ಸುರಪುರ: ವಿಜ್ಞಾನದಲ್ಲಿ ಸೃಷ್ಟಿಗೆ ಸಂಬಂಧಿಸಿದಂತೆ ಅನೇಕ ಪ್ರಶ್ನೆಗಳನ್ನು ಹುಟ್ಟು ಹಾಕಿ ಅದಕ್ಕೆ ಉತ್ತರ ಕಂಡುಕೊಳ್ಳಲಾಗಿದ್ದು ಹೀಗಾಗಿ ವಿಜ್ಞಾನವು ಮೂಢನಂಬಿಕೆಯಿಂದ ನಾವುಗಳು ಹೊರಬಂದು ನಂಬಿಕೆಯ ಕಡೆಗೆ ನಮ್ಮನ್ನು ಬೆಳೆಸುತ್ತದೆ ಎಂದು ಹೇಳಿದ ಅವರು, ವಿಜ್ಞಾನವು ನಮ್ಮ ದಿನನಿತ್ಯದ ಜೀವನವನ್ನು ಸುಗಮವನ್ನಾಗಿ ಮಾಡುತ್ತದೆ ಎಂದು ಸ್ಥಳೀಯ ಶ್ರೀ ಪ್ರಭು ಕಾಲೇಜಿನ ಪ್ರಾಧ್ಯಾಪಕ ಹಾಗೂ ಭೌತಶಾಸ್ತ್ರ ವಿಭಾಗದ ಮುಖ್ಯಸ್ಥ ಮುನೀಷ್‌ಕುಮಾರ ಹೇಳಿದರು.
ನಗರದ ರಂಗಂಪೇಟೆಯ ಪ್ರಿಯದರ್ಶಿನಿ ಅನುದಾನಿತ ಪ್ರೌಢಶಾಲೆಯಲ್ಲಿ ಶುಕ್ರವಾರದಂದು ಹಮ್ಮಿಕೊಂಡಿದ್ದ ರಾಷ್ಟ್ರೀಯ ವಿಜ್ಞಾನ ದಿನಾಚರಣೆ ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸ ನೀಡಿ ಅವರು ಮಾತನಾಡಿ,ನಮಗೆ ನಿಲುಕಲಾರದ ವಿಷಯವನ್ನು ಧರ್ಮ ಹಾಗೂ ದೇವರು ಮೇಲೆ ಹಾಕುತ್ತೇವೆ ಇಂತಹ ಆದರೆ ಇಂತಹ ಅನೇಕ ವಿಷಯಗಳನ್ನು ವಿಜ್ಞಾನದ ಹಲವಾರು ಸಂಶೋಧನೆಗಳ ಮೂಲಕ ಸತ್ಯವನ್ನು ಸಾಧಿಸಿ ತೋರಿಸಲಾಗಿದೆ, ಗೆಲಿಲಿಯೋ, ಕೆಪ್ಲರ್, ಥಾಮಸ್ ಆಲ್ವಾ ಎಡಿಸನ್ ಮುಂತಾದ ವಿಜ್ಞಾನಿಗಳು ತಮ್ಮ ಸಂಶೋಧನೆಗಳ ಮೂಲಕ ಜಗತ್ತಿಗೆ ಅನೇಕ ವಿಷಯಗಳನ್ನು ತಿಳಿಸಿಕೊಟ್ಟರು.
ವಿದ್ಯಾರ್ಥಿಗಳು ವಿಜ್ಞಾನದ ಬಗ್ಗೆ ತಿಳಿದುಕೊಂಡು ಜಾಗೃತರಾಗಬೇಕು ಹಾಗೂ ವೈಜ್ಞಾನಿಕ ಮನೋಭಾವನೆ ಬೆಳೆಸಿಕೊಳ್ಳಬೇಕು ಎಂದು ಕಿವಿ ಮಾತು ಹೇಳಿದ ಅವರು, ನಮ್ಮ ದೇಶದ ಶ್ರೇಷ್ಠ ಭೌತಶಾಸ್ತ್ರಜ್ಞ ಡಾ.ಸಿ.ವಿ.ರಾಮನ್ ಅವರು ೧೯೩೦ರಲ್ಲಿ “ರಾಮನ್ ಪರಿಣಾಮ” ಕಂಡು ಹಿಡಿದರು ಹಾಗೂ ಈ ಸಂಶೋಧನೆಗೆ ಪ್ರಪಂಚದ ಅತ್ಯುನ್ನತ ಪ್ರಶಸ್ತಿ ನೋಬೆಲ್ ಪ್ರಶಸ್ತಿ ದೊರಕಿತು ಇವರ ಸ್ಮರಣಾರ್ಥ ಇಂದು ರಾಷ್ಟ್ರೀಯ ವಿಜ್ಞಾನ ದಿನಾಚರಣೆ ಆಚರಿಸಲಾಗುತ್ತಿದ್ದು ವಿದ್ಯಾರ್ಥಿಗಳು ಇಂತಹ ಶ್ರೇಷ್ಠ ವಿಜ್ಞಾನಿಗಳ ಆದರ್ಶ ವಿಚಾರಗಳನ್ನು ಅರಿತುಕೊಂಡು ಅಳವಡಿಸಿಕೊಳ್ಳಬೇಕು ಹಾಗೂ ವಿಜ್ಞಾನ ವಿಷಯದಲ್ಲಿ ಹೆಚ್ಚಿನ ಅಧ್ಯಯನ ಕೈಗೊಂಡು ದೇಶದ ಒಬ್ಬ ಶ್ರೇಷ್ಠ ವಿಜ್ಞಾನಿಯಾಗಿ ಹೊರ ಹೊಮ್ಮುವಂತಾಗಲಿ ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಶಾಲೆಯ ಮು.ಶಿ ದಿಗಂಬರ್ ಬಾಬರೆ ಮಾತನಾಡಿ ಶ್ರೇಷ್ಠ ವಿಜ್ಞಾನಿ ಡಾ.ಸಿ.ವಿ.ರಾಮನ್ ಅವರು ಜಗತ್ತಿಗೆ ತಿಳಿಸಿಕೊಟ್ಟ ರಾಮನ್ ಪರಿಣಾಮವು ಇಡೀ ಜಗತ್ತು ನಮ್ಮ ದೇಶದ ಕಡೆಗೆ ನೋಡುವಂತಾಯಿತು, ನಮ್ಮ ದಿನನಿತ್ಯದ ಅನೇಕ ವಿಷಯಗಳನ್ನು ವಿಜ್ಞಾನದ ಮೂಲಕ ನೋಡಿದಾಗ ಸತ್ಯದ ಅರಿವು ನಮಗೆ ಆಗುತ್ತದೆ ಎಂದರು. ಶಿಕ್ಷಕರಾದ ಗುಂಡಮ್ಮ ಕೊಡೆಕಲ್, ಮಲ್ಹಾರಿ ಉಪಸ್ಥಿತರಿದ್ದರು.
ಶಿಕ್ಷಕ ಧೀರೇಂದ್ರ ಕುಲಕರ್ಣಿ ಪ್ರಾಸ್ತಾವಿಕವಾಗಿ ಮಾತನಾಡಿ ನಿರೂಪಿಸಿದರು ಮಹಾಂತೇಶ ಜೇಟಗಿಮಠ ಸ್ವಾಗತಿಸಿದರು ಹಾಗೂ ಗಂಗಾಧರ ಪತ್ತಾರ ವಂದಿಸಿದರು.
ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…