ಸುರಪುರ: ರೈತರು ಈ ದೇಶದ ಬೆನ್ನೆಲುಬು ರೈತ ಪ್ರಗತಿ ಹೊಂದಿದರೆ ದೇಶ ಪ್ರಗತಿ ಹೊಂದುತ್ತೆ ಇತ್ತೀಚಿನ ಆಧುನಿಕ ತಂತ್ರಜ್ಞಾನ ಬಳಸಿಕೊಂಡು ಸರಕಾರ ಯೋಜನೆಗಳನ್ನು ಸದುಪಯೋಗ ಪಡಸಿಕೊಳ್ಳಬೆಕೆಂದು ತೋಟಗಾರಿಕಾ ಅಧಿಕಾರಿ ಸಂತೋಷ ಶೇಷಾಲ ಮಾತನಾಡಿದರು.
ತೋಟಗಾರಿಕೆ ಇಲಾಖೆ ಸುರಪುರ ಇವರ ವತಿಯಿಂದ ತಾಲ್ಲೂಕಿನ ದೇವತ್ಕಲ್ ಗ್ರಾಮದಲ್ಲಿ ಪ್ರಗತಿಪರ ರೈತರಾದ ಮಾನಿಶಪ್ಪ ಮತ್ತು ಹಣಮಂತ್ರಾಯ ಘಂಟಿ ಯವರ ತೋಟದಲ್ಲ್ಲಿ ಸಮಗ್ರ ತೋಟಗಾರಿಕೆ ಅಭಿವೃದ್ಧಿಯೋಜನೆಯಡಿಯಲ್ಲಿ ದಾಳಿಂಬೆ, ಪಪ್ಪಾಯ ಮತ್ತು ಸೀಬೆ ಬೆಳೆಗಳ ಬಗ್ಗೆ ತಾಂತ್ರಿಕ ಮಾಹಿತಿ ಕಾರ್ಯಗಾರ ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಪ್ರಗತಿ ಪರ ರೈತ ಹಾಗು ದೇವತ್ಕಲ್ ತಾಲ್ಲೂಕು ಪಂಚಾಯಿತಿ ಸದಸ್ಯ ಭೀಮರಾಯ ಮೂಲಿಮನಿ ಅಧ್ಯಕ್ಷ ಸ್ಥಾನ ವಹಿಸಿ ಮಾತನಾಡಿ, ರೈತರು ಸಂಪೂರ್ಣ ಮಾಹಿತಿಯೊಂದಿಗೆ ತೋಟಗಾರಿಕೆ ಬೆಳೆಗಳನ್ನು ಬೆಳೆದಾಗ ಮಾತ್ರ ಪ್ರಗತಿ ಹೊಂದಲು ಸಾಧ್ಯ ಅಲ್ಲದೆ ರೈತರು ಮೋದಲು ಸಹಕಾರ ಮನೋಭಾವ ಬೆಳಸಿಕೊಳ್ಳಬೇಕು ವಿಚಾರ ವಿನಿಮಯ ಮಾಡಿಕೊಂಡಾಗ ಪ್ರಗತಿ ಸಾಧ್ಯವೆಂದರು
ಸಿದ್ದರಾಯ ಅಳ್ಳಳ್ಳಿರವರು ರೈತರಿಗೆ ತೋಟಗಾರಿಕೆ ಬೆಳೆಯಲ್ಲಿ ಕಂಡುಬರುವ ಕೀಟಗಳು, ರೋಗಗಳು ಬೆಳೆಗಳನ್ನು ಬೆಳೆಯುವ ಕ್ರಮದ ಬಗ್ಗೆ ತಿಳಿಸಿದರು.
ನಂತರ ಮಾತನಾಡಿದ ಕವಡಿಮಟ್ಟಿ ಕೃಷಿ ವಿಜ್ಞಾನಿ ಡಾ: ಶಾಂತವೀರಯ್ಯನವರು ಇತ್ತಿಚೇಗೆ ಭಾರತ ಸರಕಾರ ಅವಿಷ್ಕಾರ ಮಾಡಿದ ಮೆಘದೂತ ಆಪನ ಸದುಪಯೋಗ ಪಡೆಸಿಕೊಳ್ಳಲು ತಿಳಿಸಿದರು. ಈ ಆಪ್ ನಿಂದ ಹವಾಮಾನದ ಕುರಿತು ರೈತರಿಗೆ ಮಾಹಿತಿ ದೊರೆಯುತ್ತದೆ ಇದು ರೈತರಿಗೆ ಅನುಕುಲವಾಗುತ್ತದೆಂದರು.
ಈ ಸಂದರ್ಭದಲ್ಲಿ ರೈತರಾದ ವೆಂಕಟೇಶ್ ಘಂಟಿ, ನಂದಕುಮಾರ ಸಿದ್ದಾಪುರ, ಸಿದ್ದಣ್ಣ ಹುಗಾರ ದೇವಿಂದ್ರಪ್ಪ ದೋರಿ ತಳ್ಳಳ್ಳಿ, ಭೀಮನಗೌಡ ಹಾಗು ತೋಟಗಾರಿಕೆ ಸಿಬ್ಬಂದಿಗಳಾದ ಬಸಮ್ಮ, ಆನಂದ ಇತರರಿದ್ದರು
ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…