ಬಿಸಿ ಬಿಸಿ ಸುದ್ದಿ

ಬಿಜೆಪಿ ಧರ್ಮದ ಆಧಾರಿತ ರಾಜಕಾರಣಕ್ಕೆ ಮುಂದಾಗಿದೆ: ಮಾರುತಿ ಮಾನ್ಪಡೆ

ಕಲಬುರಗಿ: ನಗರದ ಟೌನ್‌ಹಾಲ್ ಸಮೀಪದ ಗಾಂಧೀಜಿ ಪ್ರತಿಮೆಯ ಆವರಣದಲ್ಲಿ ಸೌಹಾರ್ದ ಕರ್ನಾಟಕ ವೇದಿಕೆ ವತಿಯಿಂದ  ಹುತಾತ್ಮರ ದಿನಾಚರಣೆ ಹಾಗೂ ಸೌಹಾರ್ದ ಕಾರ್ಯಕ್ರಮ ಜರುಗಿತು.

ಈ ವೇಳೆಯಲ್ಲಿ ರೈತ ಮುಖಂಡ, ಪೀಪಲ್ಸ್ ಫೋರಂ ಸದಸ್ಯ ಮಾರುತಿ ಮಾನ್ಪಡೆ ಮಾತನಾಡಿ ಮಹಾತ್ಮಗಾಂಧಿಜಿ ಅಹಿಂಸಾ ಚಳವಳಿಗಳ ಮೂಲಕ ನಿರಂತರ ಹೋರಾಟ ಮಾಡಿದ್ದರು. ಬ್ರಿಟೀಷರ ಗುಲಾಮರಾಗಿದ್ದ ಸಂದರ್ಭದಲ್ಲಿ ಸ್ವಾತಂತ್ರ್ಯ ತಂದು ಕೊಡುವಲ್ಲಿ ಹೆಚ್ಚು ಹೆಚ್ಚು ಹೋರಾಟಗಳು ನಡೆದಿದವು. ಗಾಂಧಿಜೀಯವರ ಅಧ್ಯಕ್ಷತೆಯಲ್ಲಿ ನಡೆಯವ ಹೋರಾಟಗಳಲ್ಲಿ ಅನೇಕ ನಾಯಕರು ಭಾಗವಹಿಸಿತಿದ್ದರು. ಮಹಾತ್ಮಗಾಂಧಿ ಪ್ರಮುಖರು ಆಗಿರುತಿದ್ದರು ಎಂದು ತಿಳಿಸಿದರು. ಆರ್‌ಎಸ್‌ಸ್ ದಂತಹ ದೇಶ ಕೋಮುವಾದಿಗಳ ಕೈಗೆ ಹೋಗಿ ಕೈಗೊಂಬೆಯಾಗಿದೆ ಎಂದು ದುರಿದರು.

ಗಾಂಧೀಜಿ ಎಂದೂ ಜಾತಿ, ಧರ್ಮದಲ್ಲಿ ಭೇದ ಕಂಡವರಲ್ಲ, ಬಿಜೆಪಿ ರಾಜಕಾರಣ ಮಾಡುತ್ತಿರುವುದು ಧರ್ಮ ಭಾವನೆಗಳ ಆಧಾರದ ಮೇಲೆ. ಇಂತಹ ಪಕ್ಷ ಇಂದು ರಾಜಕೀಯ ಲಾಭಕ್ಕಾಗಿ ಮಹಾತ್ಮ ಗಾಂಧೀಜಿ ಹೆಸರನ್ನು ದುರುಪಯೋಗಪಡಿಸಿಕೊಳ್ಳುತ್ತಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಪೀಪಲ್ಸ್ ಫೋರಂ ಸಂಸ್ಥಾಪಕ ಅಧ್ಯಕ್ಷರಾದ ಅಜಗರ ಚುಲ್ ಬುಲ್ ಮಾತನಾಡಿ, ಪ್ರತಿ ವರ್ಷ ಗಾಂಧೀಜಿ ಹುತಾತ್ಮರಾದ ದಿನದಂದು ದೇಶ ಭಕ್ತ ಭಾರತೀಯರು ಅವರನ್ನು ನೆನಪಿಸುತ್ತಿರುವಾಗ ಕೆಲವು ಸಂಘ ಪರಿವಾರದ ಶಕ್ತಿಗಳು ಗೋಡೆಯನ್ನು ರಾಷ್ಟ್ರವೀರ ಎಂದು ಆರಾಧಿಸುತ್ತಿರುವುದು ನಾಚಿಕೆಗೇಡಿನ ಸಂಗತಿ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಈ ದೇಶ ಶಾಂತಿ ಹಾಗೂ ಸೌಹಾರ್ದತೆಯಿಂದ ನಾವೆಲ್ಲ ಒಂದಾಗಿ ಬಾಳಿ ಗಾಂಧೀಜಿಯವರ ಆದರ್ಶ ಮತ್ತು ಮೌಲ್ಯಗಳನ್ನು ಎತ್ತಿ ಹಿಡಿದು ಗೋಡ್ಸೆ ಅನುವಾಯಿಗಳ ಕಪಿಮುಷ್ಟಿ ಯಿಂದ ರಾಷ್ಟ್ರವನ್ನು ರಕ್ಷಿಸಲು ಮುಂದಾಗಬೇಕಿದೆ ಎಂದು ಕರೆ ಕೊಟ್ಟರು.

ಗೌರಮ್ಮ ಪಾಟೀಲ್, ಶಾಂತಪ್ಪ ಪಾಟೀಲ್, ಮೌಲಾನಾ ಅಬ್ದುಲ್ ರಜಾಕ್, ಗಂಗಮ್ಮ ಬಿರಾದಾರ,  ಅಶೋಕ ಮ್ಯಾಗೇರ, ರಾಜೇಂದ್ರ ರಾಜವಾಳ, ಮೈಲಾರಿ ದೊಡ್ಡಮನಿ, ಸಿದ್ದಲಿಂಗ ಪಾಳಾ, ರುಕ್ಕಿಣಿ, ಪಾಂಡುರಂಗ ಮಾವಿನಕರ್, ಕಲ್ಯಾಣಕುಮಾರ ಪಾಟೀಲ್, ಭೀಮಣ್ಣಗೌಡ ಸೇರಿದಂತೆ ಮುಂತಾದವರು ಇದ್ದರು.

emedialine

Recent Posts

ತೊಗರಿ ಬೆಳೆ‌ ಹಾನಿ ಪ್ರದೇಶ ವೀಕ್ಷಿಸಿದ ಶಾಸಕ ಅಲ್ಲಮಪ್ರಭು ಪಾಟೀಲ

ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…

7 hours ago

ಕಷ್ಟಗಳಿಗೆ ಕುಗ್ಗದೇ ಸವಾಲಾಗಿ ಸ್ವಿಕರಿಸಿ

ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…

7 hours ago

ಕಲಬುರಗಿ: ಹಾಸ್ಯ ಕಲಾವಿದ ರೇವಣಸಿದ್ಧ ಸ್ವಾಮಿ ದಂಪತಿಗೆ ಗೆಳೆಯರ ಬಳಗದಿಂದ ಸತ್ಕರಿಸಲಾಯಿತು.

ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…

7 hours ago

ಸಾವಿರ ಸೀರೆ ವಿತರಿಸಿ ಸಚಿವ ಪ್ರಿಯಾಂಕ್ ಜನ್ಮದಿನ ಆಚರಣೆ

  ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…

24 hours ago

ಮೂರೂ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು: ಕಾರ್ಯಕರ್ತರಿಂದ ವಿಜಯೋತ್ಸವ

ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…

1 day ago

ಸಿದ್ದಸಿರಿ ಹೋರಾಟ ಪ್ರಾಯೋಜಿತ: ಶರಣು ಪಾಟೀಲ್

ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…

1 day ago