ಕಲಬುರಗಿ: ನಗರದಲ್ಲಿ ಜರುಗಿದ ೮೫ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಜಿಲ್ಲೆ ಸೇರಿದಂತೆ ರಾಜ್ಯದ ಅನೇಕ ಕನ್ನಡ ಮನಸುಗಳ ಸಹಕಾರ ದೊರೆತಿದೆ. ಇದರ ಯಶಸ್ಸು ನಮ್ಮಿಬ್ಬರಿಗೆ ಮಾತ್ರ ಸಲ್ಲದೆ, ಶ್ರಮಿಸಿದ ಎಲ್ಲರಿಗೂ ಸಲ್ಲುತ್ತದೆಯೆಂದು ಜಿಲ್ಲಾಧಿಕಾರಿ ಬಿ.ಶರತ ಹಾಗೂ ಕಸಾಪ ಜಿಲ್ಲಾಧ್ಯಕ್ಷ ವೀರಭದ್ರ ಸಿಂಪಿ ಹೇಳಿದರು.
ಅವರು ನಗರದ ಜಿಲ್ಲಾಧಿಕಾರಿಗಳ ನಿವಾಸದಲ್ಲಿ ಇಲ್ಲಿನ ’ಬಸವೇಶ್ವರ ಸಮಾಜ ಸೇವಾ ಬಳಗ’ ಮತ್ತು ’ಕೆಎಚ್‌ಬಿ ಗ್ರೀನ್ ಪಾರ್ಕ್ ಗೆಳೆಯರ ಬಳಗ’ದ ವತಿಯಿಂದ ಸಾಹಿತ್ಯ ಸಮ್ಮೇಳನದ ಯಶಸ್ವಿಗೆ ಸಾಕಷ್ಟು ಶ್ರಮ ವಹಿಸಿ ಯಶಸ್ವಿಗೊಳಿಸಿದ್ದರ ಪ್ರಯುಕ್ತ ತಮ್ಮಿಬ್ಬರಿಗೂ ಹಮ್ಮಿಕೊಳ್ಳಲಾದ ಸತ್ಕಾರ ಗೌರವವನ್ನು ಸ್ವೀಕರಿಸಿ ಮಾತನಾಡುತ್ತಿದ್ದರು.
ಬಳಗದ ಸಂಸ್ಥಾಪಕ ಅಧ್ಯಕ್ಷ, ಲೇಖಕ ಪ್ರೊ.ಎಚ್.ಬಿ.ಪಾಟೀಲ ಮಾತನಾಡಿ, ಇಲ್ಲಿಯವರೆಗೂ ಜರುಗಿರುವ ಎಲ್ಲಾ ಸಮ್ಮೇಳನನಗಳ ದಾಖಲೆಯನ್ನು ಮೀರಿ ಯಶಸ್ವಿಗೊಂಡಿದೆ. ಮೂರು ದಿವಸಗಳಲ್ಲಿ ಸುಮಾರು ೭ ಲಕ್ಷ ಕನ್ನಡಾಭಿಮಾನಿಗಳು, ೨೨೦೦೦ ಅಧಿಕ ಪ್ರತಿನಿಧಿಗಳು ಭಾಗವಹಿಸಿದ್ದು, ಆರು ಕಿ.ಮೀ.ವರೆಗೆ ಸರ್ವಾಧ್ಯಕ್ಷರ ಭವ್ಯ ಮೆರವಣಿಗೆ ಜರುಗಿದ್ದು ಮೂರು ಹೊಸ ದಾಖಲೆಗಳಾಗಿವೆ. ಪ್ರಥಮ ಗ್ರಂಥ ನೀಡಿದ ಮತ್ತು ಕನ್ನಡ ಸಾಹಿತ್ಯದ ಹೃದಯ ವಚನ ಸಾಹಿತ್ಯವನ್ನು ನೀಡಿದ ನಮ್ಮ ಭಾಗದತ್ತ ಇಡಿ ರಾಜ್ಯದ ಜನತೆ ತಿರುಗಿ ನೋಡುವಂತಾಗಿದೆಯೆಂದರು.
ಕೆಎಚ್‌ಬಿ ಗೆಳೆಯರ ಬಳಗದ ಅಧ್ಯಕ್ಷ ಸಂಗಮೇಶ ಸರಡಗಿ ಮಾತನಾಡಿ, ಸಮ್ಮೇಳನದ ವಿವಿಧ ಕಾರ್ಯಕ್ರಮಗಳು, ಗೋಷ್ಠಿ, ಊಟದ ವ್ಯವಸ್ಥೆ, ಸಾರಿಗೆ ವ್ಯವಸ್ಥೆ ಸೇರಿದಂತೆ ಎಲ್ಲವೂ ಅಚ್ಚುಕಟ್ಟಾಗಿ ನೆರವೇರಿತು. ಕನ್ನಡದ ಕಂಪು ನಾಡಿನೆಲ್ಲೆಡೆ ಪಸರಿಸಿದೆ. ಈ ಸಮ್ಮೇಳನದ ಯಶಸ್ವಿಗೆ ಜಿಲ್ಲಾಧಿಕಾರಿ, ಕಸಾಪ ಅಧ್ಯಕ್ಷರ ನೇತೃತ್ವದಲ್ಲಿ ಕಾರ್ಯನಿರ್ವಹಿಸಲಾಗಿದೆಯೆಂದು ನುಡಿದರು.
ಕಾರ್ಯಕ್ರಮದಲ್ಲಿ ಪ್ರಮುಖರಾದ ನರಸಪ್ಪ ಬಿರಾದಾರ ದೇಗಾಂವ, ವೀರೇಶ ಬೋಳಶೆಟ್ಟಿ ನರೋಣಾ, ಬಸವರಾಜ ಎಸ್.ಪುರಾಣೆ, ಮಹಾಂತೇಶ ಬಿರಾದಾರ, ಬಸವರಾಜ ಹೆಳವರ್, ರವೀಂದ್ರ ಗುತ್ತೇದಾದ, ಮಲ್ಲಿನಾಥ ಮುನ್ನಳ್ಳಿ, ಅಮರ ಬಂಗರಗಿ, ಅನಿಲಕುಮಾರ ಜೀವಣಗಿ, ಬಸವರಾಜ ಜೋಗೂರ, ಶರಣಬಸಪ್ಪ ನರೋಣಿ, ಶಂಬಣ್ಣ ಹೂಗಾರ, ವೀರಸಂಗಪ್ಪ ಸುಲೇಗಾಂವ, ಮಹೇಂದ್ರ ವಗ್ಗೆ, ಮಲ್ಲಿಕಾರ್ಜುನ ಹಾರಕೂಡೆ, ಆನಂದ, ಸಿ.ಬಿ.ಪಾಟೀಲ ಸೇರಿದಂತೆ ಅನೇಕರು ಭಾಗವಹಿಸಿದ್ದರು.
ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…