ಬಿಸಿ ಬಿಸಿ ಸುದ್ದಿ

ಅವ್ವ ಪ್ರಶಸ್ತಿ ಪ್ರದಾನ : ಹಿರಿಯ ಸಮಾಜ ಸೇವಕಿ ಚನ್ನಮ್ಮ ಹಳ್ಳಿಕೇರಿ ಅಭಿಮತ

ಕಲಬುರಗಿ: ಈ ಭಾಗದ ಮಹಿಳೆಯರು ಶೈಕ್ಷಣಿಕವಾಗಿ ಮುಂದೆ ಬರಲು ಪೂಜ್ಯ ಗೋದುತಾಯಿ ಅವ್ವಾಜೀಯವರೇ ಕಾರಣಿಭೂತರು ಎಂದು ಹಿರಿಯ ಸಮಾಜಿ ಸೇವಕಿ ಚನ್ನಮ್ಮ ಹಳ್ಳಿಕೇರಿ ಅಭಿಪ್ರಾಯಪಟ್ಟರು.

ನಗರದ ಗೋದುತಾಯಿ ದೊಡ್ಡಪ್ಪ ಅಪ್ಪ ಕಲಾ ಮತ್ತು ವಾಣಿಜ್ಯ ಪದವಿ ಮಹಿಳಾ ಮಹಾವಿದ್ಯಾಲಯದಲ್ಲಿ ಪೂಜ್ಯ ಗೋದುತಾಯಿ ಅವ್ವಾಜೀಯವರ ೪೯ನೇ ಪುಣ್ಯಸ್ಮರಣೋತ್ಸವ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಮತ್ತು ಅವ್ವ ಪ್ರಶಸ್ತಿ ಸ್ವೀಕರಿಸಿ ಮಾತನಾಡುತ್ತಾ, ಗೋದುತಾಯಿ ಅವ್ವ ಅವರ ಬಗ್ಗೆ ನಾನು ತಿಳಿದುಕೊಂಡಿದ್ದೇನೆ. ಪೂಜ್ಯ ದೊಡ್ಡಪ್ಪ ಅಪ್ಪಾ ಅವರು ಮಹಿಳೆಯರಿಗಾಗಿ ಶಾಲೆ ಆರಂಭಿಸಿರುವುದರ ಹಿಂದೆ ಗೋದುತಾಯಿ ಅವ್ವ ಅವರ ಪ್ರೇರಣೆ ಇದೆ ಎಂದು ತಿಳಿಯಿತು. ಅವರೊಬ್ಬ ಶ್ರೇಷ್ಠ ದಾಸೋಹಿಗಳಾಗಿದ್ದರು. ಶರಣಬಸವೇಶ್ವರ ಸಂಸ್ಥಾನ ದಾಸೋಹಕ್ಕೆ ಹೆಸರುವಾಸಿಯಾಗಿದ್ದು, ಅದರಲ್ಲಿ ಅವ್ವ ಅವರ ಕೊಡುಗೆ ಬಹಳಷ್ಟಿದೆ. ಅವರ ಅಮೂಲ್ಯವಾದ ಜೀವನ ಈಗಿನ ವಿದ್ಯಾರ್ಥಿಗಳಿಗೆ ಮಾದರಿಯಾಗಿದೆ ಎಂದರು. ಪೂಜ್ಯ ಶರಣಬಸವಪ್ಪ ಅಪ್ಪಾ ಅವರು ಈ ಭಾಗದ ವಿದ್ಯಾರ್ಥಿಗಳಿಗೆ ಉತ್ಕೃಷ್ಟ ಶಿಕ್ಷಣ ನೀಡುತ್ತಿರುವುದು ಈ ಭಾಗದವರು ಹೆಮ್ಮೆ ಪಡುವಂತಹದ್ದು ಎಂದರು.

ಮುಂದುವರೆದು ಮಾತನಾಡುತ್ತಾ, ಮಹಾತ್ಮ ಗಾಂಧಿ ಮತ್ತು ವಿನೋಬಾ ಭಾವೆಯವರ ಕುರಿತು ಹಲವಾರು ವಿಷಯಗಳನ್ನು ಹಂಚಿಕೊಂಡರು. ಅವರ ಪರಿಶ್ರಮದ ಜೀವನ ಕುರಿತು ಹೇಳುತಾ, ಎಲ್ಲಾ ಸಾಧನೆಗಳ ಹಿಂದೆ ಪರಿಶ್ರಮವೇ ಮುಖ್ಯವಾಗಿದೆ. ಪರಿಶ್ರಮದ ಇಲ್ಲದ ಜೀವನ ಸಾಧ್ಯವಿಲ್ಲ. ಕೈ ಕೆಸರಾದರೆ ಬಾಯಿ ಮೊಸರಂತೆ ವಿದ್ಯಾರ್ಥಿಗಳು ಓದಿನ ಜತೆಗೆ ಮನೆಯ ಕೆಲಸಗಳು ಮಾಡಬೇಕು ಅಂದಾಗ ಬದುಕು ಸುಂದರವಾಗುತ್ತದೆ ಆರೋಗ್ಯವಾಗಿರಲು ಸಾಧ್ಯವಾಗುತ್ತದೆ. ನಮ್ಮ ಸುತ್ತಮುತ್ತಲಿನ ಪ್ರದೇಶವನ್ನು ಸದಾ ಸ್ವಚ್ಛವಾಗಿಡಲು ಪ್ರಯತ್ನಿಸಿ ಅದರಿಂದ ಅನೇಕ ಲಾಭಗಳಿವೆ ಎಂದರು. ಸಾವಲಂಬಿಗಳಾಗಿ, ಪರಾವಲಂಬಿಗಳಾಗಬೇಡಿ ಎಂದು ಸಲಹೆ ನೀಡಿದರು.

ಕಾರ್ಯಕ್ರಮದಲ್ಲಿ ಅತಿಥಿಗಳಾಗಿದ್ದ ಕಲಬುರಗಿ ಬಸವ ಸಮಿತಿ ಅಧ್ಯಕ್ಷೆ ಡಾ.ವಿಲಾಸವತಿ ಖೂಬಾ ಅವರು ಮಾತನಾಡಿ, ಗೋದುತಾಯಿ ಅವ್ವಾ ಅವರು ಕಾಯಕ ದಾಸೋಹಕ್ಕೆ ತಮ್ಮ ಜೀವನ ಮುಡುಪಾಗಿಟ್ಟಿದ್ದರು. ದಾಸೋಹಕ್ಕೆ ಬಂದ ಪ್ರತಿಯೊಬ್ಬರನ್ನು ಬಹಳ ಪ್ರೀತಿಯಿಂದ ಕಾಣುತ್ತಿದ್ದರು. ಅವರನ್ನು ತಾವು ನೋಡಿದ ಮತ್ತು ಅವರ ಸರಳ ಜೀವನವನ್ನು ನೆನಪಿಸಿಕೊಂಡರು.

ಇನ್ನೊರ್ವ ಅತಿಥಿ ಸಮಾಜ ಸೇವಕಿ ಶ್ರೀಮತಿ ಸಂತೋಷಿ ರಾಜಕುಮಾತ ತೇಲ್ಕೂರ ಅವರು ಮಾತನಾಡಿ, ಗೋದುತಾಯಿ ಅವ್ವಾ ಅವರ ಕುರಿತು ಏಳು ದಿನಗಳವರೆಗೆ ವಿವಿಧ ಕಾರ್ಯಕ್ರಮ ಹಮ್ಮಿಕೊಂಡಿರುವುದು ಶ್ಲಾಘನೀಯವಾಗಿದೆ. ಅವರು ತೋರಿದ ದಾರಿಗೆ ನಾವೆಲ್ಲರೂ ಹೋಗಬೇಕಾಗಿದೆ. ಮಹಿಳೆಯರು ತಾವೂ ಯಾವುದರಲ್ಲಿ ಕಡಿಮೆ ಇಲ್ಲ ಎಂದು ತೋರಿಸುತ್ತಿದ್ದಾರೆ. ಹೆಣ್ಣ ಮನಸ್ಸು ಮಾಡಿದರೆ ಜಗತ್ತೇ ಗೆಲ್ಲಬಹುದು ಎಂದು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಪ್ರಾಚಾರ್ಯೆ ಡಾ.ನೀಲಾಂಬಿಕಾ ಶೇರಿಕಾರ ಮಾತನಾಡಿ, ಗೋದುತಾಯಿ ಅವ್ವ ಅವರ ಹೆಸರಿನ ಮೇಲೆ ಪೂಜ್ಯ ಅಪ್ಪಾಜೀಯವರು ಅನೇಕ ಶಾಲಾ ಕಾಲೇಜುಗಳನ್ನು ಮಹಿಳೆಯರಿಗಾಗಿ ಆರಂಭಿಸಿ ಈ ರೀತಿಯಾಗಿ ತಮ್ಮ ತಾಯಿಗೆ ಕೊಡುಗೆ ನೀಡಿದ್ದಾರೆ. ಇದರಿಂದ ಮಹಿಳೆಯರು ಉನ್ನತ ಮಟ್ಟದಲ್ಲಿ ಗುರುತಿಸುವಂತಾಗುತ್ತಿದೆ. ಅವರ ಹೆಸರಿನ ಅವ್ವ ಪ್ರಶಸ್ತಿಗೆ ಶ್ರೀಮತಿ ಚೆನ್ನಮ್ಮ ಹಳ್ಳಿಕೇರಿ ಸಮರ್ಥರು ಹೇಳಿದರು. ಶರಣ ಸಂಸ್ಥಾನದ ಪೂಜ್ಯ ನೀಲಮ್ಮ ತಾಯಿ, ಪೂಜ್ಯ ಪಂಚಮ್ಮ ತಾಯಿ, ಶ್ರೀ ಗಂಗಾಪರಮೇಶ್ವರಿ ಶಿಕ್ಷಣ ಸಂಸ್ಥೆಯ ಅಧ್ಯಕ್ಷೆ ಶ್ರೀಮತಿ ಅಮರೇಶ್ವರಿ ಬಾಬುರಾವ ಚಿಂಚನ್ಸೂರ, ಮಹಾವಿದ್ಯಾಲಯದ ವಿದ್ಯಾರ್ಥಿ ಕಲ್ಯಾಣಾಧಿಕಾರಿ ಡಾ.ಶಾಂತಲಾ ನಿಷ್ಠಿ, ಐಕ್ಯೂಎಸಿ ಸಂಯೋಜಕಿ ಡಾ.ಇಂದಿರಾ ಶೇಟಕಾರ, ವಿದ್ಯಾರ್ಥಿ ಸಂಘದ ಕು. ಗೀತಾ ಮತ್ತು ಕು. ರೇಣುಕಾ ವೇದಿಕೆಯಲ್ಲಿದ್ದರು.

ಪ್ರೊ. ಜಾನಕಿ ಹೊಸೂರ ಸ್ವಾಗತ ಮತ್ತು ಪ್ರಾಸ್ತಾವಿಕ ಮಾತನಾಡಿದರು. ಡಾ.ಸೀಮಾ ಪಾಟೀಲ ನಿರೂಪಿಸಿದರು. ಡಾ.ಇಂದಿರಾ ಶೇಟಕಾರ ವಂದಿಸಿದರು. ಪ್ರೊ. ರೇವಯ್ಯ ವಸ್ತ್ರದಮಠ ಮತ್ತು ವಿದ್ಯಾರ್ಥಿನಿಯರು ಪ್ರಾರ್ಥಿಸಿದರು.
ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಶಾಲಾ ಕಾಲೇಜುಗಳ ಪ್ರಾಂಶುಪಾಲರು, ಪ್ರಾಧ್ಯಾಪಕರು ಮತ್ತು ಮಹಾವಿದ್ಯಾಲಯದ ವಿದ್ಯಾರ್ಥಿನಿಯರು ಉಪಸ್ಥಿತರಿದ್ದರು.

emedialine

Recent Posts

ಮಹಿಳಾ ಸಹಭಾಗಿತ್ವ ಇಲ್ಲದೆ ದೇಶದ ಅಭಿವೃದ್ಧಿ ಅಸಾಧ್ಯ: ಮಾತೋಶ್ರೀ ಡಾ. ಅವ್ವಾಜಿ

ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…

2 hours ago

ತೊಗರಿ ಬೆಳೆ‌ ಹಾನಿ ಪ್ರದೇಶ ವೀಕ್ಷಿಸಿದ ಶಾಸಕ ಅಲ್ಲಮಪ್ರಭು ಪಾಟೀಲ

ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…

12 hours ago

ಕಷ್ಟಗಳಿಗೆ ಕುಗ್ಗದೇ ಸವಾಲಾಗಿ ಸ್ವಿಕರಿಸಿ

ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…

12 hours ago

ಕಲಬುರಗಿ: ಹಾಸ್ಯ ಕಲಾವಿದ ರೇವಣಸಿದ್ಧ ಸ್ವಾಮಿ ದಂಪತಿಗೆ ಗೆಳೆಯರ ಬಳಗದಿಂದ ಸತ್ಕರಿಸಲಾಯಿತು.

ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…

12 hours ago

ಸಾವಿರ ಸೀರೆ ವಿತರಿಸಿ ಸಚಿವ ಪ್ರಿಯಾಂಕ್ ಜನ್ಮದಿನ ಆಚರಣೆ

  ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…

1 day ago

ಮೂರೂ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು: ಕಾರ್ಯಕರ್ತರಿಂದ ವಿಜಯೋತ್ಸವ

ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…

1 day ago