ಬಿಸಿ ಬಿಸಿ ಸುದ್ದಿ

8 ನೇ ದಿನಕ್ಕೆ ಕಾಲಿಟ್ಟ ಕಲಬುರಗಿ ಶಾಹೀನ್ ಬಾಗ್ ಪ್ರತಿಭಟನೆ

ಕಲಬುರಗಿ: ಪೌರತ್ವ (ತಿದ್ದುಪಡಿ) ಕಾಯ್ದೆ (ಸಿಎಎ), ಎನ್.ಆರ್.ಸಿ ಹಾಗೂ ಎನ್.ಪಿ. ಆರ್. ವಿರೋಧಿಸಿ ನಗರದ ರಿಂಗ್ ರೋಡ್ ಹತ್ತಿರದ ಶಹದಾಬ್ ಫಂಕ್ಷನ್ ಹಾಲ್ ಬಳಿ ಜಾಯಿಂಟ್ ಆಕ್ಷನ್ ಕಮಿಟಿಯ ನೇತೃತ್ವದಲ್ಲಿ ನೂರಾರು ಮಹಿಳೆಯರು ಕಳೆದ 8 ದಿನಗಳಿಂದ ಪ್ರತಿಭಟನೆ ನಡೆಸಿದ್ದಾರೆ.

ಧರ್ಮದ ಆಧಾರದ ಮೇಲೆ ಪೌರತ್ವ ನೀಡುವ ಈ ಕಾಯ್ದೆಯು ಸಂವಿಧಾನ ವಿರೋಧಿ ಕ್ರಮವಾಗಿದೆ. ಎಲ್ಲರೂ ತಮ್ಮ ದಾಖಲೆಗಳನ್ನು ಕೊಡಬೇಕಾಗುತ್ತದೆ. ಆದರೆ ದೇಶದಲ್ಲಿ 48 ಕೋಟಿ ಭೂರಹಿತರಿದ್ದಾರೆ, 10ಕೋಟಿ ಬುಡಕಟ್ಟು ಜನರು, 6 ಕೋಟಿ ಅಲೆಮಾರಿ ಜನರು ಹಾಗೂ 45 ಕೋಟಿ ಅಸಂಘಟಿತ ಕಾರ್ಮಿಕರಿದ್ದಾರೆ. ಇವರೆಲ್ಲ ಸೇರಿ ಶೇ. 70 ರಷ್ಟಿದ್ದು ಇವರ ಬಳಿ ಸರಕಾರ ನಿಗದಿಪಡಿಸಿರುವ ಯಾವುದೇ ದಾಖಲೆಗಳು ಸಿಗುವುದು ಕಷ್ಟ. ಎನ್.ಪಿ.ಆರ್. ನಲ್ಲಿ ತಂದೆ ತಾಯಿಯ ವಾಸ ಸ್ಥಳ ಯಾವುದು, ಜನ್ಮ ದಿನಾಂಕ ಯಾವುದು ಎಂಬ ಪ್ರಶ್ನೆಗಳನ್ನು ಕೇಳಲಾಗುತ್ತಿದೆ. ಅನಕ್ಷರಸ್ಥ ತಂದೆತಾಯಿಂದಿರು ಎಲ್ಲಿಂದ ಇಂತಹ ದಾಖಲೆಗಳನ್ನು ತರಲು ಸಾಧ್ಯ. ಸೂಕ್ತ ದಾಖಲೆಗಳನ್ನು ಹಾಜರು ಪಡಿಸದಿದ್ದಲ್ಲಿ ಅನುಮಾನಸ್ಪದ ನಾಗರಿಕ ಎಂದು ಪರಿಗಣಿಸಿ ಕ್ರಮಕೈಗೊಳ್ಳಬಹುದು ಎಂದು ಜಾಯಿಂಟ್ ಆಕ್ಷನ್ ಕಮಿಟಿ ಸಹ-ಸಂಚಾಲಕ ಅಲಿಮ್ ಅಹಮ್ಮದ್ ಅತಂಕ ವ್ಯಕ್ತಪಡಿಸಿದ್ದಾರೆ.

ಡಿಟೆನ್ಶನ್ ಸೆಂಟರ್‌ಗಳೆಂಬ ಮೃತ್ಯುಕೂಪಗಳಿಗೂ ದೂಡಬಹುದಾಗಿದೆ. ಈ ಕಾಯ್ದೆಯು ಕೇವಲ ಮುಸ್ಲಿಂರಿಗೆ ಮಾತ್ರ ತೊಂದರಯಾಗುತ್ತದೆ ಎಂಬುದು ಸುಳ್ಳು; ಇದು ಎಲ್ಲಾ ಭಾರತೀಯ ನಾಗರೀಕರ ಮೇಲೆ ದುಷ್ಪರಿಣಾಮ ಬೀರುತ್ತದೆ. ಇದಕ್ಕೆ ಜ್ವಲಂತ ಉದಾಹರಣೆ ಅಸ್ಸಾಂ ರಾಜ್ಯದಲ್ಲಿ ಆಗಿರುವ ಅನಾಹುತಗಳೇ ಸಾಕ್ಷಿಯಾಗಿವೆ!, ಜನರ ಜ್ವಲಂತ ಸಮಸ್ಯೆಗಳನ್ನು ಬಗೆಹರಿಸದ ಸರ್ಕಾರ ಇಂತಹ ಕರಾಳ ಕಾಯ್ದೆಗಳನ್ನು ಯಾವುದೇ ರೀತಿಯ ಚರ್ಚೆ ಮಾಡದೇ ಏಕಪಕ್ಷೀಯವಾಗಿ ದೇಶದ ಜನರ ಮೇಲೆ ಹೇರುವುದು ಅಸಂವಿಧಾನಿಕವಾಗಿದೆ.  ಹಾಗೂ ನೈಜ ಸಮಸ್ಯೆಗಳಿಂದ ಬಳಲುತ್ತಿರುವ ಜನಗಳ ಮೇಲೆ ಪ್ರಹಾರವಾಗಿದೆ ಎಂದರು.

ದೇಶದ ಎಲ್ಲಾ ನಾಗರಿಕರು ತಮ್ಮ ಹಕ್ಕುಗಳಿಗಾಗಿ ಹಾಗೂ ದಮನಕಾರಿ ಸರ್ಕಾರದ ವಿರುದ್ದ ಹೋರಾಟ ಮಾಡುವುದು ಮಾತ್ರ ಎಲ್ಲಾ ಸಮಸ್ಯೆಗಳಿಗೆ ದಾರಿದೀಪವಾಗಿದ್ದು, ಈ ನಿಟ್ಟಿನಲ್ಲಿ ಕಲಬುರಗಿಯಲ್ಲೂ ಕೂಡಾ ಮಹಿಳೆಯರು ಶಾಹೀನ್ ಬಾಗ್ ರೀತಿಯ ಹೋರಾಟವನ್ನು ಕಳೆದ 8 ದಿನಗಳಿಂದ ಮಹಿಳೆಯರ ಧೀಃಶಕ್ತಿ ತೋರಿಸುತ್ತದೆ ಎಂದು ಇಂದು ಶಾಹಿನ್ ಬಾಗ್ ಹೋರಾಟ ನಿರತ ಮಹಿಳೆಯರನ್ನು ಉದ್ದೇಶಿಸಿ ಜಾಯಿಂಟ್ ಆಕ್ಷನ್ ಕಮಿಟಿಯ ಕರ್ನಾಟಕದ ಸಹಸಂಚಾಲಕರಾದ ಜನಾಬ್ ಯೂಸುಫ್ ಖನಿ ಸಾಹೇಬ್ ರವರು ಮಾತನಾಡಿದರು.

ಬಿಜಾಪೂರದ ಆಲ್ ಇಂಡಿಯಾ ಮುಸ್ಲಿಂ ಪರ್ಸನಲ್ ಲಾ ನ ಸದಸ್ಯರಾದ  ಮೌಲಾನಾ ತನ್ವೀರ್ ಹಾಶ್ಮಿ ಸಾಹೇಬ್‌ ಮಾತನಾಡಿ, ಕೇಂದ್ರ ಸರ್ಕಾರವು ಏನು ಮತೀಯ ರಾಜಕಾರಣದ ಭಾಗವಾಗಿ ಅಪ್ರಜಾತಾಂತ್ರಿಕವಾಗಿ ಮತ್ತು ಸಂವಿಧಾನ ವಿರೋಧಿ ಕಾನೂನುಗಳ ವಿರುದ್ಧ ದೇಶದಾದ್ಯಂತ ಹೋರಾಟದ ಮುಂಚೂಣಿಯಲ್ಲಿ ಮಹಿಳೆಯರು ವಿದ್ಯಾರ್ಥಿ-ಯುವಜನರು ಹಗಲಿರುಳು ಹೋರಾಟ ಮಾಡುತ್ತಿರುವುದು ನಮ್ಮೇಲ್ಲರಿಗೆ ಭವಿಷ್ಯದ ಆಶಾಕಿರಣವಾಗಿದೆ ಎಂದು ಹೇಳುತ್ತಾ ಹೋರಾಟನಿರತ ಮಹಿಳೆಯರಿಗೆ ಕ್ರಾಂತಿಕಾರಿ ಅಭಿನಂದನೆ ಸಲ್ಲಿಸಿದರು.

ಪ್ರತಿಭಟನೆಯಲ್ಲಿ ನೂರಾರು ಮಹಿಳೆಯರು ಮತ್ತು ಮಕ್ಕಳು ಉಪಸ್ಥಿತರಿದ್ದರು.

emedialine

Recent Posts

ತೊಗರಿ ಬೆಳೆ‌ ಹಾನಿ ಪ್ರದೇಶ ವೀಕ್ಷಿಸಿದ ಶಾಸಕ ಅಲ್ಲಮಪ್ರಭು ಪಾಟೀಲ

ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…

8 hours ago

ಕಷ್ಟಗಳಿಗೆ ಕುಗ್ಗದೇ ಸವಾಲಾಗಿ ಸ್ವಿಕರಿಸಿ

ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…

8 hours ago

ಕಲಬುರಗಿ: ಹಾಸ್ಯ ಕಲಾವಿದ ರೇವಣಸಿದ್ಧ ಸ್ವಾಮಿ ದಂಪತಿಗೆ ಗೆಳೆಯರ ಬಳಗದಿಂದ ಸತ್ಕರಿಸಲಾಯಿತು.

ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…

8 hours ago

ಸಾವಿರ ಸೀರೆ ವಿತರಿಸಿ ಸಚಿವ ಪ್ರಿಯಾಂಕ್ ಜನ್ಮದಿನ ಆಚರಣೆ

  ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…

1 day ago

ಮೂರೂ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು: ಕಾರ್ಯಕರ್ತರಿಂದ ವಿಜಯೋತ್ಸವ

ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…

1 day ago

ಸಿದ್ದಸಿರಿ ಹೋರಾಟ ಪ್ರಾಯೋಜಿತ: ಶರಣು ಪಾಟೀಲ್

ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…

1 day ago