ಬಿಸಿ ಬಿಸಿ ಸುದ್ದಿ

ಶಕ್ತಿನಗರದ ಉದ್ಯಾನವನದಲ್ಲಿ ತ್ಯಾಜ್ಯ ಹಾಕಿದ ಪಾಲಿಕೆ

ಕಲಬುರಗಿ: ಸ್ವಚ್ಛಗೊಳಿಸಿದ ಸಾರ್ವಜನಿಕ ಉದ್ಯಾನವನದಲ್ಲಿಯೇ ಮಹಾನಗರ ಪಾಲಿಕೆಯವರೇ ತ್ಯಾಜ್ಯವನ್ನು ಹಾಕಿ ಹಾಳು ಮಾಡಿದ ಘಟನೆ ನಗರದ ಶಕ್ತಿನಗರದಲ್ಲಿ ವರದಿಯಾಗಿದೆ.

ಶಕ್ತಿನಗರ್ ಬಡಾವಣೆಯ ರೈಲು ಹಳಿ ಮಾರ್ಗದ ಪಕ್ಕದಲ್ಲಿ ಮದರ್ ತೆರೆಸ್ಸಾ ಶಾಲೆಗೆ ಹೋಗುವ ರಸ್ತೆಯ ಪಕ್ಕದಲ್ಲಿಯೇ ಒಂದು ಸಾರ್ವಜನಿಕ ಉದ್ಯಾನವನ ಇದ್ದು, ಇತ್ತೀಚೆಗಷ್ಟೇ ಕಲಬುರ್ಗಿ ಸ್ಮಾರ್ಟ್ ಸಿಟಿ ಕ್ಲಬ್ ಪ್ರಯತ್ನದಿಂದ ಹಾಗೂ ಪಾಲಿಕೆಯ ಪರಿಸರ ಅಭಿಯಂತರೆ ಸುಷ್ಮಾ ಸಾಗರ್ ಅವರ ಇಚ್ಛಾಶಕ್ತಿಯಿಂದ ಗಿಡಗಂಟಿಗಳಿಂದ ಹಾಳಾಗಿ ಹೋಗಿದ್ದ ಸಾರ್ವಜನಿಕ ಉದ್ಯಾನವನ್ನು ಸ್ವಚ್ಛಗೊಳಿಸುವಲ್ಲಿ ಯಶಸ್ವಿಯಾಗಿದ್ದರು.

ಸ್ವಚ್ಛವಾದ ಉದ್ಯಾನವನದಲ್ಲಿ ಸ್ಮಾರ್ಟ್ ಸಿಟಿ ಕ್ಲಬ್ ಅಧ್ಯಕ್ಷ ಪಿ.ಎಸ್. ಮಹಾಗಾಂವಕರ್ ಅವರ ನೇತೃತ್ವದಲ್ಲಿ ಕ್ಲಬ್ ಸದಸ್ಯರು ಕೆಲ ಗಿಡಗಳನ್ನು ಸಹ ನೆಟ್ಟು ಪೋಷಿಸುತ್ತಿದ್ದರು. ಕಳೆದ ಎರಡ್ಮೂರು ದಿನಗಳ ಹಿಂದೆ ತ್ಯಾಜ್ಯವನ್ನು ಪಾಲಿಕೆಯ ವಾಹನದಲ್ಲಿಯೇ ತಂದು ಸ್ವಚ್ಛಗೊಳಿಸಿದ ಉದ್ಯಾನವನದಲ್ಲಿನ ಮೂರ‍್ನಾಲ್ಕು ಸ್ಥಳಗಳಲ್ಲಿ ವಿಲೇವಾರಿ ಮಾಡಿ ಹೋಗಿದ್ದಾರೆ. ಇದರಿಂದ ಮತ್ತೆ ಉದ್ಯಾನವನ ಹಾಳಾಗಿದೆ ಎಂದು ಕ್ಲಬ್ ಪ್ರಧಾನ ಕಾರ್ಯದರ್ಶಿ ಹಾಗೂ ನ್ಯಾಯವಾದಿ ರಾಜಶೇಖರ್ ಡೊಂಗರಗಾಂವ್ ಅವರು ಭಾನುವಾರ ಸ್ಥಳಕ್ಕೆ ಭೇಟಿ ನೀಡಿ ಕಳವಳ ವ್ಯಕ್ತಪಡಿಸಿದರು.
ಯಾವುದೇ ತ್ಯಾಜ್ಯವಿದ್ದರೂ ಅದನ್ನು ನಿಗದಿಪಡಿಸಿದ ಸ್ಥಳದಲ್ಲಿಯೇ ವಿಲೇವಾರಿ ಮಾಡಬೇಕು. ಬಯಲು ಸ್ಥಳದಲ್ಲಿ ಎಲ್ಲೆಂದರಲ್ಲಿ ಕಸ ಸುರಿಯುವುದು ಅಪರಾಧ ಎಂದು ಸ್ವತ: ಪಾಲಿಕೆಯೇ ಎಚ್ಚರಿಸಿದರೂ ಸಹ ಪಾಲಿಕೆಯ ಸಿಬ್ಬಂದಿಗಳೇ ಉದ್ಯಾನವನದಲ್ಲಿ ತ್ಯಾಜ್ಯ ಸುರಿಯುವ ಮೂಲಕ ತನ್ನ ಕಾನೂನು ತಾನೇ ಉಲ್ಲಂಘಿಸಿದಂತಾಗಿದೆ.

ಚೇತನ್ ಎಂಬುವವರು ಪಾಲಿಕೆಯ ಪರಿಸರ ಅಭಿಯಂತರರಾಗಿ ಬಂದ ಮೇಲೆ ಶಾಂತಿನಗರ ಹಾಗೂ ಸುತ್ತಮುತ್ತಲಿನ ಬಡಾವಣೆಗಳಲ್ಲಿ ನಡೆಯುತ್ತಿದ್ದ ಸ್ವಚ್ಛತಾ ಕಾರ್ಯಗಳು ಸ್ಥಗಿತಗೊಡಿವೆ. ಯಾವುದೇ ಕೆಲಸ ಕಾರ್ಯಗಳು ಆಗುತ್ತಿಲ್ಲ. ಎಲ್ಲೆಂದರಲ್ಲಿ ಕಸ ಸುರಿಯುತ್ತಿರುವುದರಿಂದ ಇಡೀ ಪ್ರದೇಶಗಳು ಗಬ್ಬು ನಾರುವಂತಾಗಿದೆ ಎಂದು ಅವರು ಕಳವಳ ವ್ಯಕ್ತಪಡಿಸಿದರು.

ಪಾಲಿಕೆಯ ಸಿಬ್ಬಂದಿಯವರೇ ಉದ್ಯಾನವನದಲ್ಲಿ ತ್ಯಾಜ್ಯ ತಂದು ಹಾಕಿದ್ದರ ಕುರಿತು ಪಾಲಿಕೆಯ ಆಯುಕ್ತ ರಾಹುಲ್ ಪಾಂಡ್ವೆ ಅವರು ಸೂಕ್ತ ಕ್ರಮ ಕೈಗೊಳ್ಳಬೇಕು. ಹಾಕಿರುವ ತ್ಯಾಜ್ಯವನ್ನು ಸೂಕ್ತ ಸ್ಥಳದಲ್ಲಿ ವಿಲೇವಾರಿ ಮಾಡಬೇಕು. ಮುಂದೆ ಹೀಗಾಗದಂತೆ ಕ್ರಮ ಕೈಗೊಳ್ಳಬೇಕು ಎಂದು ಡೊಂಗರಗಾಂವ್ ಅವರು ಆಗ್ರಹಿಸಿದರು.

ಈ ಮಧ್ಯೆ, ಪಾಲಿಕೆಯ ಸಿಬ್ಬಂದಿಯೇ ಉದ್ಯಾನವನದಲ್ಲಿ ಕಸ ಹಾಕಿ, ನೆಟ್ಟ ಗಿಡಕ್ಕೆ ಹಾನಿಯುಂಟು ಮಾಡಿದ್ದಕ್ಕಾಗಿ ಪಾಲಿಕೆ ಅಭಿಯಂತರ ಚೇತನ್ ವಿರುದ್ಧ ಪಾಲಿಕೆ ಆಯುಕ್ತರಿಗೆ ದೂರು ಸಲ್ಲಿಸುವ ಕುರಿತು ಕ್ಲಬ್ ಸದಸ್ಯರು ಆಗ್ರಹಿಸಿದ್ದಾರೆ. ಒಂದು ವೇಳೆ ಆಯುಕ್ತರು ಕ್ರಮ ಕೈಗೊಳ್ಳದೇ ಇದ್ದರೆ ಸಂಬಂಧಿಸಿದ ಪೋಲಿಸ್ ಠಾಣೆಯಲ್ಲಿ ಚೇತನ್ ವಿರುದ್ಧ ಮೊಕದ್ದಮೆ ದಾಖಲಿಸುವ ಕುರಿತು ಕ್ಲಬ್‌ನಲ್ಲಿ ಚರ್ಚೆ ಆಗಿದೆ. ಆದಾಗ್ಯೂ, ಕ್ಲಬ್‌ನ ಶ್ರೀಮತಿ ನಳಿನಿ ಪಿ. ಮಹಾಗಾಂವಕರ್ ಅವರು ಚೇತನ್ ಅವರಿಗೆ ಸಮಸ್ಯೆ ಪರಿಹಾರಕ್ಕೆ ಇನ್ನೊಮ್ಮೆ ಮನವರಿಕೆ ಮಾಡಿಕೊಡುವ ಭರವಸೆ ಕೊಟ್ಟಿದ್ದಾರೆ.

emedialine

Recent Posts

ತೊಗರಿ ಬೆಳೆ‌ ಹಾನಿ ಪ್ರದೇಶ ವೀಕ್ಷಿಸಿದ ಶಾಸಕ ಅಲ್ಲಮಪ್ರಭು ಪಾಟೀಲ

ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…

1 hour ago

ಕಷ್ಟಗಳಿಗೆ ಕುಗ್ಗದೇ ಸವಾಲಾಗಿ ಸ್ವಿಕರಿಸಿ

ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…

1 hour ago

ಕಲಬುರಗಿ: ಹಾಸ್ಯ ಕಲಾವಿದ ರೇವಣಸಿದ್ಧ ಸ್ವಾಮಿ ದಂಪತಿಗೆ ಗೆಳೆಯರ ಬಳಗದಿಂದ ಸತ್ಕರಿಸಲಾಯಿತು.

ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…

1 hour ago

ಸಾವಿರ ಸೀರೆ ವಿತರಿಸಿ ಸಚಿವ ಪ್ರಿಯಾಂಕ್ ಜನ್ಮದಿನ ಆಚರಣೆ

  ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…

18 hours ago

ಮೂರೂ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು: ಕಾರ್ಯಕರ್ತರಿಂದ ವಿಜಯೋತ್ಸವ

ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…

20 hours ago

ಸಿದ್ದಸಿರಿ ಹೋರಾಟ ಪ್ರಾಯೋಜಿತ: ಶರಣು ಪಾಟೀಲ್

ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…

1 day ago