ಬಿಸಿ ಬಿಸಿ ಸುದ್ದಿ

ಮಹರ್ಷಿ ವಾಲ್ಮೀಕಿ ಬಗ್ಗೆ ಮಾತನಾಡುವ ಯತ್ನಾಳರು ರಾಮಾಯಣವನ್ನು ಓದಲಿ: ರಾಜುಗೌಡ

ಸುರಪುರ: ಮಹರ್ಷಿ ವಾಲ್ಮೀಕಿಯವರ ಕುರಿತು ಶಾಸಕ ಬಸನಗೌಡ ಪಾಟೀಲ ಯತ್ನಾಳರು ನೀಡಿರುವ ಹೇಳಿಕೆ ಯಾವ ಅರ್ಥದಲ್ಲಿ ಮಾತನಾಡಿದ್ದಾರೆ ಎಂದು ಮಾಹಿತಿಯಿಲ್ಲ.ಹಾಗೊಮ್ಮೆ ವಾಲ್ಮೀಕಿಯವರ ಬಗ್ಗೆ ಮಾತನಾಡುವ ಮುನ್ನ ಯತ್ನಾಳರು ಒಮ್ಮೆ ರಾಮಾಯಣವನ್ನು ಸರಿಯಾಗಿ ಓದಲಿ ಎಂದು ಶಾಸಕ ನರಸಿಂಹ ನಾಯಕ (ರಾಜುಗೌಡ) ಬೇಸರ ವ್ಯಕ್ತಪಡಿಸಿದರು.

ನಗರದ ಕೆಜೆಯು ಕಚೇರಿಯಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿ, ಜಗತ್ತಿಗೆ ಮಾದರಿ ಗ್ರಂಥವನ್ನು ಕೊಟ್ಟ ವಾಲ್ಮೀಕಿಯವರ ಕುರಿತು ಒಬ್ಬ ಜವಾಬ್ದಾರಿಯುತ ವ್ಯಕ್ತಿಯಾಗಿ ಬಸನಗೌಡ ಪಾಟೀಲರು ವಾಲ್ಮೀಕಿ ಕೀಳು ಜಾತಿಯವರು ಎಂದು ಹೇಳಿಕೆ ನೀಡಿರುವುದು ಸರಿಯಲ್ಲ,ಯಾರು ಯಾವ ಜಾತಿಯಲ್ಲಿ ಹುಟ್ಟಬೇಕೆಂದು ಹೇಳಿಕೇಳಿ ಹುಟ್ಟುವುದಿಲ್ಲ.ಅಲ್ಲದೆ ಕೀಳು ಜಾತಿಯವರಾದರೆ ಅದೇ ವಾಲ್ಮೀಕಿಯವರು ಬರೆದ ರಾಮಾಯಣದಲ್ಲಿಯ ರಾಮನನ್ನು ಪೂಜಿಸುವುದೇಕೆ ಎಂದು ಪ್ರಶ್ನಿಸಿದರು.

ಸಮಾಜದ ಒಳಿತಿಗಾಗಿ ಮಹಾತ್ಮರು ತಮ್ಮ ಜೀವನವನ್ನೆ ತೇದಿರುತ್ತಾರೆ ಅತಂವರಿಗೆ ಅಗೌರವ ತರುವಂತಾ ಮಾತನ್ನು ಯಾರೆ ಆಡಲಿ ಅದು ತಪ್ಪು ಯತ್ನಾಳ ಅವರು ಆರೀತಿಯಾಗಿ ಹೇಳಿಲ್ಲಾ ಅಂದುಕೊಳ್ಳುತ್ತೇನೆ ಒಂದುವೇಳೆ ಹೇಳಿದರೆ ಅದು ಸರಿಯಾದುದಲ್ಲ ಎಂದು ತಿಳಿಸಿದರು. ನಂತರ ಸುದ್ದಿಗಾರರು ಕೇಳಿದ ಪ್ರಶ್ನೆಗಳಿಗೆ ಉತ್ತರಿಸಿದ ಅವರು ಕಲ್ಯಾಣ ಕರ್ನಾಟಕ ಭಾಗಕ್ಕೆ ಮುಖ್ಯಮಂತ್ರಿಗಳು ವಿಶೇಷವಾಗಿ ಅನುದಾನವನ್ನು ನೀಡಿದ್ದಾರೆ ಕೆಕೆಆರ್‌ಡಿಬಿಗೆ ಸಾವಿರದ ಐದುನೂರು ಕೋಟಿ ಮತ್ತು ಕಲ್ಯಾಣ ಕರ್ನಾಟಕ ಅಭಿವೃದ್ಧಿ ಸಂಘಕ್ಕೆ ಬಸವರಾಜ ಪಾಟೀಲ ಸೇಡಂ ಅವರನ್ನು ನೇಮಕ ಮಾಡಿ ಐದುನೂರು ಕೋಟಿ ನೀಡುವ ಮೂಲಕ ನಮ್ಮ ಮನವಿಗೆ ಸ್ಪಂದಿಸಿದ್ದಾರೆ ಹಾಗೆ ರಾಯಚೂರು, ಯಾದಗಿರ, ಕಲಬುರ್ಗಿ ಜಿಲ್ಲೆಗಳ ಕುಡಿಯುವ ನೀರಿನ ಯೋಜನೆಗೆ ತಿಂಥಣಿ ಬ್ರೀಜ್ ಬಳಿ ಒಂದು ಆಣೆಕಟ್ಟು ನಿರ್ಮಿಸಲು ಯೋಜೆನಯನ್ನು ರೂಪಿಸಲು ಅನುಮೋದನೆ ನೀಡಲಾಗಿದೆ ಇದರಿಂದ ಇಲ್ಲಿಯ ಜನರ ಕುಡಿಯುವ ನೀರಿನ ಭವಣೆ ತಪ್ಪಲಿದೆ ಎಂದರು.

ಹಾಗೆ ಕೃಷ್ಣಾ ಮೇಲ್ದಂಡೆ ಯೋಜನೆಯ ಆಲಮಟ್ಟಿ ಜಲಾಶಯದ ನೀರು ಶೇಖರಣೆ ಮಟ್ಟ ಎತ್ತರಿಸುವಂತೆ ಈ ಭಾಗದ ಅನೇಕ ಜನ ಶಾಸಕರು ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ ಅವರ ನೇತೃತ್ವದಲ್ಲಿ ಮುಖ್ಯಮಂತ್ರಿಗಳಿಗೆ ಭೇಟಿಮಾಡಿ ಹೆಚ್ಚುವರಿ ಆಯವ್ಯಯ ಮಂಡನೆಯಲ್ಲಿ ಈ ಕಾಮಗಾರಿಯನ್ನು ಕೈಗೆತ್ತುಕೊಳ್ಳಲು ಮನವಿ ಮಾಡಲಾಗಿದೆ ಮತ್ತು ನಮ್ಮ ತಾಲೂಕಿನ ಭಪ್ಪರಗಿ, ಪೀರಾಪುರ, ಹಗರಟಿಗಿ,ಯಣ್ಣಿವಡಗೇರಿ,ಬಸ್ಸಾಪುರಗಳಿಗೆ ನೀರಾವರಿಯ ಏತನೀರಾವರಿ ಯೋಜನೆಗೆ ಈಗಾಗಲೆ ಸರ್ವೆ ಮಾಡಲಾಗಿದೆ ಎಪ್ರಿಲ್ ತಿಂಗಳಲ್ಲಿ ಟೆಂಡರ್ ಕರೆಯಲಾಗುವುದು ಎಂದರು. ಜಿಪಂ ಮಾಜಿ ಅಧ್ಯಕ್ಷ ರಾಜಾ ಹಣಮಪ್ಪ ನಾಯಕ ತಾತಾ,ಮಲ್ಲಿಕಾರ್ಜುನರಡ್ಡಿ,ಕೃಷ್ಣಾರಡ್ಡಿ ಮುದನೂರ ಇದ್ದರು.

emedialine

Recent Posts

ಆತ್ಮವಿಶ್ವಾಸವಿದ್ದರೆ ಜೀವನದಲ್ಲಿ ಏನನ್ನಾದರೂ ಸಾಧಿಸಬಹುದು : ಶಂಕರಗೌಡ

ಕಲಬುರಗಿ: ಜೀವನದಲ್ಲಿ ಹತ್ತನೇ ಮತ್ತು ಪಿಯುಸಿ ಬಹಳ ಮಹತ್ವದ ಘಟ್ಟಗಳು. ಇವೆರಡು ನಮ್ಮ ಭವಿಷ್ಯವನ್ನು ನಿರ್ಧರಿಸುತ್ತವೆ. ವಿದ್ಯಾರ್ಥಿಗಳು ಅಚಲವಾದ ಆತ್ಮವಿಶ್ವಾಸದಿಂದ…

5 hours ago

ಬೌದ್ಧಿಕ ವಿಕಾಸದಿಂದ ತನ್ನತನದ ಶೋಧ

ಸೇಡಂ : ತಮ್ಮ ಬೌದ್ಧಿಕ ವಿಕಾಸದಲ್ಲಿಯೇ ಮಹಿಳೆಯರ ಅಸ್ತಿತ್ವವಿದೆ ಎಂದು ಕೇಂದ್ರ ಸಾಹಿತ್ಯ ಅಕಾಡೆಮಿ ಸದಸ್ಯ ಡಾ.ಬಸವರಾಜ ಸಾದರ ಹೇಳಿದರು.…

5 hours ago

ನಿಧನ ವಾರ್ತೆ; ಆನಂದಪ್ಪ ಉಮ್ಮನಗೋಳ್

ಕಲಬುರಗಿ: ಅಫಜಲಪುರ ತಾಲೂಕಿನ ಸೊನ್ನ ಗ್ರಾಮದ ನಿವಾಸಿ ಆನಂದಪ್ಪ ಶರಣಪ್ಪ ಉಮ್ಮನಗೋಳ್(೮೦) ಅವರು ಸೋಮವಾರ ಬೆಳಗ್ಗೆ ವಯೋಸಹಜವಾಗಿ ನಿಧನರಾದರು. ಮೃತರು…

8 hours ago

ಸಂಘಸಂಸ್ಥೆಗಳು ಸಮಾಜಕ್ಕೆ ನೀಡಿದ ಕೋಡುಗೆ ಅಪಾರ ಪಾಳಾಶ್ರೀ

ಕಲಬುರಗಿ: ಸಂಘಸಂಸ್ಥೆಗಳು ಸಾದಕರನ್ನು ಗುರುತಿಸಿ ಪ್ರಶಸ್ತಿ ಪುರಸ್ಕಾರಗಳನ್ನು ನೀಡುವ ಮುಖಾಂತರಾ ಅವರ ಜವಾಬ್ದಾರಿ ಹೆಚ್ಚಿಸುವುದರಜೋತೆಯಲ್ಲಿ ಸಾಮಾಜಿಕ ಕೆಲಸಗಳನ್ನು ಮಾಡುತ್ತಿರುವುದು ಸಮಾಜಕ್ಕೆ…

8 hours ago

ಹೊಸ ಹೊಸ ಉದ್ಯೋಗ ಸೃಷ್ಟಿಸಲು HKE ಸಂಸ್ಥೆ ಕಾರ್ಯ ಶ್ಲಾಘನೀಯ

ಕಲಬುರಗಿ; ಹೈದ್ರಾಬಾದ್- ಕರ್ನಾಟಕ ಶಿಕ್ಷಣ ಸಂಸ್ಥೆಯ PDACE ಸಭಾಂಗಣದಲ್ಲಿ ನಡೆದ ಕಲ್ಯಾಣ ಕರ್ನಾಟಕ startup conclave ಇಂದು ದಕ್ಷಣ ಶಾಸಕ…

8 hours ago

ಸ್ವಾಭಿಮಾನದ ಬದುಕಿಗೆ ಸಂಗೀತ ಪೂರಕ

ಕಲಬುರಗಿ : ಒತ್ತಡದ ಬದುಕಿನಲ್ಲಿ ಸಂಗೀತ ಆಲಿಸುವುದರಿಂದ ಮಾನಸಿಕ ನೆಮ್ಮದಿ, ಶಾಂತಿ ದೊರೆಯಲು ಸಾಧ್ಯವಿದೆ. ಅನೇಕ ಜನ ಸಂಗೀತ ಕಲಾವಿದರಿಂದು…

8 hours ago