ಶಹಾಬಾದ: ಜಾತ್ಯಾತೀತ ಮನೋಭಾವ, ಗ್ರಾಮೀಣ ಜನರ ಸ್ಥಿತಿಗತಿಗಳನ್ನು ಅರಿವಿನ ಜತೆಗೆ ವಿದ್ಯಾರ್ಥಿಗಳಲ್ಲಿ ಸಾಮಾಜಿಕ ಪ್ರಜ್ಞೆ ಮೂಡಿಸಲು ಎನ್.ಎಸ್.ಎಸ್ ಶಿಬಿರಗಳು ಪ್ರಮುಖ ಪಾತ್ರ ವಹಿಸುತ್ತವೆ ಎಂದು ಜಿಪಂ ವಿರೋಧ ಪಕ್ಷದ ನಾಯಕ ಶಿವಾನಂದ ಪಾಟೀಲ ಮರತೂರ ಹೇಳಿದರು.
ಅವರು ಶನಿವಾರ ನಗರದ ಕೂಡಲಸಂಗಮ ಪದವಿ ಮಹಾವಿದ್ಯಾಲಯದಿಂದ ಆಯೋಜಿಸಲಾದ ಎನ್.ಎಸ್.ಎಸ್ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು.
ದೈನಂದಿನ ಬದುಕಿನ ಅಧ್ಯಯನ ಮಾಡಲು ಹಾಗೂ ಗ್ರಾಮೀಣ ಜನರಲ್ಲಿ ಸಾಮಾಜಿಕ ಅರಿವು ಮೂಡಿಸಲು ಇಂತಹ ಶಿಬಿರಗಳು ಅಗತ್ಯವಾಗಿ ಬೇಕು ಎಂದರಲ್ಲದೇ ಅವರು ವಿದ್ಯಾರ್ಥಿಯಾಗಿದ್ದಾಗ ಎನ್.ಎಸ್.ಎಸ್ ಯೋಜನೆಯಲ್ಲಿ ಸ್ವಯಂ ಸೇವಕರಾಗಿ ದುಡಿದ ದಿನಗಳನ್ನು ಮೆಲುಕು ಹಾಕಿದರು.
ಮಾಜಿ ಜಿಪಂ ಸದಸ್ಯ ಮಲ್ಲಿಕಾರ್ಜುನ ಪೂಜಾರಿ ಮಾತನಾಡಿ, ಗ್ರಾಮೀಣ ಪ್ರದೇಶದ ಜೀವನ ಕ್ರಮ, ಸಂಸ್ಕೃತಿ,ಆಚಾರ-ವಿಚಾರ ಪದ್ಧತಿಗಳನ್ನು ಪ್ರಾಯೋಗಿಕವಾಗಿ ಅರಿಯಲು ರಾಷ್ಟ್ರೀಯ ಸೇವಾ ಯೋಜನೆ ನಮಗೆಲಲ್ಲರಿಗೂ ಪಾಠಶಾಲೆಯಿದ್ದಂತೆ.ಆದ್ದರಿಂದ ಈ ಒಂದು ಶಿಬಿರದ ಭಾಗವಾಗಿ ವಿದ್ಯಾರ್ಥಿನಿಯರು ಜೀವನದ ನಿಜವಾದ ಸವಿಯನ್ನು ಸವಿಯಬೇಕೆಂದು ಹೇಳಿದರು.
ಶಿಕ್ಷಕ ಮಲ್ಲಿನಾಥ ಪಾಟೀಲ, ಕೂಡಲ ಸಂಗಮ ಶಿಕ್ಷಣ ಸಂಸ್ಥೆಯ ಆಡಳಿತ ಮಂಡಳಿಯ ಸದಸ್ಯ ಎನ್.ಸಿ.ವಾರದ ಮಾತನಾಡಿದರು. ಬಿಜೆಪಿ ನಗರ ಅಧ್ಯಕ್ಷ ಅಣವೀರ ಇಂಗಿನಶೆಟ್ಟಿ, ಮುಖಂಡರಾದ ಶರಣಗೌಡ ಪಾಟೀಲ ಗೋಳಾ ವೇದಿಕೆಯ ಮೇಲಿದ್ದರು.
ಪ್ರಾಂಶುಪಾಲ ನಾನಾಗೌಡ ಹಿಪ್ಪರಗಿ ಪ್ರಾಸ್ತಾವಿಕ ನುಡಿದರು, ತೃಪಿ ಸಂಗಡಿಗರು ಪ್ರಾರ್ಥಿಸಿದರು, ಉಪನ್ಯಾಸಕ ರವಿ ನರೋಣಿ ನಿರೂಪಿಸಿದರು, ಶಿಬಿರ ಸಂಯೋಜಕ ಪೀರಪಾಶಾ ಸ್ವಾಗತಿಸಿದರು, ಉಪನ್ಯಾಸಕ ಗುರಲಿಂಗ ತುಂಗಳ ವಂದಿಸಿದರು.
ಉಪನ್ಯಾಸಕರಾದ ಡಾ.ಈರಣ್ಣ ಇಟಗಿ, ಮೋಹನ ಚವ್ಹಾಣ, ರಾಜಶೇಖರ ದಂಡಾವತಿ,ಸುನಂದಾ ಪಾಟೀಲ, ಮೀನಾಕ್ಷಿ ರಾಠೋಡ, ಸಯ್ಯದಾ ಫರತ್, ಅಪ್ಪಾಸಾಬ ಚೌದ್ರಿ ಸೇರಿದಂತೆ ವಿದ್ಯಾರ್ಥಿಗಳು ಇದ್ದರು.
ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…