ಸುರಪುರ: ನಗರದ ರಂಗಂಪೇಟೆಯ ಕುಂಬಾರ ಭವನದ ಬಳಿಯ ಮಹಾಕವಿ ಸರ್ವಜ್ಞ ವೃತ್ತದಲ್ಲಿ ಸುರಪುರ ತಾಲೂಕು ಕುಂಬಾರ ಸಂಘದ ವತಿಯಿಂದ ಮಹಾಕವಿ ಸರ್ವಜ್ಞರ ೫೦೦ ನೇ ಜಯಂತಿ ಆಚರಿಸಲಾಯಿತು ಹಾಗು ಬಸವೇಶ್ವರ ಪತ್ತಿನ ಸಹಕಾರ ಸಂಘದ ನೂತನ ನಿರ್ದೇಶಕರಾಗಿ ಆಯ್ಕೆಯಾದ ಸೂಗುರೇಶ ವಾರದವರನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದ ಆರಂಭದಲ್ಲಿ ಕವಿ ಸರ್ವಜ್ಞರ ನಾಮಫಲಕಕ್ಕೆ ಪೂಜೆ ಸಲ್ಲಿಸಿ ಮಾಲಾರ್ಪಣೆ ಮಾಡಿ ಜಯಘೋಷ ಕೂಗಿದರು.ನಂತರ ಅಧ್ಯಕ್ಷ ರಾಜು ಕುಂಬಾರ ಮಾತನಾಡಿ,ಸರ್ವಜ್ಞ ಕುಂಬಾರ ಸಮುದಾಯದ ಮಹಾನ್ ಪುರುಷನಾದರು ಅವರು ಒಂದು ಸಮುದಾಯಕ್ಕೆ ಸೀಮಿತವಲ್ಲ.ಆಡು ಮುಟ್ಟದ ಸೊಪ್ಪಿಲ್ಲ ಸರ್ವಜ್ಞ ಬರೆಯದ ವಚನಗಳಿಲ್ಲ ಎಂಬಂತೆ ಎಲ್ಲಾ ರಂಗಗಳ ಕುರಿತು ವಚನವನ್ನು ರಚಿಸುವ ಮೂಲಕ ಸಮಾಜವನ್ನು ತಿದ್ದುವ ಕೆಲಸವನ್ನು ಸರ್ವಜ್ಞ ಮಾಡಿದ್ದು,ಅವರ ವಚನಗಳನ್ನು ನಮ್ಮ ಬದುಕಿನಲ್ಲಿ ಅಳವಡಿಸಿಕೊಂಡು ನಡೆದರೆ ಬದುಕು ಹಸನಾಗಲಿದೆ ಎಂದರು.
ಈ ಸಂದರ್ಭದಲ್ಲಿ ಸಂಘದ ಉಪಾಧ್ಯಕ್ಷ ಸಾಹೇಬಗೌಡ ಕುಂಬಾರ ಪ್ರಧಾನ ಕಾರ್ಯದರ್ಶಿ ಭೀಮರಾಯ ಕುಂಬಾರ,ಈರಣ್ಣ ಕುಂಬಾರ, ವೀರಭದ್ರಪ್ಪ ಕುಂಬಾರ,ಅಮರೇಶ ಕುಂಬಾರ,ಮಡಿವಾಳಪ್ಪ ಕುಂಬಾರ,ಶರಣು ಅರಕೇರಿ,ಚಂದ್ರಶೇಖರ ಅರಳಗುಂಡಗಿ,ಅಂಬ್ರೇಶ ಕುಂಬಾರ,ಬಸವರಾಜ ಕುಂಬಾರ,ನಿಂಗಣ್ಣ ವಡಗೇರಿ,ಮಲ್ಲೇಶಿ ಕನ್ನೆಳ್ಳಿ,ಮಲ್ಲಪ್ಪ ಹುಬ್ಬಳ್ಳಿ,ಆದಪ್ಪ ಕುಂಬಾರ,ದೇವಣ್ಣ ಟೇಲರ್,ಮಲ್ಲು ಬಿ.ಕುಂಬಾರ,ಬಸವರಾಜ ಕುಂಬಾರ,ವಿಶ್ವನಾಥ ಕುಂಬಾರ,ರವಿ ಕುಂಬಾರಪೇಟ, ಇತರರಿದ್ದರು.
ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…