ಬಿಸಿ ಬಿಸಿ ಸುದ್ದಿ

ದಾಸರ, ಶರಣರ ಆಶೀರ್ವಾದ, ಈ ನೆಲದ ಶಕ್ತಿಯಿಂದ ಯಶಸ್ವಿ: ವೀರಭದ್ರ ಸಿಂಪಿ

ಕಲಬುರಗಿ: ಇಲ್ಲಿಯವರೆಗೆ ನಡೆದ ೮೪ ಸಮ್ಮೇಳನಗಳಿಗಿಂತಲೂ ಕಲಬುರಗಿಯಲ್ಲಿ ನಡೆದ ೮೫ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ನಿರೀಕ್ಷೆಗೂ ಮೀರಿ ಯಶಸ್ವಿಯಾಗಿದ್ದು, ಈ ನೆಲದ ಶಕ್ತಿ ಅಂತದ್ದು. ಈ ನೆಲದಲ್ಲಿ ನಡೆದ ದಾಸರ, ಶರಣರ ಆಶೀರ್ವಾದ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ವೀರಭದ್ರ ಸಿಂಪಿ ಅಭಿಪ್ರಾಯ ಪಟ್ಟರು.

ನಗರದ ಮಕ್ತಂಪುರದ ಶ್ರೀ ಜಡೆಶಂಕರಲಿಂಗ ದೇವಸ್ಥಾನ ಆವರಣದಲ್ಲಿ ಗುರುವಾರ ಸಂಜೆ ಜಿಲ್ಲಾ ಬಣಗಾರ ಸಮಾಜ ಬಾಂಧವರು ನೀಡಿದ ಸನ್ಮಾನ ಸ್ವೀಕರಿಸಿ, ಮಾತನಾಡಿದ ಅವರು, ಅಖಿಲ ಭಾರತ ಸಾಹಿತ್ಯ ಸಮ್ಮೇಳನ ನಮ್ಮ ಜಿಲ್ಲೆಯಲ್ಲಿ ನಡೆಯುತ್ತಿದೆ ಎಂಬ ಉತ್ಸಾಹದೊಂದಿಗೆ ಕಲಬುರಗಿ ಜಿಲ್ಲೆಯ ಜನರು ತೋರಿದ ಪ್ರೀತಿ, ಪ್ರೋತ್ಸಾಹವೂ ಕಾರಣವಾಗಿದೆ ಎಂದು ಹೇಳಿದರು.

ಸಮ್ಮೇಳನದ ಎಲ್ಲಾ ಸಿದ್ಧತೆಗಳು ಕೇವಲ ಒಂದು ತಿಂಗಳಲ್ಲಿ ನಡೆದವು. ಆರಂಭದಲ್ಲಿ ಸಮ್ಮೇಳನದ ಸಿದ್ಧತೆ ಬಗ್ಗೆ ಸಾಕಷ್ಟು ಟೀಕೆಗಳು ಬಂದವು. ಸಮ್ಮೇಳನಕ್ಕೆ ಎಷ್ಟು ಜನರು ಬರುತ್ತಾರೆ ಎಂದು ಕೆಲವರು ಟೀಕಾತ್ಮಕವಾಗಿ ಮಾತನಾಡಿದರು. ಆದರೆ ಯಾವುದಕ್ಕೂ ತಲೆಕೆಡೆಸಿಕೊಳ್ಳಲಿಲ್ಲ. ಕೇಂದ್ರ ಹಾಗೂ ಜಿಲ್ಲಾ ಸಾಹಿತ್ಯ ಪರಿಷತ್ತು ಪದಾಧಿಕಾರಿಗಳು, ಸರಕಾರದ ಎಲ್ಲಾ ಇಲಾಖೆಯ ಅಧಿಕಾರಿಗಳು ತಮಗೆ ನಿರ್ವಹಿಸಿದ ಕೆಲಸ ಕಾರ್ಯಗಳು ಪ್ರಾಮಾಣಿಕತೆಯಿಂದ ಸಂಘಟನಾತ್ಮಕವಾಗಿ ಕಾರ್ಯ ನಿರ್ವಹಿಸಿದರು. ನನಗೂ ಸ್ಪೂರ್ತಿ ತುಂಬಿ, ಬೆಂಬಲಿಸಿದರು. ಇದರಿಂದ ಸಮ್ಮೇಳನಕ್ಕೆ ಬಂದ ಸುಮಾರು ಏಳು ಲಕ್ಷ ಜನರಿಗೆ ಊಟ ಸೇರಿದಂತೆ ಯಾವುದೇ ರೀತಿಯ ತೊಂದರೆ, ಲೋಪ ಆಗಲಿಲ್ಲ ಎಂದು ಹೇಳಿದರು.

                            ‘ಜಿಲ್ಲಾಧಿಕಾರಿ ಸಿಕ್ಕಿದ್ದು ನಮ್ಮ ಪುಣ್ಯ’                                   
ಅಖಿಲ ಭಾರತ ಸಾಹಿತ್ಯ ಸಮ್ಮೇಳನ ಯಶಸ್ವಿಗೆ ಕಾರಣರಾದ ಪ್ರಮುಖರಲ್ಲಿ ಜಿಲ್ಲಾಧಿಕಾರಿ ಬಿ.ಶರತ್ ಅವರು ಒಬ್ಬರು. ಹಗಲು ರಾತ್ರಿ ಎನ್ನದೆ ಸಮ್ಮೇಳನದ ಯಶಸ್ವಿಗೆ ಶ್ರಮಿಸಿದ್ದಾರೆ. ಮುಖ್ಯ ವೇದಿಕೆ ಸಿದ್ಧತೆ, ರಚನೆಯಿಂದ ಹಿಡಿದ ಪ್ರತಿಯೊಂದನ್ನೂ ಅವರು ಪರಿಶೀಲಿಸಿ, ಸರಿ-ತಪ್ಪುಗಳ ಬಗ್ಗೆ ತಿಳಿಸಿ ತಮ್ಮದೆ ಆದ ಸಲಹೆ ನೀಡುತ್ತಿದ್ದರು. ಯಾವುದನ್ನೂ ಅವರು ನಿರ್ಲಕ್ಷ್ಯ ಮಾಡುತ್ತಿರಲಿಲ್ಲ. ತಾಳ್ಮೆಯಿಂದ ಎಲ್ಲರೊಂದಿಗೆ ನಡೆದುಕೊಂಡರು. ಸಮ್ಮೇಳನದ ಸಂದರ್ಭದಲ್ಲಿ ಅವರು ನಮ್ಮ ಜಿಲ್ಲೆಗೆ ಬಂದಿದ್ದು ನಮ್ಮ ಪುಣ್ಯವೇ ಸರಿ.   – ವೀರಭದ್ರ ಸಿಂಪಿ,  ಅಧ್ಯಕ್ಷರು, ಜಿಲ್ಲಾ ಕಸಾಪ

ನಮ್ಮ ಸಮಾಜದ ಬಾಂಧವರು ನೀಡುತ್ತಿರುವ ಈ ಸನ್ಮಾನ, ತವರು ಮನೆಯ ಸನ್ಮಾನವಾಗಿದೆ. ತುಂಬಾ ಖುಷಿ ತಂದಿದೆ. ಎಲ್ಲರಿಗೂ ಕೃತಜ್ಞತೆ ಸಲ್ಲಿಸುವುದಾಗಿ ಹೇಳಿದರು. ಹಿರಿಯ ಪತ್ರಕರ್ತ ಸುಭಾಷ ಬಣಗಾರ್ ಮಾತನಾಡಿ, ಅಖಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಯಶಸ್ವಿಗೆ ಜಿಲ್ಲಾ ಕಸಾಪ ಅಧ್ಯಕ್ಷರಾದ ವೀರಭದ್ರ ಸಿಂಪಿ ಅವರ ಶ್ರಮ ಮರೆಯಲಾಗದು. ಕಲಬುರಗಿ ಸಮ್ಮೇಳನ ಇತಿಹಾಸ ನಿರ್ಮಿಸುವಂತೆ ಮಾಡಿದ್ದಾರೆ. ೮೪ ಸಮ್ಮೇಳನಗಳು ಈ ರೀತಿಯಾಗಿ ನಡೆದಿಲ್ಲ. ಕಲಬುರಗಿಯಲ್ಲಿ ನಡೆದ ಸಮ್ಮೇಳನ ಬಾರಿ ಯಶಸ್ಸು ಆಗಿದೆ ಎಂದು ಇಡೀ ರಾಜ್ಯದ ಜನರಿಂದ ಒಳ್ಳೆಯ ಪ್ರಶಂಸೆಯ ಮಾತು ಕೇಳಿ ಬಂದವು. ಸಿಂಪಿ ಅವರಲ್ಲಿನ ಪ್ರಾಮಾಣಿಕತೆ, ಶ್ರಮ, ಎಲ್ಲರೊಂದಿಗಿನ ಪ್ರೀತಿ ವಿಶ್ವಾಸವೇ ಇದಕ್ಕೆ ಕಾರಣವಾಗಿದೆ ಎಂದರು.

ಇದೇ ಸಂದರ್ಭದಲ್ಲಿ ಆಯುರ್ವೇದಿಕ್ ನಿರೋಥೆರಪಿ ಪಂಡಿತ ಮಲ್ಲಿಕಾರ್ಜುನ ಎಸ್.ಕಿಣಗಿ ಅವರನ್ನು ಸನ್ಮಾನಿಸಲಾಯಿತು. ಸಮಾಜದ ಮುಖಂಡರಾದ ರಾಜು ಬೈರಾಮಡಗಿ, ಮಹಾರುದ್ರ ಚೌಧರಿ, ಬಸವರಾಜ ರೋಣದ, ವೀರಪ್ಪ ಹುಡಗಿ, ಶಂಕರ ಧನಶೆಟ್ಟಿ, ಮಲ್ಲಿಕಾರ್ಜುನ ಹಲಕರ್ಟಿ, ಉದಯಕುಮಾರ್, ಘಾಳೆಪ್ಪ ದೊಡ್ಡಮನಿ, ಶಿವಕುಮಾರ್ ಕಲ್ಯಾಣಿ, ಅನಿಲ ತಡಲಗಿ, ವಿಶ್ವನಾಥ ಕುರ್ಲೆ, ರಾಜು ಕಲ್ಯಾಣಿ, ಶಂಕರ ಕೋಳಕೂರು, ಶ್ರಮಣಕುಮಾರ್ ಮಾಶಾಳ್, ಶರಣಪ್ಪ ಉದನೂರು ಸೇರಿದಂತೆ ಮೊದಲದವರು ಪಾಲ್ಗೊಂಡಿದ್ದರು.

emedialine

Recent Posts

ಮಹಿಳಾ ಸಹಭಾಗಿತ್ವ ಇಲ್ಲದೆ ದೇಶದ ಅಭಿವೃದ್ಧಿ ಅಸಾಧ್ಯ: ಮಾತೋಶ್ರೀ ಡಾ. ಅವ್ವಾಜಿ

ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…

13 hours ago

ತೊಗರಿ ಬೆಳೆ‌ ಹಾನಿ ಪ್ರದೇಶ ವೀಕ್ಷಿಸಿದ ಶಾಸಕ ಅಲ್ಲಮಪ್ರಭು ಪಾಟೀಲ

ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…

23 hours ago

ಕಷ್ಟಗಳಿಗೆ ಕುಗ್ಗದೇ ಸವಾಲಾಗಿ ಸ್ವಿಕರಿಸಿ

ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…

23 hours ago

ಕಲಬುರಗಿ: ಹಾಸ್ಯ ಕಲಾವಿದ ರೇವಣಸಿದ್ಧ ಸ್ವಾಮಿ ದಂಪತಿಗೆ ಗೆಳೆಯರ ಬಳಗದಿಂದ ಸತ್ಕರಿಸಲಾಯಿತು.

ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…

23 hours ago

ಸಾವಿರ ಸೀರೆ ವಿತರಿಸಿ ಸಚಿವ ಪ್ರಿಯಾಂಕ್ ಜನ್ಮದಿನ ಆಚರಣೆ

  ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…

2 days ago

ಮೂರೂ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು: ಕಾರ್ಯಕರ್ತರಿಂದ ವಿಜಯೋತ್ಸವ

ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…

2 days ago