ಜಗತ್ತಿನ ಯೋಗಗಳೆಲ್ಲವೂ ಒಂದೊಂದು ಕ್ರಿಯೆಯ ಮೇಲೆ ನಿಂತಿವೆ. ಧರ್ಮದ ಆಧಾರದ ಮೇಲೆ ಯೋಗ ಬಂದಿಲ್ಲ. ಸಾಧನೆಯ ಆಧಾರದ ಮೇಲೆ ಬಂದಿವೆ. ಕ್ರಿಯೆಯ ಆಧಾರದ ಮೇಲೆ ಬಂದಿವೆ. ದೈಹಿಕ ಯೋಗ ಮತ್ತು ಮಾನಸಿಕ ಯೋಗ ಧರ್ಮಕ್ಕೆ ಸಂಬಂಧಪಟ್ಟವು ಅಲ್ಲ. ದೈಹಿಕ ಯೋಗ ಮನುಷ್ಯನ ಆರೋಗ್ಯದ ಕಡೆ ಗಮನ ಕೊಟ್ಟರೆ, ಮಾನಸಿಕ ಯೋಗ ಮನಸ್ಸಿಗೆ ಸಂಬಂಧಪಟ್ಟದ್ದಾಗಿದೆ. ಇವೆರಡನ್ನೂ ಪ್ರತಿಯೊಬ್ಬರೂ ಮಾಡಬೇಕು. ಇದನ್ನು ಇಂಥ ಧರ್ಮದವರೇ ಮಾಡಬೇಕೆಂದೇನಿಲ್ಲ. ಯಾರೂ ಬೇಕಾದರೂ ಮಾಡಬಹುದು. ಆದರೆ ನಮ್ಮ ರೈತರಿಗೆ ಇದರ ಅವಶ್ಯಕತೆಯಿಲ್ಲ. ಏಕೆಂದರೆ ಮೈಮುರಿದು ದುಡಿಯುವ ರೈತರೇ ಬಹಳ ದೊಡ್ಡ ಯೋಗಿಗಳು.
ಕರ್ಮಯೋಗ ಕ್ರಿಯಾಶಕ್ತಿಯ ಮೇಲೆ ನಿಂತಿದ್ದರೆ, ಹಠ ಯೋಗ ಪ್ರಾಣ ಶಕ್ತಿಯ ಮೇಲೆ ನಿಂತಿದೆ. ಇವು ಸಧನಾ ಕ್ರಮಗಳು. ಆದರೆ ಈ ಸಾಧನೆಯ ಕ್ರಮಗಳಿಂದ ಮೂಢನಂಬಿಕೆ, ಅಂಧಶ್ರದ್ಧೆ, ಶೋಷಣೆ-ಸುಲಿಗೆ ಆಗಬಾರದು ಅಷ್ಟೇ! ಪ್ರಭುದೇವರು ಮಹಾನ್ ಹಠಯೋಗಿಗಳಾಗಿದ್ದರು. ಸಿದ್ಧರಾಮರಲ್ಲಿ ಹಠಯೋಗವಿತ್ತು. ಸ್ವಾಮಿ ವಿವೇಕಾನಂದರು ರಾಜಯೋಗಿಗಳು. ಅದರಂತೆ ವಿಜಯಪುರದ ಶ್ರೀಸಿದ್ಧೇಶ್ವರ ಸ್ವಾಮಿಗಳು ಜ್ಞಾನಯೋಗಿಗಳು. ಆದರೆ ನಮ್ಮ ಬಸವಾದಿಶರಣರಲ್ಲಿ ಬಹುತೇಕರು ಇವೆಲ್ಲವೂಗಳನ್ನು ಸಾಧಿಸಿ ಕರ್ಮಯೋಗಿ, ರಾಜಯೋಗಿ, ಹಠಯೋಗಿಯಾಗಿ ಕೊನೆಗೆ ಶಿವಯೋಗಿಗಳಾದವರು.
ಯೋಗ, ಧ್ಯಾನ, ಅಧ್ಯಾತ್ಮ ಮನುಷ್ಯನಿಗೆ ಆನಂದ ತಂದುಕೊಡಬಲ್ಲವು. ಶರಣರು ತೋರಿದ ಶಿವಯೋಗವು ಎಲ್ಲಯೋಗಗಳ ಸಮನ್ವಯತೆ ಅಲ್ಲ. ಶರಣರ ಶಿವಯೋಗ ಇತರರಿಗಿಂತ ಭಿನ್ನವಾಗಿತ್ತು. ಏಕ ಕಾಲದಲ್ಲಿಯೇ ಮೂರು ವಿಭಾಗ ಮಾಡಿದರು. ದೈಹಿಕ ಯೋಗದ ಪ್ರತೀಕವಾಗಿ ಇಷ್ಟಲಿಂಗ, ಮಾನಸಿಕ ಯೋಗದ ಪ್ರತೀಕವಾಗಿ ಪ್ರಾಣಲಿಂಗ, ಆತ್ಮಯೋಗದ ಪ್ರತೀಕವಾಗಿ ಭಾವಲಿಂಗವನ್ನು ಅವರು ಬೋಧಿಸಿದರು. ಮನುಷ್ಯ ಪರಿಪೂರ್ಣ ಬದುಕಿನೆಡೆಗೆ ಸಾಗುವ ಯೋಗವನ್ನು ಅವರು ಕಲಿಸಿದರು. ಕಣ್ಣರಿಯದಿದ್ದರೂ ಕರುಳರಿಯದೆ? ಎನ್ನುವಂತೆ ಬಸವಣ್ಣನವರು ಕಾಶ್ಮೀರದಿಂದ ಬರುವ ಮೋಳಿಗೆ ಮಾರಯ್ಯ, ಕನ್ಯಾಕುಮಾರಿಯಿಂದ ಬರುವ ಮಾದಾರ ಚೆನ್ನಯ್ಯನನ್ನು ತಮ್ಮ ಲಿಂಗ ನಿರೀಕ್ಷಣೆಯಲ್ಲಿಯೇ ಕಂಡುಕೊಂಡರು.
ಸತ್ಯ ಶುದ್ಧ ಕಾಯಕ ಮಾಡುವುದೇ ದೈಹಿಕ ಯೋಗ. ಶರೀರ ಧರ್ಮ ಕಾಪಾಡಿಕೊಳ್ಳುವುದು, ಸಮಯದ ಅವಕಾಶವನ್ನು ಸದ್ಬಳಕೆ ಮಾಡಿಕೊಳ್ಳುವುದು ನಮ್ಮ ಯೋಗವಾಗಬೇಕು. ಇವೆರಡೂ ಕಳೆದು ಹೋದರೆ ಪುನಃ ಮರಳಿ ಬರುವುದಿಲ್ಲ. ಅಂತೆಯೇ ಆರೋಗ್ಯವೇ ಭಾಗ್ಯ, ಸಮಯವೇ ದೇವರು ಎಂದು ಹೇಳಲಾಗುತ್ತದೆ. “ಸಂಸಾರವೆಂಬುದು ಗಾಳಿಯ ಸೊಡರು, ನೆರೆ ಕೆನ್ನೆಗೆ ತರೆ ಗಲ್ಲಕೆ, ಒಂದು ನಿಮಿಷದ ಉದಾಸೀನ ಕೆಡಿಸಿತು, ಕೂಡಲಸಂಗಮದೇವನ ಒಲಿಸ ಬಂದ ಕಾಯ ಕೆಡಿಸಲಾಗದು” ಎಂಬಿತ್ಯಾದಿ ಅನೇಕ ವಚನಗಳ ಮೂಲಕ ಸಮಯ ಪಾಲನೆಯ ಪ್ರಜ್ಞೆಯನ್ನು ಶರಣರು ಕಲ್ಪಿಸಿದರು.
“ಅಕಟಕಟಾ ಏಕೆ ಹುಟ್ಟಿಸಿದೆ ಈ ಭವ ಲೋಕ ದುಃಖಿಯ, ಮೊಲನಿಂದ ಕರಕಷ್ಟ” ಎಂದು ಹೇಳಿದ ಬಸವಣ್ಣನವರು, “ಸಾಸಿವೆಯಷ್ಟು ಸುಖಕ್ಕೆ ಸಾಗರಷ್ಟು ದುಃಖ ನೋಡಾ” ಎಂದರು. ಮನಸ್ಸು ಮಹಾದೇವ ಆಗಬೇಕು, ಭಕ್ತ ದೇಹಿಕ ದೈವ, ಲಿಂಗವೆನ್ನೆ, ಲಿಂಗೈಕ್ಯವೆನ್ನೆ ಎಂದು ಕೂಡ ಹೇಳಿದರು. ಕ್ರಮವಿಲ್ಲದ ಜೀವನದಿಂದಾಗಿ ನಮ್ಮ ಬದುಕು ಸಂಕಷ್ಟಕ್ಕೆ ಒಳಗಾಗುತ್ತಿದೆ. ಯಂತ್ರ, ಮಂತ್ರ, ಜೋತಿಷ್ಯದಿಂದ ನಿರಾಸೆ ಕಾದಿದೆ.
ನದಿ ನದಿಯನ್ನು ಕೂಡಿದಂತೆ, ಬಯಲು ಬಯಲನ್ನು ಬೆರೆತಂತೆ, ಮಾತು ಮಾತು ಕಲೆತಂತೆ, ಜ್ಯೋತಿಯನ್ನು ಮುಟ್ಟಿ ತಾ ಜ್ಯೋತಿಯಾಗುವಂತೆ, ಘನ ಗಂಭೀರ ಮಹಾ ಘನದೊಳಗೆ ನಾನು ನೀನೆಂಬುದೇನೂ ಅರಿಯದಂತೆ ಇರುವ ಶರಣರ ಈ ಮಾತುಗಳ ಕಡೆ ನಮ್ಮ ದೇಹ ಮತ್ತು ಮನಸ್ಸನ್ನು ತೆರೆದಿಟ್ಟುಕೊಳ್ಳಬೇಕು. ಶರಣರ ಸೂಳ್ನುಡಿಗಳಿಂದ ಜೀವನ ಯೋಗಮಯವಾಗಲು ಸಾಧ್ಯ.
ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…