ಆಳಂದ: ಜನಪರ ಹಾಗೂ ಕನ್ನಡ ಪರ ಸದಾ ಉಸಿರಾಗಿಸಿ ಶ್ರಮಿಸುತ್ತಿರುವ ಕನ್ನಡಪರ ಸಂಘಟನೆಗಳ ಬಗ್ಗೆ ಅಪಪ್ರಚಾರ ಸಲ್ಲ. ನಾಡು ನುಡಿ ಸೇವೆಗೆ ಎಲ್ಲರೂ ನಿಲ್ಲಬೇಕಾಗಿದೆ ಎಂದು ಜಯ ಕರ್ನಾಟಕ ಸಂಘಟನೆ ತಾಲೂಕು ಅಧ್ಯಕ್ಷ ಬಸವರಾಜ ಎಸ್. ಕೋರಳ್ಳಿ ಅವರು ಹೇಳಿದರು.
ತಾಲೂಕಿನ ಬಬಲೇಶ್ವರ ಗ್ರಾಮದಲ್ಲಿ ಜಯ ಕರ್ನಾಟಕ ಸಂಘನೆಯ ಗ್ರಾಮ ಶಾಖೆ ಹಮ್ಮಿಕೊಂಡ ಗಡಿನಾಡು ಕನ್ನಡ ಉತ್ಸವ ಹಾಗೂ ಸಾಧಕರಿಗೆ ಸನ್ಮಾನ ಸಮಾರಂಭದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ಯಾರೊಬ್ಬರು ಮಾಡಿದ ತಪ್ಪಿಗೆ ಇಡೀ ಸಂಟನೆಗಳನ್ನು ಹೊಣೆಯಾಗಿಸುವುದು ಸರಿಯಲ್ಲ ಜನಧ್ವನಿಗಾಗಿ ಸಮಾಜ ಕಾರ್ಯಗಳಲ್ಲಿ ದುಡಿಯುವ ಯುವ ಕಾರ್ಯಕರ್ತರಿಗೆ ಸಹಿಸಿಕೊಳ್ಳದವರು ವಿನಹ ಕಾರಣ ಅಪಪ್ರಚಾರ ಹಾಗೂ ಕಿರುಕುಳ ನೀಡುವ ಬದಲು ಯುವಪಡೆಯನ್ನು ಒಳ್ಳೆಯ ಕಾರ್ಯಕ್ಕೆ ಬೆಂಬಲಿಸಬೇಕು ಎಂದು ಮನವಿ ಮಾಡಿದರು.
ತಾಲೂಕಿನಲ್ಲಿ ೧೧೦ ಜಯ ಕರ್ನಾಟಕ ಸಂಘಟನೆ ಸ್ಥಾಪಿಸಿ ಮೂಲೆ ಮೂಲೆಗಳಲ್ಲಿ ಜನಪರ ಮತ್ತು ಆಡಳಿತ್ಮಾತ್ಕಕ ಭ್ರಷ್ಟಚಾರ, ಅವ್ಯವಹಾರ ಮತ್ತು ಕಳಪೆ ಕಾಮಗಾರಿಗಳ ಬಹಿರಂಗ ಪಡಿಸಿ ಸರ್ಕಾರದ ಗಮನ ಸೆಳದು ಜನಪರ ಕಾರ್ಯವನ್ನು ಕೈಗೊಳ್ಳಲಾಗಿದೆ. ಶಾಲೆಗಳಲ್ಲಿ ಶಿಕ್ಷಕರ ಕೊರತೆ ಶಿಕ್ಷಕರ ಗೈರು ಹಾಜರಿಯನ್ನು ತಡೆದು ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಒದಗಿಸಲು ನಿರಂತರವಾಗಿ ಮೇಲಾಧಿಕಾರಿಗಳ ಮೇಲೆ ಒತ್ತಡ ಹಾಕಿದ್ದು, ಸಾಲದಕ್ಕೆ ಬೀದಿಗಳಿದು ಹೋರಾಟ ಮಾಡಲಾಗಿದೆ. ಇಷ್ಟಕ್ಕೆ ನಿಲ್ಲದೆ ಅನೇಕ ಸಮಸ್ಯೆಗಳ ಕುರಿತು ಹೋರಾಟ ರೂಪಿಸಲಾಗುತ್ತಿದೆ. ಇಂಥ ಹೋರಾಟಗಳಿಗೆ ಆಧಾರ ಸ್ತಂಭವಾಗಿರುವ ಕಾರ್ಯಕರ್ತರು ಪ್ರಮಾಣಿಕತೆ ಮೈಗೂಡಿಸಿಕೊಂಡು ಸಮಾಜ ಸೇವೆಯಲ್ಲಿ ತೊಡಗಬೇಕು ಎಂದು ಅವರು ಸಲಹೆ ನೀಡಿದರು.
ಮುಖ್ಯ ಅತಿಥಿಗಳಾಗಿ ಡಿಸಿಸಿ ಬ್ಯಾಂಕ್ ನಿರ್ದೇಶಕ ಅಶೋಕ ಸಾವಳೇಶ್ವರ ಮಾತನಾಡಿ, ಸಂಘಟನೆ ಇನ್ನಷ್ಟು ಬಲಗೊಳಿಸಿ ಅನ್ಯಾಯ ವಿರುದ್ಧ ಹೋರಾಟ ಮಾಡಬೇಕು ಎಂದು ಸಂಘಟನೆಯ ಕಾರ್ಯವನ್ನು ಬಣ್ಣಿಸಿದರು.
ಸಂಘಟನೆಯ ಜಿಲ್ಲಾ ಅಧ್ಯಕ್ಷ ಮಲ್ಲಿಕಾರ್ಜುನ ಸಾರವಾಡ, ಶಿಕ್ಷಕ ಕೆಂಚಪ್ಪ, ಮಾತನಾಡಿದರು.
ಇದೇ ವೇಳೆ ಉತ್ತಮ ಶಿಕ್ಷಕ ದತ್ತಪ್ಪ ಪೂಜಾರಿ, ಅವೀನಾಶ ಬಿರಾದಾರ, ಶಿಲ್ಪಾ, ಯಮುನಾಬಾಯಿ, ಕೆಂಚಪ್ಪ, ಶಿವರಾಜ, ಶ್ರೀಶೈಲ ಸನ್ಮಾನಿಸಲಾಯಿತು.
ಗ್ರಾಮದ ಹಿರಿಯ ಮುಖಂಡ ಅಣ್ಣಾರಾವ್ ಪಟ್ಟಣಕರ್, ಕರಬಸಪ್ಪ ಪಾಟೀಲ, ಶಾಂತಪ್ಪ ಅಫಚಂದೆ, ಎಸ್‌ಡಿಎಂಸಿ ಅಧ್ಯಕ್ಷ ರಾಜಧರ ಶೇಖ, ನಿಲಕಂಠ ಕಾಂಬಳೆ, ಸೈಫಾನ್ ಜಮಾದಾರ ಉಪಸ್ಥಿತರಿದ್ದರು. ಉಮೇಶ ಕಾಂಬಳೆ ನಿರೂಪಿಸಿದರು. ಅನೀಲ ಪಟ್ಟಣಕರ್ ಸ್ವಾಗತಿಸಿದರು. ಸೂರ್ಯಕಾಂತ ಪೂಜಾರಿ ವಂದಿಸಿದರು. ಶಾಲಾ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಜನಮನ ಸೆಳೆಯಿತು.
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…
ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…