ಬಿಸಿ ಬಿಸಿ ಸುದ್ದಿ

ಕಲಬುರಗಿ ವಿಭಾಗ ಮಟ್ಟದ ವಿದ್ಯಾರ್ಥಿಗಳಿಗೆ ಕನ್ನಡ ಮಾಧ್ಯಮ ಪ್ರಶಸ್ತಿ ಪ್ರದಾನ

ಕಲಬುರಗಿ: ಮಾತೃ ಭಾಷೆಗಿಂತ ಬೇರೆ ಭಾಷೆಗೆ ಪ್ರಾಧಾನ್ಯತೆ ಕೊಟ್ಟಿರುವುದರಿಂದ ತನ್ನತನ ಕಳೆದು ಹೋಗಿದೆ ಎಂದು ಮಾಜಿ ಸಂಸದ ಶಿಕ್ಷಣ ತಜ್ಞ ಬಸವರಾಜ ಪಾಟೀಲ ಸೇಡಂ ಹೇಳಿದರು.

ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಸಹಯೋಗದಲ್ಲಿ ನಗರದ ಡಾ. ಎಸ್.ಎಂ. ಪಂಡಿತ ರಂಗಮಂದಿರದಲ್ಲಿ ಇಂದು ನಡೆಸ ಕಲಬುರಗಿ ವಿಭಾಗ ಕನ್ನಡ ಮಾಧ್ಯಮ ಪ್ರಶಸ್ತಿ ಪ್ರದಾನ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ಕನ್ನಡದಲ್ಲಿ ಅಂಕ ಪಡೆದಂತೆ ಬೇರೆ ಭಾಷೆಯವರ ಮುಂದೆ ತಲೆ ತಗ್ಗಿಸಲು ಹೋಗಬೇಡಿ. ಕನ್ನಡ ಅನುಷ್ಠಾನದ ಸಮಸ್ಯೆಗಳಿಗೆ ಪರಿಹಾರ ರೂಪದಲ್ಲಿ ಕನ್ನಡ ಮಾಧ್ಯಮ ಶಾಲೆಗಳಲ್ಲಿ ಇಂಗ್ಲಿಷ್‌ ಶಿಕ್ಷಕ, ಇಂಗ್ಲಿಷ್ ಮಾಧ್ಯಮ ಶಾಲೆಯಲ್ಲಿ ಕನ್ನಡ ಶಿಕ್ಷಕನೇ ಹಿರೋ ಆಗಿರಬೇಕು. ನಾಲ್ಕು ದಿನ ಕನ್ನಡ, ಎರಡು ದಿನ ಆಂಗ್ಲ ಭಾಷೆ ಕಲಿಸುವಂತಾಗಬೇಕು ಎಂದು ಶಿಕ್ಷಣ ಸಚಿವರಿಗೆ ಪತ್ರ ಬರೆದಿದ್ದೇನೆ ಎಂದು ತಿಳಿಸಿದರು.

ಕನ್ನಡದಲ್ಲಿ ಓದುವ ಮಕ್ಕಳಿಗೆ ಕೀಳರಿಮೆ ಬೇಡ. ಸತ್ಯದ ಎದುರು ಮಿಥ್ಯ ನಿಲ್ಲಲಾಗುವುದಿಲ್ಲ. ನಮ್ಮ ಮಾನಸಿಕತೆ ಬದಲಾಗಬೇಕು. ಇನ್ನೊಬ್ಬರಿಗೆ ಉದ್ಯೋಗ ಕೊಡುವವರಾಗಬೇಕು ವಿನಃ ಬೇಡುವವರಾಗಬಾರದು ಎಂದು ವಿವರಿಸಿದರು.

ನಂತರ ಡಾ. ಎಚ್. ಟಿ. ಪೋತೆ ಮಾತನಾಡಿ, ಕನ್ನಡ ಕೇವಲ ಭಾಷೆ ಅಲ್ಲ. ಅದು ಬದುಕು. ‌ಅದೊಂದು ಸಂಸ್ಕೃತಿ. ಕನ್ನಡದ ಸ್ವಾಭಿಮಾನಿಗಳಾಗಬೇಕು.‌ ಅದೇವೇಳೆಗೆ ಅನ್ಯ ಭಾಷೆಯ ಜ್ಞಾನ ಸ್ವೀಕರಿಸುವ ಗುಣ ಇರಬೇಕು ಎಂದು ತಿಳಿಸಿದರು. ಕವಿ ರಾಜ ಮಾರ್ಗ, ಶರಣ ಚಳವಳಿ, ದಾಸ ಸಾಹಿತ್ಯ, ತತ್ವ ಪದಕಾರರು ಸೇರಿದಂತೆ ಕನ್ನಡದ ಕಿರೀಟ ಕಲ್ಯಾಣ ಕರ್ನಾಟಕದಲ್ಲಿದೆ ಎಂದು ಹೇಳಿದರು.

ಕಲ್ಯಾಣ ಕರ್ನಾಟಕ ವಿಭಾಗದ ೭ ಜಿಲ್ಲೆಗಳ ೩೧ ತಾಲ್ಲೂಕಿನ ೨೩೦ ವಿದ್ಯಾರ್ಥಿಗಳಿಗೆ ಕನ್ನಡದಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಸನ್ಮಾನಿಸಲಾಯಿತು.  ಪ್ರಥಮ ಬಹುಮಾನ-೧೦೦೦, ದ್ವಿತೀಯ ಬಹುಮಾನ-೯೦೦೦, ತೃತೀಯ ಬಹುಮಾನ-೮೦೦೦ ನೀಡಿ ಗೌರವಿಸಲಾಯಿತು. ರಾಜ್ಯಕ್ಕೆ ಅತೀ ಹೆಚ್ಚು ಅಂಕ ಪಡೆದ ಬಳ್ಳಾರಿ ಜಿಲ್ಲೆಯ ಕೂಡಲಗಿಯ ಕುಸುಮಾ ಉಜ್ಜಯಿನಿ ಅವರಿಗೆ ೨೫,೦೦೦ ನೀಡಿ ಪುರಸ್ಕರಿಸಲಾಯಿತು.

ಆದ್ಯಕ್ಷತೆ ವಹಿಸಿದ್ದ ಟಿ.ಎಸ್. ನಾಗಾಭರಣ ಮಾತನಾಡಿ, ಪ್ರತಿಯೊಬ್ಬರಲ್ಲೂ ಒಂದು ಕನಸಿರುತ್ತದೆ. ಕನಸು ಇರುವುದರಿಂದಲೇ ನಾಳೆಗಳ ಬಗ್ಗೆ ಯೋಚಿಸುತ್ತಿದ್ದೇವೆ. ವಿದ್ಯಾರ್ಥಿಗಳ ಕನಸಿನ ಜೊತೆಗೆ ಪೋಷಕರ ಕನಸು ಕೂಡ ಬೇರೆ ಇರುತ್ತದೆ. ಅದರಂತೆ ನಮ್ಮ ಕನಸು ನಾವೇ ನನಸು ಮಾಡಿಕೊಳ್ಳಬೇಕು. ನಾಳೆಗಳನ್ನು ಸಹ ನಾವೇ ಸೃಷ್ಟಿಸಿಕೊಳ್ಳಬೇಕು ಎಂದರು.

ಶಿಕ್ಷಣ ಸೇವೆಯಾಗಿ ಉಳಿದಿಲ್ಲ. ಅದು ವ್ಯಾಪಾರವಾಗಿ ಮಾರ್ಪಾಡು ಆಗಿದೆ. ಶಿಕ್ಷಣ, ಭಾಷೆಯ ಮೂಲಕ ಕನ್ನಡದ ಸಂಸ್ಕೃತಿ ಯ ಸೇವೆ ಸಲ್ಲಿಸುವಂತಾಗಬೇಕು ಎಂದು ಹೇಳಿದರು. ಪೋಷಕರು ಮತ್ತು ಪಾಲಕರು ಮಾತ್ರ ತಮ್ಮ ಮಕ್ಕಳು ಯಾವ ಮಾಧ್ಯಮದಲ್ಲಿ ಓದಬೇಕೆಂಬುದನ್ನು ನಿರ್ಧರಿಸಬೇಕು ಎಂದು ಸುಪ್ರೀಂಕೋರ್ಟ್ ತೀರ್ಪು ನೀಡಿದೆ, ತಂತ್ರಾಂಶದಲ್ಲಿಯೇ ಭವಷ್ಯದ ಕನ್ನಡ ಎಂದರು.

ಹೃದಯದ ಭಾಷೆ ಹೃದಯವಂತರನ್ನು ತಯಾರು ಮಾಡುತ್ತದೆ.‌ಭಾಷಾ ವೈವಿದ್ಯತೆಯಲ್ಲಿಯೇ ಏಕತೆಯನ್ನು ಕಾಪಾಡಿಕೊಂಡು ಬರಬೇಕು. ಕನ್ನಡದ ಸಾಂಸ್ಕೃತಿಕ ಪರಂಪರೆ ಬಹಳ ದೊಡ್ಡದು. ಯಾರಿಗೆ ನಿನ್ನೆಗಳು ಗೊತ್ತಿವೆಯೋ ಅವರು ನಾಳೆಗಳನ್ನು ಕಾಣಬಲ್ಲರು.‌ ಭವಿಷ್ಯದಲ್ಲಿ ಕನ್ನಡವನ್ನು ಉಳಿಸಬೇಕಾದರೆ ತಂತ್ರಜ್ಞಾನವನ್ನು ಭಾಷಾಜ್ಞಾನವನ್ನಾಗಿ ಮಾಡಿಕೊಳ್ಳಬೇಕು, ಮಾಹಿತಿಯೇ ಜ್ಞಾನವಲ್ಲ. ಮಾಹಿತಿಯ ಬಳಕೆ ಜ್ಞಾನವಾಗಬೇಕು. ಜ್ಞಾನ ಶಿಸ್ತು ರೂಢಿಸಿಕೊಳ್ಳಬೇಕು ಎಂದು ಕರೆ ನೀಡಿದರು.

ಜಿಪಂ ಅಧ್ಯಕ್ಷೆ ಸುವರ್ಣಾ ಮಲಾಜಿ, ಮಹಿಳಾ ಅಭಿವೃದ್ಧಿ ನಿಗಮದ ಅಧ್ಯಕ್ಷೆ ಶಶಿಕಲಾ ಟೆಂಗಳಿ, ಜಿಲ್ಲಾ ಕಸಾಪ ಅಧ್ಯಕ್ಷ ವೀರಭದ್ರ ಸಿಂಪಿ, ಗುಲ್ಬರ್ಗ ವಿವಿ ಕನ್ನಡ ಅಧ್ಯಯನ ಸಂಸ್ಥೆಯ ನಿರ್ದೇಶಕ ಡಾ. ಎಚ್.ಟಿ. ಪೋತೆ, ಕಲಬುರಗಿ ರಂಗಾಯಣ ನಿರ್ದೇಶಕ ಪ್ರಭಾಕರ ಜೋಶಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಕೊಟ್ರೇಶ ಮೊರಬನಹಳ್ಳಿ, ಪದವಿಪೂರ್ವ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಶಿವಶರಣಪ್ಪ ಮೂಳೆಗಾಂವ, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಸದಸ್ಯ ಸುರೇಶ್ ಬಡಿಗೇರೆ ವೇದಿಕೆಯಲ್ಲಿದ್ದರು.

ಗೈರು ಹಾಜರಾದ ಗಣ್ಯರು: ಉದ್ಘಾಟನೆ ಮಾಡಬೇಕಿದ್ದ ಜಿಲ್ಲಾ ಉಸ್ತುವಾರಿ ಸಚಿವ ಗೋವಿಂದ ಕಾರಜೋಳ, ಪ್ರಶಸ್ತಿ ಪ್ರದಾನ ಮಾಡಲಿದ್ದ ಸಚಿವ ಶ್ರೀರಾಮುಲು, ಅಧ್ಯಕ್ಷತೆ ವಹಿಸಬೇಕಿದ್ದ ದತ್ತಾತ್ರೇಯ ಪಾಟೀಲ ರೇವೂರ, ಮುಖ್ಯ ಅತಿಥಿಗಳಾಗಿದ್ದವರಲ್ಲಿ ಮಹಿಳಾ ಅಭಿವೃದ್ಧಿ ನಿಗಮದ ಅಧ್ಯಕ್ಷೆ ಶಶಿಕಲಾ ಟೆಂಗಳಿ ಅವರನ್ನು ಬಿಟ್ಟರೆ ಸಂಸದ, ಶಾಸಕರು, ವಿಧಾನ ಪರಿಷತ್ ಸದಸ್ಯರು ಕಾರ್ಯಕ್ರಮಕ್ಕೆ ಬಂದಿರಲಿಲ್ಲ.

ವಿಶೇಷ ಆಹ್ವಾನಿತರಾಗಿದ್ದ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಸದಸ್ಯೆ ಡಾ. ವಿಜಯಲಕ್ಷ್ಮೀ ಬಾಳೆಕುಂದ್ರಿ ಬಂದಿರಲಿಲ್ಲ. ಗೌರವ ಉಪಸ್ಥಿತಿಯಲ್ಲಿ ಶಿವಶರಣಪ್ಪ ಮೂಳೆಗಾಂವ ಮಾತ್ರ ಇದ್ದರು. ಉಳಿದವರಾರು  ಕಾಣಲಿಲ್ಲ. ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಡಾ. ಕೆ. ಮುರಳಿಧರ ಸ್ವಾಗತಿಸಿ ಪ್ರಾಸ್ತಾವಿಕ ಮಾತನಾಡಿದರು.

emedialine

Recent Posts

ಆತ್ಮವಿಶ್ವಾಸವಿದ್ದರೆ ಜೀವನದಲ್ಲಿ ಏನನ್ನಾದರೂ ಸಾಧಿಸಬಹುದು : ಶಂಕರಗೌಡ

ಕಲಬುರಗಿ: ಜೀವನದಲ್ಲಿ ಹತ್ತನೇ ಮತ್ತು ಪಿಯುಸಿ ಬಹಳ ಮಹತ್ವದ ಘಟ್ಟಗಳು. ಇವೆರಡು ನಮ್ಮ ಭವಿಷ್ಯವನ್ನು ನಿರ್ಧರಿಸುತ್ತವೆ. ವಿದ್ಯಾರ್ಥಿಗಳು ಅಚಲವಾದ ಆತ್ಮವಿಶ್ವಾಸದಿಂದ…

2 hours ago

ಬೌದ್ಧಿಕ ವಿಕಾಸದಿಂದ ತನ್ನತನದ ಶೋಧ

ಸೇಡಂ : ತಮ್ಮ ಬೌದ್ಧಿಕ ವಿಕಾಸದಲ್ಲಿಯೇ ಮಹಿಳೆಯರ ಅಸ್ತಿತ್ವವಿದೆ ಎಂದು ಕೇಂದ್ರ ಸಾಹಿತ್ಯ ಅಕಾಡೆಮಿ ಸದಸ್ಯ ಡಾ.ಬಸವರಾಜ ಸಾದರ ಹೇಳಿದರು.…

2 hours ago

ನಿಧನ ವಾರ್ತೆ; ಆನಂದಪ್ಪ ಉಮ್ಮನಗೋಳ್

ಕಲಬುರಗಿ: ಅಫಜಲಪುರ ತಾಲೂಕಿನ ಸೊನ್ನ ಗ್ರಾಮದ ನಿವಾಸಿ ಆನಂದಪ್ಪ ಶರಣಪ್ಪ ಉಮ್ಮನಗೋಳ್(೮೦) ಅವರು ಸೋಮವಾರ ಬೆಳಗ್ಗೆ ವಯೋಸಹಜವಾಗಿ ನಿಧನರಾದರು. ಮೃತರು…

4 hours ago

ಸಂಘಸಂಸ್ಥೆಗಳು ಸಮಾಜಕ್ಕೆ ನೀಡಿದ ಕೋಡುಗೆ ಅಪಾರ ಪಾಳಾಶ್ರೀ

ಕಲಬುರಗಿ: ಸಂಘಸಂಸ್ಥೆಗಳು ಸಾದಕರನ್ನು ಗುರುತಿಸಿ ಪ್ರಶಸ್ತಿ ಪುರಸ್ಕಾರಗಳನ್ನು ನೀಡುವ ಮುಖಾಂತರಾ ಅವರ ಜವಾಬ್ದಾರಿ ಹೆಚ್ಚಿಸುವುದರಜೋತೆಯಲ್ಲಿ ಸಾಮಾಜಿಕ ಕೆಲಸಗಳನ್ನು ಮಾಡುತ್ತಿರುವುದು ಸಮಾಜಕ್ಕೆ…

5 hours ago

ಹೊಸ ಹೊಸ ಉದ್ಯೋಗ ಸೃಷ್ಟಿಸಲು HKE ಸಂಸ್ಥೆ ಕಾರ್ಯ ಶ್ಲಾಘನೀಯ

ಕಲಬುರಗಿ; ಹೈದ್ರಾಬಾದ್- ಕರ್ನಾಟಕ ಶಿಕ್ಷಣ ಸಂಸ್ಥೆಯ PDACE ಸಭಾಂಗಣದಲ್ಲಿ ನಡೆದ ಕಲ್ಯಾಣ ಕರ್ನಾಟಕ startup conclave ಇಂದು ದಕ್ಷಣ ಶಾಸಕ…

5 hours ago

ಸ್ವಾಭಿಮಾನದ ಬದುಕಿಗೆ ಸಂಗೀತ ಪೂರಕ

ಕಲಬುರಗಿ : ಒತ್ತಡದ ಬದುಕಿನಲ್ಲಿ ಸಂಗೀತ ಆಲಿಸುವುದರಿಂದ ಮಾನಸಿಕ ನೆಮ್ಮದಿ, ಶಾಂತಿ ದೊರೆಯಲು ಸಾಧ್ಯವಿದೆ. ಅನೇಕ ಜನ ಸಂಗೀತ ಕಲಾವಿದರಿಂದು…

5 hours ago