ಬಿಸಿ ಬಿಸಿ ಸುದ್ದಿ

ಸಮಾಜದ ಅಂಕುಡೊಂಕುಗಳನ್ನು ತಿದ್ದಿದ ಮಹಾನ ಶರಣರು

ಸುರಪುರ: ನಮ್ಮ ಸಮಾಜದಲ್ಲಿನ ಅಂಕುಡೊಂಕುಗಳನ್ನು ತಿದ್ದಿ ಉತ್ತಮ ಸಮಾಜವನ್ನು ನಿರ್ಮಾಣದಲ್ಲಿ ಶರಣ ಶ್ರೇಷ್ಠ ಶ್ರೀ ಮಡಿವಾಳ ಮಾಚದೇವರು ಹಾಗೂ ಶ್ರೀ ಸವಿತಾ ಮಹರ್ಷಿಗಳ ಪ್ರಮುಖ ಪಾತ್ರ ವಹಿಸಿದ್ದಾರೆ ಇತಂಹ ಶರಣ ತತ್ವಾದರ್ಶಗಳು ನಮಗೆ ಯಾವತ್ತು ಆದರ್ಶಪ್ರಾಯವಾಗಿವೆ ಎಂದು ತಹಶಿಲ್ದಾರ ನಿಂಗಣ್ಣ ಬಿರಾದರ ಹೇಳಿದರು.

ನಗರದ ವಾಲ್ಮೀಕಿ ಭವನದಲ್ಲಿ ಶ್ರೀ ಮಡಿವಾಳ ಮಾಚದೇವ ಮತ್ತು ಶ್ರೀ ಸವಿತಾ ಮಹರ್ಷಿಗಳ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ಸಮಾಜದವರು ವಿದ್ಯಗೆ ಪ್ರಾಮುಖ್ಯತೆ ನೀಡಿ ತಮ್ಮ ಮಕ್ಕಳನ್ನು ವಿದ್ಯಾಂವತರನ್ನಾಗಿಸಿ ದೇಶ ಸೇವೆಗೆ ಹಾಗೂ ಮಾದರಿ ಸಮಾಜವನ್ನು ನಿರ್ಮಿಸಲು ಮುಂದಾಗಬೇಕು ಎಂದು ತಿಳಿಸಿದರು.

ನಂತರ ಉಪನ್ಯಾಸಕ ಲಕ್ಷ್ಮೀಕಾಂತ ದೇವರಗೋನಾಲ ಮಾತನಾಡಿ ಮಡಿವಾಳ ಮಾಚದೇವರ ೧೨ ನೇ ಶತಮಾನದ ಮಹಾನ ಶ್ರೇಷ್ಠ ಸಂತರು ಇವರ ತತ್ವಗಳು ಸರ್ವ ಮಾನವಕೊಲಕ್ಕೆ ಮಾದರಿಯಾಗಿವೆ ಬಸವಣ್ಣನವರ ಅನುಭವ ಮಂಟಪದಲ್ಲಿ ಶ್ರೇಷ್ಠ ಸ್ಥಾನವನ್ನು ಹೊಂದಿದ್ದರು ಇತಂಹ ಸಮಾಜದಲ್ಲಿ ಹುಟ್ಟಿರುವ ನಾವೆಲ್ಲರು ಅವರ ತತ್ವಾದರ್ಶಗಳನ್ನು ಅಳವಡಿಸಿಕೊಂಡು ಜೀವನದಲ್ಲಿ ಮುಂದೆ ಬರಬೇಕು ಎಂದು ತಿಳಿಸಿದರು.

ಇನ್ನೂರ್ವ ಉಪನ್ಯಾಸಕ ಹಾಗೂ ಹಿರಿಯ ನ್ಯಾಯವಾದಿ ನಿಂಗಣ್ಣ ಚಿಂಚೂಡಿ ಮಾತನಾಡಿ ರಾಮಾಯಣ ಮಹಾಭಾರತ ಕಾಲದಿಂದಲು ೧೨ ರೀತಿಯ ಸಮಾಜಗಳು ತಮ್ಮ ಕಾಯಕ ಜವಾಬ್ದಾರಿಯನ್ನು ನಿರ್ವಹಿಸುತ್ತಾ ಬಂದಿವೆ ಈಗಿನ ಆಧುನಿಕ ಕಾಲದಲ್ಲಿ ನಮ್ಮ ಎಲ್ಲಾ ಸಮಾಜ ಭಾಂದವರು ಸಾಮಾಜಿಕವಾಗಿ, ಶೈಕ್ಷಣಿಕವಾಗಿ, ಆರ್ಥಿಕವಾಗಿ ಸಮಾಜವನ್ನು ಸದೃಡವಾಗಲು ಸಮಾಜದಲ್ಲಿ ಒಗ್ಗಟ್ಟು ಬಹು ಮುಖ್ಯವಾಗಿದೆ ಮ್ತ್ತು ಪ್ರತಿಯೊಬ್ಬರು ಶಿಕ್ಷಣವಂತರಾಗಬೇಕು ಎಂದು ತಿಳಿಸಿದರು.

ಡಿವಾಯ್‌ಎಸ್.ಪಿ ವೆಂಕಟೇಶ ಉಗಿಬಂಡಿ, ತಾಪಂ ಇಓ ಅಮರೇಶ, ಸವಿತಾ ಸಮಾಜದ ಮುಖಂಡ ಬಾಲರಾಜ, ರವೀಂದ್ರ ಗುತ್ತೆದಾರ, ಬೈಲಪ್ಪ ಪೂಜಾರಿ, ವೀರಗಂಟೆಪ್ಪ ಹರಗ್ಗಿನದೊಡ್ಡಿ ವೇದಿಕೆಯಲ್ಲಿದ್ದರು ಸುರೇಶ ಚಿನ್ನಾಕರ. ಗೋಪಾಲ ಸೇರಿದಂತೆ ಇನ್ನಿತರರಿದ್ದರು.

emedialine

Recent Posts

ತೊಗರಿ ಬೆಳೆ‌ ಹಾನಿ ಪ್ರದೇಶ ವೀಕ್ಷಿಸಿದ ಶಾಸಕ ಅಲ್ಲಮಪ್ರಭು ಪಾಟೀಲ

ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…

9 hours ago

ಕಷ್ಟಗಳಿಗೆ ಕುಗ್ಗದೇ ಸವಾಲಾಗಿ ಸ್ವಿಕರಿಸಿ

ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…

9 hours ago

ಕಲಬುರಗಿ: ಹಾಸ್ಯ ಕಲಾವಿದ ರೇವಣಸಿದ್ಧ ಸ್ವಾಮಿ ದಂಪತಿಗೆ ಗೆಳೆಯರ ಬಳಗದಿಂದ ಸತ್ಕರಿಸಲಾಯಿತು.

ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…

9 hours ago

ಸಾವಿರ ಸೀರೆ ವಿತರಿಸಿ ಸಚಿವ ಪ್ರಿಯಾಂಕ್ ಜನ್ಮದಿನ ಆಚರಣೆ

  ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…

1 day ago

ಮೂರೂ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು: ಕಾರ್ಯಕರ್ತರಿಂದ ವಿಜಯೋತ್ಸವ

ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…

1 day ago

ಸಿದ್ದಸಿರಿ ಹೋರಾಟ ಪ್ರಾಯೋಜಿತ: ಶರಣು ಪಾಟೀಲ್

ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…

1 day ago