ಕಲಬುರಗಿ: ದಾಸೋಹಭಾಂಡಾರಿ ಶರಣಬಸವೇಶ್ವರರ ೧೯೮ನೇ ಯಾತಾ ಮಹೋತ್ಸವು ಇದೇ ಮಾರ್ಚ ೧೨ ರಂದು ಸಾಯಂಕಾಲ ೬ ಗಂಟೆಗೆ ಉಚ್ಚಾಯಿ ಮತ್ತು ದಿ. ೧೩ ರಂದು ಸಾಯಂಕಾಲ ೬ ಗಂಟೆಗೆ ರಥೋತ್ಸವ ಬಹು ವಿಜೃಂಭಣೆಯಿಂದ ಜರುಗಲಿದೆ.
ಯಾತ್ರಾ ಮಹೋತ್ಸವದ ಶುಭ ಸಂದರ್ಭದಲ್ಲಿ ಸಾಂಸ್ಕೃತಿಕ, ಶಿವಾನುಭವ ಉಪನ್ಯಾಸ ಮಾಲಿಕೆ ಹಾಗೂ ವಿಶೇಷ ಸಂಗೀತ ಕಾರ್ಯಕ್ರಮಗಳು ದಾಸೋಹಭಾಂಡಾರಿ ಶರಣಬಸವರ ಮಹಾದಾಸೋಹ ಜೀವನ ಕುರಿತು ಡಾ. ಎಚ್.ತಿಪ್ಪೇರುದ್ರಸ್ವಾಮಿ ಅವರು ರಚಿಸಿರುವ ’ಚಿತ್ತಲೋಕದ ಚಿದ್ಬೆಳಗು’ ಕಾದಂಬರಿ ಆಧಾರಿಸಿ ವಿಶೇಷ ಉಪನ್ಯಾಸ ಮಾಲಿಕೆ ದಿ. ೯ರಿಂದ ದಿ. ೧೪ ರವರೆಗೆ ಪ್ರತಿನಿತ್ಯ ಸಾಯಂಕಾಲ ೫ ಗಂಟೆಯಿಂದ ೮ ಗಂಟೆವರೆಗೆ ಜರುಗಲಿವೆ. ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಪೂಜ್ಯ ಡಾ.ಶರಣಬಸವಪ್ಪ ಅಪ್ಪಾ, ಮಹಾದಾಸೋಹ ಪೀಠಾಧಿಪತಿಗಳು, ಶರಣಬಸವೇಶ್ವರ ಸಂಸ್ಥಾನ, ಕುಲಾಧಿಪತಿಗಳು, ಶರಣಬಸವ ವಿಶ್ವವಿದ್ಯಾಲಯ, ಅಧ್ಯಕ್ಷರು, ಶರಣಬಸವೇಶ್ವರ ವಿದ್ಯಾವರ್ಧಕ ಸಂಘ, ಅಖಿಲ ಭಾರತ ಶಿವಾನುಭವ ಮಂಟಪ ಕಲಬುರಗಿ ವಹಿಸಲಿದ್ದಾರೆ.
ದಿ. ೯ ರಂದು ಸೋಮವಾರ ಆವಿರ್ಭಾವ ಎಂಬ ವಿಷಯ ಕುರಿತು ಶರಣಬಸವ ವಿವಿ ಕನ್ನಡ ಉಪನ್ಯಾಸಕಿ ಡಾ.ಸಾರಿಕಾದೇವಿ ಕಾಳಗಿ ಉಪನ್ಯಾಸ ನೀಡಲಿದ್ದಾರೆ, ಶರಣಬಸವೇಶ್ವರ ಕಲಾ ಮಹಾವಿದ್ಯಾಲಯದ ಪ್ರಾಚಾರ್ಯ ಡಾ.ಡಿ.ಟಿ. ಅಂಗಡಿ ಅಧ್ಯಕ್ಷತೆ ವಹಿಸಲಿದ್ದಾರೆ. ದಿ. ೧೦ ರಂದು ಮಂಗಳವಾರ ಆವಿಷ್ಕಾರ ಎಂಬ ವಿಷಯ ಕುರಿತು ಶರಣಬಸವ ವಿವಿ ಕನ್ನಡ ಉಪನ್ಯಾಸಕ ಡಾ. ನಾನಾಸಾಹೇಬ ಹಚ್ಚಡದ ಉಪನ್ಯಾಸ ನೀಡಲಿದ್ದಾರೆ. ಗೋದುತಾಯಿ ದೊಡ್ಡಪ್ಪ ಅಪ್ಪ ಕಲಾ ಮತ್ತು ವಾಣಿಜ್ಯ ಮಹಿಳಾ ಪದವಿ ಮಹಾವಿದ್ಯಾಲಯದ ಪ್ರಾಚಾರ್ಯೆ ಡಾ.ನೀಲಾಂಬಿಕಾ ಶೇರಿಕಾರ ಅಧ್ಯಕ್ಷತೆ ವಹಿಸಲಿದ್ದಾರೆ.
ದಿ. ೧೧ ರಂದು ಬುಧವಾರ ಅನುಸಂಧಾನ ಎಂಬ ವಿಷಯ ಕುರಿತು ಬಸವಕಲ್ಯಾಣದ ಬಸವೇಶ್ವರ ಪದವಿ ಮಹಾವಿದ್ಯಾಲಯದ ಕನ್ನಡ ಉಪನ್ಯಾಸಕ ಪ್ರೊ. ಕ್ಷೇಮಲಿಂಗ ಬಿರಾದಾರ ಉಪನ್ಯಾಸ ನೀಡಲಿದ್ದಾರೆ. ಗೋದುತಾಯಿ ಬಿ.ಎಡ್ ಮಹಾವಿದ್ಯಾಲಯದ ಪ್ರಾಚಾರ್ಯೆ ಡಾ.ಬಸವರಾಜೇಶ್ವರಿ ಅಧ್ಯಕ್ಷತೆ ವಹಿಸಲಿದ್ದಾರೆ. ದಿ. ೧೨ ರಂದು ಗುರುವಾರ ಅನುಭೂತಿ ಎಂಬ ವಿಷಯ ಕುರಿತು ಗೋದುತಾಯಿ ದೊಡ್ಡಪ್ಪ ಅಪ್ಪ ಕಲಾ ಮತ್ತು ವಾಣಿಜ್ಯ ಮಹಿಳಾ ಪದವಿ ಮಹಾವಿದ್ಯಾಲಯದ ಪ್ರಾಚಾರ್ಯೆ ಡಾ.ನೀಲಾಂಬಿಕಾ ಶೇರಿಕಾರ ಉಪನ್ಯಾಸ ನೀಡಲಿದ್ದಾರೆ. ಶರಣಬಸವೇಶ್ವರ ಬಿ.ಎಡ್ ಮಹಾವಿದ್ಯಾಲಯದ ಪ್ರಾಚಾರ್ಯೆ ಡಾ. ಗೀತಾ ಹರವಾಳ ಅಧ್ಯಕ್ಷತೆ ವಹಿಸಲಿದ್ದಾರೆ.
ದಿ. ೧೩ ರಂದು ಶುಕ್ರವಾರ ಕಲ್ಯಾಣಮಾರ್ಗ ಎಂಬ ವಿಷಯ ಕುರಿತು ಎಮ್.ಎಸ್.ಐ. ಪದವಿಪೂರ್ವ ಮಹಾವಿದ್ಯಾಲಯದ ಕನ್ನಡ ಉಪನ್ಯಾಸಕ ಡಾ.ಸೋಮಶಂಕ್ರಯ್ಯ ವಿಶ್ವನಾಥಮಠ ಉಪನ್ಯಾಸ ನೀಡಲಿದ್ದಾರೆ. ಶರಣಬಸವೇಶ್ವರ ವಾಣಿಜ್ಯ ಪದವಿ ಮಹಾವಿದ್ಯಾಲಯದ ಪ್ರಾಚಾರ್ಯ ಡಾ.ಎನ್.ಎಸ್. ಪಾಟೀಲ ಅಧ್ಯಕ್ಷತೆ ವಹಿಸಲಿದ್ದಾರೆ. ದಿ. ೧೪ ರಂದು ಶನಿವಾರ ದಿವ್ಯದಾಸೋಹ ದೀಪ್ತಿ ಎಂಬ ವಿಷಯ ಕುರಿತು ಶರಣಬಸವೇಶ್ವರ ಕಲಾ ಮಹಾವಿದ್ಯಾಲಯದ ಕನ್ನಡ ಉಪನ್ಯಾಸಕ ಡಾ.ಶಿವರಾಜ ಶಾಸ್ತ್ರಿ ಹೇರೂರ್ ಉಪನ್ಯಾಸ ನೀಡಲಿದ್ದಾರೆ. ಶರಣಬಸವೇಶ್ವರ ವಿಜ್ಞಾನ ಪದವಿ ಮಹಾವಿದ್ಯಾಲಯದ ಪ್ರಾಚಾರ್ಯ ಡಾ.ಎಸ್.ಜಿ.ಡೊಳ್ಳೇಗೌಡರ ಅಧ್ಯಕ್ಷತೆ ವಹಿಸಲಿದ್ದಾರೆ.
ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಸಂಗೀತ ಅಕಾಡೆಮಿ ಉಪನ್ಯಾಸಕರಾದ ಪ್ರೊ. ರೇವಯ್ಯ ವಸ್ತ್ರದಮಠ, ಡಾ.ಎಮ್.ಎಸ್.ಪಾಟೀಲ, ಡಾ.ಸೀಮಾ ಪಾಟೀಲ, ಡಾ.ಛಾಯಾ ಭರತನೂರ, ಡಾ.ಕಲಾವತಿ ದೊರೆ, ಪ್ರೊ. ಷಣ್ಮುಖ ಪಾಟೀಲ, ಪ್ರೊ. ಚನ್ನಬಸವ, ಹಾಗೂ ವಿದ್ಯಾರ್ಥಿನಿ ಕು.ಚನ್ನಮ್ಮ ಅವರಿಂದ ವಿಶೇಷ ಸಂಗೀತ ಕಾರ್ಯಕ್ರಮ ನಡೆಯಲಿದೆ.
ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…