ಬಿಸಿ ಬಿಸಿ ಸುದ್ದಿ

ಸಮಾಜ ಜಾಗೃತಗೊಳಿಸುವ ಸಿನೆಮಾ-ಸಾಹಿತ್ಯ ಬೇಕು: ಕೆ.ಬಸವರಾಜ

ವಾಡಿ: ದೇಶದ ಪ್ರಸಕ್ತ ಸಾಮಾಜಿಕ ವ್ಯವಸ್ಥೆ ಕೋಮು ಸಂಘರ್ಷದಿಂದ ಹೊತ್ತಿ ಉರಿಯುತ್ತಿದೆ. ಜನಸಾಮಾನ್ಯರಲ್ಲಿ ಉಂಟಾಗುತ್ತಿರುವ ಪರಸ್ಪರ ಅಪನಂಬಿಕೆಗಳ ಭಾವ ಮಾನವೀಯ ಮೌಲ್ಯಗಳನ್ನು ನಾಶಪಡಿಸುತ್ತಿದೆ. ಸಮಾಜವನ್ನು ವೈಚಾರಿಕವಾಗಿ ಜಾಗೃತಗೊಳಿಸಬಲ್ಲ ಪ್ರಗತಿಪರ ಸಾಹಿತ್ಯ ಮತ್ತು ಸಿನೆಮಾಗಳ ಪ್ರಸಾರ ಅಗತ್ಯವಿದೆ ಎಂದು ಚಿತ್ರಕಲಾವಿದ, ಆವಿಷ್ಕಾರ ಪ್ರಗತಿಪರ ಸಾಂಸ್ಕೃತಿಕ ವೇದಿಕೆಯ ಜಿಲ್ಲಾ ಸಮಿತಿ ಸದಸ್ಯ ಕೆ.ಬಸವರಾಜ ಅಭಿಪ್ರಾಯಪಟ್ಟರು.

ನೇತಾಜಿ ಸುಭಾಷಚಂದ್ರ ಬೋಸ್ ಅವರ ಜಯಂತಿ ನಿಮಿತ್ತ ಪಟ್ಟಣದ ಅಂಬೇಡ್ಕರ್ ಸ್ಮಾರಕ ಭವನದಲ್ಲಿ ಆವಿಷ್ಕಾರ, ಎಐಡಿಎಸ್‌ಒ ಹಾಗೂ ಎಐಡಿವೈಒ ಸಂಘಟನೆಗಳ ವತಿಯಿಂದ ಇತ್ತೀಚೆಗೆ ಏರ್ಪಡಿಸಲಾಗಿದ್ದ ಕ್ಯಾ ದಿಲ್ಲಿ ಕ್ಯಾ ಲಾಹೋರ್ ಎಂಬ ಪ್ರಗತಿಪರ ಹಿಂದಿ ಚಲನಚಿತ್ರ ಪ್ರದರ್ಶನ ಹಾಗೂ ಸಂವಾದ ಕಾರ್ಯಕ್ರಮ ಉದ್ದೇಶಿಸಿ ಅವರು ಮಾತನಾಡಿದರು. ಬರಹಗಾರರ ಸಾಹಿತ್ಯ ಪ್ರಕಟಿತ ಪುಸ್ತಕಗಳ ಸಂಖ್ಯೆ ಹೆಚ್ಚಿಸಿ ದಾಖಲೆ ಮಾಡುವ ಉದ್ದೇಶ ಹೊಂದದೆ, ಜನರು ಅನುಭವಿಸುತ್ತಿರುವ ಹಸಿವು, ಬಡತನ, ನಿರುದ್ಯೋಗ, ಶೋಷಣೆ, ಅಸಮಾನತೆ ವಿರುದ್ಧ ಜನರ ದನಿಯಾಗಿ ನಿಲ್ಲುವಂತಿರಬೇಕು. ನೂರಾರು ಕೋಟಿ ರೂಪಾಯಿ ಖರ್ಚು ಮಾಡಿ ಚಿತ್ರೀಕರಣಗೊಳ್ಳುವ ಸಿನೆಮಾಗಳು ಕೇವಲ ಮನರಂಜನೆ ಸೀಮಿತವಾಗುತ್ತಿದ್ದು, ಲಾಭದ ದೃಷ್ಠಿಕೋನ ಹೊಂದುತ್ತಿವೆ ಎಂದು ವಿಷಾಧಿಸಿದ ಬಸವರಾಜ, ಸಾಮಾಜಿಕ ತಲ್ಲಣಗಳಿಗೆ ಸ್ಪಂದಿಸಿ ಹೋರಾಟದ ಕೆಚ್ಚು ಮೂಡಿಸುವ ಮತ್ತು ಕೋಮು ಸೌಹಾರ್ದತೆ ಎತ್ತಿ ಹಿಡಿಯುವ ಜನಪರ ಸಿನೆಮಾಗಳು ಇಂದು ಹೆಚ್ಚು ಬಿಡುಗಡೆಯಾಗಬೇಕಿದೆ ಎಂದರು.

ಒಳ್ಳೆಯ ಸಿನೆಮಾಗಳು ಚಿತ್ರಮಂದಿರಗಳಲ್ಲಿ ವಾರವೂ ಉಳಿಯುವುದಿಲ್ಲ. ಇನ್ನೂ ಕೆಲವು ರಾಷ್ಟ್ರಮಟ್ಟದ ಪ್ರಶಸ್ತಿ ಪಡೆದುಕೊಂಡು ಜನರ ಮುಂದೆ ಪ್ರದರ್ಶನಗೊಳ್ಳದೆ ಕಣ್ಮರೆಯಾಗುತ್ತವೆ. ಹೀಗೇಕೆ ಎಂದು ಸಭಿಕರೊಬ್ಬರು ಕೇಳಿದ ಪ್ರಶ್ನೆಗೆ ಉತ್ತರಿಸಿ ಮಾತನಾಡಿದ ಆವಿಷ್ಕಾರ ಪ್ರಗತಿಪರ ಸಾಂಸ್ಕೃತಿಕ ವೇದಿಕೆಯ ಜಿಲ್ಲಾ ಕಾರ್ಯದರ್ಶಿ ಮಹೇಶ ಎಸ್.ಜಿ, ಹಣ ಗಳಿಸುವ ಬೃಹತ್ ಉದ್ಯಮವಾಗಿ ಸಿನೆಮಾ ಲೋಕ ಬೆಳೆದು ನಿಂತಿದೆ. ಸಿನೆಮಾಗಳ ಸಂಬಾಷಣೆ ಮತ್ತು ದೃಶ್ಯಗಳು ಅಶ್ಲೀಲತೆಯಿಂದ ವಿಜೃಂಬಿಸುತ್ತಿವೆ. ಇದು ಸಾಮಾಜಿಕ ಮೌಲ್ಯಗಳನ್ನು ಸಾಯಿಸುತ್ತಿದೆ. ಹೀಗಾಗಿ ಒಳ್ಳೆಯ ಸಿನೆಮಾಗಳನ್ನು ಮತ್ತು ಉತ್ತಮ ಸಾಹಿತ್ಯ ಪುಸ್ತಕಗಳಿಗಾಗಿ ನಾವು ಹುಡುಕಾಡಬೇಕಾದ ಪರಸ್ಥಿತಿ ಬಂದಿದೆ. ಕಲೆ ಕಲೆಗಾಗಿ ಅಲ್ಲ ಕಲೆ ಸಮಾಜಕ್ಕಾಗಿ ಎಂಬ ಧೋರಣೆಯನ್ನು ಪ್ರತಿಯೊಬ್ಬ ನಿದೇರ್ಶಕ ಹೊಂದಿದಾಗ ಮಾತ್ರ ಉತ್ತಮ ಕಲೆ ಸಾಹಿತ್ಯ ಸಮಾಜದಲ್ಲಿ ಉಳಿಯಲು ಸಾಧ್ಯ ಎಂದರು.

ಎಐಡಿಎಸ್‌ಒ ಅಧ್ಯಕ್ಷ ಗೌತಮ ಪರತೂರಕರ, ಎಐಡಿವೈಒ ಕಾರ್ಯದರ್ಶಿ ಮಲ್ಲಿನಾಥ ಹುಂಡೇಕಲ್, ಆವಿಷ್ಕಾರ ಸದಸ್ಯ ಶ್ರೀಶರಣ ಹೊಸಮನಿ ವೇದಿಕೆ ಮೇಲಿದ್ದರು. ನೂರಾರು ಜನರು ಸಿನೆಮಾ ವೀಕ್ಷಿಸಿ ಸಂವಾದದಲ್ಲಿ ಪಾಲ್ಗೊಂಡಿದ್ದರು.

emedialine

Recent Posts

ಅನರ್ಹ ಬಿ.ಪಿ.ಎಲ್ ಪಡಿತರ ಚೀಟಿ ಪತ್ತೆ ಹಚ್ಚಿ: ಅಕ್ರಮ‌ ಮದ್ಯ ಮಾರಾಟಕ್ಕೆ ಬ್ರೆಕ್ ಹಾಕಿ| ಡಿ.ಸಿ. ಬಿ.ಫೌಜಿಯಾ ತರನ್ನುಮ್

ಕಲಬುರಗಿ: ಉಳ್ಳವರು ಸಹ ಸರ್ಕಾರಿ ಸೌಲಭ್ಯ ಪಡೆಯಲು ಬಿ‌.ಪಿ‌.ಎಲ್ ಪಡಿತರ ಚೀಟಿ ಪಡೆದಿರುವ ಸಾಧ್ಯತೆ ಇದ್ದು, ಕೂಡಲೆ ಇಂತಹ ಅನರ್ಹ…

4 hours ago

ಕುಂಬಾರ ಅಭಿವೃದ್ಧಿ ನಿಗಮಕ್ಕೆ 100 ಕೋಟಿ ನೀಡಲು ಒತ್ತಾಯ

ಶಹಾಬಾದ: ಆರ್ಥಿಕ, ಸಾಮಾಜಿಕ, ಶೈಕ್ಷಣಿಕವಾಗಿ ಹಿಂದುಳಿದಿರುವ ಕುಂಬಾರ ಸಮಾಜದ ಅಭಿವೃದ್ಧಿ ನಿಗಮಕ್ಕೆ 100 ಕೋಟಿ ಅನುದಾನ ನೀಡುವ ಮೂಲಕ ಕಲಬುರಗಿ…

6 hours ago

ಪರಿಸರಸ್ನೇಹಿ ಪರ್ಯಾಯ ಇಂಧನಗಳ ಬಳಕೆ ಅಗತ್ಯ

ಶಹಬಾದ: ಪರಿಸರ ಮಾಲಿನ್ಯ ಉಂಟು ಮಾಡುವ ಇಂಧನಗಳ ಬಳಕೆಯನ್ನು ಕಡಿಮೆ ಮಾಡಿ ಪರಿಸರ ಸ್ನೇಹಿಯಾಗುವ ಪರ್ಯಾಯ ಇಂಧನಗಳ ಬಳಕೆ ಮಾಡಿದಲ್ಲಿ…

6 hours ago

ಕೊಲುವೆನೆಂಬ ಭಾಷೆ ದೇವನದಾದರೆ ಗೆಲುವೆನೆಂಬ ಭಾಷೆ ಭಕ್ತನದಾಗಬೇಕು

ಬಸವಾದಿ ಶರಣರ ರಚನೆಯ ವಚನ ಎನ್ನುವುದು ಬಹಳ ಮೌಲಿಕವಾದ ನುಡಿ. 'ವ' ಎಂಬ ಸೂತ್ರವನ್ನು ಬಿಡಿಸುವುದಾದರೆ, ವ ಎಂಬ ಮೊದಲ…

6 hours ago

ಮೋಹರಂ ಭಾವೈಕ್ಯತೆಯ ಸಂಕೇತದ ಉತ್ಸವ

ಕಲಬುರಗಿ: ಭಾರತ ಅನೇಕ ಜಾತಿ, ಧರ್ಮಗಳಿಂದ ಕೂಡಿದ್ದ ದೇಶವಾಗಿದ್ದು, ಹಬ್ಬ, ಜಾತ್ರೆ, ಉತ್ಸವಗಳು ಪರಸ್ಪರ ಬೆಸೆಯುತ್ತವೆ. ತ್ಯಾಗ, ಭಾವೈಕ್ಯತೆಯ ಸಂಕೇತವಾಗಿ…

6 hours ago

ತಾಜಸುಲ್ತಾನಪುರ: ಶಾಲಾ ಸಂಸತ್ತು ರಚನೆ

ಕಲಬುರಗಿ: ನಗರ ಹೊರವಲಯದ ತಾಜಸುಲ್ತಾನಪುರ ಗ್ರಾಮದ ಕೆಎಸ್ ಆರ್ ಪಿ ಸರಕಾರ ಪ್ರೌಢ ಶಾಲೆ ಕೆ. ಎಸ್. ಆರ್. ಪಿ…

6 hours ago