಿ ಬಳಸಿಕೊಂಡಂತೆ ತೋರುತ್ತದೆ.ಕ್ರಿ.ಶ. ೧೧೮೬ರ ಶಾಸನ ಮೊಲ್ಲಿಬೊಮ್ಮಯ್ಯನಿಗೆ ಆ ಭಾಗದರಾಜನು ’ಪ್ರಮಥರಗಣಮಠಕ್ಕಾಗಿ’ ೨೦೦ ಮತ್ತರು ಭೂಮಿಯನ್ನು (೧೦೦೦ ಎಕರೆ) ದಾನವಾಗಿಕೊಡುತ್ತಾನೆ.

ಮೊಲ್ಲಿಬೊಮ್ಮಯ್ಯ-ಜಗದೇವಪ್ಪಕೂಡಿ ಬಿಜ್ಜಳನ ಕೊಲೆ ಮಾಡಿದ್ದರೆ ಬಿಜ್ಜಳನ ನಂತರಅಧಿಕಾರಕ್ಕೆ ಬಂದ ಮಗ ಸೋವಿದೇವ ಮೊಲ್ಲಿಬೊಮ್ಮಯ್ಯನನ್ನುಜೀವಂತಇರುಗೊಡುತ್ತಿರಲಿಲ್ಲ ಎಂದುತೋರುತ್ತದೆ. ಆದರೆ ಜಗದೇವಪ್ಪ ಏನಾದನೆಂದು ನಮಗೆ ಮಾಹಿತಿಗಳು ಲಭ್ಯವಾಗುತ್ತಿಲ್ಲ. ಆದರೆ ಬಿಜ್ಜಳನ ಮಗ ಸೋವಿದೇವ ಅಧಿಕಾರಕ್ಕೆ ಬಂದನಂತರವೂ ಬಿಜ್ಜಳನು ಜೀವಂತಇದ್ದನೆಂದು ಶಾಸನಗಳು ಹೇಳುತ್ತವೆಂದು ಡಾ.ದಂಡೆಅವರು ಸಂಶೋಧಕ ಪಿ.ಬಿ. ದೇಸಾಯಿಅವರ ಮಾತುಗಳನ್ನು ಉದ್ಧರಿಸಿದರು.

ಸಭೆಯ ಅಧ್ಯಕ್ಷತೆಯನ್ನು ವಿಶ್ರಾಂತ ಪ್ರಾಚಾರ‍್ಯರಾದ ಪ್ರೊ.ವೈಜುನಾಥಎಸ್. ಕೋಳಾರ ಅವರು ವಹಿಸಿದ್ದರು.ಕಲಬುರಗಿ ಬಸವ ಸಮಿತಿಯಅಧ್ಯಕ್ಷರಾದಡಾ. ವಿಲಾಸವತಿ ಖೂಬಾ, ದತ್ತಿದಾಸೋಹಿಗಳಾದ ಶ್ರೀಮತಿ ಶೀಲಾ, ಶ್ರೀ ವಿಶ್ವನಾಥಕಾಮಶೆಟ್ಟಿಅವರು ವೇದಿಕೆಯಲ್ಲಿದ್ದಾರು.ಡಾ. ಆನಂದ ಸಿದ್ದಾಮಣಿ ಕಾರ್ಯಕ್ರಮವನ್ನು ನಿರ್ವಹಿಸಿದರು.

emedialine

Recent Posts

ಕಲಬುರಗಿ: ಯತಿ ನರಸಿಂಹಾನಂದ್ ಬಂಧನಕ್ಕೆ ಆಗ್ರಹಿಸಿ ದಿಢೀರ್ ಪ್ರತಿಭಟನೆ

ಕಲಬುರಗಿ: ಕಾರ್ಯಕ್ರಮ ಒಂದರಲ್ಲಿ ಪ್ರವಾದಿ ಮುಹಮ್ಮದ್ (ಸ.ಅ) ಅವರ ವಿರುದ್ಧ ಅಕ್ರಮಣಕಾರಿ ಮತ್ತು ಪ್ರಚೋದನಕಾರಿ ಹೇಳಿಕೆ ನೀಡಿರುವ ಗಾಜಿಯಾಬಾದ್‌ನ ದಾಸ್ನಾ…

4 hours ago

ದುಶ್ಚಟ ಮುಕ್ತ ಸಮಾಜ ನಿರ್ಮಾಣ ಹಕ್ಕೊತ್ತಾಯ ಪತ್ರ ಜಿಲ್ಲಾಧಿಕಾರಿಗಳಿಗೆ ಮಂಡನೆ

ಕಲಬುರಗಿ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಬಿ.ಸಿ ಟ್ರಸ್ಟ್ ಮತ್ತು ಜಿಲ್ಲಾ ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಸಮಿತಿಯಿಂದ…

5 hours ago

ನೀರಿನ ಬಿಲ್ ಬಡ್ಡಿ ಮನ್ನಾ ಮಾಡಲು ಡಾ.ರಶೀದ್ ಜಿಲ್ಲಾಧಿಕಾರಿಗಳಿಗೆ ಮನವಿ

ಶಹಾಬಾದ: ನಗರಸಭೆ ವ್ಯಾಪ್ತಿಯ ಸಾರ್ವಜನಿಕರ ಕುಡಿಯುವ ನೀರಿನ ಬಿಲ್ ಬಡ್ಡಿ ಮನ್ನಾ ಮಾಡಿ ಅಸಲು ಮಾತ್ರ ಪಾವತಿಸಲು ಅನುಕೂಲ ಮಾಡಿಕೊಡಬೇಕೆಂದು…

6 hours ago

ಕೃಷಿ ಪತ್ತಿನ ಸಹಕಾರ ಸಂಘಗಳು ರೈತರ ಜೀವನಾಡಿ; ಮತ್ತಿಮಡು

ಶಹಾಬಾದ: ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳು ರೈತರ ಜೀವನಾಡಿಯಾಗಿದ್ದು, ಇವುಗಳ ಪ್ರಗತಿಗೆ ಆದ್ಯತೆ ನೀಡುವುದು ಪ್ರತಿಯೊಬ್ಬರ ಜವಾಬ್ದಾರಿ ಎಂದು…

6 hours ago

ಕಲಬುರಗಿ ಹಾಲಿಗೆ ಮಹಾರಾಷ್ಟ್ರ ದಲ್ಲಿ ಬೇಡಿಕೆ: ಸಚಿವ ಪ್ರಿಯಾಂಕ್ ಖರ್ಗೆ ಪ್ರಶಂಸೆ

ಕಲಬುರಗಿ: ಕಲಬುರಗಿ-ಯಾದಗಿರಿ-ಬೀದರ್‌ ಸಹಕಾರಿ ಹಾಲು ಒಕ್ಕೂಟದಲ್ಲಿ ಗುಣಮಟ್ಟದ ಹಾಲು ಉತ್ಪಾದನೆಯಾಗುತ್ತಿದ್ದು, ಇದಕ್ಕೆ ಭಾರಿ ಜನಮನ್ನಣೆ ದೊರೆತಿದ್ದು ಜಿಲ್ಲಾ ಉಸ್ತುವಾರಿ ಹಾಗೂ…

6 hours ago

ಆರೋಗ್ಯ ಮೇಳ: ಉಚಿತ ಆರೋಗ್ಯ ತಪಾಸಣೆ ಮಾಡಿಕೊಂಡ 1,227 ಜನ

ಕಲಬುರಗಿ: ಇಲ್ಲಿನ ಜಿಲ್ಲಾಧಿಕಾರಿಗಳ ಕಚೇರಿ ಆವರಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ರಾಷ್ಟ್ರೀಯ…

6 hours ago

Notice: ob_end_flush(): Failed to send buffer of zlib output compression (0) in /home3/emedixap/public_html/wp-includes/functions.php on line 5420