ಸುರಪುರ: ಮಾದಿಗ ಸಮಾಜದ ಕುಲಗೌರವವಾದ ಮಹಾತಂಗ ಮಹರ್ಷಿಯವರ ಜಾತ್ರೆಯನ್ನು ಹಂಪಿಯಲ್ಲಿ ಇದೇ ತಿಂಗಳು ೦೮ ಮತ್ತು ೦೯ ನೇ ತಾರೀಖಿನಂದು ನಡೆಸಲಾಗುತ್ತಿದು ಎಲ್ಲರು ಈ ಜಾತ್ರೆಯಲ್ಲಿ ಭಾಗವಹಿಸುವಂತೆ ಹಂಪಿಯ ಮಹಾತಂಗ ಮಹರ್ಷಿ ಮಠ ಶ್ರೀ ಪೂರ್ಣಾನಂದ ಮಹಾಸ್ವಾಮೀಜಿ ಕರೆ ನೀಡಿದರು.
ನಗರಕ್ಕೆ ಆಗಮಿಸಿದ್ದ ಅವರು ಸ್ಥಳಿಯ ಮುಖಂಡರ ಸನ್ಮಾನ ಸ್ವೀಕರಿಸಿ ಮಾತನಾಡಿ,ನಮ್ಮ ಸಮುದಾಯದ ಏಳಿಗೆಗಾಗಿ ಎಲ್ಲರು ನಿರಂತರ ಕೆಲಸ ಮಾಡಬೇಕಾಗಿದೆ.ನಮ್ಮವರಲ್ಲಿ ಜಾಗೃತಿ ಮೂಡಿಸಲು ನಿರಂತರ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ.ವಿಜಯಪುರದಲ್ಲಿ ಸಭೆ ನಡೆಸಿ ರಾಜ್ಯದಲ್ಲಿನ ಎಲ್ಲಾ ನಮ್ಮ ಸಮುದಾಯದ ಶಾಸಕರು ಸಂಸದರನ್ನು ಸೇರಿಸಿ ಇನ್ನೆರಡು ತಿಂಗಳಲ್ಲಿ ಬೆಂಗಳೂರಲ್ಲಿ ಮಾದಿಗರ ನಡೆ ಸದಾಶಿವ ಆಯೋಗದ ಕಡೆ ಎಂಬ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗುವುದು ಎಂದರು.
ಇದೇ ೦೮ ಮತ್ತು ೦೯ ರಂದು ಎರಡು ದಿನಗಳ ಕಾಲ ನಡೆಯುವ ಜಾತ್ರೆಯು ನಮ್ಮ ಸಮುದಾಯದ ಜನರಲ್ಲಿ ಮಹಾತಂಗ ಮಹರ್ಷಿಯವರ ಬಗ್ಗೆ ಜಾಗೃತಿ ಮೂಡಿಸುವ ಹಾಗು ಸಮಾಜದ ಒಗ್ಗಟ್ಟು ಬಲಪಡಿಸುವ ನಿಟ್ಟಿನಲ್ಲಿ ಹಮ್ಮಿಕೊಳ್ಳಲಾಗುತ್ತಿದ್ದು ಎಲ್ಲೆಡೆಯಿಂದ ಲಕ್ಷಾಂತರ ಜನ ಸೇರುವ ನಿರೀಕ್ಷೆಯಿದೆ ತಾವುಗಳು ಎಲ್ಲರೂ ಭಾಗವಹಿಸುವಂತೆ ತಿಳಿಸಿದರು.
ಈ ಸಂದರ್ಭದಲ್ಲಿ ಮುಖಂಡರಾದ ನಿಂಗಣ್ಣ ಬುಡ್ಡಾ ದೀವಳಗುಡ್ಡ,ಪರಮಣ್ಣ ಪೀರಾಪುರ,ನಾಘರಾಜ ಕುಂಬಾರಪೇಟೆ,ಹುಲಗಪ್ಪ ಶೆಳ್ಳಿಗಿ,ಹಣಮಂತ ಬೋನ್ಹಾಳ,ಶಿವುಕುಮಾರ ಕಮ್ಮಲದಿನ್ನಿ ಹಾಗು ತಾಲೂಕು ಮಾದಿಗ ಯುವ ಸೇನೆ ಅಧ್ಯಕ್ಷ ಬಸವರಾಜ ಮುಷ್ಠಳ್ಳಿ ಸೇರಿದಂತೆ ಸಮಾಜದ ಅನೇಕರಿದ್ದರು.
ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…