ಬಿಸಿ ಬಿಸಿ ಸುದ್ದಿ

ಶಹಾಬಾದನಲ್ಲಿ ಅಕ್ರಮ ಮಂದಿರ-ಮಸೀದಿಗಳು ತೆರವು

ಶಹಾಬಾದ: ನಗರದ ವಿವಿಧ ಕಡೆಗಳಲ್ಲಿ ಅಕ್ರಮವಾಗಿ ನಿರ್ಮಾಣವಾದ ಗುಡಿ-ಗುಂಡಾರಗಳು ಮತ್ತು ಮಸೀದಿಗಳನ್ನು ನಗರಸಭೆಯ ವತಿಯಿಂದ ಸೋಮವಾರ ಬೆಳಿಗ್ಗೆಯಿಂದಲೇ ತೆರವು ಕಾರ್ಯಾಚರಣೆ ಪೊಲೀಸ್ ಬಂದೋಬಸ್ತನಲ್ಲಿ ನಡುವೆ ಭರದಿಂದ ನಡೆಯಿತು.

ತಹಸೀಲ್ದಾರ ಸುರೇಶ ವರ್ಮಾ ಅಧ್ಯಕ್ಷತೆಯಲ್ಲಿ ನಗರಸಭೆಯ ಪೌರಾಯುಕ್ತ ವೆಂಕಟೇಶ ಅವರ ಪಿಐ ಅಮರೇಶ.ಬಿ, ನೇತೃತ್ವದಲ್ಲಿ ೨ ಜೆಸಿಬಿ, ೪ ಟ್ರ್ಯಾಕ್ಟರ್‌ಗಳ ಮೂಲಕ ನಗರದ ಬಸವೇಶ್ವರ ಬಡಾವಣೆಯಲ್ಲಿರುವ ಅಕ್ರಮವಾಗಿ ಕಟ್ಟಲಾದ ಮಂದಿರಗಳಾದ ಯಲ್ಲಮ್ಮನ ಗುಡಿ, ಚೌಡಯ್ಯನ ಕಟ್ಟೆ, ಮಜೀದ್ ಗಳನ್ನು ತೆರವುಗೊಳಿಸಲಾಯಿತು.

ಸರ್ವೋಚ್ಛ ನ್ಯಾಯಾಲಯದ ಆದೇಶ ಮೇರೆಗೆ ಅಕ್ರಮ ಮಂದಿರ-ಮಸೀದಿಗಳನ್ನು ತೆರವುಗೊಳಿಸುತ್ತಿದ್ದೆವೆ.ಈಗಾಗಲೇ ಈ ಬಗ್ಗೆ ಧಾರ್ಮಿಕ ಮುಖಂಡರ ಜತೆ ಸಭೆ ನಡೆಸಿದ್ದೆವೆ.ಅವರು ಇದಕ್ಕೆ ಸಹಮತ ನೀಡಿ, ಕಾಲಾವಕಾಶ ನೀಡಿದ್ದರು. ಕಾಲಾವಕಾಶ ಮುಗಿದ ಬಳಿಕವೇ ತೆರವುಗೊಳಿಸಿದ್ದೆವೆ.ಇದಕ್ಕೆ ಸಾರ್ವಜನಿಕರು ಸಹಕಾರ ನೀಡಿದ್ದಾರೆ          – ವೆಂಕಟೇಶ ಪೌರಾಯುಕ್ತ ನಗರಸಭೆ ಶಹಾಬಾದ.

ಅಲ್ಲದೇ ವಾರ್ಡ ನಂ.೧೨ರಲ್ಲಿರುವ ಸಾರ್ವಜನಿಕ ಉದ್ಯಾನವನದಲ್ಲಿರುವ ನಾಗಲಿಂಗೇಶ್ವರ ಮಂದಿರವನ್ನು ತೆರವು ಮಾಡಲಾಯಿತು.ಅಲ್ಲದೇ ಹನುಮಾನ ನಗರದ ಮುಖ್ಯ ರಸ್ತೆಯಲ್ಲಿರುವ ನಾಗಪ್ಪನ ಕಟ್ಟೆಯನ್ನು ತೆರವುಗೊಳಿಸಲು ಮುಂದಾಗಿದ್ದಾರೆ. ತೆರವು ಕಾರ್ಯಾಚರಣೆಗೆ ಇಳಿದ ಅಧಿಕಾರಿಗಳು ಸರ್ವೋಚ್ಛ ನ್ಯಾಯಾಲಯದ ಆದೇಶ ಇರುವುದರಿಂದ ತೆರವು ಕಾರ್ಯಾಚರಣೆ ವೇಳೆ ಯಾರು ಅಡ್ಡಿಪಡಿಸುವುದು ಕಂಡು ಬಂದರೆ ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು. ಅಲ್ಲದೇ ನಿಮ್ಮ ಮಂದಿರಗಳನ್ನು ತೆರವುಗೊಳಿಸುವ ಮುನ್ನ ಧಾರ್ಮಿಕ ಪೂಜಾ ಕಾರ್ಯಗಳನ್ನು ಕೈಗೊಳ್ಳಬಹುದು.ಇಲ್ಲದಿದ್ದರೇ ನಾವೇ ತೆರವುಗೊಳಿಸಿ ತೆಗೆದುಕೊಂಡು ಹೋಗುತ್ತೆವೆ ಎಂದು ಅರಿವು ಮೂಡಿಸಿದರು. ಅದಕ್ಕೆ ವಿರೋಧ ಮಾಡದೇ ಸಾರ್ವಜನಿಕರು ಪೂಜೆ ಮಾಡಿ ಮೂರ್ತಿಗಳನ್ನು ತಮ್ಮ ಮನೆಗೆ ತೆಗೆದುಕೊಂಡು ಹೋದರು.

ಬಸವೇಶ್ವರ ನಗರದ ಮಸೀದಿ ತೆರವುಗೊಳಿಸುವ ಸಂದರ್ಭದಲ್ಲಿ ಜನರು ನಾವೇ ಸ್ವತಃ ಕಟ್ಟಡವನ್ನು ತೆಗೆಯುತ್ತೆವೆ ಎಂದು ಕಟ್ಟಡವನ್ನು ಅರ್ಧದಷ್ಟು ತೆಗೆದರು. ಅವರಿಂದ ಆಗದಿದ್ದಾಗ ಉಳಿದ ಕಟ್ಟಡವನ್ನು ನಗರಸಭೆಯಿಂದ ಜೆಸಿಬಿ ಮೂಲಕ ತೆರವು ಮಾಡಲಾಯಿತು. ಅಲ್ಲದೇ ರಸ್ತೆಯ ಮೇಲೆ ನಿರ್ಮಾಣವಾದ ಕಟ್ಟಡಗಳನ್ನು ಇದೇ ಸಂದರ್ಭದಲ್ಲಿ ತೆಗೆದು ಹಾಕಲಾಯಿತು.

ಈ ತೆರವು ಕಾರ್ಯಾಚರಣೆಯಿಂದ ಸಾರ್ವಜನಿಕರಿಂದ ಉತ್ತಮ ಪ್ರತಿಕ್ರಿಯೆ ಬಂದಿದೆ.ಅಲ್ಲದೇ ನಗರದಲ್ಲಿರುವ ಅಕ್ರಮ ಕಟ್ಟಡಗಳನ್ನು ತೆರವುಗೊಳಿಸುವ ಪ್ರಕ್ರಿಯೆ ಮುಂದುವರಿಯಲಿದೆ. ಕಂದಾಯ ಅಧಿಕಾರಿ ಸುನೀಲ, ಜೆಇ ಬಸವರಾಜ, ಆರೋಗ್ಯ ನಿರೀಕ್ಷಕ ಶಿವಕುಮಾರ ಹಾಗೂ ನಗರಸಭೆಯ ಸಿಬ್ಬಂದಿ ವರ್ಗದವರು ಇದ್ದರು.

emedialine

Recent Posts

ತೊಗರಿ ಬೆಳೆ‌ ಹಾನಿ ಪ್ರದೇಶ ವೀಕ್ಷಿಸಿದ ಶಾಸಕ ಅಲ್ಲಮಪ್ರಭು ಪಾಟೀಲ

ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…

8 hours ago

ಕಷ್ಟಗಳಿಗೆ ಕುಗ್ಗದೇ ಸವಾಲಾಗಿ ಸ್ವಿಕರಿಸಿ

ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…

8 hours ago

ಕಲಬುರಗಿ: ಹಾಸ್ಯ ಕಲಾವಿದ ರೇವಣಸಿದ್ಧ ಸ್ವಾಮಿ ದಂಪತಿಗೆ ಗೆಳೆಯರ ಬಳಗದಿಂದ ಸತ್ಕರಿಸಲಾಯಿತು.

ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…

8 hours ago

ಸಾವಿರ ಸೀರೆ ವಿತರಿಸಿ ಸಚಿವ ಪ್ರಿಯಾಂಕ್ ಜನ್ಮದಿನ ಆಚರಣೆ

  ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…

1 day ago

ಮೂರೂ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು: ಕಾರ್ಯಕರ್ತರಿಂದ ವಿಜಯೋತ್ಸವ

ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…

1 day ago

ಸಿದ್ದಸಿರಿ ಹೋರಾಟ ಪ್ರಾಯೋಜಿತ: ಶರಣು ಪಾಟೀಲ್

ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…

1 day ago