ಕಲಬುರಗಿ: ವಿವಿಧ ಭಾಷೆಗಳ ನಡುವೆ ಸಂಬಂಧ ಬೆಸೆಯುವಲ್ಲಿ ಹಾಗೂ ಜ್ಞಾನವನ್ನು ಹೆಚ್ಚಿಸುವಲ್ಲಿ ಈ ವಿಶ್ವ ಸಾಹಿತ್ಯ ಸಮ್ಮೇಳನ ಸೇತುವೆಯಾಗಿ ಕಾರ್ಯನಿರ್ವಹಿಸುತ್ತಿದೆ ಡಾ. ಅಪ್ಪಾಜಿಯವರ ಈ ಕಾರ್ಯ ಅಮೂಲಾಗ್ರವಾದದು ಎಂದು ಖ್ಯಾತ ಬರಹಗಾರ ಹಾಗೂ ಮಾಜಿ ಮುಖ್ಯ ಮಂತ್ರಿ ವೀರಪ್ಪ ಮೊಯ್ಲಿ ಶ್ಲಾಘಿಸಿದ್ದರು.
ನಗರದ ದೊಡ್ಡಪ್ಪ ಅಪ್ಪಾ ಸಭಾ ಮಂಟಪದಲ್ಲಿ ಎರಡು ದಿನಗಳ ಕಾಲ ಹಮ್ಮಿಕೊಂಡ ವಿಶ್ವ ಸಾಹಿತ್ಯ ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿದ ಅವರು, ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಂತೆ ವಿಶ್ವ ಸಾಹಿತ್ಯ ಸಮ್ಮೇಳನವು ಪ್ರತಿವರ್ಷ ದೊಡ್ಡ ಪ್ರಮಾಣದಲ್ಲಿ ನಡೆಸಬೇಕು. ಭಾಷೆಗೆ ಗಡಿಗಳಿಲ್ಲ, ಯಾವುದೇ ಅಡೆ ತಡೆಯಿಲ್ಲ. ಭಾಷೆ ಮತ್ತು ಸಾಹಿತ್ಯ ವಿಶ್ವವ್ಯಾಪಿಯಾಗಿದೆ. ಭಾಷೆಯನ್ನು ಕಲಿಯಲು ಮತ್ತು ಜ್ಞಾನವನ್ನು ಹೆಚ್ಚಿಸಿಕೊಳ್ಳಲು ಯಾವುದೇ ಅಡೆತಡೆಗಳಿಲ್ಲ. ಭಾಷೆಯೆಂಬುದು ಕೇವಲ ಒಂದೇ ಪ್ರದೇಶಕ್ಕೆ ಸೀಮಿತಗೊಂಡಿಲ್ಲ ಎಂದು ಪ್ರಸ್ತಾಪಿಸಿದರು.
ಉದ್ಘಾಟನಾ ಭಾಷಣ ಮುಂದುವರೆಸಿ, ಮಾತೃಭಾಷೆಯಲ್ಲಿ ಉತ್ಪತ್ತಿಗೊಂಡ ಸಾಹಿತ್ಯ ಅವರ ಸಂಸ್ಕೃತಿ ಮತ್ತು ನಾಗರೀಕತೆಯ ನೈಜ ಸ್ವರೂಪವನ್ನು ಬಿಂಬಿಸುತ್ತದೆ ಹಾಗೂ ತನ್ನದೇ ಆದ ಮೌಲ್ಯಗಳನ್ನು ಹೊಂದಿದೆ. ಜ್ಞಾನವನ್ನು ಹೆಚ್ಚಿಸಿಕೊಳ್ಳಲು ಮತ್ತು ಸಂವಹನ ವಿಧಾನವಾಗಿ ವಿವಿಧ ಭಾಷೆಗಳಿಗೆ ಪ್ರಾಮುಖ್ಯತೆ ನೀಡಿದ್ದಾಗ, ಮಾತೃ ಭಾಷೆ ಇತರ ಭಾಷೆಗಳಿಗಿಂತ ಉಚ್ಛ್ರಾಯ ಸ್ಥಾನದಲ್ಲಿರುತ್ತದೆ ಎಂದು ಮಾತೃ ಭಾಷೆಯ ಮಹತ್ವವನ್ನು ವಿವರಿಸಿದರುಯ.
ಒಬ್ಬರ ಜೀವನದಲ್ಲಿ ಸಂತೋಷ ಮತ್ತು ಸಂತೃಪ್ತಿಯನ್ನು ಹೆಚ್ಚಿಸುವಲ್ಲಿ ಸಾಹಿತ್ಯ ಪ್ರಮುಖ್ಯ ಪಾತ್ರ ವಹಿಸುತ್ತದೆ. ವಿಶ್ವವ್ಯಾಪಿ ಸಮೀಕ್ಷೆಯ ಸೂಚ್ಯಂಕದ ಪ್ರಕಾರ ಸಂತೋಷದ ಸಂತೃಪ್ತಿಯಲ್ಲಿ ಭಾರತ ದೇಶ ೧೪೦ ನೇ ಸ್ಥಾನದಲ್ಲಿದೆ. ಆಶ್ಚರ್ಯವೆಂದರೇ ಪಾಕಿಸ್ತಾನಕ್ಕಿಂತ ಕಡಿಮೆ ಸ್ಥಾನದಲ್ಲಿದೆ. ಭಾರತ ದೇಶದಲ್ಲಿ ಜನರಲ್ಲಿ ಅತೃಪ್ತಿ ಹೆಚ್ಚಿನ ರೀತಿಯಲ್ಲಿ ಸ್ಫೋಟಗೊಳ್ಳುತ್ತಿದೆ ಹೀಗಾಗಿ ಸಂತೋಷ, ನೆಮ್ಮದಿ ಹಿಮ್ಮೆಟ್ಟುತ್ತಿದೆ. ಸಂತೋಷವನ್ನು ವೃದ್ಧಿಸಿಕೊಳ್ಳುವುದರ ಕುರಿತು ಚಿಂತನೆ ಮಾಡಬೇಕಾಗಿದೆ. ಸಾಹಿತ್ಯದ ಮೂಲಕ ಮನುಷ್ಯ ನೆಮ್ಮದಿಯನ್ನು ಕಂಡುಕೊಳ್ಳಬಹುದು ಎಂದು ಸಲಹೆ ನೀಡಿದರು.
ಜಗತ್ತಿಗೆ ಕರ್ನಾಟಕ ರಾಜ್ಯದ ಸಾಹಿತ್ಯದ ಕೊಡುಗೆ ಅಪಾರವಾಗಿದೆ. ೧೨ನೇ ಶತಮಾನದ ಸಾಮಾಜಿಕ ಸುಧಾರಕ ಮಹಾತ್ಮ ಬಸವೇಶ್ವರ ಮತ್ತು ಅವರ ಸಮಕಾಲಿನ ವಚನಕಾರರು ಕನ್ನಡ ಸಾಹಿತ್ಯವನ್ನು ಉನ್ನತ್ತಮಟ್ಟಕ್ಕೇರಿಸಿದರು. ವಚನಕಾರರಲ್ಲಿ ದಿನ ದಲಿತರು ಸಮುದಾಯ ಜನರೇ ಹೆಚ್ಚಾಗಿದ್ದರು. ಇವರು ವಚನ ಸಾಹಿತ್ಯದ ಮೂಲಕ ಸಮಾಜದಲ್ಲಿ ಗುಣಾತ್ಮಕ ಬದಲಾವಣೆಯನ್ನು ತಂದರು. ಅದೇ ರೀತಿ ಹರಿದಾಸ ಸಾಹಿತ್ಯವೂ ಕೂಡ ಮಹತ್ವದ ಪಾತ್ರ ನಿರ್ವಹಿಸಿದೆ ಎಂದರು.
ಮೈಸೂರನ ಸಂಸ್ಕೃತ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿಗಳಾದ ಡಾ. ಮಲ್ಲೇಪುರಂ ಜಿ. ವೆಂಕಟೇಶ ತಮ್ಮ ಆಶಯ ಭಾಷಣದಲ್ಲಿ ಮಾತನಾಡಿ, ವಿಶ್ವ ಸಾಹಿತ್ಯ ಸಮ್ಮೇಳನ ನಡೆಸಬೇಕೆಂಬ ಬಿ.ಎಂ. ಶ್ರೀಕಂಠಯ್ಯನವರ ೯೦ ವರ್ಷದ ಕನಸು ಶಿಕ್ಷಣ ತಜ್ಞರಾದ ಡಾ. ಶರಣಬಸವಪ್ಪ ಅಪ್ಪ ಇಂದು ನನಸಾಗಿಸಿದ್ದಾರೆ ಎಂದು ಪ್ರಸಂಶಿದರು.
ಇಂತಹ ಸಮ್ಮೇಳನದಿಂದ ಭಾಷೆಯಲ್ಲಿನ ಅಡೆತಡೆಗಳನ್ನು ತಡೆಗಟ್ಟಬಹುದು. ನಮ್ಮ ಜ್ಞಾನ ಸಂಪತ್ತು ಹೆಚ್ಚಿಸಿಕೊಳ್ಳಲು ಬೇರೆ ಬೇರೆ ಭಾಷೆಗಳನ್ನು ಕಲಿಯುವ ಅವಶ್ಯಕತೆಯಿದೆ. ಇತರ ಭಾಷೆಗಳನ್ನು ಕಲಿಯುವತ್ತ ನಮ್ಮ ಮನಸ್ಥಿತಿ ಬೆಳೆಸಿಕೊಳ್ಳಬೇಕು ಹಾಗೂ ಉತ್ತಮ ಭಾಷಾಶಾಸ್ತ್ರಜ್ಞರಾಗಬೇಕು ಎಂದರು.
ಖ್ಯಾತ ತಜ್ಞರಾದ ಡಾ.ಉಮಾ ದೇಶಮುಖ ಅವರು ರಚಿಸಿದ ಡಾ. ಅಪ್ಪಾಜೀಯವರ ೧೦೮ ನಾಮಾವಳಿಯ ಧ್ವನಿ ಸುರಳಿಯನ್ನು ಮಾಜಿ ಮುಖ್ಯ ಮಂತ್ರಿ ವೀರಪ್ಪ ಮೊಯ್ಲಿ ಬಿಡುಗಡೆಗೊಳಿಸಿದರು.
ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರಿ ದಾಕ್ಷಾಯಿಣಿ ಅವ್ವಾ, ಕಾರ್ಯದರ್ಶಿ ಬಸವರಾಜ ದೇಶಮುಖ, ವಿವಿ ಸಮ ಕುಲಪತಿ ವಿ.ಡಿ. ಮೈತ್ರಿ ಹಾಘೂ ಎನ್. ಎಸ್ ದೇವರಕಲ್, ವಿವಿ ವಿವಿ ಡೀನ್ ಡಾ. ಲಕ್ಷ್ಮಿ ಮಾಕಾ, ಪ್ರೊ. ವಿಜಯಾದೇವಿ ಇತರರು ಉಪಸ್ಥಿತರಿದ್ದರು. ಮೌಲ್ಯಮಾಪನ ಕುಲಸಚಿವ ಡಾ. ಲಿಂಗರಾಜ ಶಾಸ್ತ್ರೀ ಕಾರ್ಯಕ್ರಮ ನಿರೂಪಿಸಿದರು. ವಿವಿ ಕುಲಪತಿ ನಿರಂಜನ್ ನಿಷ್ಠಿ ಸ್ವಾಗತಿಸಿದರು. ವಿವಿ ಕುಲಸಚಿವ ಡಾ. ಅನೀಲಕುಮಾರ ಬಿಡ ವಂದಿಸಿದರು.
ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…