ಬಿಸಿ ಬಿಸಿ ಸುದ್ದಿ

ಸುರಪುರ:ತಾಲೂಕು ಪಂಚಾಯತಿಯಲ್ಲಿ ಪ್ರಗತಿ ಪರಿಶೀಲನಾ ಸಭೆ

ಸುರಪುರ: ತಾ.ಪಂ ಅಧ್ಯಕ್ಷೆ ಶಾರದಾ ಬಿ.ಬೇವಿನಾಳ ಅವರ ಅಧ್ಯಕ್ಷತೆಯಲ್ಲಿ ನಗರದ ತಾಲೂಕು ಪಂಚಾಯತಿ ಸಭಾಂಗಣದಲ್ಲಿ ಪ್ರಗತಿ ಪರಿಶೀಲನಾ ಸಭೆಯನ್ನು ನಡೆಸಲಾಯಿತು.ಉಪಾಧ್ಯಕ್ಷೆ ಮಂಜುಳಾ ಸಾಹೇಬಗೌಡ ಪಾಟೀಲ ಹಾಗು ಕಾರ್ಯನಿರ್ವಾಹಕ ಅಧಿಕಾರಿ ಅಂಬ್ರೇಶ ನೃತೃತ್ವ ವಹಿಸಿದ್ದರು.

ಸಭೆಯ ಆರಂಭದಲ್ಲಿ ಕಳೆದ ಸಭೆಯಲ್ಲಿನ ನಡಾವಳಿಗಳನ್ನು ಓದಲಾಯಿತು.ನಂತರ ನಡೆದ ಚರ್ಚೆಯಲ್ಲಿ ತಾಲೂಕು ಆರೋಗ್ಯ ಅಧಿಕಾರಿ ಡಾ:ಆರ್.ವಿ.ನಾಯಕ ಮಾತನಾಡಿ,ತಾಲೂಕಿನ ಯಾವುದೇ ಗ್ರಾಮಗಳಲ್ಲಿ ಸಾಂಕ್ರಾಮಿಕ ರೋಗಗಳು ಕಂಡುಬಂದಿಲ್ಲ,ಆದರೆ ಮಾರನಾಳ ತಾಂಡಾದ ಜನರಲ್ಲಿ ಜ್ವರ ಕೆಮ್ಮು ನೆಗಡಿ ಕಂಡುಬಂದಿದ್ದರಿಂದ ೧೦ ಜನರ ರಕ್ತ ಪರೀಕ್ಷೆ ಮಾಡಿಸಲಾಗಿದ್ದು ಡೆಂಗ್ಯೂ,ಚಿಕನಗೂನ್ಯಾದ ಯಾವ ಸೊಂಕು ಕಂಡು ಬಂದಿಲ್ಲ.ತಾಲೂಕು ಆಸ್ಕತ್ರೆಯಲ್ಲಿ ಎಲ್ಲಾ ಕಾಯಿಲೆಗಳಿಗೆ ಚಿಕಿತ್ಸೆ ಲಭ್ಯವಿದೆ.ಇದುವರೆಗೆ ತಾಲೂಕಿನಲ್ಲಿ ಒಟ್ಟು ೧೨ ಡೆಂಗ್ಯೂ,೨ ಮಲೇರಿಯಾ,೨೩ ಚಿಕನಗೂನ್ಯಾ ಹಾಗು ೨ ಹೆಚ್೧.ಎನ್೧ ಪ್ರಕರಣಗಳು ಕಂಡಬಂದಿವೆ ಎಂದರು.

ಈ ಸಂದರ್ಭದಲ್ಲಿ ವಾಗಣಗೇರಾ ತಾ.ಪಂ ಸದಸ್ಯ ಬೈಲಪ್ಪಗೌಡ ಪ್ರಶ್ನೆಮಾಡಿ,ವಾಗಣಗೇರಾ ಗ್ರಾಮದಲ್ಲಿ ಸೊಳ್ಳೆಗಳ ಹಾವಳಿ ಹೆಚ್ಚಾಗಿದೆ,ಫಾಗಿಂಗ್ ಮಾಡಿಸುವಂತೆ ತಿಳಿಸಿದರು.ಇದಕ್ಕೆ ತಾಲೂಕ ಆರೋಗ್ಯಾಧಿಕಾರಿಗಳು ಉತ್ತರಿಸಿ,ಫಾಗಿಂಗ್ ಮಾಡಲು ಪಂಚಾಯತಿಗೆ ತಿಳಿಸುವೆನು.ಬೇಸಿಗೆಯಾದ್ದರಿಂದ ಜನರಲ್ಲಿ ವಾಂತಿ ಭೇದಿ ಹರಡುವ ಸಾಧ್ಯತೆಯಿದೆ.ಆದ್ದರಿಂದ ನೀರಿನ ಟ್ಯಾಂಕರ್‌ಗಳನ್ನು ಸ್ವಚ್ಛಗೊಳಿಸಲು ಕ್ರಮ ಕೈಗೊಳ್ಳುವಂತೆ ತಿಳಿಸಿದರು.ದೇಶದಲ್ಲಿ ಕರೋನಾ ೨೮ ಪ್ರಕರಣಗಳು ಕಂಡು ಬಂದಿದ್ದು,ನಮ್ಮಲ್ಲಿ ಯಾವುದೆ ಪ್ರಕರಣಗಳಿಲ್ಲ.ಆದರೂ ಜನರು ಮಾಸ್ಕ್ ಧರಿಸುವುದು,ಆಗಾಗ ಕೈಗಳನ್ನು ತೊಳೆಯುವುದು ಅವಶ್ಯ.ಬಿಸಿಲಿನ ತಾಪಮಾನ ಹೆಚ್ಚಾದಂತೆ ಕರೋನಾ ರೋಗಾಣು ನಾಶವಾಗಲಿದೆ ಜನರು ಆತಂಕ ಪಡುವ ಅಗತ್ಯವಿಲ್ಲ ಎಂದರು.

ನಂತರ ಕೈಗಾರಿಕಾ ಮತ್ತು ವಾಣಿಜ್ಯ ಇಲಾಖೆ, ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ,ಸಮಾಜ ಕಲ್ಯಾಣ ಇಲಾಖೆ,ಅಕ್ಷರ ದಾಸೋಹ ಇಲಾಖೆ ಅಧಿಕಾರಿಗಳು ಪ್ರಗತಿ ಬಗ್ಗೆ ಮಾಹಿತಿ ನೀಡಿದರು.ಶಿಕ್ಷಣ ಇಲಾಖೆ ಬಗ್ಗೆ ಬಿಇಒ ನಾಗರತ್ನಾ ಓಲೆಕಾರ ಮಾತನಾಡಿ,ತಾಲೂಕಿನಲ್ಲಿ ಒಟ್ಟು ೫೬೯ ಶಾಲೆಗಳಿದ್ದು ಎಲ್ಲಿಯೂ ಯಾವುದೆ ಸಮಸ್ಯೆಗಳಿಲ್ಲ.ಕೆಲ ಶಾಲೆಗಳಲ್ಲಿ ಶಿಕ್ಷಕರು ಗಲಾಟೆ ಮಾಡಿಕೊಂಡಿದ್ದು ಘಟನೆಯ ಕುರಿತು ಮಾಹಿತಿ ಪಡೆದಿದ್ದು ಗಲಾಟೆ ಮಾಡಿಕೊಂಡಿರುವ ಶಿಕ್ಷಕರನ್ನು ವಿಚಾರಣೆ ನಡೆಸಲಾಗುವುದೆಂದು ತಿಳಿಸಿದರು.ಅಲ್ಲದೆ ಈಬಾರಿಯ ಪರೀಕ್ಷೆಗಳಲ್ಲಿ ಉತ್ತಮವಾದ ಸಾಧನೆ ಮಾಡುವ ಗುರಿ ಹೊಂದಲಾಗಿದೆ,ಕನಿಷ್ಠ ೮೦ ಶೇ ಫಲಿತಾಂಶ ಬರುವ ನಿರೀಕ್ಷೆ ಇದೆ ಎಂದರು.

ನಂತರ ಕೃಷಿ,ಜೆಸ್ಕಾಂ,ಮಹಿಳಾ ಮತ್ತು ಮಕ್ಕಳ ಅಭಿವೃಧ್ಧಿ ಇಲಾಖೆ,ಅರಣ್ಯ ಇಲಾಖೆ ಅಧಿಕಾರಿಗಳು ತಮ್ಮ ಇಲಾಖೆಯ ಪ್ರಗತಿ ಬಗ್ಗೆ ಮಾಹಿತಿ ನೀಡಿದರು.ನಂತರ ಸಭೆಯ ಅಧ್ಯಕ್ಷತೆ ವಹಿಸಿದ್ದ ಶಾರದಾ ಬಿ.ಬೇವಿನಾಳ ಮಾತನಾಡಿ,ಬೇಸಿಗೆ ಆರಂಭಗೊಂಡಿದ್ದು ಯಾವುದೇ ಗ್ರಾಮದಲ್ಲಿಕುಡಿಯುವ ನೀರಿನ ಸಮಸ್ಯೆ ಬಾರದಂತೆ ಮುಂಜಾಗ್ರತೆ ವಹಿಸುವಂತೆ ತಿಳಿಸಿದರು.

ಸಭೆಯಲ್ಲಿ ತಾ.ಪಂ ಸದಸ್ಯರಾದ ನಂದನಗೌಡ ಪಾಟೀಲ,ಬೈಲಪ್ಪಗೌಡ ವಾಗಣಗೇರಾ,ದೊಡ್ಡಕೊತಲಪ್ಪಾ ಹಾವಿನ್,ಮೋಹನ ಪಾಟೀಲ,ಕವಿತಾ ಎಮ್.ಎಗ್ಗೆರಿ,ಶ್ವೇತಾ ಜಿ. ಅಪ್ಪುಗೋಳ,ಭೀಮಣ್ಣ ಕಾಮನಟಿಗಿ,ಪ್ರಭುಗೌಡ ಕಚಕನೂರ ಸೇರಿದಂತೆ ಅನೇಕ ಜನ ಸದಸ್ಯರು ಹಾಗು ಎಲ್ಲಾ ಇಲಾಖೆಯ ಅಧಿಕಾರಿಗಳಿದ್ದರು.

emedialine

Recent Posts

ಮಹಿಳಾ ಸಹಭಾಗಿತ್ವ ಇಲ್ಲದೆ ದೇಶದ ಅಭಿವೃದ್ಧಿ ಅಸಾಧ್ಯ: ಮಾತೋಶ್ರೀ ಡಾ. ಅವ್ವಾಜಿ

ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…

5 mins ago

ತೊಗರಿ ಬೆಳೆ‌ ಹಾನಿ ಪ್ರದೇಶ ವೀಕ್ಷಿಸಿದ ಶಾಸಕ ಅಲ್ಲಮಪ್ರಭು ಪಾಟೀಲ

ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…

10 hours ago

ಕಷ್ಟಗಳಿಗೆ ಕುಗ್ಗದೇ ಸವಾಲಾಗಿ ಸ್ವಿಕರಿಸಿ

ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…

10 hours ago

ಕಲಬುರಗಿ: ಹಾಸ್ಯ ಕಲಾವಿದ ರೇವಣಸಿದ್ಧ ಸ್ವಾಮಿ ದಂಪತಿಗೆ ಗೆಳೆಯರ ಬಳಗದಿಂದ ಸತ್ಕರಿಸಲಾಯಿತು.

ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…

10 hours ago

ಸಾವಿರ ಸೀರೆ ವಿತರಿಸಿ ಸಚಿವ ಪ್ರಿಯಾಂಕ್ ಜನ್ಮದಿನ ಆಚರಣೆ

  ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…

1 day ago

ಮೂರೂ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು: ಕಾರ್ಯಕರ್ತರಿಂದ ವಿಜಯೋತ್ಸವ

ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…

1 day ago