ಬಿಸಿ ಬಿಸಿ ಸುದ್ದಿ

ಪಿತೃಪ್ರಧಾನ ವ್ಯವಸ್ಥೆಗೆ ಪೂರಕವಾಗಿ ಸಿಎಎ ಜಾರಿ: ಆರ್.ಪೂರ್ಣಿಮಾ

ಕಲಬುರಗಿ: ೮೫ನೇ ಅಖಿಲ ಭಾರತ ಸಾಹಿತ್ಯ ಸಮ್ಮೇಳನದ ಎರಡನೇ ದಿನ ಸ್ತ್ರೀ ಲೋಕ: ತಲ್ಲಣಗಳು ಗೋಷ್ಟಿಯಲ್ಲಿ ಕೇಂದ್ರ ಸರಕಾರ ಜಾರಿ ಮಾಡಲು ಉದ್ದೇಶಿಸಿರುವ ಸಿಎಎ, ಎನ್‌ಆರ್‌ಸಿ ಹಾಗೂ ಎನ್‌ಪಿಆರ್ ಕಾಯ್ದೆಗಳ ವಿರುದ್ದ ಹಾಗೂ ಪ್ರಭುತ್ವದ ಮಹಿಳಾ ವಿರೋಧಿ ನೀತಿಗಳ ವಿರುದ್ದ ಮಹಿಳಾ ಸಾಹಿತಿಗಳು ಆಕ್ರೋಶ ವ್ಯಕ್ತಪಡಿಸಿದರು.

ಗುರುವಾರ ಶ್ರೀ ವಿಜಯ ಪ್ರಧಾನ ವೇದಿಕೆಯಲ್ಲಿ ಮಾಜಿ ಸಚಿವೆ ಲಲಿತಾ ನಾಯಕ್ ಅಧ್ಯಕ್ಷತೆಯಲ್ಲಿ ನಡೆದ ಸ್ತ್ರೋ ಲೋಕ: ತಲ್ಲಣಗಳು ಗೋಷ್ಟಿಯಲ್ಲಿ, ಪಿತೃಪ್ರಧಾನ ವ್ಯವಸ್ತೆಯನ್ನು ಮರು ಸ್ಥಾಪಿಸುವ ಉದ್ದೇಶದಿಂದ ಸಿಎಎ, ಎನ್‌ಆರ್‌ಸಿ ಕಾಯ್ದೆಗಳನ್ನು ಜಾರಿ ಮಾಡಲು ಪ್ರಭುತ್ವ ಮುಂದಾಗಿದೆ. ಆದರೆ, ಈ ಜನವಿರೋಧಿ ಕಾಯ್ದೆಗಳನ್ನು ವಿರೋಧಿ ದೇಶಾದ್ಯಂತ ನಡೆಯುತ್ತಿರುವ ಪ್ರತಿಭಟನೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು ಭಾಗವಹಿಸುತ್ತಿರುವುದು ಸಂತಸದ ವಿಚಾರವೆಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಹೆಣ್ಣನ್ನು ಲಕ್ಷ್ಮಿಗೆ ಹೋಲಿಸುತ್ತೇವೆ. ಆದರೆ, ಮಹಿಳೆಗೆ ಹಣ, ಸಂಪತ್ತು ಹೊಂದುವ ಸಾಮರ್ಥ್ಯ ನೀಡಲಾಗಿದೆಯೆ. ಹೆಣ್ನನ್ನು ಸರಸ್ವತಿ ಎನ್ನುತ್ತೇವೆ. ಆದರೆ, ದೇಶದಲ್ಲಿ ಮಹಿಳೆಯರ ಅನಕ್ಷರತೆ ಪಾಲು ಎಷ್ಟಿದೆ ಎಂಬುದನ್ನು ನಾವು ನೋಡಬಹುದಾಗಿದೆ. ಹಾಗೆಯೇ ಮಹಿಳೆಯನ್ನು ಶಕ್ತಿ ಎನ್ನುತ್ತೇವೆ. ಆದರೆ, ದಿನನಿತ್ಯ ಮಹಿಳೆಯರ ಮೇಲೆ ಅತ್ಯಾಚಾರದ ಪ್ರಕರಣಗಳು ಹೆಚ್ಚುತ್ತಲೆ ಇವೆ. –ಆರ್.ಪೂರ್ಣಿಮಾ, ಹಿರಿಯ ಪತ್ರಕರ್ತೆ

ಸಿಎಎ ವಿರೋಧಿಸಿ ಬೀದರ್‌ನ ಶಾಹೀನ್ ಶಿಕ್ಷಣ ಸಂಸ್ಥೆಯಲ್ಲಿ ನಾಟಕ ಮಾಡಿದ ವಿದ್ಯಾರ್ಥಿಗಳ ತಾಯಂದಿರನ್ನು ಹಾಗೂ ಶಾಲಾ ಶಿಕ್ಷಕರನ್ನು ಬಂಧಿಸಿರುವ ಪ್ರಭುತ್ವದ ನೀತಿಯನ್ನು ನಾವೆಲ್ಲರೂ ವಿರೋಧಿಸಬೇಕಿದೆ. ಸಿಎಎ ವಿರೋಧಿಸಿ ಬೆಂಗಳೂರು ನಗರ ಒಂದರಲ್ಲಿಯೇ ೩೦ದಿನಗಳಲ್ಲಿ ೮೨ಪ್ರತಿಭಟನಾ ಸಭೆಗಳು ದಾಖಲಾಗಿವೆ. ಮಹಿಳೆಯರ ಈ ಹೋರಾಟವು ದೇಶವನ್ನು ಪೊರೆಯುವ ತಾಯಿ ತನದ ಗುಣವಾಗಿದೆ ಎಂದು ಹಿರಿಯ ಪತ್ರಕರ್ತೆ ಆರ್.ಪೂರ್ಣಿಮಾ ಅಭಿಪ್ರಾಯಿಸಿದರು.

ಸಂಸತ್‌ನಲ್ಲಿ ಜನವಿರೋಧಿ ಕಾಯ್ದೆಗಳು ಯಾವುದೇ ಚರ್ಚೆ ಇಲ್ಲದೆ ಜಾರಿಯಾಗುತ್ತವೆ. ಆದರೆ, ಸಂಸತ್‌ನಲ್ಲಿ ಮಹಿಳಾ ಮೀಸಲಾತಿಗೆ ಸಂಬಂಧಿಸಿದ ಕಾಯ್ದೆಯನ್ನು ಜಾರಿ ಮಾಡದೆ ಹಲವು ವರ್ಷಗಳಿಂದ ಉಳಿಸಿಕೊಂಡಿದ್ದಾರೆ. ಈ ಒಂದು ಉದಾಹರಣೆ ಸಾಕು, ಪ್ರಭುತ್ವಕ್ಕೂ ಮಹಿಳಾ ಸಮುದಾಯಕ್ಕೂ ಎಷ್ಟು ಅಂತರವಿದೆ. ಹೀಗಾಗಿ ಸರಕಾರಗಳಿಂದ ಕೇವಲ ಸೌಲಭ್ಯಗಳನ್ನು ಪಡೆದುಕೊಳ್ಳದೆ, ರಾಜಕೀಯ ಅಧಿಕಾರ ಪಡೆದುಕೊಳ್ಳುವ ನಿಟ್ಟಿನಲ್ಲಿ ಹೆಚ್ಚು ಗಮನ ಕೊಡಬೇಕೆಂದು ಅವರು ಹೇಳಿದರು.

ಚಿಂತಕಿ ಶಿವಗಂಗಾ ರುಮ್ಮಾ ಮಾತನಾಡಿ, ದೇಶದ ಮಹಿಳೆಯರಿಗೆ ಬೇಕಿರುವುದು ದೇವಾಲಯಗಳ ಪ್ರವೇಶವಲ್ಲ. ಬದಲಿಗೆ, ಸಂಸತ್, ವಿಧಾನಸಭೆಗಳ ಒಳಕ್ಕೆ ಪ್ರವೇಶಿಸುವುದು ಅಗತ್ಯವಾಗಿದೆ. ನಮಗೆ ಏನು ಬೇಕು ಎಂಬುದನ್ನು ನಾವು ಪಡೆದುಕೊಳ್ಳಲು ರಾಜಕೀಯ ಅಧಿಕಾರಬೇಕಾಗಿದೆ ಎಂದರು.

ಮಾಜಿ ಸಚಿವೆ ಲಲಿತಾ ನಾಯಕ್ ಮಾತನಾಡಿ, ಬ್ರಿಟಿಷರ ವಿರುದ್ದ ನಾವು ಗಳಿಸಿದ ಸ್ವಾತಂತ್ರ್ಯ ಈಗ ಏನಾಗುತ್ತಿದೆ. ನಮ್ಮ ಸಮಾನತೆ, ಸೌಹಾರ್ದತೆಯ ಆಶಯಗಳು ಪ್ರಭುತ್ವದ ನೇತೃತ್ವದಲ್ಲಿಯೇ ನಾಶವಾಗುವಂತಹ ಸಂದರ್ಭದಲ್ಲಿ ನಾವಿದ್ದೇವೆ. ಈ ಬಗ್ಗೆ ಪ್ರತಿ ಹಳ್ಳಿಗಳಲ್ಲಿ ಅರಿವನ್ನು ಮೂಡಿಸುವ ಕೆಲಸವಾಗಬೇಕಿದೆ ಎಂದರು. ಈ ವೇಳೆ ಲೇಖಕಿಂiiರಾದ ತಾರಿಣಿ ಶುಭದಾಯಿನಿ, ಕಸಾಪ ಅಧ್ಯಕ್ಷ ಮನು ಬಳಿಗಾರ್ ಮತ್ತಿತರರು ಉಪಸ್ಥಿತರಿದ್ದರು.

emedialine

Recent Posts

ಮಹಿಳಾ ಸಹಭಾಗಿತ್ವ ಇಲ್ಲದೆ ದೇಶದ ಅಭಿವೃದ್ಧಿ ಅಸಾಧ್ಯ: ಮಾತೋಶ್ರೀ ಡಾ. ಅವ್ವಾಜಿ

ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…

1 min ago

ತೊಗರಿ ಬೆಳೆ‌ ಹಾನಿ ಪ್ರದೇಶ ವೀಕ್ಷಿಸಿದ ಶಾಸಕ ಅಲ್ಲಮಪ್ರಭು ಪಾಟೀಲ

ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…

10 hours ago

ಕಷ್ಟಗಳಿಗೆ ಕುಗ್ಗದೇ ಸವಾಲಾಗಿ ಸ್ವಿಕರಿಸಿ

ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…

10 hours ago

ಕಲಬುರಗಿ: ಹಾಸ್ಯ ಕಲಾವಿದ ರೇವಣಸಿದ್ಧ ಸ್ವಾಮಿ ದಂಪತಿಗೆ ಗೆಳೆಯರ ಬಳಗದಿಂದ ಸತ್ಕರಿಸಲಾಯಿತು.

ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…

10 hours ago

ಸಾವಿರ ಸೀರೆ ವಿತರಿಸಿ ಸಚಿವ ಪ್ರಿಯಾಂಕ್ ಜನ್ಮದಿನ ಆಚರಣೆ

  ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…

1 day ago

ಮೂರೂ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು: ಕಾರ್ಯಕರ್ತರಿಂದ ವಿಜಯೋತ್ಸವ

ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…

1 day ago