ಕಲಬುರಗಿ: ದೇಶವನ್ನು ಧರ್ಮದ ಆಧಾರದ ಮೇಲೆ ಒಡೆಯಲು ಯತ್ನಿಸುತ್ತಿರುವ ಭಾರತೀಯ ಜನತಾ ಪಕ್ಷದ ಮುಖಂಡರಿಗೆ ದೆಹಲಿಯ ತಕ್ಕ ಉತ್ತರ ನೀಡಿದ್ದಾರೆ. ಜನರ ಮಧ್ಯೆ ವಿಷ ಬೀಜಿ ಬಿತ್ತಿತ್ತಿರುವ ಬಿಜೆಪಿಗರಿಗೆ ಅಲ್ಲಿನ ದೆಹಲಿಗರು ಜಬರ್ದಸ್ತ ಕಪಾಳಮೋಕ್ಷ ನೀಡಿದ್ದಾರೆ ಎಂದು ರಾಜಸಭಾ ಸದಸ್ಯೆ ಹಾಗೂ ಸಿಪಿಐ(ಎಂ) ಮುಖಂಡೆ ಬೃಂದಾ ಕಾರಟ್ ಅಭಿಪ್ರಾಯ ಪಟ್ಟರು.
ನಗರದ ಹೀರಾಪುರ ಹತ್ತಿರದ ಅಮರ್ ಫಂಕ್ಷನ್ ಹಾಲ್‌ದಲ್ಲಿ ಸಿಎಎ., ಎನ್‌ಸಿಆರ್.ಗೆ ವಿರೋಧ ವ್ಯಕ್ತಿ ಪಡಿಸಿ ಮಹಿಳಾ ಮಹಾಸಮಾವೇಶದಲ್ಲಿ ಮುಖ್ಯ ಅಥಿತಿಯಾಗಿ ಮಾತನಾಡಿ ದೇಶದ ಜನರಿಗೆ ಉದ್ಯೋಗ ನೀಡದೆ ಜನರನ್ನು ತಪ್ಪು ದಾರಿಗೆ ತಂದು ಧರ್ಮಗಳ ಹೆಸರಲ್ಲಿ ರಾಜಕೀಯ ಮಾಡುವ ನರೇಂದ್ರ ಮೋದಿ, ಹಾಗೂ ಅಮಿತ ಶಹಾರಂತವರಿಗೆ ದೆಹಲಿಯ ಮತದಾರರು ತಕ್ಕ ಉತ್ತರ ನೀಡಿದ್ದಾರೆ.
ದೆಹಲಿ ವಿಧಾನ ಸಭಾ ಚುನಾವಣೆ ಪ್ರಚಾರಕ್ಕಾಗಿ ಬಿಜಿಪಿ ಹಾಗೂ ಆರ್.ಎಸ್.ಎಸ್.ನಎಲ್ಲಾ ದೊಡ್ಡ ದೊಡ್ಡ ನಾಯಕರು ಪ್ರತಿಗಲ್ಲಿಯಲ್ಲಿ ತಿರುಗಾಡಿ ಅವಾಚ್ಯ ಶಬ್ದಗಳನ್ನು ಬಳಸಿದರು. ಅವರ ಬಾಯಿಲ್ಲಿ ಕೇವಲ ಗೋಲಿ ಮತ್ತು ಗಾಲಿ(ಕೇವಲ ಗುಂಡು ಮತ್ತು ಬೈಗುಳ)ಗಳು ಮಾತ್ರ ಅವರಲ್ಲಿ ಇದ್ದವು. ದೆಹಲಿ ಜನರಿಗೆ ಉದ್ಯೋಗ ನೀಡುವ ಭರವಸೆ, ದೆಹಲಿಯ ಜನರಿಗೆ ಮನೆಗಳ ನಿರ್ಮಾಣದ ಭರವಸೆ, ದೆಹಲಿ ಜನರಿಗೆ ಉತ್ತಮ ವ್ಯವಸ್ಥೆಯ ಭರವಸೆ ಯಾವುದೂ ಅವರಲ್ಲಿ ಇರಲಿಲ್ಲ. ಬದಲಿಗೆ ಅಧಿಕಾರಕ್ಕೆ ಬಂದಿರುವ ಪಕ್ಷದವರು ಎಲ್ಲಿಯೂ ಅವಾಚ್ಯ ಶಬ್ದಗಳ ಭಾಷೆ ಬಳಸಲಿಲ್ಲ. ದೆಹಲಿ ಬುದ್ದಿವಂತ ಮತದಾರರು ಬಿಜೆಪಿಗರನ್ನು ಪರಾಭಾವ ಮಾಡಿದ್ದಾರೆ ಎಂದು ಕುಟುಕಿದರು.
ದೇಶದ ಜನರ ಕೈಯಲ್ಲಿ ಉದ್ಯೋಗವಿಲ್ಲ. ನರೇಗಾದಂತ ಯೋಜನೆಗಳಿಗೆ ಹಣದ ಕೊರತೆ ಇದೆ. ದೊಡ್ಡ ದೊಡ್ಡ ಬಂಡವಾಳ ಶಾಹಿಗಳಿಗೆ ಬಿಜೆಪಿಯವರು ಅನುಕೂಲ ಮಾಡಿಕೊಡುತ್ತಿದ್ದಾರೆ. ಸಂವಿಧಾನವನ್ನೆ ಬದಲಾಯಿಸುವ ಹುನ್ನಾರ ಅಂತ್ಯಂತ ವ್ಯವಸ್ಥಿತವಾಗಿ ನಡೆಯುತ್ತಿದೆ. ಅದಕ್ಕಾಗಿ ಪ್ರತಿಯೊಬ್ಬರು ಇಂದು ಸಂವಿಧಾನವನ್ನು ಅರಿಯಬೇಕಾಗಿದೆ. ಬಾಬಾಸಾಹೇಬ ಅಂಬೇಡ್ಕರರು ಸಂವಿಧಾನವನ್ನು ಎಲ್ಲಾ ಜಾತಿ, ಧರ್ಮಗಳು ಒಂದಾಗಿ ಇರವಂತ ಅನೇಕ ಅಂಶಗಳನ್ನು ಅಳವಸಿ ಬರೆದಿದ್ದಾರೆ. ಆದರೆ ಹಿಂದುತ್ವದ ಹೆಸರಲ್ಲಿ ದೇಶವನ್ನು ಒಡೆಯಲು ಯತ್ನಿಸಲಾಗುತ್ತಿದೆ. ಸದಾ ಪಾಕಿಸ್ತಾನದ ಹೆಸರು ಹೇಳುವ ನರೇಂದ್ರ ಮೋದಿ, ಅಮೀತ ಶಹಾ ಅವರು ನಿಜವಾಗಿ ಪಾಕಿಸ್ತಾವನ್ನು ಬಹಳವಾಗಿ ಪ್ರಿತಿಸುತ್ತಾರೆ ಎಂದು ಮಾತಿನಲ್ಲಿ ಚುಚ್ಚಿದ ಅವರು ಅಲ್ಲಿಯ ಹಿಂದು ನಾಗರಿಕರನ್ನು ಹೇಗೆ ಗುರುತಿಸುತ್ತಾರೆ ಎಂದು ಪ್ರಶ್ನಿಸಿದರು.
ರಾಷ್ಟ್ರೀಯ ನಾಗರಿಕ ನೋಂದಣಿ ಅಭಿಯಾನದ ಪೂರ್ವದಲ್ಲಿ ಅಸ್ಸಾಂ ರಾಜ್ಯದಲ್ಲಿ ನಡೆದ ಜನಗಣತಿಯಲ್ಲಿ ಏನಗಿದೆ. ಅಲ್ಲಿನ ೧೯ ಲಕ್ಷ ಜನರು ಇಂದು ನಿರಾಶ್ರಿತರಾಗಿದ್ದಾರೆ. ಅವರಲ್ಲಿ ೧೩ ಲಕ್ಷ ಜನರ ಹಿಂದುಗಳು ಇದ್ದಾರೆ. ಬಾಂಗ್ಲಾದೇಶದಿಂದ ಮದುವೆಯಾಗಿ ಬಂದಂತ ಸಾವಿರಾರು ಹಿಂದು ಮಹಿಳೆಯರು ತಮ್ಮ ದಾಖಲೆಗಳನ್ನು ತೋರಿಸುವದಕ್ಕೆ ಆಗಲಿಲ್ಲ. ಅವರನ್ನು ಈ ದೇಶದ ನಾಗರಿಕರಲ್ಲ ಎಂದು ಹೇಳುತ್ತಾರೆ. ಮದುವೆಯಾಗಿ ಬಂದ ಮೇಲೆ ಅವರು ಎಲ್ಲಿಂದ ದಾಖಲೆ ತರಬೇಕು ಎಂದು ಪ್ರಶ್ನಿಸಿದರು.
ಮೋದಿ ಹೇಳುತ್ತಾರೆ. ಎನ್‌ಆರ್‌ಸಿ ಕುರಿತು ನಾನು ಎಲ್ಲಯೂ ಹೇಳಿಲ್ಲ, ಅದರ ಕುರಿತು ನನಗೆ ತಿಳಿದಿಲ್ಲ ಎಂದು ಅಮಿತ ಶಹಾ ಒಂದು ಕಡೆ ಹೇಳುತ್ತಾರೆ ನಾವು ಎನ್‌ಆರ್‌ಸಿ ಜಾರಿಗೆ ಮಾಡೇ ಮಾಡುತ್ತೇವೆ ಎಂದು ಇಲ್ಲಿ ಜನರನ್ನು ಮೋಸ ಮಾಡುವ ಕೆಲಸ ಯಾರಿಂದ ನಡೆಯುತ್ತಿದೆ ಎಂದು ಪ್ರಶ್ನಿಸಿದರು. ಮುಂದಿನ ದಿನಗಳಲ್ಲಿ ಸರಕಾರಿ ಅಧಿಕಾರಿಗಳು ಮನೆ ಮನೆಗೆ ಭೇಟಿ ನೀಡಿಲು ಬಂದರೆ ಅವರಿಗೆ ತಮ್ಮ ಯಾವುದೇ ದಾಖಲೆ ತೊರಿಸಬೇಡಿ ಎಂದು ಕರೆ ನೀಡಿದರು. ಈಗಾಗಲೇ ಕೇರಳ ರಾಜ್ಯ ಸರಕಾರ ನಿರ್ಣಯ ತೆಗೆದುಕೊಂಡಿದ್ದು ನಾವು ಸಿಎಎಗೆ ಬೆಂಬಲ ನೀಡುವುದಿಲ್ಲ ಎಂದು ಘೋಷಣೆ ತೆಗೆದುಕೊಂಡಿದೆ ಎಂದರು.
ಬೀದರಲ್ಲಿ ಶಾಹೀನ್ ಶಾಲೆ ವಿದ್ಯಾರ್ಥಿನಿ ಮೋದಿ ವಿರುದ್ಧ ಹಾಡು ಹೇಳಿದರೆ ಅವಳನ್ನು ಹಾಗೂ ಶಾಲಾ ಶಿಕ್ಷಕಿಯನ್ನು ದೇಶ ದ್ರೋಹದ ಹೆಸರಲ್ಲಿ ಕೇಸು ದಾಖಲೆ ಮಾಡಲಾಗಿದೆ. ರಾಜ್ಯದ ಮುಖ್ಯಮಂತ್ರಿ ಮಂತ್ರಿ ಯಡಿಯೂರಪ್ಪ ಕೂಡಲೆ ಕೇಸು ಹಿಂದಕೆ ಪಡೆಯಬೇಕು ಎಂದು ಒತ್ತಾಯಿಸಿದರು.
ಜನವಾದಿ ಮಹಿಳಾ ಸಂಘನೆಯ ಮುಖಂಡರಾದ ಕೆ. ನೀಲಾ ಸೇರಿದಂತೆ ಅನೇಕ ಮಹಿಳಾ ಮುಖಂಡರು ಭಾಗವಹಿಸಿದ್ದರು. ಮಹಿಳಾ ಸಮಾವೇಶದಲ್ಲಿ ವಿಜಯಪುರ ಹಾಗೂ ವಿವಿಧ ಜಿಲ್ಲೆಗಳಿಂದ ಸಾವಿರಾರು ಮಹಿಳೆಯರು ಆಗಮಿಸಿದ್ದರು.
ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…