ಜೇವರ್ಗಿ: ಮೂಡನಂಬಿಕೆಗಳಂತ ಅಂಧಕಾರದ ಆಚರಣೆಗಳನ್ನು ಬೇರು ಸಮೇತ ಹೊಡೆದು ಹಾಕಿ ಸಮಾಜದಲ್ಲಿ ಪ್ರತಿಭಾನ್ವಿತರಾಗಿ ಬದುಕಲು ಬೀದಿ ನಾಟಕ ಕಲಾ ಪ್ರದರ್ಶನ ಜನರಿಗೆ ಅವಶ್ಯಕವಾಗಿದೆ ಎಂದು ಜಿಲ್ಲಾ ಪಂಚಾಯತ ಸದಸ್ಯರಾದ ಮರೇಪ್ಪ ಬಡಿಗೇರ ಹೇಳಿದರು.
ದೇವದಾಸಿ ಅನಿ? ಪದ್ದತಿ ಮತ್ತು ಅದರ ದು?ರಿಣಾಮಗಳ ಬಗ್ಗೆ ಜನ ಜಾಗೃತಿ ಮೂಡಿಸಲು ಜಾಗೃತಿ ಬೀದಿ ನಾಟಕ ಕಲಾಪ್ರದರ್ಶನ ಕಾರ್ಯಕ್ರಮವು ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮ ಹಾಗು ಗ್ರೇಟ್ ಪೌಂಡೇಶನ್ ಕಲಬುರಗಿ ವತಿಯಿಂದ ಜೇವರ್ಗಿ ಪಟ್ಟಣದ ಸರ್ಕಾರಿ ಆಸ್ಪತ್ರೆ ಎದುರುಗಡೆ ನಡೆದ ನಾಟಕ ಪ್ರದರ್ಶನವನ್ನು ತಮಟೆ ಬಾರಿಸುವ ಮೂಲಕ ಉದ್ಘಾಟಿಸಿ ಮಾತನಾಡಿದ ಅವರು ಆಧುನಿಕ ಕಾಲದಲ್ಲಿ ಅಮಾಯಕ ಜನರಿಗೆ ಕಂಡುಕಾಣದಂತೆ ಹೆಣ್ಣುಮಗಳಿಗೆ ಮುತ್ತು ಕಟ್ಟಿ ದೇವದಾಸಿಯನ್ನಾಗಿಸುವುದು, ಬಾಲ್ಯವಿವಾಹ ಪದ್ದತಿ, ಜೀತ ಕಾರ್ಮಿಕ ಪದ್ದತಿ, ಮೂಢನಂಬಿಕೆಯ ಆಚರಣೆಗಳು ನಡೆಯುತ್ತಿವೆ. ಆದ್ದರಿಂದ ಜನರು ಇಂತಹ ನಂಬಿಕೆಗೆ ಒಳಗಾಗದೆ ಶಿಕ್ಷಣವನ್ನು ಕಲಿತು ಪ್ರಜ್ಞಾವಂತರಾಗಬೇಕೆಂದು ಕರೆ ನೀಡಿದರು.
ದೇವರ ಹೆಸರಿನಲ್ಲಿ ಮುಗ್ಧ ಹೆಣ್ಣು ಮಕ್ಕಳಿಗೆ ಮುತ್ತು ಕಟ್ಟಿಸಿ ದೇವರ ಹೆಸರಿನಲ್ಲಿ ಹರೆಕೆಯನ್ನು ಸಮರ್ಪಣೆ ಮಾಡುವಂತೆ ಮೂಡನಂಬಿಕೆಗಳು ಪ್ರಚಲಿತ ಕಾಲಘಟ್ಟಗಳಲ್ಲಿ ನಡೆಯುತ್ತಿರುವುದು ದುರಂತದ ವಿ?ಯವಾಗಿದೆ ಎಂದು ಬಾಪುಗೌಡ ಪೋಲಿಸ ಪಾಟೀಲ ಕಳವಳ ವ್ಯಕ್ತ ಪಡಿಸಿದರು.
೧೯೮೨ ದೇವದಾಸಿ ಸಮರ್ಪಣಾ ನಿ?ದ ಕಾಯ್ದೆ ಪ್ರಕಾರ ಅಮಾಯಕ ಹೆಣ್ಣು ಮಗಳಿಗೆ ದೇವದಾಸಿ ಪದ್ಧತಿಗೆ ದೂಡಿದಲ್ಲಿ ಅಂತಹವರಿಗೆ ೨ ವ? ಜೈಲು ಶಿಕ್ಷೆ ಮತ್ತು ೫ ಸಾವಿರ ದಂಡವಿದಿಸಲಾಗುವುದು ಅ? ಅಲ್ಲದೆ ಇಂತಹ ಪದ್ಧತಿಗೆ ಪ್ರೋತ್ಸಗಿಸಿದವರೀಗೂ ಅನ್ವಯವಾಗುತ್ತದೆ, ಈ ರೀತಿಯ ಅನಿ?ಪದ್ದತಿಗಳು ಕಂಡುಬಂದಲ್ಲಿ ಶಿಶುಅಭಿವೃದ್ಧಿ ಯೋಜನಾಧಿಕಾರಿಗಳು ಜೇವರ್ಗಿ ಸಮೀಪದ ಅಂಗನವಾಡಿ ಕಾರ್ಯಕರ್ತೆಯರೀಗೆ, ದೇವದಾಸಿ ಪುನರ್ವಸತಿ ಯೋಜನಾ ಕಛೇರಿ ಕಲಬುರಗಿ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಕಲಬುರಗಿ ರವರಿಗೆ ದೂರು ನೀಡಬೇಕೆಂದು ಪತ್ರಕರ್ತ ರೇವಣಸಿದ್ದ ಹೆಗಡೆ ಕರೆ ನೀಡಿದರು.
ರಂಗಮ್ಮ(ಕೆ) ಎನ್.ಹಳ್ಳಿ ದಾವಣಗೆರೆ ಕಲಾ ತಂಡದಿಂದ ಜಾಗೃತಿ ಬೀದಿ ನಾಟಕ ಪ್ರದರ್ಶನ ಮಾಡಲಾಯಿತು.
ಈ ಸಂದರ್ಭದಲ್ಲಿ ಮಹೇಶ ಕೋಕೀಲೆ ಡಿ.ಎಸ್.ಎಸ್. ತಾಲೂಕ ಸಂಘಟನಾ ಸಂಚಾಲಕರು, ಯಮನೇಶ ಅಂಕಲಗಾ ದಲಿತ ಯುವ ಮುಖಂಡರು, ಯೋಜನಾ ಅನು?ನಾಧಿಕಾರಿಗಳಾದ ವಾಯ್.ಡಿ.ಬಡೀಗೇರ, ಜಗನ್ನಾಥ ನಾಟೇಕಾರ ಹಾಗೂ ಪಟ್ಟಣ ಹಾಗು ಗ್ರಾಮದ ಜನರು ಕಲಾ ಪ್ರದರ್ಶನ ವಿಕ್ಷಿಸಿದರು.
ಕಲಬುರಗಿ: ಕಾಂಗ್ರೆಸ್ ಪಕ್ಷದ ಅಂಗ ಸಂಖ್ಯೆ ಸೇವಾದಳ ಯಂಗ್ ಬ್ರಿಗೇಡ್ ಸದಸ್ಯತ್ವ ಅಭಿಯಾನ ನ.20ರಿಂದ ರಾಜ್ಯವ್ಯಾಪಿ ಆರಂಭ ಮಾಡಲಾಗಿದ್ದು, ಆಸಕ್ತರು…
ಕಲಬುರಗಿ: ಜೀವನದಲ್ಲಿ ಹತ್ತನೇ ಮತ್ತು ಪಿಯುಸಿ ಬಹಳ ಮಹತ್ವದ ಘಟ್ಟಗಳು. ಇವೆರಡು ನಮ್ಮ ಭವಿಷ್ಯವನ್ನು ನಿರ್ಧರಿಸುತ್ತವೆ. ವಿದ್ಯಾರ್ಥಿಗಳು ಅಚಲವಾದ ಆತ್ಮವಿಶ್ವಾಸದಿಂದ…
ಸೇಡಂ : ತಮ್ಮ ಬೌದ್ಧಿಕ ವಿಕಾಸದಲ್ಲಿಯೇ ಮಹಿಳೆಯರ ಅಸ್ತಿತ್ವವಿದೆ ಎಂದು ಕೇಂದ್ರ ಸಾಹಿತ್ಯ ಅಕಾಡೆಮಿ ಸದಸ್ಯ ಡಾ.ಬಸವರಾಜ ಸಾದರ ಹೇಳಿದರು.…
ಕಲಬುರಗಿ: ಅಫಜಲಪುರ ತಾಲೂಕಿನ ಸೊನ್ನ ಗ್ರಾಮದ ನಿವಾಸಿ ಆನಂದಪ್ಪ ಶರಣಪ್ಪ ಉಮ್ಮನಗೋಳ್(೮೦) ಅವರು ಸೋಮವಾರ ಬೆಳಗ್ಗೆ ವಯೋಸಹಜವಾಗಿ ನಿಧನರಾದರು. ಮೃತರು…
ಕಲಬುರಗಿ: ಸಂಘಸಂಸ್ಥೆಗಳು ಸಾದಕರನ್ನು ಗುರುತಿಸಿ ಪ್ರಶಸ್ತಿ ಪುರಸ್ಕಾರಗಳನ್ನು ನೀಡುವ ಮುಖಾಂತರಾ ಅವರ ಜವಾಬ್ದಾರಿ ಹೆಚ್ಚಿಸುವುದರಜೋತೆಯಲ್ಲಿ ಸಾಮಾಜಿಕ ಕೆಲಸಗಳನ್ನು ಮಾಡುತ್ತಿರುವುದು ಸಮಾಜಕ್ಕೆ…
ಕಲಬುರಗಿ; ಹೈದ್ರಾಬಾದ್- ಕರ್ನಾಟಕ ಶಿಕ್ಷಣ ಸಂಸ್ಥೆಯ PDACE ಸಭಾಂಗಣದಲ್ಲಿ ನಡೆದ ಕಲ್ಯಾಣ ಕರ್ನಾಟಕ startup conclave ಇಂದು ದಕ್ಷಣ ಶಾಸಕ…