ವಾಡಿ: ಅಖಿಲ ಭಾರತ ೮೫ನೇ ಕನ್ನಡ ಸಾಹಿತ್ಯ ಸಮ್ಮೇಳನ ಪೂರಕವಾಗಿ ಸಂಚಲನ ಸಾಹಿತ್ಯ ಮತ್ತು ಸಾಂಸ್ಕೃತಿಕ ವೇದಿಕೆ ವತಿಯಿಂದ ವಾಡಿ ಪಟ್ಟಣದ ಸರಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ ಸೌಹಾರ್ದತಾ ಸಂವಾದ ಕಾರ್ಯಕ್ರಮ ನೆಡಯಿತು. ರಾಷ್ಟ್ರಕವಿ ಕುವೆಂಪು ಅವರ ಕೃತಿ ಸ್ವಾಮಿ ವಿವೇಕಾನಂದ ಪುಸ್ತಕದ ಕುರಿತು ವಿದ್ಯಾರ್ಥಿಗಳ ಮುಂದೆ ವಿಚಾರ ಮಂಡನೆ ಹಾಗೂ ಚರ್ಚೆ ನಡೆಯಿತು.
ಪುಸ್ತಕ ವಿಷಯ ಮಂಡಿಸಿ ಮಾತನಾಡಿದ ಕಾನೂನು ವಿದ್ಯಾರ್ಥಿ ಮಲಿಕಪಾಶಾ ಮೌಜನ್, ಹಿಂದೂ ಧರ್ಮದೊಳಗಿನ ಅನಾಚಾರಗಳನ್ನು ಜ್ಞಾನ ವಿವೇಕದಿಂದ ತಿದ್ದಿ ಪರಿಶುದ್ಧಗೊಳಿಸಿರುವ ಸ್ವಾಮಿ ವಿವೇಕಾನಂದರು, ಮಾನವ ಧರ್ಮ ಎತ್ತಿ ಹಿಡಿದ ಮಹಾನ್ ಸಂತರಾಗಿದ್ದಾರೆ. ಹಸಿದವನಿಗೆ ಧರ್ಮ ಬೋಧನೆ ಮಾಡುವ ಮೊದಲು ಅನ್ನ ನೀಡಿ ಸಂತೈಸಬೇಕು ಎಂಬ ಮಹತ್ವದ ಸಂದೇಶ ನೀಡಿದ್ದರ ಹಿಂದೆ ಮಾನವ ಪ್ರೀತಿ ಅಡಗಿದೆ. ಎಚ್ಚೆತ್ತುಕೊಳ್ಳುವ ಮೂಲಕ ಗುರಿ ಮುಟ್ಟುವವರೆಗೆ ನಿಲ್ಲದಂತೆ ಯುವಜನರಿಗೆ ಆದೇಶ ನೀಡಿ ಹೋರಾಟದ ನೀತಿ ಬೋಧಿಸಿದ್ದಾರೆ. ಅವರೊಬ್ಬ ಹಿಂದೂ ಧರ್ಮದ ಸುಧಾರಕರಾಗಿ ಅನ್ಯ ಧರ್ಮವನ್ನು ಗೌರವದಿಂದ ಕಾಣುವವರಾಗಿದ್ದರು ಎಂದರು.
ಗೋ ರಕ್ಷಕರಿಗೆ ತಮ್ಮದೇ ವಿಚಾರದಲ್ಲಿ ತಿವಿದಿರುವ ಸ್ವಾಮಿ ವಿವೇಕಾನಂದರು, ನಮ್ಮ ಸುತ್ತಮುತ್ತ ವಾಸಮಾಡು ಮನುಷ್ಯ ಕುಟುಂಬಗಳ ಕಷ್ಟ ನೋವುಗಳಿಗೆ ಬೆಲೆ ಕೊಡದವರು. ಹಸಿವಿನಿಂದ ಘಟಿಸಿದ ಬಡ ಜನರ ಸಾವುಗಳಿಗೆ ಮರುಗದವರು, ಪ್ರಾಣಿಗಳ ರಕ್ಷಣೆ ಮಾಡುವುದರಲ್ಲಿ ಅರ್ಥವಿಲ್ಲ ಎಂದು ಹೇಳಿದ್ದಾರೆ. ವಿವೇಕಾನಂದರು ಒಂದು ಧರ್ಮವನ್ನು ಪ್ರತಿನಿಧಿಸಿದರೂ ಅವರ ಅಂತರಂಗ ಸರ್ವಜನಾಂಗದ ಒಳಿತಿಗಾಗಿ ಮಿಡಿಯುತ್ತಿತ್ತು. ವಿವೇಕಾನಂದರನ್ನು ಆದರ್ಶವಾಗಿ ಸ್ವೀಕರಿಸಿದರೆ ದೇಶದಲ್ಲಿ ಕೌಮುಸೌಹಾರ್ದತೆ ಮತ್ತಷ್ಟು ಬಲಗೊಳ್ಳುತ್ತದೆ ಎಂದು ವಿವರಿಸಿದರು.
ಸರಕಾರಿ ಐಟಿಐ ಕಾಲೇಜಿನ ಉಪನ್ಯಾಸಕ ಶಿವಾನಂದ ಮೇತ್ರೆ ಉದ್ಘಾಟಿಸಿದರು. ಸಂಚಲನ ಸಾಹಿತ್ಯ ವೇದಿಕೆಯ ಹಿರಿಯ ಸದಸ್ಯ ಕಾಶೀನಾಥ ಹಿಂದಿನಕೇರಿ ಸಂವಾದ ನಡೆಸಿಕೊಟ್ಟರು. ಉಪಾಧ್ಯಕ್ಷ ದೇವಿಂದ್ರ ಕರದಳ್ಳಿ ಅಧ್ಯಕ್ಷತೆ ವಹಿಸಿದ್ದರು. ಉಪನ್ಯಾಸಕಿ ನಾಜೀಯಾಬೇಗಂ, ವೇದಿಕೆ ಅಧ್ಯಕ್ಷ ಮಡಿವಾಳಪ್ಪ ಹೇರೂರ, ವೀರಣ್ಣ ಯಾರಿ, ಶ್ರವಣಕುಮಾರ ಮೌಸಲಗಿ, ರವಿಕುಮಾರ ಕೋಳಕೂರ, ವಿಜಯಕುಮಾರ ಯಲಸತ್ತಿ, ಮಹಾಂತೇಶ ಬಿರಾದಾರ ಪಾಲ್ಗೊಂಡಿದ್ದರು. ಸಿದ್ದಯ್ಯಶಾಸ್ತ್ರೀ ನಂದೂರಮಠ ಸ್ವಾಗತಿಸಿದರು. ಚಂದ್ರ ಕರಣಿಕ ನಿರೂಪಿಸಿದರು. ಶ್ರೀಶರಣ ಹೊಸಮನಿ ವಂದಿಸಿದರು. ವಿದ್ಯಾರ್ಥಿಗಳು ಸ್ವಾಮಿ ವಿವೇಕಾನಂದರ ಕುರಿತು ಪ್ರಶ್ನೆಗಳನ್ನು ಕೇಳುವ ಮೂಲಕ ಅರ್ಥಪೂರ್ಣ ಸಂವಾದ ನಡೆಸಿದರು.
ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…