ಬಿಸಿ ಬಿಸಿ ಸುದ್ದಿ

ಬೋನಾಳ: ಸ್ಥಗಿತಗೊಂಡಿರುವ ಅಭಿವೃದ್ಧಿ ಕಾರ್ಯಗಳನ್ನು ಪ್ರಾರಂಭಿಸಲು ಒತ್ತಾಯ

ಸುರಪುರ: ಗ್ರಾಮ ಪಂಚಾಯತಿಗಳಿರುವುದೆ ಗ್ರಾಮಗಳ ಅಭಿವೃದ್ಧಿ ಪಡಿಸುವುದಕ್ಕೆ ಹೀಗಿರುವಾಗ ಇಲ್ಲಿನ ಅಧಿಕಾರಿಗಳು ಬರಿ ಗ್ರಾಮದ ಅಭಿವೃದ್ಧಿಗೊಳಿಸುವಲ್ಲಿ ಚಿತ್ತ ಹರಿಸದೆ ವೈಯಕ್ತಿ ಅಭಿವೃದ್ಧಿಕಡೆ ಗಮನ ಹರಿಸುತ್ತಿರುವುದು ಯಾವ ನ್ಯಾಯ ಬೋನಾಳ ಗ್ರಾಮಕ್ಕೆ ಮೂಲಭೂತ ಸೌಕರ್ಯ ವದಗಿಸಲು ಆಗದ ಅಧಿಕಾರಿಗಳ ನಿರ್ಲಕ್ಷತನ ಸಲ್ಲದು ಎಂದು ಮೂಲನಿವಾಸಿ ಅಂಬೇಡ್ಕರ್ ಸೇನೆ ರಾಜ್ಯ ಕಾರ್ಯಾದರ್ಶಿಯಾದ ರಾಹುಲ್ ಹುಲಿಮನಿ ಹೇಳಿದರು.

ತಲೂಕಿನ ಆಲ್ದಾಳ ಗ್ರಾಮ ಪಂಚಾಯತಿಯ ಆವರಣದಲ್ಲಿ ಮೂಲನಿವಾಸಿ ಅಂಬೇಡ್ಕರ್ ಸೇನೆ ವತಿಯಿಂದ ಹಮ್ಮಿಕೊಂಡಿದ್ದ ಪ್ರತಿಭಟನೆಯ ನೇತೃತ್ವ ವಹಿಸಿ ಮಾತನಾಡಿದ ಅವರು. ಇಂದು ಆಲ್ದಾಳ ಪಂಚಾಯ್ತ ವ್ಯಾಪ್ತಿಯಲ್ಲಿ ಬರುವ ಬೋನ್ಹಾಳ ಗ್ರಾಮದಲ್ಲಿ ಕುಂಟಿತವಾಗಿರುವ ಅಭಿವೃದ್ಧಿ ಕೆಲಸಗಳು ಮತ್ತು ಸಾರ್ವ ಜನಿಕರಿಗೆ ಶುದ್ಧವಾದ ಕುಡಿಯುವ ನೀರು ರಸ್ತೆ ,ಚರಂಡಿಗಳಂತ ಮೂಲ ಸೌಕರ್ಯ ಇಲ್ಲದಂತಾಗಿದೆ. ಮುಖ್ಯವಾಗಿ ೨೦೧೭-೧೮ ನೇ ಸಾಲಿನ ಮುಖ್ಯ ಮಂತ್ರಿ ಗ್ರಾಮ ವಿಕಾಸ ಯೋಜನೆಯಡಿಯಲ್ಲಿ ಎಸ್,ಸಿ ವಾರ್ಡ ಹಾಗು ಗ್ರಾಮದ ಇತರೆ ವಾರ್ಡಗಳಲ್ಲಿ ಸಿಸಿ ರಸ್ತೆ ಚರಂಡಿಗಳ ನಿರ್ಮಾಣ ಮಾಡುವ ಕಾರ್ಯಾ ಸ್ಥಗಿತವಾಗಿ ಸಾರ್ವಜನಿಕರಿಗೆ ತುಂಬಾ ತೋಂದರೆಯಾಗುತ್ತಿದೆ. ಕೂಡಲೇ ಸ್ಥಗಿತವಾಗಿರುವ ಕಾಮಾಗಾರಿಗಳನ್ನು ಪುನಃ ಪ್ರಾರಂಬಿಸಬೇಕು ಮತ್ತು ಚಿಕ್ಕನಹಳ್ಳಿ ರೋಡ ಸಿದ್ದಾರ್ಥ ನಗರ ಎಸ್,ಸಿ ವಾರ್ಡನಲ್ಲಿ ನಿರ್ಮಿಸಿರುವ ಬಾಬಾಸಾಹೇಬ ಡಾ.ಬಿ,ಆರ್, ಅಂಬೇಡ್ಕರ್‌ರವರ ನಾಮ ಫಲಕ ಸುತ್ತ ಮುತ್ತಲಿನ ತಿಪ್ಪೆ ಗುಂಡಿಗಳು ಹಾಗೂ ಅನಧಿಕೃತ ಗುಡಿಸಲುಗಳನ್ನು ಕಿತ್ತಿ ಸ್ವಚ್ಛಗೋಳಿಸಿ ಅಂಬೇಡ್ಕರ್ ಪುತ್ತಳಿ ಪ್ರತಿಷ್ಟಾಪನೆಗೆ ೩೦*೪೦ ಖಾಲಿ ಜಾಗವನ್ನು ಕೂಡಲೆ ಮಂಜೂರು ಮಾಡಬೆಕು ಎಂದು ಒತ್ತಾಯಿಸಿದರು.

ಸ.ಹಿ.ಪ್ರಾ.ಶಾಲೆಯ ಮಕ್ಕಳ ಬಳಕೆಗೆ ಬರುವಂತೆ ಶೌಚಲಾಯ, ಕಂಪೌಂಡ ಶಿಘ್ರ ಪುನನಿರ್ಮಾಣ ಹಾಗೂ ಶಾಲಾ ಸುತ್ತ ಮುತ್ತಲೂನಿಂದ ಬಸ್ ನಿಲ್ದಾಣವರೆಗೆ ಕೂಡಲೇ ಸ್ವಚತೆಯ ಕಾರ್ಯಾವನ್ನು ಕೈಗೆತ್ತಿಕೊಳ್ಳಬೇಕು. ಈ ಎಲ್ಲಾ ಸಮಸ್ಯೆಗಳನ್ನು ಬರುವ ಫೆ.೨೯ರ ರೋಳಗಾಗಿ ಪರಿಹಾರ ಮಾಡಲೇಬೇಕು ಒಂದು ವೇಳೆ ನಿರ್ಲಕ್ಷವಹಿಸಿದರೆ ಮಾ.೦೨ ರಂದು ಗ್ರಾಂ ಪಂ ಅಭಿವೃದ್ದಿ ಅಧಿಕಾರಿಗಳ ಅಮಾನತಿಗಾಗಿ ಒತ್ತಾಯಿಸಿ ನಮ್ಮ ಸಂಘಟನೇಯ ನೇತೃತ್ವದಲ್ಲಿ ಹಾಗೂ ಗ್ರಾಮದ ಜನರೊಂದಿಗೆ ಸುರಪೂರ ತಾಲೂಕ ಪಂಚಾಯ್ತಿ ಮುಂದೆ ಅನಿರ್ಧಿಷ್ಟ ಧರಣಿ ಸತ್ಯಾಗ್ರಹವನ್ನು ಹಮ್ಮಿಕೊಳ್ಳುವದು ನಮಗೆ ಅನಿವಾರ್ಯ ಎಂದು ಎಚ್ಚರಿಸಿದರು.

ರಾಜು ಬಡಿಗೇರ್, ಶಿವಣ್ಣ ಸಾಸಗೇರ್, ನಭಿಸಾಬ್ ಗೋಡೆಕಾರ್, ವೆಂಕಟೇಶ ಬಡಿಗೇರ್ ಶೇಖ್ ಅಲಿ, ಚಂದಪ್ಪ ಪಂಚಮ್ ಮುತ್ತು ಅಮ್ಮಾಪೂರ ಉಮೇಶ ಹುಲಿಮನಿ, ಪರುಶು ನಾಟೀಕಾರ್, ಹಣಮಂತ ರತ್ತಾಳ, ಮಾನಪ್ಪ ರತ್ತಾಳ, ಶರಣು ಹುಲಿಮನಿ, ಮರೆಪ್ಪ ನಾಟಿಕಾರ್, ಬಡೆಸಾಬ್ ಬೋನ್ಹಾಳ, ಅಸ್ಲಾಮ್ ಇತರರಿದ್ದರು.

emedialine

Recent Posts

ಜಪಾನ್ ವಿ. ವಿಯಲ್ಲಿ ಪ್ರಬಂಧ ಮಂಡನೆ ಮಾಡಿದ ಡಾ. ಪಾಸೋಡಿ

ಕಲಬುರಗಿ : ಗುಲ್ಬರ್ಗ ವಿಶ್ವವಿದ್ಯಾಲಯದ ದೈಹಿಕ ಶಿಕ್ಷಣ ವಿಭಾಗದ ನಿವೃತ್ತ ನಿರ್ದೇಶಕ ಡಾ. ಎಂ ಎಸ್ ಪಾಸೋಡಿ ಅವರು ಜಪಾನ್…

10 mins ago

ಕಲಬುರಗಿ: ಡೆಂಗ್ಯೂ, ಮಲೇರಿಯಾ ರೋಗಗಳನ್ನು ನಿಯಂತ್ರಿಸಲು ಬಾಲರಾಜ್ ಗುತ್ತೇದಾರ ಆಗ್ರಹ

ಕಲಬುರಗಿ: ಜಿಲ್ಲೆಯಲ್ಲಿ ಡೆಂಗ್ಯೂ, ಮಲೇರಿಯಾ ರೋಗಗಳು ಹರಡದಂತೆ ಮುಂಜಾಗ್ರತಾ ಕ್ರಮವಹಿಸಿ ಚರಂಡಿ ನೀರನ್ನು ಸ್ವಚ್ಛಗೊಳಿಸಿ, ಸೊಳ್ಳೆಗಳು ಬಾರದಂತೆ ಫಾಗಿಂಗ್ ಮಾಡಿಸಬೇಕು…

18 mins ago

ಕಲಬುರಗಿ ಕೆಬಿಎನ್ ಆಸ್ಪತ್ರೆಯಲ್ಲಿ ವಿಶೇಷ ಉಪನ್ಯಾಸ

ಕಲಬುರಗಿ : ಸ್ಥಳೀಯ ಕೆಬಿಎನ್ ಆಸ್ಪತ್ರೆಯಲ್ಲಿ ಸ್ತ್ರೀ ರೋಗ ವಿಭಾಗದಿಂದ 'ಸ್ತ್ರೀರೋಗ ಶಾಸ್ತ್ರದ ಆಂಕೊಲಾಜಿಯಲ್ಲಿ ರೋಬೋಟಿಕ್ ಶಸ್ತ್ರಚಿಕಿತ್ಸೆಯ' ಪಾತ್ರ ಎಂಬ…

2 hours ago

ಆರೋಗ್ಯವಂತ ಸಮಾಜ ನಿರ್ಮಾಣಕ್ಕೆ ವೈದ್ಯರ ಸಲಹೆ ಅವಶ್ಯಕ: ಡಾ.ಪಿ.ಎಸ್.ಶಂಕರ್

ಕಲಬುರಗಿ:  ಸಮಾಜದಲ್ಲಿ ಪ್ರತಿಯೊಬ್ಬರೂ ಆರೋಗ್ಯವಂತರಾಗಿ ಜೀವನ ಸಾಗಿಸಲು ವೈದ್ಯರ ಸಲಹೆ ಮತ್ತು ಉಪಚಾರ ಪಡೆದುಕೊಳ್ಳುವುದು ಅವಶ್ಯಕವಾಗಿದೆ ಎಂದು ಖ್ಯಾತ ವೈದ್ಯಸಂಶೋಧಕ…

2 hours ago

ವಿಕಲಚೇತನರು, ಹಿರಿಯ ನಾಗರಿಕರ ಹೆಸರಲ್ಲಿ ಅಕ್ರಮ: ಕ್ರಮಕ್ಕೆ ಆಗ್ರಹ

ಕಲಬುರಗಿ: ಜಿಲ್ಲೆಯ ವಿಕಲಚೇತನರು ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯಲ್ಲಿ ವ್ಯಾಪಕ ಅಕ್ರಮಗಳು ನಡೆದಿದ್ದು ಈ ಕುರಿತು ಕೂಡಲೇ ತನಿಖೆ…

2 hours ago

ಕಾಳಗಿ; ರಟಕಲ್ ಗ್ರಾಮದಲ್ಲಿ ಬಸವಾದಿ ಶರಣರ ವಚನ ಸಂಗಮಕ್ಕೆ ಅದ್ಧೂರಿ ಚಾಲನೆ

ಕಾಳಗಿ: ಬದುಕು ಹೇಗೆ ನಡೆಸಬೇಕೆಂದು ಹೇಳಿಕೊಟ್ಟ ಬಸವಾದಿ ಶರಣರ ವಚನದಲ್ಲಿ ಅಪಾರ ಶಕ್ತಿ ಇದೆ. 12 ನೇ ಶತಮಾನದಲ್ಲಿ ಮೊದಲ…

3 hours ago