ಬಿಸಿ ಬಿಸಿ ಸುದ್ದಿ

ಶರಣಬಸವ ವಿಶ್ವವಿದ್ಯಾಲಯದಿಂದ ಮತ್ತೊಂದು ಮೈಲುಗಲ್ಲು

ಕಲಬುರಗಿ: ರಾಜ್ಯದಲ್ಲಿನ ಶಿಕ್ಷಣ ಸಂಸ್ಥೆಗಳಲ್ಲಿ ವಿದ್ಯಾರ್ಥಿಗಳು ವಿನ್ಯಾಸಗೊಳಿಸಿದ ಯೋಜನೆಗಳಿಗೆ ಮತ್ತು ಅವರ ಹೊಸತನವನ್ನು ಉತ್ತೇಜಿಸಲು ಸರ್ಕಾರ ಜಾರಿಗೊಳಿಸಿದ್ದ ’ನ್ಯೂ ಏಜ್ ಇನ್‌ಕ್ಯೂಬೇಷನ್ ನೆಟವರ್ಕ್’ (ಓಂIಓ) ಎಂಬ ಯೋಜನೆಯು ತನ್ನಲ್ಲಿ ಸೇರ್ಪಡಿಸಿಕೊಳ್ಳಲು ಯಶಸ್ವಿಯಾದ ಶರಣಬಸವ ವಿಶ್ವವಿದ್ಯಾಲಯವು ಮತ್ತೊಂದು ಮೈಲುಗಲ್ಲು ಸಾಧಿಸಿದೆ.

ಈ ಕಾರ್ಯಕ್ರಮವನ್ನು ಸೇರ್ಪಡಿಸಲು ವಿಶ್ವವಿದ್ಯಾಲಯದ ಯಾಂತ್ರಿಕ ವಿಭಾಗವು ರಾಜ್ಯ ಸರ್ಕಾರಕ್ಕೆ ಪ್ರಸ್ತಾಪ ಸಲ್ಲಿಸಿತ್ತು. ಈ ಕುರಿತು ರಾಜ್ಯ ಸರ್ಕಾರವು ಎಲ್ಲ ಮೂಲಸೌಕರ್ಯ ಮತ್ತು ಅಧ್ಯಾಪಕರ ಸೌಲಭ್ಯಗಳನ್ನು ಗಣನೆಗೆ ತೆಗೆದುಕೊಂಡು ಪ್ರಸಕ್ತ ವರ್ಷದಿಂದ ಈ ’ನ್ಯೂ ಏಜ್ ಇನ್‌ಕ್ಯೂಬೇಷನ್ ನೆಟವರ್ಕ್’ (ಓಂIಓ) ಕಾರ್ಯಕ್ರಮವನ್ನು ಪ್ರಾರಂಭಿಸಲು ಅನುಮತಿ ನೀಡಿದೆ.

’ನ್ಯೂ ಏಜ್ ಇನ್‌ಕ್ಯೂಬೇಷನ್ ನೆಟವರ್ಕ್’ ಯೋಜನೆಯು ಬಾಹ್ಯ ನೆರವಿನ ಕಾರ್ಯಕ್ರಮವಾಗಿದ್ದು, ಸಂಶೋಧನೆ ಮತ್ತು ಯೋಜನೆಗಳ ಕಾರ್ಯಗಳಲ್ಲಿ ಸಕ್ರೀಯವಾಗಿ ಪಾಲ್ಗೊಳ್ಳುವಂತಹ ವಿದ್ಯಾರ್ಥಿಗಳನ್ನು ವಿವಿಯು ಅವಕಾಶ ನೀಡುತ್ತಿದೆ. ಈ ಕಾರ್ಯಕ್ರಮವು ಮೂರು ವರ್ಷಗಳ ಅವಧಿಗೆ ಕಾರ್ಯನಿರ್ವಹಿಸಲಿದೆ. ಮೂರನೆಯ ವರ್ಷದ ಕೊನೆಯಲ್ಲಿ ಎನ್‌ಏಐಎನ್ ಕಾರ್ಯಕ್ರಮದ ಅನುಷ್ಠಾನದ ಮೌಲ್ಯಮಾಪನದ ನಂತರ ರಾಜ್ಯ ಸರ್ಕಾರ ವೈಯಕ್ತಿಕ ಸಂಸ್ಥೆಗಳ ಕಾರ್ಯಕ್ಷಮತೆಯ ಆಧಾರದ ಮೇಲೆ ಇನ್ನೂ ಎರಡು ಅಥವಾ ಹೆಚ್ಚಿನ ಅವಧಿಗೆ ವಿಸ್ತರಿಸುತ್ತದೆ. ಈ ಸಾಧನೆಗಾಗಿ ವಿವಿಯ ಯಾಂತ್ರಿಕ ವಿಭಾಗದ ಸಿಬ್ಬಂದಿಯನ್ನು ಅಭಿನಂದಿಸಿದ್ದ ವಿಶ್ವವಿದ್ಯಾಲಯದ ಕುಲಪತಿ ಡಾ. ಶರಣಬಸವಪ್ಪ ಅಪ್ಪ ಅವರು, ವಿದ್ಯಾರ್ಥಿಗಳ ಮನಸ್ಸನ್ನು ಬೆಳಗಿಸುವಲ್ಲಿ ’ನ್ಯೂ ಏಜ್ ಇನ್‌ಕ್ಯೂಬೇಷನ್ ನೆಟವರ್ಕ್’ (ಓಂIಓ) ಕಾರ್ಯಕ್ರಮವು ಬಹುದೂರ ಸಾಗಲಿದ್ದು, ನವೀನ ಯೋಜನೆಗಳನ್ನು ಕೈಗೊಳ್ಳಲು ಸಹಾಯ ಮಾಡುತ್ತದೆ ಎಂದು ಹೇಳಿದರು.

ಎನ್‌ಏಐಎನ್ ಕಾರ್ಯಕ್ರಮದ ಅಡಿಯಲ್ಲಿ ವಿಶ್ವವಿದ್ಯಾಲಯವನ್ನು ಸೇರ್ಪಡೆಗೊಳಿಸುವ ಪ್ರಸ್ತಾಪವನ್ನು ಮೌಲ್ಯಮಾಪನ ಮಾಡುವ ಸಮಯದಲ್ಲಿ ರಾಜ್ಯ ಸರ್ಕಾರವು ಶರಣಬಸವ ವಿವಿಯ ಕಾರ್ಯಕ್ಷಮತೆಯನ್ನು ಶ್ಲಾಘಿಸಿದೆ ಎಂದು ಹೇಳಿದರು. ಪ್ರತಿ ಸೆಮಿಸ್ಟರ್‌ಗೆ ಕನಿಷ್ಟ ಒಂದು ಯೋಜನೆಯನ್ನು ಸಲ್ಲಿಸುವುದು ಕಡ್ಡಾಯವಾಗಿದೆ. ಪ್ರೊ. ಶಿವಕುಮಾರ್ ರಾಚೋಟಿ ನೇತೃತ್ವದ ಯಾಂತ್ರಿಕ ವಿಭಾಗದ ಅಧ್ಯಾಪಕರ ತಂಡವು ಪ್ರಸ್ತಾವನೆಗಳನ್ನು ಸಿದ್ದಪಡಿಸುವಲ್ಲಿ ಮತ್ತು ಅದನ್ನು ಸರ್ಕಾರಿ ಮಟ್ಟದಲ್ಲಿ ಅನುಸರಿಸುವಲ್ಲಿ ಮತ್ತು ಸರ್ಕಾರದಿಂದ ಅನುಕೂಲಕರ ಅನುಮೋದನೆ ಪಡೆಯುವ ಪ್ರಯತ್ನಕ್ಕಾಗಿ ವಿಶ್ವವಿದ್ಯಾಲಯದ ಕುಲಸಚಿವ ಡಾ. ಅನಿಲಕುಮಾರ ಬಿಡವೆ ಅವರನ್ನು ಅಭಿನಂದಿಸಿದರು.

ಎನ್‌ಏಐಎನ್ ವಿದ್ಯಾರ್ಥಿಗಳಿಗೆ ಗೇಮ್ ಚೇಂಜರ್ ಆಗಿರುತ್ತದೆ ಮತ್ತು ವಿದ್ಯಾರ್ಥಿಗಳ ಯೋಜನಾ ಕಾರ್ಯಗಳಿಗಾಗಿ ಮೂರು ವರ್ಷಗಳ ಅವಧಿಯಲ್ಲಿ ಒಂದು ಕೋಟಿ ರೂ.ಗಳ ಅನುದಾನವನ್ನು ಸಂಶೋಧನಾ ಚಟುವಟಿಕೆಗಳಿಗೆ ಉತ್ತೇಜನ ನೀಡುವಲ್ಲಿ ಬಹಳ ದೂರ ಸಾಗುತ್ತದೆ ಮತ್ತು ವಿದ್ಯಾರ್ಥಿಗಳಿಗೆ ನವೀನ ಚಟುವಟಿಕೆಗಳನ್ನು ಕೈಗೆತ್ತಿಕೊಳ್ಳಲು ಸಹಾಯ ಮಾಡುತ್ತದೆ.  ಎನ್‌ಏಐಎನ್ ಯೋಜನೆಯಡಿ, ವಿದ್ಯಾರ್ಥಿಗಳಿಗೆ ಸಂಶೋಧನೆ ಮತ್ತು ಯೋಜನಾ ಕಾರ್ಯ ಮತ್ತು ಪ್ರಯೋಗಗಳನ್ನು ಕೈಗೊಳ್ಳಲು ಸರ್ಕಾರವು ಪ್ರಾಜೆಕ್ಟ್ ಬೀಜ ನಿಧಿಯಾಗಿ ವಾರ್ಷಿಕ ೩೦ ಲಕ್ಷ ರೂ,ಗಳನ್ನು ಒದಗಿಸುವುದಲ್ಲದೆ, ಪ್ರತಿವರ್ಷ ೧೦ ಲಕ್ಷ ರೂ.ಗಳನ್ನು ಇನ್ಕ್ಯೂಬೇಟರ್ ಆಪರೇಷನಲ್ ವೆಚ್ಚಗಳಾಗಿ ವಿಸ್ತರಿಸಲಿದೆ.

ಅಲ್ಲದೆ, ಸ್ಥಳೀಯ ಸಮಸ್ಯೆಗಳನ್ನು ಗುರುತಿಸಲು ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸುವುದು ಮತ್ತು ಮಿತವ್ಯಯದ ನವೀನತೆ ಪರಿಕಲ್ಪನೆಗಳನ್ನು ಬಳಸಿಕೊಂಡು ಅವುಗಳನ್ನು ಪರಿಹರಿಸುವುದು ಮತ್ತು ಸೂಕ್ತವಾದ ತಾಂತ್ರಿಕ ಆಧಾರಿತ ಪರಿಹಾರ ಮತ್ತು ಮೂಲ ಮಾದರಿಗಳನ್ನು ಅಭಿವೃದ್ಧಿಪಡಿಸುವುದು ಎನ್‌ಏಐಎನ್ ನ ಮುಖ್ಯ ಉದ್ದೇಶವಾಗಿದೆ. ವಿದ್ಯಾರ್ಥಿಗಳನ್ನು ಉದ್ಯಮಿಗಳಂತೆ ಯೋಚಿಸಲು ಪ್ರೋತ್ಸಾಹಿಸುವುದಲ್ಲದೆ, ವಿಶ್ವವಿದ್ಯಾಲಯವು ಕಂಪ್ಯೂಟರ್ ಮತ್ತು ಹೈ-ಸ್ಪೀಡ್ ಇಂಟರ್ನೇಟ್ ಸೌಲಭ್ಯ ಸೇರಿದಂತೆ ಎಲ್ಲ ಸೌಲಭ್ಯಗಳೊಂದಿಗೆ ವಿವಿಯು ಕಾವು ಕೊಡುವ ಕೇಂದ್ರ ಸ್ಥಾಪಿಸಲಿದೆ. ಎನ್‌ಏಐಎನ್ ವಿದ್ಯಾರ್ಥಿ ಯೋಜನೆಯ ಬೀಜ ನಿಧಿಯಡಿ ಪ್ರತಿ ಆಯ್ದ ತಂಡಕ್ಕೆ ಪ್ರತಿ ಯೋಜನೆಗೆ ೩ ಲಕ್ಷ ರೂ.ಗಳನ್ನು ನೀಡಲಾಗುತ್ತದೆ ಮತ್ತು ಒಂದು ವರ್ಷದಲ್ಲಿ ೧೦ ಯೋಜನೆಗಳಿಗೆ ಹಣ ನೀಡಲಾಗುತ್ತದೆ. ವಿನಾಯ್ತಿ ಸಂದರ್ಭಗಳಲ್ಲಿ ಯೋಜನೆಯ ವೆಚ್ಚವು ೩ ಲಕ್ಷ ರೂ.ಗಳನ್ನು ಮೀರಿದ್ದು, ಹೆಚ್ಚುವರಿ ಮೊತ್ತವನ್ನು ೬೦,೦೦೦ ರೂ. ರಾಜ್ಯ ಸರ್ಕಾರವು ಅನುಮೊದಿಸಿದೆ.

ಇಬ್ಬರ ಪೂರ್ಣ ಪ್ರಮಾಣದ ನೌಕರರ ಸಂಬಳವು ಇನ್ಕ್ಯೂಬೇಷನ್ ಸೆಂಟರ್ ಮ್ಯಾನೇಜರ್ ಮತ್ತು ಸಹಾಯಕರಿಗೆ ಪ್ರತಿ ವರ್ಷ ನೀಡಲಾಗುವ ೧೦ ಲಕ್ಷ ರೂ. ಗಳ ಕಾರ್ಯಾಚರಣಾ ನಿಧಿಯನ್ನು ಪೂರ್ಣ ಪ್ರಮಾಣದ ನೌಕರರ ವೇತನವನ್ನು ಪಾವತಿಸಲು ಬಳಸಬೇಕು ಜೊತೆಗೆ ಐಡಿಯಾಥಾನ್‌ಗಳು, ಹ್ಯಾಕಥಾನ್ ಮತ್ತು ಉದ್ಯಮಶೀಲತೆ ಬೂಟ್ ಕ್ಯಾಂಪ್‌ಗಳ ಕಾರ್ಯಕ್ರಮಗಳನ್ನು ಸೇರಿದಂತೆ ಆಯೋಜಿಸಬೇಕು.

emedialine

Recent Posts

ಆತ್ಮವಿಶ್ವಾಸವಿದ್ದರೆ ಜೀವನದಲ್ಲಿ ಏನನ್ನಾದರೂ ಸಾಧಿಸಬಹುದು : ಶಂಕರಗೌಡ

ಕಲಬುರಗಿ: ಜೀವನದಲ್ಲಿ ಹತ್ತನೇ ಮತ್ತು ಪಿಯುಸಿ ಬಹಳ ಮಹತ್ವದ ಘಟ್ಟಗಳು. ಇವೆರಡು ನಮ್ಮ ಭವಿಷ್ಯವನ್ನು ನಿರ್ಧರಿಸುತ್ತವೆ. ವಿದ್ಯಾರ್ಥಿಗಳು ಅಚಲವಾದ ಆತ್ಮವಿಶ್ವಾಸದಿಂದ…

4 mins ago

ಬೌದ್ಧಿಕ ವಿಕಾಸದಿಂದ ತನ್ನತನದ ಶೋಧ

ಸೇಡಂ : ತಮ್ಮ ಬೌದ್ಧಿಕ ವಿಕಾಸದಲ್ಲಿಯೇ ಮಹಿಳೆಯರ ಅಸ್ತಿತ್ವವಿದೆ ಎಂದು ಕೇಂದ್ರ ಸಾಹಿತ್ಯ ಅಕಾಡೆಮಿ ಸದಸ್ಯ ಡಾ.ಬಸವರಾಜ ಸಾದರ ಹೇಳಿದರು.…

12 mins ago

ನಿಧನ ವಾರ್ತೆ; ಆನಂದಪ್ಪ ಉಮ್ಮನಗೋಳ್

ಕಲಬುರಗಿ: ಅಫಜಲಪುರ ತಾಲೂಕಿನ ಸೊನ್ನ ಗ್ರಾಮದ ನಿವಾಸಿ ಆನಂದಪ್ಪ ಶರಣಪ್ಪ ಉಮ್ಮನಗೋಳ್(೮೦) ಅವರು ಸೋಮವಾರ ಬೆಳಗ್ಗೆ ವಯೋಸಹಜವಾಗಿ ನಿಧನರಾದರು. ಮೃತರು…

2 hours ago

ಸಂಘಸಂಸ್ಥೆಗಳು ಸಮಾಜಕ್ಕೆ ನೀಡಿದ ಕೋಡುಗೆ ಅಪಾರ ಪಾಳಾಶ್ರೀ

ಕಲಬುರಗಿ: ಸಂಘಸಂಸ್ಥೆಗಳು ಸಾದಕರನ್ನು ಗುರುತಿಸಿ ಪ್ರಶಸ್ತಿ ಪುರಸ್ಕಾರಗಳನ್ನು ನೀಡುವ ಮುಖಾಂತರಾ ಅವರ ಜವಾಬ್ದಾರಿ ಹೆಚ್ಚಿಸುವುದರಜೋತೆಯಲ್ಲಿ ಸಾಮಾಜಿಕ ಕೆಲಸಗಳನ್ನು ಮಾಡುತ್ತಿರುವುದು ಸಮಾಜಕ್ಕೆ…

2 hours ago

ಹೊಸ ಹೊಸ ಉದ್ಯೋಗ ಸೃಷ್ಟಿಸಲು HKE ಸಂಸ್ಥೆ ಕಾರ್ಯ ಶ್ಲಾಘನೀಯ

ಕಲಬುರಗಿ; ಹೈದ್ರಾಬಾದ್- ಕರ್ನಾಟಕ ಶಿಕ್ಷಣ ಸಂಸ್ಥೆಯ PDACE ಸಭಾಂಗಣದಲ್ಲಿ ನಡೆದ ಕಲ್ಯಾಣ ಕರ್ನಾಟಕ startup conclave ಇಂದು ದಕ್ಷಣ ಶಾಸಕ…

2 hours ago

ಸ್ವಾಭಿಮಾನದ ಬದುಕಿಗೆ ಸಂಗೀತ ಪೂರಕ

ಕಲಬುರಗಿ : ಒತ್ತಡದ ಬದುಕಿನಲ್ಲಿ ಸಂಗೀತ ಆಲಿಸುವುದರಿಂದ ಮಾನಸಿಕ ನೆಮ್ಮದಿ, ಶಾಂತಿ ದೊರೆಯಲು ಸಾಧ್ಯವಿದೆ. ಅನೇಕ ಜನ ಸಂಗೀತ ಕಲಾವಿದರಿಂದು…

3 hours ago