ಕಲಬುರಗಿ: ನಗರದ ಚೌಕ್ ಪೋಲೀಸ್ ಠಾಣಾ ವ್ಯಾಪ್ತಿಯಲ್ಲಿ ಮಾ. 1 ರಂದು ರಾತ್ರಿ ನಗರದ ಸಾತ್ ಗುಂಬಜ್ ಕ್ರಾಸ್ ಮುಂದೆ ರಾಧಾಕೃಷ್ಣ ಗುತ್ತೇದಾರ ಹಾಗರಗಿರವರಿಗೆ ಸಂಬಂಧಪಟ್ಟ ಕಟ್ಟಡದ ಶೆಟರ್ ಅಂಗಡಿಯ ಬಲಭಾಗದಲ್ಲಿ ಕಪ್ಪು ಬಣ್ಣದಿಂದ ‘ಪಾಕಿಸ್ತಾನ ಜಿಂದಾಬಾದ್’ ಮತ್ತು ಪ್ರಧಾನಿ ನರೇಂದ್ರ ಮೋದಿರವರ ಬಗ್ಗೆ ಅವಾಚ್ಯವಾದ ಪದ ಬಳಸಿ ಕಿಡಿಗೇಡಿಗಳು ಬರೆದಿದ್ದ ಕೃತ್ಯಕ್ಕೆ ಸಂಬಂಧಿಸಿ, ವಿಶೇಷ ತಂಡವನ್ನು ರಚಿಸಿ ತನಿಖೆ ನಡೆಯುತಿದ್ದು, ಕೂಡಲೇ ಪ್ರಕರಣ ಬೇಧಿಸಲಾಗುವುದೆಂದು ಕಲಬುರಗಿ ಪೊಲೀಸ್ ಆಯುಕ್ತ ಎನ್.ನಾಗರಾಜ ತಿಳಿಸಿದ್ದಾರೆ.
ಅವರು ಪತ್ರಿಕಾ ಪ್ರಕಟಣೆ ನೀಡಿ, ಗೋಡೆಯ ಮೇಲೆ ಪಾಕ್ ಪರ ಬರಹದ ಕೃತ್ಯ ಚೌಕ ಪೊಲೀಸ್ ಠಾಣೆಯಲ್ಲಿ 12/2020 ಕಲಂ 153 (ಎ), 153(ಬಿ), 505 (2), 124 (ಎ) ಐ.ಪಿ.ಸಿ ಅಡಿಯಲ್ಲಿ ಪ್ರಕರಣ ದಾಖಲಾಗಿದೆ. ಪ್ರಕರಣದ ಸೂಕ್ಷ್ಮತೆಯನ್ನು ಅರಿತು ಆರೋಪಿಗಳ ಪತ್ತೆ ಕುರಿತು ಎ.ಸಿ.ಪಿ. “ಬಿ” ಉಪ- ವಿಭಾಗದವರನ್ನು ತನಿಖಾಧಿಕಾರಿಯನ್ನಾಗಿ ನೇಮಿಸಿದ್ದು, 5 ಪೊಲೀಸ್ ಇನ್ಸ್‌ಪೆಕ್ಟರ್ ನೇತೃತ್ವ ಒಳಗೊಂಡಂತೆ ವಿಶೇಷ ತಂಡ ರಚಿಸಿ, ಇದರ ಮೇಲುಸ್ತುವಾರಿಯನ್ನು ಡಿ.ಸಿ.ಪಿ (ಕಾ&ಸು) ಕಲಬುರಗಿ ನಗರರವರು ನಿರ್ವಹಿಸಿಕೊಂಡಿದ್ದಾರೆ, ಶೀಘ್ರದಲ್ಲೇ ಪ್ರಕರಣ ಇತ್ಯಾರ್ಥ ಪಡಿಸಲಾಗುವುದೆಂದು ಅವರು ತಿಳಿಸಿದ್ದಾರೆ.
ವಾರೀಸ್ ಪಠಾಣ ಪ್ರಕರಣ: ಪ್ರಕರಣಕ್ಕೆ ಸಂಭದಿಸಿದಂತೆ ಎ.ಐ.ಎಂ.ಐ.ಎಂ ಜಿಲ್ಲಾ ಮುಖಂಡ ಅಬ್ದುಲ್ ರಹೀಮ್ ಮಿರ್ಚಿ ಅವರು ತಮ್ಮ ಪಕ್ಷದಿಂದ ನಗರದ ಪೀರ್ ಬಂಗಾಲಿ ಮೈದಾನದಲ್ಲಿ ಎನ್.ಆರ್.ಸಿ, ತಿದ್ದುಪಡಿ ಕಾಯ್ದೆ ವಿರೋಧಿಸಿ 15-02-2020 ರಂದು ಸಾ. 7:30 ಗೆ ಎ.ಐ.ಎಂ.ಎಂ ಮುಂಬಯಿ ಮಾಜಿ ಶಾಸಕರು ವಾರೀಸ್ ಪಠಾಣ ಇವರು ಸಾರ್ವಜನಿಕ ಸಮಾವೇಶದಲ್ಲಿ ಪ್ರಚೋದನಕಾರಿ ಭಾಷಣ ಮಾಡಿರುವ ಬಗ್ಗೆ ನಗರದ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಕಲಂ 117, 153, 153(ಎ) ಅಡಿಯಲ್ಲಿ ಪ್ರಕರಣ ದಾಖಲಾಗಿದೆ. ಆಯೋಜಕ ಸೇರಿ 14 ಜನರಿಗೆ ವಿಚಾರಣೆ ಮಾಡಲಾಗಿರುತ್ತದೆ ಎಂದು ತಿಳಿಸಿದ್ದಾರೆ.
ಪ್ರಕರಣದ ತನಿಖೆ ಗ್ರಾಮೀಣ ಪೊಲೀಸ್ ಠಾಣೆಯ ಪಿ.ಐ. ವಹಿಸಿಕೊಂಡಿದ್ದು, ದಿನಾಂಕ 01-03-2020 ರಂದು ಆರೋಪಿ ವಾರೀಸ್ ಪಠಾಣಗೆ ತನಿಖೆ ಕುರಿತು ನೋಟೀಸ್ ಜಾರಿ ಮಾಡಿದ್ದು, ಹಾಜರಾಗಿಲ್ಲ, 2ನೇ ಬಾರಿಗೆ ದಿನಾಂಕ 08-03-2020 ರಂದು ಹಾಜರಾಗುವಂತೆ ಸೂಚಿಸಿ ಪೊಲೀಸ್ ನೋಟಿಸ್ ಜಾರಿಮಾಡಿದೆ ಪ್ರಕರಣದ ತನಿಖೆ ಮುಂದುವರೆದಿರುತ್ತದೆ ಎಂದು ಆಯುಕ್ತರು ತಿಳಿಸಿದ್ದಾರೆ.
ಆಯುಕ್ತರ ಮೇಲೆ ಗುತ್ತೇದಾರ ಆರೋಪ: ಮಾಜಿ ಸಚಿವ ಮಾಲಿಕಯ್ಯ ಗುತ್ತೇದಾರ ಅವರು ಒಂದು ಕೋಮಿಗೆ ಬಂದೂಕು ಪರವಾನಗಿ ನೀಡಿರುವ ಆರೋಪಕೆ ಸಂಭದಿಸಿದಂತೆ ಪ್ರಕಟಣೆ ನೀಡಿದ ಆಯುಕ್ತರು, ಸೆಪ್ಟೆಂಬರ್ 2019 ರಿಂದ ನಾನು ಕಲಬುರಗಿ ನಗರದ ಪೊಲೀಸ್ ಆಯುಕ್ತರಾಗಿ ಪ್ರಭಾರ ವಹಿಸಿಕೊಂಡ ನಂತರ ಇಲ್ಲಿಯವರೆಗೆ ಪಡೆದುಕೊಂಡ 94 ಅರ್ಜಿಗಳಲ್ಲಿ ಕೇವಲ 29 ಯೋಗ್ಯ ಅರ್ಜಿದಾರರಿಗೆ ಹೊಸದಾಗಿ ಆಯುಧ ಲೈಸೆನ್ಸ್ ನೀಡಿದ್ದು ಇರುತ್ತದೆ. ಮಾದ್ಯಮದಲ್ಲಿ ಪ್ರಕಟವಾದಂತೆ 300 ಜನ ಅರ್ಜಿದಾರರಿಗೆ ಆಯುಧ ಲೈಸೆನ್ಸ್ ನೀಡಿರುವುದಿಲ್ಲಾ ಎಂದು ಸ್ಪಷ್ಟೀಕರಣ ನೀಡಿದ್ದಾರೆ.
ಕಲಬುರಗಿ ಜಿಲ್ಲೆ ಮತ್ತು ಆಯುಕ್ತಾಲಯ ಆದ ನಂತರದ ಕೈಂ-ರೀವ್ 2017 ರಿಂದ ಈವರೆಗೆ ಕೆಲವೇ ದಿನಗಳಲ್ಲಿ ಮಾಹಿತಿಯನ್ನು ನೀಡಲಾಗುವುದು. ಕಾನೂನು ಮತ್ತು ಸುವ್ಯವಸ್ಥೆ ಅತ್ಯುತ್ತಮವಾಗಿದ್ದು, ಮುಂದೆ ಬರುವ ಹೋಳಿ ಹಬ್ಬದಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ವ್ಯವಸ್ಥೆ ಮಾಡಲಾಗುವುದು ಹಾಗೂ ಕಿಡಿಗೇಡಿಗಳ ಮೇಲೆ ಕಟ್ಟುನಿಟ್ಟಿನ ಕ್ರಮಗಳನ್ನು ಮುಲಾಜಿಲ್ಲದೆ ತೆಗೆದುಕೊಳ್ಳಲಾಗುವುದೆಂದು ತಿಳಿಸಿದ್ದಾರೆ.
ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…