ಕಲಬುರಗಿ: ಸಂಬಳ ಬಾಕಿ, ತುಟ್ಟಿ ಭತ್ಯೆ ಬಾಕಿ ಹಾಗೂ ನಿವೃತ್ತಿ ಗಳಿಕೆ ರಜೆ ನಗದೀಕಣ ಬಾಕಿ ಇನ್ನಿತರ ಹಲವು ಬೇಡಿಕೆಗಳ ಕುರಿತು ಖಾಸಗಿ ಅನುದಾನಿತ ಕಾಲೇಜುಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಬೋಧಕೇತರ ಸಿಬ್ಬಂದಿಯವು ಕಾಲೇಜು ಶಿಕ್ಷಣ ಇಲಾಖೆಯ ಆಯುಕ್ತರಿಗೆ ಶನಿವಾರ ಮನವಿ ಸಲ್ಲಿಸಿದರು.
ಪ್ರಾದೇಶಿಕ ಕಛೇರಿಯ ವ್ಯಾಪ್ತಿಯಡಿಯಲ್ಲಿ ಬರುವ ಖಾಸಗಿ ಅನುದಾನಿತ ಕಾಲೇಜುಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಹಾಗೂ ನಿವೃತ್ತಿ ಹೊಂದಿದ ಬೋಧಕೇತರ ಸಿಬ್ಬಂದಿಗಳ ಅನುಮೋದನೆಗೊಂಡ ೬ನೇ ರಾಜ್ಯ ವೇತನ ಪರಿಷ್ಕೃತ ವೇತನ ಬಾಕಿ ೨೦೧೮ನೇ ಹಾಗೂ ೨೦೧೯ನೇ ಸಾಲಿನ ಗಳಿಕೆ ರಜೆ ಸಂಬಳದ ಬಾಕಿ, ತುಟ್ಟಿ ಭತ್ಯೆ ಬಾಕಿ ಹಾಗೂ ನಿವೃತ್ತಿಯಾಗಿ ಒಂದು ವರ್ಷ ಕಳೆದರೂ ಇಲ್ಲಿಯವರಿಗೂ ನಿವೃತ್ತಿ ಗಳಿಕೆ ರಜೆ ನಗದೀಕರಣದ ಬಾಕಿ ಪಾವತಿಯಾಗಿರುವುದಿಲ್ಲ ಅದರಂತೆ ಪ್ರತಿ ತಿಂಗಳು ಸಂಬಳವು ವಿಳಂಬವಾಗುತ್ತಿರುವದರಿಂದ ಸಿಬ್ಬಂದಿಯವರಿಗೆ ಬಹಳ ತೊಂದರೆಯಾಗುತ್ತಿದೆ ಎಂಬುವದು ಅವರ ಸಮಸ್ಯೆಯಾಗಿತ್ತು.
ಕಲ್ಯಾಣ ಕರ್ನಾಟಕದ ಬೋಧಕೇತರ ಸಂಘದ ಕಾರ್ಯದರ್ಶಿಗಳಾದ ಸೋಮಶೇಖರ ಮಠ ಹಾಗೂ ವಿನೋದಕುಮಾರ ಹಳಕಟ್ಟಿ, ಅಪ್ಪಾಸಾಹೇಬ ಬಿರಾದಾರ, ಅಶೋಕ ಮೂಲಕಗೆ. ದೀಪಕ ಚಿಂಚಪೂರ, ಮಹ್ಮದ ಇಸಾಕ, ಸೂರ್ಯಕಾಂತ ದೊಡ್ಮನಿ, ಧರ್ಮರಾಯ ಚೌಕಿ ಮತ್ತು ಇನ್ನಿತರರು ಉಪಸ್ಥಿತರಿದ್ದರು.
ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…