ಸುರಪುರ: ೧೨ನೇ ಶತಮಾನದ ಬಸವಾದಿ ಶರಣರು ಸಾಮಾಜಿಕ ಕ್ರಾಂತಿಯ ಮೂಲಕ ಇಂದಿಗು ಜನಮಾನಸದಲ್ಲಿ ಜೀವಂತವಾಗಿದ್ದಾರೆ.ಅವರಂತೆ ತಮ್ಮ ವಚನಗಳ ಮೂಲಕ ಇಂದಿಗೂ ಜೀವಂತವಿರುವ ಕವಿ ಸರ್ವಜ್ಞನಲ್ಲಿ ಶರಣರ ನಂತರ ಬಂಡಾಯವನ್ನು ಕಾಣಬಹುದಾಗಿದೆ ಎಂದು ವೀರಣ್ಣ ಕುಂಬಾರ ಮಾತನಾಡಿದರು.
ನಗರದ ತಹಸೀಲ್ದಾರ ಕಚೇರಿ ಸಭಾಂಗಣದಲ್ಲಿ ತಾಲೂಕು ಆಡಳಿತದಿಂದ ಹಮ್ಮಿಕೊಂಡಿದ್ದ ಕವಿ ಸರ್ವಜ್ಞರ ಜಯಂತಿ ಕಾರ್ಯಕ್ರಮದಲ್ಲಿ ಉಪನ್ಯಾಸಕರಾಗಿ ಭಾಗವಹಿಸಿ ಮಾತನಾಡಿ, ಕವಿ ಸರ್ವಜ್ಞರಿಗೆ ಜಾತಿ, ಮತ, ಪಂಥ ಯಾವುದೂ ಇರಲಿಲ್ಲ. ಜಾತೀಯತೆಯನ್ನು ಹೋಗಲಾಡಿಸಲು ವಚನಗಳನ್ನು ರಚಿಸಿದರು.ಅವರು ತಮ್ಮ ವಚನದಲ್ಲಿ ಜಾತಿ ಹೀನನ ಮನೆಯ ಜ್ಯೋತಿ ತಾ ಹೀನವೆ ಜಾತಿ ವಿಜಾತಿ ಎನಬೇಡ ದೇವನೊಲಿದಾತನೆ ಜಾತ ಎಂದು ಜಾತಿಯ ಭೂತವನ್ನು ಬಿಡಿಸಿದ್ದಾರೆ ಎಂದರು.
ಇಂದು ನಮಗೆಲ್ಲ ಸರ್ವಜ್ಞರ ವಚನಗಲು ದೊರೆಯಲು ಉತ್ತಂಗಿ ಚೆನ್ನಪ್ಪನವರ ಕೊಡುಗೆ ದೊಡ್ಡದಿದೆ.ಅವರು ಸಂಗ್ರಹಿಸಿದ ಎರಡು ಸಾವಿರ ವಚನಗಳು ಸರ್ವಜ್ಞನ ಬಗ್ಗೆ ತಿಳಿಯಲು ಸಹಕಾರಿಯಾಗಿವೆ.ಅಲ್ಲದೆ ಸರ್ವಜ್ಞನ ಹುಟ್ಟುರಿನ ಬಗ್ಗೆ ಹಲವು ಸಂಶೋಧಕರಲ್ಲಿ ಭೀನ್ನಾಭಿಪ್ರಾಯಗಳಿದ್ದು ಡಿ.ಉಮಾಪತಿ ಮತ್ತು ಬುರಡೆಕಟ್ಟೆ ಮಂಜಪ್ಪನವರು ತಾಳೆಗರಿಗಳ ಸಾಕ್ಷಾಧಾರಗಳ ಮೇಲೆ ಸಂಶೋಧನೆ ನಡೆಸಿ ಸರ್ವಜ್ಞನ ಬಗ್ಗೆ ಇದುವರೆಗೆ ಕಟ್ಟು ಕತೆಗಳನ್ನು ಹೇಳಲಾಗುತ್ತಿದೆ.ಆದರೆ ಅವರೆ ಹೇಳುವಂತೆ ತಂದೆ ಕುಂಬಾರ ಮಲ್ಲ,ತಾಯಿ ಮಳಲಾದೇವಿ ಇಂದುಶೇಖರನ ವರದಿಂದ ಭೂಮಿಗೆ ತಾ ಬಂದು ಜನಸಿದ ಸರ್ವಜ್ಞ ಎಂದಿದ್ದಾರೆ.ತಂದೆ ತಾಯಿ ಇಬ್ಬರು ಕುಂಬಾರ ಸಮುದಾಯದವರು ಮತ್ತು ಅವರ ಹುಟ್ಟುರು ಹಾವೇರಿ ಜಿಲ್ಲೆಯ ಹಿರೆಕೆರೂರ ತಾಲೂಕಿನ ಮಾಸೂರು ಎಂಬುದು ನಂಬಲರ್ಹವಾಗಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ತಹಸೀಲ್ದಾರ ನಿಂಗಣ್ಣ ಬಿರಾದಾರ ಮಾತನಾಡಿ, ಸರ್ವಜ್ಞರ ವಚನಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಂಡು ನಡೆದರೆ ಉತ್ತಮ ಸಮಾಜವನ್ನು ನಿರ್ಮಿಸಬಹುದು ಎಂದು ಅಭಿಪ್ರಾಯಪಟ್ಟರು.
ಗ್ರೇಡ್೨ ತಹಶಿಲ್ದಾರ ಸುಫಿಯಾ ಸುಲ್ತಾನ, ಸುಗುರೇಶ ವಾರದ, ಸೂಗಣ್ಣ ಚನ್ನೂರ, ರಾಜು ಕುಂಬಾರ, ವೇದಿಕೆಯಲ್ಲಿದ್ದರು. ಸಂಗಣ್ಣ ರಾಜನಕೋಳುರ, ವೀರಭದ್ರಪ್ಪ ಕುಂಬಾರ, ಈರಣ್ಣ ಕುಂಬಾರ, ಭಿಮರಾಯ ಕುಂಬಾರ, ಅಮರೇಶ ಕುಂಬಾರ, ಮಲ್ಲೇಶಿ ಕನ್ನಳ್ಳಿ, ಆದಪ್ಪ ಕುಂಬಾರ, ಚಂದ್ರಶೇಖರ ಜಾಲಿಬೆಂಚಿ, ನಿಂಗಣ್ಣ ವಡಗೇರಿ, ಬಸವರಾಜ ಕೊಡೇಕಲ್, ಶರಣು ಅರಕೇರಿ, ಸಾಹೇಬಗೌಡ ಕುಂಬಾರ ಸೇರಿದಂತೆ ಇನ್ನಿತರರಿದ್ದರು.
ಕಲಬುರಗಿ: ಅಫಜಲಪುರ ತಾಲೂಕಿನ ಸೊನ್ನ ಗ್ರಾಮದ ನಿವಾಸಿ ಆನಂದಪ್ಪ ಶರಣಪ್ಪ ಉಮ್ಮನಗೋಳ್(೮೦) ಅವರು ಸೋಮವಾರ ಬೆಳಗ್ಗೆ ವಯೋಸಹಜವಾಗಿ ನಿಧನರಾದರು. ಮೃತರು…
ಕಲಬುರಗಿ: ಸಂಘಸಂಸ್ಥೆಗಳು ಸಾದಕರನ್ನು ಗುರುತಿಸಿ ಪ್ರಶಸ್ತಿ ಪುರಸ್ಕಾರಗಳನ್ನು ನೀಡುವ ಮುಖಾಂತರಾ ಅವರ ಜವಾಬ್ದಾರಿ ಹೆಚ್ಚಿಸುವುದರಜೋತೆಯಲ್ಲಿ ಸಾಮಾಜಿಕ ಕೆಲಸಗಳನ್ನು ಮಾಡುತ್ತಿರುವುದು ಸಮಾಜಕ್ಕೆ…
ಕಲಬುರಗಿ; ಹೈದ್ರಾಬಾದ್- ಕರ್ನಾಟಕ ಶಿಕ್ಷಣ ಸಂಸ್ಥೆಯ PDACE ಸಭಾಂಗಣದಲ್ಲಿ ನಡೆದ ಕಲ್ಯಾಣ ಕರ್ನಾಟಕ startup conclave ಇಂದು ದಕ್ಷಣ ಶಾಸಕ…
ಕಲಬುರಗಿ : ಒತ್ತಡದ ಬದುಕಿನಲ್ಲಿ ಸಂಗೀತ ಆಲಿಸುವುದರಿಂದ ಮಾನಸಿಕ ನೆಮ್ಮದಿ, ಶಾಂತಿ ದೊರೆಯಲು ಸಾಧ್ಯವಿದೆ. ಅನೇಕ ಜನ ಸಂಗೀತ ಕಲಾವಿದರಿಂದು…
ಕಲಬುರಗಿ; ಅಲ್ಪಸುಖಕ್ಕಾಗಿ ಯುವ ಜನತೆ ಮಾದಕ ಪದಾರ್ಥಗಳಿಗೆ ದಾಸರಾಗಿ ತಮ್ಮ ಜೀವನ ಹಾಳು ಮಾಡಿಕೊಳ್ಳಬಾರದು ಎಂದು ಜಿಲ್ಲಾ ತಂಬಾಕು ನಿಯಂತ್ರಣ…
ಸೇಡಂ (ಕಲಬುರಗಿ); ಜಿಲ್ಲೆಯ ಸೇಡಂನ ಮಾತೋಶ್ರೀ ಮಹಾದೇವಮ್ಮ ನಾಗಪ್ಪ ಮುನ್ನೂರ್ ಪ್ರತಿಷ್ಠಾನ ಕೊಡಮಾಡುವ `ಅಮ್ಮ ಪ್ರಶಸ್ತಿ’ 24ನೇ ವರ್ಷದ ಸಮಾರಂಭವು…