ಬಿಸಿ ಬಿಸಿ ಸುದ್ದಿ

ಸಾಧಕರೊಂದಿಗೆ ಸಾವಿರದ ಮಾತುಗಳು ವೈವಿಧ್ಯತೆಯ ಕಾರ್ಯಕ್ರಮ

ಕಲಬುರಗಿ: ಪ್ರಜ್ಞಾ ದಿ ಇನ್ಸ್ ಟ್ಯೂಟ್ ಆಫ್ ಇನ್ನೋವೇಟೀವ್ ಲರ್ನಿಂಗ್ ಅರ್ಪಿಸುವ “ಸಾಧಕರೊಂದಿಗೆ ಸಾವಿರದ ಮಾತುಗಳು” ಎನ್ನುವ ವೈವಿಧ್ಯತೆಯ ಕಾರ್ಯಕ್ರಮ ಇತ್ತೀಚಗೆ ನಗರದ ಚೆಂಬರ್ ಆಫ್ ಕಾಮರ್ಸ ಸಭಾಂಗಣದಲ್ಲಿ ಆಯೋಜಿಸಲಾಗಿತ್ತು.

ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದ ಶೈಕ್ಷಣಿಕ ಸಂಪನ್ಮೂಲ ವ್ಯಕ್ತಿ ಹಾಗೂ ಕಾರ್ಯಕ್ರಮದ ನಿರೂಪಕ ಕೆ.ಎಂ.ವಿಶ್ವನಾಥ ಮರತೂರ ನಡೆಯುವಾಗ ಎಡುವುದು ಸಹಜ, ಆದರೆ ಎಡವಿದ ಕಲ್ಲಿಗೆ ಮತ್ತೆ ಮತ್ತೆ ಎಡುವುದು ದಡ್ಡತನ, ಸೋಲದೆ ಗೆಲ್ಲುವುದು ಸಾಧ್ಯವಿಲ್ಲ, ಸೋತು ಗೆದ್ದವನಿಗೆ ನೂರು ಸೋಲು ಎದುರಾದರೂ ಹೆದರುವುದಿಲ್ಲ. ಇದೊಂದು ವೈವಿಧ್ಯಮಯ ಕಾರ್ಯಕ್ರಮ. ಸಾಧಕರ ಸಾಧನೆಯ ಸ್ಪೂರ್ತಿದಾಯಕ ಕಥೆಯನ್ನು ಕೇಳುವುದು ಅಗತ್ಯವಿದೆ. ಕಲ್ಯಾಣ ಕರ್ನಾಟಕದಲ್ಲಿ ಎಲೆಮರೆಯ ಕಾಯಿಯಂತೆ ಅನೇಕ ಸಾಧಕರು ತಾವಿರುವ ವೃತ್ತಿ ಮತ್ತು ಪ್ರವೃತ್ತಿಯಲ್ಲಿ ಕಾಯಕ ಮಾಡುತ್ತಿದ್ದಾರೆ. ಅವರವರ ನಿಟ್ಟಿನಲ್ಲಿ ವಿಶೇಷವಾದ ಸೇವೆಯನ್ನು ಸಮಾಜಕ್ಕೆ ಕೊಡುತ್ತಿದ್ದಾರೆ. ಅವರ ಕೆಲಸ ಅನೇಕ ಯುವಕರಿಗೆ ಮಾದರಿಯಾಗುವಂತಿದ್ದರು ಅದು ಸಮಾಜದ ವ್ಯಕ್ತಿಗಳಿಗ ತಲುಪುತ್ತಿಲ್ಲ.
ಅನೇಕ ಯುವಕರಿಗೆ ಸ್ಪೂರ್ತಿಯಾಗುವಂತಹ ಸಾಧನೆ ಮಾಡುತ್ತಿರುವ ಸಾಧಕರು ಇದ್ದಾರೆ.

ಅವರ ಸಾಧನೆ ಇವತ್ತಿನ ಯುವಕರಿಗೆ, ಓದುತ್ತಿರುವ ಮಕ್ಕಳಿಗೆ ಸ್ಪೂರ್ತಿಯಾಗುತ್ತದೆ. ಇದಕ್ಕಾಗಿ ಪ್ರಜ್ಞಾ ದಿ ಇನ್ಸ್ ಟ್ಯೂಟ್ ಆಫ್ ಇನ್ನೋವೇಟೀವ್ ಲರ್ನಿಂಗ್ ಪ್ರಸ್ತುತ ಕಾರ್ಯಕ್ರಮದ ಮೂಲಕ ಸಮಾಜಕ್ಕೆ ಮಾದರಿಯಾಗುವ ವ್ಯಕ್ತಿಗಳ ಪರಿಚಯ ಮಾಡಿಕೊಡಲು ಮನಸ್ಸು ಮಾಡಿದೆ. ಇಲ್ಲಿ ಒಬ್ಬ ವ್ಯಕ್ತಿಯ ಸಾಧನೆಗಳು, ಅವರ ಬಾಲ್ಯಜೀವನ, ವೃತ್ತಿ, ಸಮಾಜ ಸೇವೆ, ಪ್ರಶಸ್ತಿಗಳು, ಅವರ ವಿಶೇಷತೆ, ಅವರಿಂದ ಸ್ಪೂರ್ತಿಗೊಂಡ ವ್ಯಕ್ತಿಗಳು, ಅವರ ವಯಕ್ತಿಕ ಕೌಟುಂಬಿಕ ಜೀವನ, ಹೀಗೆ ನಾನಾ ರೀತಿಯಲ್ಲಿ ಪರಿಚಯಿಸಲಾಗುತ್ತದೆ. ವೀಕೆಂಡ್ ವಿಥ್ ರಮೇಶ ಮಾದರಿಯಲ್ಲಿ ಈ ಕಾರ್ಯಕ್ರಮ ಮಾಡುತ್ತಿದ್ದು ಹಲವು ವೈಶಿಷ್ಠತೆಗಳಿಂದ ಕೂಡಿದೆ.

ಎಸ್.ಎಸ್.ಹುಲ್ಲೂರು-ಡಿ.ವೈ.ಎಸ್.ಪಿ. ಕಲಬುರಗಿ ಗ್ರಾಮೀಣ. ಪ್ರಸ್ತುತ ರಾಷ್ಟ್ರಪತಿಗಳ ಪದಕಕ್ಕೆ ಆಯ್ಕೆಯಾಗಿದ್ದು ನಮ್ಮ ಕಾರ್ಯಕ್ರಮದ ಸಾಧಕರ ಕುರ್ಚಿಯಲ್ಲಿ ತಮ್ಮ ಸಾಧನೆಯ ಹಾದಿಯ ಬಗ್ಗೆ ವಿವರಿಸಿದರು. ಇವರ ಮೂಲ ಹೆಸರು ಎಸ್ ಎಸ್ ಹುಲ್ಲೂರು ತಂದೆ ಬಸಪ್ಪ ಹೆಂಡತಿ ಜಯಶ್ರೀ ಇವರು 01:05:1962 ಜನಿಸುತ್ತಾರೆ ಪ್ರಸ್ತುತ ಇವರು 57 ವರ್ಷ, ವಯಸ್ಸಾಗಿದೆ ಆದರೆ ತಮ್ಮ ವೃತ್ತಿಯನ್ನು ಅತ್ಯಂತ ಪ್ರೀತಿಯಿಂದ ಗೌರವಸುತ್ತಾ ದಕ್ಷ ಅಧಿಕಾರಿಯಾಗಿ ಸೇವೆ ಸಲ್ಲಿಸುತ್ತಿರುವ ಇವರು ಇವಾಗಲೂ ಚಿರಯುವಕರಂತೆ ಕಾಣುತ್ತಾರೆ. ಇವರು ಮೊದಲು 1994ರಲ್ಲಿ ರ್ಯಾಂಕ್ ಸರ್ವಿಸ್ ಕೆಡಾರ್ ವೃತ್ತಿ ಜೀವನ ಪ್ರಾರಂಭ ಮಾಡುತ್ತಾರೆ. 25 ವರ್ಷ ಪೋಲಿಸ್ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದಾರೆ. ಪ್ರಸ್ತುತ 2017ರಿಂದ ಕಲಬುರಗಿ ಗ್ರಾಮೀಣ ಡಿ.ವೈ.ಎಸ್.ಪಿ ಯಾಗಿ ವೃತ್ತಿ ಮಾಡುತ್ತಿದ್ದಾರೆ.

ಕಾರ್ಯಕ್ರಮವನ್ನು ಉದ್ಘಾಟಿಸಿದ ಶಿಕ್ಷಣ ಪ್ರೇಮಿ ಕಾಶಿನಾಥ ಮರತೂರ ನಮ್ಮ ಭಾಗದ ಸಾಧಕರ ಪರಿಚಯವನ್ನು ನಮ್ಮ ಯುವಕರಿಗೆ ಮತ್ತು ಮಕ್ಕಳಿಗೆ ಮಾಡಿಕೊಡುವ ವಿನೂತನ ಪ್ರಯತ್ನವಿದು. ನಮ್ಮ ಯುವಕರು ಮಕ್ಕಳು ಸಾಧಕರ ಹಾದಿಯಲ್ಲಿ ನಡೆಯುವಂತಾಗಿ ಯಶಸ್ವಿ ಬದುಕಿನತ್ತ ಸಾಗಬೇಕೆಂದು ನಾವು ಬಯಸುತ್ತೇವೆ ಇವತ್ತು ಸಾಧಕರಾದ ಎಸ್.ಎಸ್.ಹುಲ್ಲೂರ ಸರ್ ಅವರ ಸಾಧನೆ ಎಲ್ಲರಿಗೂ ಮಾದರಿಯಾಗಬೇಕು ಎಂದರು.

ಮುಖ್ಯ ಅಥಿತಿಗಳಾಗಿ ಆಗಮಿಸಿ ಮಾತನಾಡಿದ ಜಿಲ್ಲಾ ಕಾಂಗ್ರೆಸ್ ಹಿಂದೂಳಿದ ಘಟಕದ ಅಧ್ಯಕ್ಷ ಧರ್ಮರಾಜ ಹೆರೂರ, ಸಾಧನೆಯಂಬುವುದು ಸಾಧಕರ ಸೊತ್ತು ನಮ್ಮ ನಡುವೆ ಅನೇಕ ಸಾಧಕರು ಇದ್ದಾರೆ. ಅವರು ತಮ್ಮದೇ ಆದ ರೀತಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಅವರ ಸಾಧನೆ ಸಮುದಾಯದ ಜನರಿಗೆ ತಿಳಿಯಪಡಿಸುವ ಪ್ರಯತ್ನ ಈ ಸಾಧಕರೊಂದಿಗೆ ಸಾವಿರದ ಮಾತುಗಳು ಕಾರ್ಯಕ್ರಮ. ಇದೊಂದು ವಿಶೇಷವಾದ ಕಾರ್ಯಕ್ರಮ ಕಲ್ಯಾಣ ಕರ್ನಾಟಕದ ಸಾಧಕರನ್ನು ಗುರುತಿಸುವುದು ಅಷ್ಟೆ ಅಲ್ಲಾ ಅವರ ಸಾಧನೆಯನ್ನು ಜನಸಮುದಾಯಕ್ಕೆ ಪ್ರೋತ್ಸಾಹವಾಗುವಂತೆ ಮಾಡುವುದು ಮುಖ್ಯವೆಂದರು.

ಇನ್ನೋರ್ವ ಅಥಿತಿಯಾದ ನಾಗೀಂದ್ರಪ್ಪ ಎ ಪುಜಾರಿ ವಕೀಲರು ಮಾತನಾಡಿ ಒಂದು ಸಾಧನೆಯ ಹಿಂದೆ ಅತ್ಯಂತ ದೊಡ್ಡ ಪರಿಶ್ರಮವಿರುತ್ತದೆ. ಸಾಧನೆಯ ಹಾದಿಯಲ್ಲಿ ಕಷ್ಟಗಳನ್ನು ಮರೆಯದೆ ನೆನಪಿಟ್ಟು ಅದನ್ನು ಸರಿಪಡಿಸಿಕೊಂಡು ಹೋಗುವುದೇ ಜೀವನ ಸಾಧನೆಯಾಗಿದೆ. ಸಾಧನೆಯ ಹಾದಿಯು ಉಳಿದವರಿಗೆ ಸಹಾಯಕವಾಗಬೇಕಾದದ್ದು ಅವಶ್ಯಕೆತೆಯಿದೆ ಎಂದರು.

ಈ ಕಾರ್ಯಕ್ರಮದಲ್ಲಿ ಜಗದೇವಪ್ಪ ಮುಗಟಾ, ರಿಯಾಜ್ ಪಟೇಲ್, ಅಂಬ್ರೆಶ ದೇನವನಹಳ್ಳಿ, ದೇವರಾಜ ಬಬಲಾದ್, ಸಂತೋಷ ಪಾಟೀಲ್, ಇತರರು ಭಾಗವಹಿಸಿದ್ದಿರು 100ಕ್ಕೂ ಹೆಚ್ಚು ಯುವಕರು, ಮಕ್ಕಳು, ಮಹಿಳೆಯರು ಭಾಗವಹಿದ್ದರು.

emedialine

Recent Posts

ಕಲಬುರಗಿ: ಹಾಸ್ಯ ಕಲಾವಿದ ರೇವಣಸಿದ್ಧ ಸ್ವಾಮಿ ದಂಪತಿಗೆ ಗೆಳೆಯರ ಬಳಗದಿಂದ ಸತ್ಕರಿಸಲಾಯಿತು.

ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…

1 min ago

ಸಾವಿರ ಸೀರೆ ವಿತರಿಸಿ ಸಚಿವ ಪ್ರಿಯಾಂಕ್ ಜನ್ಮದಿನ ಆಚರಣೆ

  ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…

17 hours ago

ಮೂರೂ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು: ಕಾರ್ಯಕರ್ತರಿಂದ ವಿಜಯೋತ್ಸವ

ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…

19 hours ago

ಸಿದ್ದಸಿರಿ ಹೋರಾಟ ಪ್ರಾಯೋಜಿತ: ಶರಣು ಪಾಟೀಲ್

ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…

1 day ago

ಸಿದ್ದ ಶ್ರೀ ಕಾರ್ಖಾನೆ ಪ್ರಾರಂಭವಾಗುವರೆಗೂ ಹೋರಾಟ: ವೀರಣ್ಣ ಗಂಗಾಣಿ

ಚಿಂಚೋಳಿ: ಸಿದ್ದಶ್ರೀ ಕಾರ್ಖಾನೆ ಪ್ರಾರಂಭ ಮಾಡಲು ರೈತರು ಹಗಲು ರಾತ್ರಿ ಎನ್ನದೆ ಬಸವೇಶ್ವರ ಉತ್ತರ ಬಳಿ ಧರಣಿಯಲ್ಲಿ ಹೋರಾಟ ಮಾಡುತ್ತಿದ್ದು.…

1 day ago

ದಕ್ಷಿಣ ಭಾರತ ಅಂತರ ವಿಶ್ವವಿದ್ಯಾಲಯ ಮಹಿಳೆಯರ ಕಬಡ್ಡಿ ಕ್ರೀಡಾಕೂಟಕ್ಕೆ ಆಯ್ಕೆ

ಕಲಬುರಗಿ: ನವೆಂಬರ್ 29 ರಿಂದ 2 ಡಿಸೇಂಬರ್ ವರೆಗೆ ತಮಿಳುನಾಡಿನ ಅಲಗಪ್ಪ ವಿಶ್ವವಿದ್ಯಾಲಯ ಕರೈಕುಡಿಯಲ್ಲಿ ನಡೆಯುವ ದಕ್ಷಿಣ ಭಾರತ ಅಂತರ…

1 day ago