ಬಿಸಿ ಬಿಸಿ ಸುದ್ದಿ

ಜೇವರ್ಗಿ: ಕಾಂಗ್ರೆಸ್ ಪ್ರಭಾವಿ ಮುಖಂಡನ ಪತ್ನಿಯಿಂದ 1 ಕೋಟಿ 10 ಲಕ್ಷ ಅವ್ಯವಹಾರ?

  • ಡಾ. ಅಶೋಕ ದೊಡ್ಮನಿ ಹಂಗರಗಾ(ಕೆ)

ಕಲಬುರಗಿ, ಜೇವರ್ಗಿ: ಕಾಂಗ್ರೆಸ್ ಪಕ್ಷದ ಪ್ರಭಾವಿ ಮುಖಂಡ ಬಾಪುಗೌಡ ಪಾಟೀಲ ಜವಳಗಾ ಹಂಗರಗಾ (ಬಿ) ಅವರ ಪತ್ನಿ ಬಸಮ್ಮ ಬಾಪುಗೌಡ ಪಾಟೀಲ ಮತ್ತು ಪಿಡಿಓ ನಾಗಪ್ಪ ಹಯ್ಯಾಳ ಸೇರಿ ಯಲಗೋಡ ಗ್ರಾಮ ಪಂಚಾಯತಿಯ ವಿವಿಧ ಖಾತೆಗಳಿಂದ ೧ ಕೋಟಿ ೧೦ ಲಕ್ಷಕ್ಕೂ ಅಧಿಕ ಹಣವನ್ನು ದುರುಪಯೋಗಪಡಿಸಿಕೊಂಡಿದ್ದು, ಪಿಡಿಓ ನಾಗಪ್ಪ ಹೈಯ್ಯಾಳ ವಿರುದ್ಧ ಯಡ್ರಾಮಿ ಪೊಲೀಸ್ ಠಾಣೆಯಲ್ಲಿ ೪೨೦ ಕೇಸ್ ದಾಖಲಾಗಿದೆ.

ಅಧ್ಯಕ್ಷೆಯಾದ ಬಸಮ್ಮ ಬಾಪುಗೌಡ ಜವಳಗಾ ಅವರು ಅಧ್ಯಕ್ಷೆ ಇದ್ದರೂ ಸಹ ಬಹುತೇಕ ಚಕ್ ಮೇಲೆ ಅವರ ಪತಿ ಬಾಪುಗೌಡ ಅವರ ಸಹಿ ಇದೆ ಎಂಬುದು ತಿಳಿದುಬಂದಿದೆ. ಪಿಡಿಓ ಮತ್ತು ಗ್ರಾ.ಪಂ.ದಲ್ಲಿ ಹಣವನ್ನು ದುರುಪಯೋಗಪಡಿಸಿಕೊಂಡ ಬಗ್ಗೆ ಸಿಇಓ ಅವರಿಗೆ ಗ್ರಾಮಸ್ಥರು ಅನೇಕ ಬಾರಿ ಮನವಿ ನೀಡಿ ತನಿಖೆಗೆ ಒತ್ತಾಯಿಸಿದ್ದರು. ಪ್ರಾಥಮಿಕ ತನಖೆಯಲ್ಲಿ ಹಣದ ಅವ್ಯವಹಾರ ಕಂಡು ಬಂದ ಹಿನ್ನೆಲೆಯಲ್ಲಿ ಆತನ ವಿರುದ್ಧ ಸಿಇಓ ಡಾ.ಪಿ.ರಾಜಾ ಫೆ. ೨೬ರಂದು ಕೇಸ್ ದಾಖಲಿಸುವಂತೆ ತಾಲೂಕ ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿಗೆ ಆದೇಶಿಸಿದ್ದರು. ಇದರನ್ವಯ ಯಡ್ರಾಮಿ ಠಾಣೆಯಲ್ಲಿ ಪಿಡಿಓ ವಿರುದ್ಧ ಐಪಿಸಿ ಸೆಕ್ಶನ್ ೪೨೦ ಮತ್ತು ೪೦೯ರ ಪ್ರಕಾರ ಕೇಸ್ ದಾಖಲಾಗಿದೆ.

ತಾಲೂಕಿನ ಯಲಗೋಡ, ಹಾಗೂ ಸಾತಖೇಡ ಎರಡು ಗ್ರಾಮ ಪಂಚಾಯತಿಗಳಲ್ಲಿ ಕೆಲಸ ನಿರ್ವಹಿಸುತ್ತಿರುವ ಸಮಯದಲ್ಲಿ ಪಿಡಿಒ ಮತ್ತು ಅಧ್ಯಕ್ಷರು ಸೇರಿ ಹಣದ ದುರುಪಯೋಗಪಡಿಸಿಕೊಂಡಿದ್ದಾರೆ. ಯಲಗೋಡ ಗ್ರಾಮದಲ್ಲಿ ಕೇಂದ್ರ ಸರಕಾರದ ಯೋಜನೆ ಅಡಿಯಲ್ಲಿ ಎರಡು ಅಂಗನವಾಡಿ ಕಟ್ಟಡದ ಅನುದಾನ ೩೬ಕ್ಷ ಹಾಗೂ ಸಾತಖೇಡ ಗ್ರಾಮದಲ್ಲಿ ಕೇಂದ್ರ ಸರಕಾರದ ಯೋಜನೆ ಅಡಿಯಲ್ಲಿ ಅಂಗನವಾಡಿ ಕಟ್ಟಡ ಅನುದಾನ ೧೮ಲಕ್ಷ ೧೪ನೇ ಹಣಕಾಸು ಯೋಜನೆಯಡಿಯಲ್ಲಿ ೨೨ಲಕ್ಷ ಸೇರಿದಂತೆ, ಕರವಸೂಲಿಯ ಹಣಸೇರಿದಂತೆ ಪಂಚಾಯಿತಿಗೆ ಜಮಾಗೊಂಡ ಎಲ್ಲ ಖಾತೆಗಳ ಹಣವನ್ನು ಸಹ ತಮ್ಮ ಪತ್ನಿಯ ಬಳ್ಳಾರಿ ಜಿಲ್ಲೆಯ ಬ್ಯಾಂಕ್‌ದಲ್ಲಿ ಡ್ರಾ ಮಾಡಿಕೊಳ್ಳಲಾಗಿದೆ. ಹೀಗೆ ಹಲವಾರು ಯೋಜನೆಗಳಲ್ಲಿ ೧ ಕೋಟಿ ೧೦ಲಕ್ಷ, ರೂಪಾಯಿಗೂ ಅಧಿಕ ಹಣವನ್ನು ಪಿಡಿಒ ಹೆಸರು ಮತ್ತು ತನ ತನ್ನ ಪತ್ನಿಯ ಹೆಸರಿನ ಮೇಲೆ ಅವ್ಯವಹಾರ ಮಾಡಿರುವ ಬಗ್ಗೆ ಪ್ರಾಥಮಿಕ ತನಿಖೆಯಲ್ಲಿ ಬಯಲಾಗಿದೆ.

ಯಲಗೋಡ, ಹಾಗೂ ಸಾತಖೇಡ ಎರಡು ಗ್ರಾಮ ಪಂಚಾಯತಿಗಳ ಬ್ಯಾಂಕ್ ಖಾತೆಗಳ ಹಣಕಾಸಿನ ವ್ಯವಹಾರವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲು ಸಂಬಂಧಿಸಿದ ಬ್ಯಾಂಕ್‌ಗಳ ವ್ಯವಸ್ಥಾಪಕರಿಗೆ ಪತ್ರ ಬರೆಯಲಾಗಿದ್ದು ಇದರ ಬಗ್ಗೆ ಸಂಪೂರ್ಣ ತನಿಖೆ ಮಾಡಿ ಮಾಹಿತಿ ನೀಡುವಂತೆ ತಾಲೂಕ ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಪತ್ರದಲ್ಲಿ ತಿಳಿಸಿಲಾಗಿದೆ.

ಪಂಚಾಯತ್ ಅಭಿವೃದ್ದಿ ಅಧಿಕಾರಿ ನಾಗಪ್ಪ ಹೈಯ್ಯಾಳ ಹಣಕಾಸಿನ ಅವ್ಯವಹಾರ ಮಾಡಿರುವುದು ಮೇಲ್ನೊಟಕ್ಕೆ ಕಂಡು ಬಂದಿದ್ದು, ಈ ಹಿನ್ನಲೆಯಲ್ಲಿ ನೌಕರರ ವಿರುದ್ದದ ಆರೋಪಗಳ ಕುರಿತು ಇಲಾಖಾ ವಿಚಾರಣೆ ಬಾಕಿ ಇಟ್ಟು ನೌಕರರನ್ನು ಈಗಾಗಲೆ ಅಮಾನತ್ತಿನಲ್ಲಿಡಲಾಗಿದೆ. ಯಲಗೋಡ ಗ್ರಾಮ ಪಂಚಾಯತದಲ್ಲಿ ನಡೆದ ಅವ್ಯವಹಾರವನ್ನು ದಾಖಲೆ ಸಮೇತ ಸಿಇಓ ಅವರಿಗೆ ನೀಡಿದ್ದೇವೆ. ಕೇಸ್ ದಾಖಲು ಮಾಡಿದರೆ ಸಾಲದು ಸರಕಾರದ ಹಣ ವಾಪಸ್ ಕಟ್ಟಿಸಿಕೊಳ್ಳಬೇಕು.

ಸರಕಾರಕ್ಕೆ ಆರ್ಥಿಕ ವಂಚನೆ ಮಾಡಿದ ಪಿಡಿಓ ಮತ್ತು ಅಧ್ಯಕ್ಷರ ಮೇಲೆ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಜಿಲ್ಲಾ ಉಪಾಧ್ಯಕ್ಷ ಮಹಾಂತಗೌಡ ನಂದಿಹಳ್ಳಿ ಒತ್ತಾಯಿಸಿದ್ದಾರೆ. ಸಹಿ ಮಾಡಿದ್ದು ನಿಜವಿದೆ. ಬಳ್ಳಾರಿ ಬ್ಯಾಂಕದಲ್ಲಿ ಪಿಡಿಓ ಹಣ ಡ್ರಾ ಮಾಡಿಕೊಂಡಿದ್ದು ಸಹ ಸತ್ಯವಿದೆ ಆದರೆ ಚಕ್ ಗೆ ಸಹಿ ಮಾಡುವಾಗ ಪಿಡಿಓ ನಮಗೆ ಹಣವನ್ನು ಸರಕಾರಕ್ಕೆ ಮರಳಿಸುತ್ತೇನೆ ಎಂದು ಹೇಳಿದ್ದಾರೆ-ಬಾಪುಗೌಡ ಜವಳಗಾ ಅಧ್ಯಕ್ಷೆಯ ಪತಿ.

emedialine

Recent Posts

ತೊಗರಿ ಬೆಳೆ‌ ಹಾನಿ ಪ್ರದೇಶ ವೀಕ್ಷಿಸಿದ ಶಾಸಕ ಅಲ್ಲಮಪ್ರಭು ಪಾಟೀಲ

ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…

9 hours ago

ಕಷ್ಟಗಳಿಗೆ ಕುಗ್ಗದೇ ಸವಾಲಾಗಿ ಸ್ವಿಕರಿಸಿ

ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…

10 hours ago

ಕಲಬುರಗಿ: ಹಾಸ್ಯ ಕಲಾವಿದ ರೇವಣಸಿದ್ಧ ಸ್ವಾಮಿ ದಂಪತಿಗೆ ಗೆಳೆಯರ ಬಳಗದಿಂದ ಸತ್ಕರಿಸಲಾಯಿತು.

ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…

10 hours ago

ಸಾವಿರ ಸೀರೆ ವಿತರಿಸಿ ಸಚಿವ ಪ್ರಿಯಾಂಕ್ ಜನ್ಮದಿನ ಆಚರಣೆ

  ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…

1 day ago

ಮೂರೂ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು: ಕಾರ್ಯಕರ್ತರಿಂದ ವಿಜಯೋತ್ಸವ

ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…

1 day ago

ಸಿದ್ದಸಿರಿ ಹೋರಾಟ ಪ್ರಾಯೋಜಿತ: ಶರಣು ಪಾಟೀಲ್

ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…

1 day ago