ಬಿಸಿ ಬಿಸಿ ಸುದ್ದಿ

ಬಿಜೆಪಿ ಮುಖಂಡ ಗುತ್ತೇದಾರ ಹೇಳಿಕೆ ಮಾನ್ಪಡೆ ಖಂಡನೆ

ಕಲಬುರಗಿ: ಸಿಎಎ ಮತ್ತು ಎನ್‌ಆರ್‌ಸಿ ವಿರುದ್ಧ ಜ. ೨೧ ರಂದು ನಡೆದ ಸಮಾವೇಶವನ್ನು ಕಂಡು ಸಹಿಸದೆ ಮಾಧ್ಯಮದ ಮುಂದೆ ಕಿರುಚಾಡಿದ ಅಫಜಲಪುgದ ಮಾಜಿ ಶಾಸಕ ಮಾಲೀಕರಯ್ಯ ಗುತ್ತೇದಾರ ಅವರು ಹೇಳಿಕೆಗೆ ಖಂಡಿಸುತ್ತೇವೆ ಎಂದು ಕರ್ನಾಟಕ ಪೀಪಲ್ಸ್ ಫೋರಂ ಮುಖಂಡ ಮಾರುತಿ ಮಾನ್ಪಡೆ ಹೇಳಿದರು.

ಪತ್ರಿಕಾ ಭವನದಲ್ಲಿಂದು ಮಾತನಾಡಿ ಸ್ವಾತಂತ್ರ್ಯದ ನಂತರ ನಡೆದ ಸಮಾವೇಶವು ಅತ್ಯಂತ ದೊಡ್ಡ ಪ್ರಮಾಣದಲ್ಲಿ ಮತ್ತು ಯಶಸ್ವಿಯಾಗಿದೆ. ಅಫಜಲಪುರ ಪಟ್ಟಣದಿಂದಲೇ ಸುಮಾರು ೨೦ ಸಾವಿರ ಜನ ಸಮಾವೇಶಕ್ಕೆ ಹೋಗಿದ್ದರು. ಅವರಿಗೆಲ್ಲ ದುಡ್ಡು ನೀಡಲಾಗಿದೆ ಎಂದು ಹೇಳಿರುವ ಮಾಲೀಕಯ್ಯ ಗುತ್ತೇದಾರ ಅಂತಹ ಸಂಸ್ಕೃತಿ ನಮ್ಮದಲ್ಲ. ಜನರು ಸ್ವಯಂ ಪ್ರೇರಣೆಯಿಂದ ಕಲಬುರಗಿ, ಯಾದಗಿರಿ, ರಾಯಚೂರ ಬೀದರ ಜಿಲ್ಲೆಗಳಿಂದ ಆಗಿಮಸಿದರು. ದುಡ್ಡು ಕೊಟ್ಟು ರ‍್ಯಾಲಿ ಮಾಡುವದು ನಮಗೆ ರೂಢಿಯಿಲ್ಲ ಎಂದು ವ್ಯಂಗ್ಯವಾಡಿದರು.

ಪೌರತ್ವ ತಿದ್ದುಪಡಿ ಕಾಯ್ದೆಯ ಕುರಿತು ಸರಕಾರದ ವಾರ್ತಾ ಇಲಾಖೆ ಇದೆ. ಅದನ್ನು ಬಳಸಿಕೊಂಡು ಜನರಗೆ ಕಾಯ್ದೆಯ ಕುರಿತು ಜಾಗೃತಿ ಮೂಡಿಸಲಿ ಪ್ರಶ್ನೆಯೊಂದಕ್ಕೆ ಉತ್ತರಿಸುತ್ತಾ ಬಿಜೆಪಿ ಪಕ್ಷವು ಸರಕಾರದ ಕೆಲಸ ಮಾಡುತ್ತಿದೆ. ಜನರು ವಿರೋಧ ಮಾಡಿದರೆ ಇವರು ಪರವಾಗಿ ಕೆಲಸ ಮಾಡುತ್ತಾರೆ. ಒಟ್ಟಾರೆಯಾಗಿ ಜನರಿಗೆ ಉದ್ಯೋಗ ನೀಡದೆ ಹೋರಾಟಗಳ ಹೆಸರಲ್ಲಿ ಮತ್ತೆ ರಸ್ತೆಯ ಮೇಲೆ ನಿಲ್ಲಿಸುತ್ತಿದ್ದಾರೆ ಎಂದು ಕೀಡಿ ಕಾರಿದರು. ಬಿಜೆಪಿಯಲ್ಲಿ ಜನವಿರೋಧಿಯ ಅಲೆಯನ್ನು ಕಂಡು ನಡುಕ ಹುಟ್ಟಿಸಿದೆ. ಹೋರಾಟದ ಮೂಲಕ ರ‍್ಯಾಲಿ ನಡೆಸುತ್ತೇವೆ ಬಿಜೆಪಿ ನಾಯಕರಿಂದ ಸರ್ಟಿಫಿಕೇಟ್ ಕೇಳಿಲ್ಲ ಅದರ ಅವಶ್ಯಕತೆಯೂ ಇಲ್ಲ ಎಂದರು.

ರೈತರು ಖರೀದಿ ಮಾಡಿದ ತೊಗರಿ ಎಂ.ಎಸ್.ಪಿ ದರದಲ್ಲಿ ಖರೀದಿ ಮಾಡಲು ಸಾಧ್ಯಗವಾದೇ ಒಣ ಜಂಬ ಕೊಚ್ಚಿಕೊಳ್ಳುತ್ತಿರುವ ಬಿಜೆಪಿ ಪಕ್ಷ ವ್ಯಾಪಾರಿಗಳ ಪಕ್ಷವಾಗಿದೆ ಎಂದು ಟೀಕಿಸಿದರು.

ಸುದ್ದಿಗೋಷ್ಠಿಯಲ್ಲಿ ಮುಖಂಡ ಡಾ. ಅಸಗರ ಚುಲಬುಲ್, ನಾಸೀರ ಹುಸೇನ ಉಸ್ತಾದ ಮೌಲಾ ಮುಲ್ಲಾ ಉಪಸ್ಥಿತರಿದ್ದರು.

emedialine

Recent Posts

ಮಹಿಳಾ ಸಹಭಾಗಿತ್ವ ಇಲ್ಲದೆ ದೇಶದ ಅಭಿವೃದ್ಧಿ ಅಸಾಧ್ಯ: ಮಾತೋಶ್ರೀ ಡಾ. ಅವ್ವಾಜಿ

ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…

14 hours ago

ತೊಗರಿ ಬೆಳೆ‌ ಹಾನಿ ಪ್ರದೇಶ ವೀಕ್ಷಿಸಿದ ಶಾಸಕ ಅಲ್ಲಮಪ್ರಭು ಪಾಟೀಲ

ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…

1 day ago

ಕಷ್ಟಗಳಿಗೆ ಕುಗ್ಗದೇ ಸವಾಲಾಗಿ ಸ್ವಿಕರಿಸಿ

ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…

1 day ago

ಕಲಬುರಗಿ: ಹಾಸ್ಯ ಕಲಾವಿದ ರೇವಣಸಿದ್ಧ ಸ್ವಾಮಿ ದಂಪತಿಗೆ ಗೆಳೆಯರ ಬಳಗದಿಂದ ಸತ್ಕರಿಸಲಾಯಿತು.

ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…

1 day ago

ಸಾವಿರ ಸೀರೆ ವಿತರಿಸಿ ಸಚಿವ ಪ್ರಿಯಾಂಕ್ ಜನ್ಮದಿನ ಆಚರಣೆ

  ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…

2 days ago

ಮೂರೂ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು: ಕಾರ್ಯಕರ್ತರಿಂದ ವಿಜಯೋತ್ಸವ

ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…

2 days ago