ಆಳಂದ: ಬಸವಾದಿ ಶರಣರು ಕಟ್ಟಿದ ಲಿಂಗಾಯತ ಧರ್ಮ ಮಾನ್ಯತೆ ಹೋರಾಟ ಯಾವ ಕಾಲಕ್ಕೂ ನಿಲ್ಲದು. ಇದು ನಿಂತರವಾಗಿ ಮುನ್ನೆಡೆದು ಮುಂದೊಂದು ದಿನ ಯಶಸ್ವಿ ಕಾಣಲಿದೆ ಎಂದು ಬಾಲ್ಕಿ ಸಂಸ್ಥಾನ ಹಿರೇಮಠದ ಶ್ರೀ ಬಸವಲಿಂಗ ಪಟ್ಟದೇವರು ಇಂದಿಲ್ಲಿ ಭವಿಷ್ಯ ನುಡಿದರು.
ಪಟ್ಟಣದ ಶರಣ ಏಕಾಂತರಾಮಯ್ಯನ ಮಂದಿರದಲ್ಲಿ ಭಾನುವಾರ ಜಾಗತಿಕ ಲಿಂಗಾಯತ ಮಹಾಸಭಾ ತಾಲೂಕು ಘಟಕದ ಉದ್ಘಾಟನೆ ಹಾಗೂ ಬಸವಾದಿ ಶರಣರ ವೈಚಾರಿಕ ಚಿಂತನ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದರು.
ಲಿಂಗಾಯತ ಧಾರ್ಮಿಕ ಮಾನ್ಯತೆ ಕೇಂದ್ರಕ್ಕೆ ಒತ್ತಾಯ
ಹೆಚ್ಚಿನ ಸಂಖ್ಯೆಯಲ್ಲಿ ಮಹಾಸಭೆ ಸದಸ್ಯತ್ವ ಹೊಂದಿ, ಹೋರಾಟಕ್ಕೆ ಎಲ್ಲ ಒಳಪಂಗಡಗಳು ಒಂದಾಗಿ ಹೋರಾಡಲು ಫಣ ಲಿಂಗಾಯತ ಧರ್ಮ ಸಂವಿಧಾನಿಕ ಮಾನ್ಯತೆ ಹೋರಾಟ ಗಟ್ಟಿಗೊಳ್ಳಲು ಎಲ್ಲರು ಪಕ್ಷ ಭೇದ ಮರೆತು ತನು, ಮನ, ಧನಗಳಿಂದ ಸಹಕರಿಸುವ ಮೂಲಕ ಶೋಷಿತ ಲಿಂಗಾಯತ ಧರ್ಮಕ್ಕೆ ನ್ಯಾಯ ಒದಗಿಸಲು ಜನ ಜಾಗೃತಿ ಮತ್ತು ಹೋರಾಟ ನಿಂತರತೆಗೆ ಶ್ರಮಿಸಲು ಒಗ್ಗಟ್ಟಿನ ಮಂತ್ರ ಪಠಣ.
ಲಿಂಗಾಯತರು ಯಾರೆಂಬುದು ಅರಿವಿಲ್ಲದ ಹೊತ್ತಿನಲ್ಲಿ ಫ.ಗು. ಹಳಕಟ್ಟಿ ಅವರು ವಚನಗಳ ಹೊರ ತಂದು ಬಸವಣ್ಣನವರು ಧರ್ಮ ಗುರು ಲಿಂಗಾಯತ ಶರಣರ ಪರಿಚಯ ಮಾಡಿದ ಹಿನ್ನೆಲೆಯಲ್ಲಿ ನಮ್ಮ ಅಸ್ತಿತ್ವದ ಅರಿವಾಗಿದೆ. ಇನ್ನಾದರು ಲಿಂಗಾಯತ ಧರ್ಮದ ತತ್ವಗಳನ್ನು ಬೆಳೆಸಲು ಗಟ್ಟಿಯಾಗಿ ನಿಲ್ಲಬೇಕು ಎಂದರು. ಲಿಂಗಾಯತ ಮೋರ್ಚಾ ರಾಷ್ಟ್ರೀಯ ಅಧ್ಯಕ್ಷ ಉಸ್ತುರಿ, ಧುತ್ತರಗಾಂವ ಮಠದ ಜಗದ್ಗುರು ತೋಂಟದಾರ್ಯ ಅನುಭವ ಮಂಟಪದ ಶ್ರೀ ವಿಶ್ವನಾಥ ಕೋರಣೇಶ್ವರ ಮಹಾಸ್ವಾಮಿಗಳು ಮಾತನಾಡಿ, ಲಿಂಗಾಯತ ಧರ್ಮ ಮಾನ್ಯತೆ ಹೋರಾಟ ಯಾರ ವಿರುದ್ಧ ಅಥವಾ ಪರವಾಗಿಲ್ಲ. ಈಗಾಗಲೇ ಒಡೆದು ಹೋದ ಧರ್ಮವನ್ನ ಒಂದುಗೂಡಿಸುವ ಕಾರ್ಯವನ್ನು ಮಾಡಲಾಗುತ್ತಿದೆ. ಇದು ನಮ್ಮ ಧರ್ಮಿಯರು ಒಳ ಪಂಗಡದ ಶೋಷಿತ ಜನರಿಗೆ ನ್ಯಾಯ ದೊರಕಿಸುವ ನಿಟ್ಟಿನಲ್ಲಿ ಧರ್ಮದ ಸಂವಿಧಾನಿಕ ಮಾನ್ಯತೆಯ ಹೋರಾಟವಾಗಿದೆ. ಹೆಚ್ಚಿನ ಸಂಖ್ಯೆಯಲ್ಲಿ ಲಿಂಗಾಯತ ಮಹಾಸಭೆಯ ಸದಸ್ಯತ್ವನ್ನು ಪಡೆದು ಬಲ ತಂದುಕೊಳ್ಳಬೇಕು. ಕೇಂದ್ರ ಸರ್ಕಾರ ಧಾರ್ಮಿಕ ಮಾನ್ಯತೆ ಕೂಗಿಗೆ ಸ್ಪಂದಿಸಬೇಕು ಎಂದು ಒತ್ತಾಯಿಸಿದರು.
ಕಾರ್ಯಕ್ರಮ ಉದ್ಘಾಟಿಸಿದ ಕಲಬುರಗಿಯ ಬಸವ ಸಮಿತಿಯ ಅಧ್ಯಕ್ಷೆ ವಿಲಾಸವತಿ ಖೂಬಾ ಅವರು ಮಾತನಾಡಿ, ಶರಣರು ನೀಡಿದ ಮಾನವೀತೆ ಧರ್ಮವನ್ನು ಪಾಲಿಸಿ ದಿನಕ್ಕೊಂದು ವಚನ ಪಠಿಸಿ ನುಡಿದಂತೆ ನಡೆದು ಇಷ್ಟಲಿಂಗ, ವಿಭೂತಿ ಧರಿಸಿಕೊಳ್ಳಬೇಕು. ಉಪರಾಷ್ಟ್ರಪತಿ ಪಿ.ಡಿ.ಜತ್ತಿ ಅವರು ಒಳಗೊಂಡು ಅನೇಕ ಮಹನೀಯೆರು ಈ ಧರ್ಮಕ್ಕಾಗಿ ದುಡಿದು ಮಡಿದಿದ್ದಾರೆ. ಅವರ ಕಂಡ ಕನಸು ನನಸಾಗಿಸಲು ಅನ್ಯ ಧರ್ಮೀಯರು ಬಹುಬೇಗ ಒಗ್ಗಟ್ಟಾದಂತೆ ಲಿಂಗಾಯತ ಚಳವಳಿ ಕೂಡ ಮುನ್ನೆಡೆಸಲು ಸಂಘಟಿತರಾಬೇಕು ಎಂದರು.
ಅಧ್ಯಕ್ಷತೆ ವಹಿಸಿದ್ದ ಮಹಾಸಭೆಯ ಜಿಲ್ಲಾ ಅಧ್ಯಕ್ಷ ಪ್ರಭುಲಿಂಗ ಎಸ್. ಮಹಾಗಾಂವಕರ, ಶಹಾಪೂರದ ವಿಶ್ವರಾಧ್ಯ ಸತ್ಯೆಂಪೇಟ್, ಕುಪೇಂದ್ರ ಪಾಟೀಲ, ವೀರಶೈವ ಲಿಂಗಾಯತ ಮಹಾಸಭೆಯ ತಾಲೂಕು ಅಧ್ಯಕ್ಷ ಡಾ| ಎಸ್. ಆರ್. ಬೇಡಗೆ ಅವರು ಮಾತನಾಡಿದರು.
ಆರ್.ಜಿ. ಶಟಗಾರ, ಶ್ರೀಮಂತರಾವ್ ಪಾಟೀಲ, ಬಾಬುರಾವ್ ಅರುಣೋದಯ, ನ್ಯಾಯವಾದಿ ಬಾಬಾಸಾಹೇಬ ಪಾಟೀಲ ಮತ್ತಿತರರು ಉಪಸ್ಥಿತರಿದ್ದರು. ಜಾಗತಿಕ ಲಿಂಗಾಯತ ಮಹಾಸಭಾ ತಾಲೂಕು ಅಧ್ಯಕ್ಷ ರಮೇಶ ಲೋಹಾರ ಸ್ವಾಗತಿಸಿದರು. ಶರಣ ರಾಜೇಂದ್ರ ಗುಂಡೆ ನಿರೂಪಿಸಿದರು. ಸಂಜಯ ಪಾಟೀಲ ವಂದಿಸಿದರು.
ಕಲಾವಿದ ಶಿವಶರಣಪ್ಪ ಪೂಜಾರಿ, ತಬಲಾ ಸುರೇಶ ಆಳಂದ ವಚನ ಗಾಯನ ನಡೆಸಿಕೊಟ್ಟರು.
ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…