ಸುರಪುರ: ನಗರದ ಬಸವೇಶ್ವರ ಪತ್ತಿನ ಸಹಕಾರ ಸಂಘಕ್ಕೆ ಸುರೇಶ ಸಜ್ಜನ್ ಅಧ್ಯಕ್ಷರಾಗಿ, ಮನೋಹರ ಎಂ.ಜಾಲಹಳ್ಳಿ ಉಪಾಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾದರು.
ಸೋಮವಾರ ಬೆಳಿಗ್ಗೆ ನಡೆದ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ನೇಮಕ ಪ್ರಕ್ರೀಯೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಸುರೇಶ ಸಜ್ಜನ್ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ಮನೋಹರ ಎಂ.ಜಾಲಹಳ್ಳಿ ನಾಮಪತ್ರ ಸಲ್ಲಿಸಿದರು.೧೨ ಗಂಟೆಯವರೆಗೆ ನಾಮಪತ್ರ ಸಲ್ಲಿಸಲು ಸಮಯ ನಿಗದಿಯಾಗಿತ್ತು.ಆದರೆ ಬೇರೆ ಯಾವುದೇ ನಾಮಪತ್ರಗಳು ಸಲ್ಲಿಕೆಯಾಗದ ಕಾರಣ ಸುರೇಶ ಸಜ್ಜನ್‌ರನ್ನು ಅಧ್ಯಕ್ಷರೆಂದು ಹಾಗು ಮನೋಹರ ಎಂ,ಜಾಲಹಳ್ಳಿಯವರನ್ನು ಉಪಾಧ್ಯಕ್ಷರೆಂದು ನೇಮಕಗೊಳಿಸಲಾಗಿದೆ ಎಂದು ಚುನಾವಣಾಧಿಕಾರಿಗಳಾಗಿದ್ದ ರವಿಕುಮಾರ ಗೋಗಿ ಘೋಷಿಸಿದರು.
ಈ ಸಂದರ್ಭದಲ್ಲಿ ಸಹಕಾರ ಇಲಾಖೆಯ ಅಭಿವೃದ್ಧಿ ಅಧಿಕಾರಿ ಮಲ್ಲಿಕಾರ್ಜುನ ಇದ್ದರು. ಆಯ್ಕೆಗೊಂಡ ನಂತರ ಇಬ್ಬರನ್ನು ಸಂಘದ ಎಲ್ಲಾ ನೂತನ ನಿರ್ದೇಶಕರು ಹಾಗು ವೀರಶೈವ ಲಿಂಗಾಯತ ಸಮಾಜದ ಮುಖಂಡರು ಸನ್ಮಾನಿಸಿ ಗೌರವಿಸಿದರು.ಗೌರವ ಸನ್ಮಾನ ಸ್ವೀಕರಿಸಿದ ನೂತನ ಅಧ್ಯಕ್ಷ ಸುರೇಶ ಸಜ್ಜನ್ ಮಾತನಾಡಿ,ಇದೇ ಮೋದಲಬಾರಿ ನಿರ್ದೇಶಕರ ಸ್ಥಾನಗಳಿಗೆ ಚುನಾವಣೆ ನಡೆದಿದ್ದು ನಮ್ಮ ಪ್ಯಾನಲ್‌ನ ಎಲ್ಲಾ ಸದಸ್ಯರನ್ನು ಚುನಾಯಿಸಿದ ಎಲ್ಲಾ ಷೇರುಧಾರರಿಗೆ ಧನ್ಯವಾದ ಸಲ್ಲಿಸಿದರು.
ಅಲ್ಲದೆ ತಮ್ಮ ಅಧ್ಯಕ್ಷತೆಯ ಹತ್ತು ವರ್ಷದಲ್ಲಿ ಸಂಘದಲ್ಲಿನ ಏಳುಬೀಳುಗಳ ಬಗ್ಗೆ ಮಾತನಾಡಿ,ಮುಂಬರುವ ದಿನಗಳಲ್ಲಿ ನಮ್ಮ ಸಹಕಾರ ಸಂಘದಿಂದ ಇ ಟಿಕೇಟ್ ಬುಕಿಂಗ್ ಸೆಂಟರ್ ಆರಂಭಿಸುವ ಯೋಜನೆ ಹಾಕಿಕೊಳ್ಳಲಾಗಿದೆ.ಮುಂದಿನ ಐದು ವರ್ಷಗಳಲ್ಲಿ ಯಾದಗಿರಿ ಜಿಲ್ಲಾ ಕೇಂದ್ರ ಸೇರಿದಂತೆ ಸಂಘದ ಇನ್ನೂ ೨೫ ಶಾಖೆಗಳನ್ನು ತೆರೆಯುವ ಗುರಿ ಹೊಂದಲಾಗಿದೆ ಎಂದರು.ಇದೇ ಸಂದರ್ಭದಲ್ಲಿ ನೂತನ ನಿರ್ದೇಶಕರಾದ ಹೆಚ್.ಸಿ.ಪಾಟೀಲ,ಸೂಗುರೇಶ ವಾರದ,ಜಯಲಲಿತ ಪಾಟೀಲ ಹಾಗು ಮುಖಂಡರಾದ ಬಸವರಾಜಪ್ಪ ನಿಷ್ಠಿ ದೇಶಮುಖ,ವೀರಪ್ಪ ಆವಂಟಿ ಇತರರು ಮಾತನಾಡಿದರು.
ಈ ಸಂದರ್ಭದಲ್ಲಿ ನೂತನ ನಿರ್ದೇಶಕರಾದ ವಿಶ್ವರಾಧ್ಯ ಸತ್ಯಂಪೇಟೆ,ರವೀಂದ್ರ ಅಂಗಡಿ,ವಿಜಯಕುಮಾರ ಬಂಡೊಳ್ಳಿ,ನಂದಯ್ಯ ಮಠಪತಿ,ಶರಣಪ್ಪ ಕಳ್ಳಿಮನಿ,ಶ್ವೇತಾ ಎಂ.ಗುಳಗಿ,ಜಗದೀಶ ಪಾಟೀಲ,ದತ್ತಾತ್ರೇಯ ಗುತ್ತೇದಾರ ಹಾಗು ಮುಖಂಡರಾದ ಜಿ.ಎಸ್.ಪಾಟೀಲ,ಶಾಂತರಾಜ ಬಾರಿ,ವಿರೇಶ ದೇಶಮುಖ,ವಿನೋದ ಆವಂಟಿ, ಆರ್.ಎಂ.ರೇವಡಿ,ಹೊನ್ನಪ್ಪ ದೇಸಾಯಿ,ಪ್ರಕಾಶ ಕುಂಬಾರ,ಶರಣು ಅರಕೇರಿ, ವಿ.ಎಲ್.ಹಿರೇಮಠ, ಎಸ್.ಎಂ. ಕನಕರಡ್ಡಿ, ಸಂಗನಗೌಡ ವಜ್ಜಲ್,ಪ್ರಕಾಶ ಅಂಗಡಿ,ಮಂಜುನಾಥ ಜಾಲಹಳ್ಳಿ, ಶಿವಶರಣಪ್ಪ ಹೆಡಗಿನಾಳ,ಬಸವರಾಜ ಬೂದಿಹಾಳ,ಚಂದ್ರು ಡೊಣೂರ,ಬಸವರಾಜ ಹೂಗಾರ,ಶರಣಪ್ಪ ಕಲಕೇರಿ,ವೀರಭದ್ರಪ್ಪ ಕುಂಬಾರ,ಆದಪ್ಪ ಕುಂಬಾರ,ಅಮರೇಶ ಕುಂಬಾರ,ದೇವಿಂದ್ರಪ್ಪ ಕರಡಕಲ್,ಸಿದ್ದನಗೌಡ ಹೆಬ್ಬಾಳ,ಬಸಯ್ಯಸ್ವಾಮಿ ಬೋನಾಳ,ಮಂಜುನಾಥ ಸ್ವಾಮಿ ಸೇರಿದಂತೆ ಬ್ಯಾಂಕ್‌ನ ಎಲ್ಲಾ ಸಿಬ್ಬಂದಿಗಳು ಮತ್ತಿತರರಿದ್ದರು.
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…
ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…