ಹೆಣ್ಣು ವಿಕಾಸ ಹೊಂದಿದಾಗ ಮಾತ್ರ ರಾಷ್ಟ್ರದ ವಿಕಾಸ ಸಾಧ್ಯ: ದಾಕ್ಷಾಯಿಣಿ ಅವ್ವಾಜೀ

ಕಲಬುರಗಿ: ಹೆಣ್ಣೆ ನಿನಗೆಷ್ಟು ಶ್ರೀಂಗಾರ, ಆ ಶ್ರೀಂಗಾರದ ಉಡುಪುಗಳಿಗೆ ಬೆಲೆ ಸಿಕ್ಕಿದ್ದು ನಿನ್ನಿಂದ, ನೀ ನಕ್ಕರೆ ಏನೋ ಹೊಳಪು, ನೀ ಅತ್ತರೆ ಏನೊ ಸಂದೇಶ, ನೀ ಆಡಿದ ಮಾತು ವೇದವಾಕ್ಯ, ನೀ ಮೌನಿಯಾದರೆ ಸಾವಿರಾರು ಸನ್ನಿವೇಶಗಳ ಸ್ಮರಣೆ, ಹೆಣ್ಣೆ ನಿನಿದಷ್ಟು ಸಮೃದ್ಧಿ ಸಂಪತ್ತು. ಅಂಥ ಸಾವಿರಾರು ಸಂಪತ್ತು ಒಂದೇಡೆನೆ ಕಂಡರೆ ಕಣ್ಣಿಗೆ ತಂಪು ನೀಡುವ ಆ ಸುಘಳಿಗೆಯಲ್ಲಿ.

’ಕೋಮಲ್ ಹೈ ಕಮಜೋರ್ ನಹಿ ನಾರಿ, ಶಕ್ತಿ ಕಾ ನಾಮ್ ಹೀ ನಾರೀ ಹೈ, ಜಗ ಕೋ ಜೀವನ್ ದೇನೇವಾಲೀ, ಮೌತ್ ಭೀ ತುಮಸೇ ಹಾರೀ ಹೈ. ಎಂಬ ನುಡಿಯೋಕ್ತಿಯೊಂದಿಗೆ, ಸಭಿಕರ ಚಪ್ಪಾಳೆಯೊಂದಿಗೆ ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷರಾದ ಮಾತೋಶ್ರೀ ದಾಕ್ಷಾಯಿಣಿ ಅವ್ವನವರು ಹೆಣ್ಣು ವಿಕಾಸಹೊಂದಿದ್ದಾಗ ಮಾತ್ರ, ರಾಷ್ಟ್ರ ವಿಕಾಸವಾಗುತ್ತದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಜೀವನದಲ್ಲಿ ದೊಡ್ಡ ದೊಡ್ಡ ಕನಸುಗಳನ್ನು ಕಟ್ಟಿಕೊಂಡಾಗ ಮಾತ್ರ ಸಾಧಿಸಲು ಸಾಧ್ಯವಾಗುತ್ತದೆ. ಸಾಧನೆಗೆ ಅವಕಾಶ ಮಾಡಿಕೊಡುವುದು ಶಿಕ್ಷಣ. ಹೀಗಾಗಿ ಕಠಿಣ ಪರಿಶ್ರಮ ಮತ್ತು ಧೈರ್ಯದಿಂದ ಕೆಲಮಾಡಿ.    – ಸ್ಟೇಲ್ಲಾ ಆದಾಯ ಇಲಾಖೆಯ ಸಹಾಯಕ ಆಯುಕ್ತರು.

ನಗರದ ಶರಣಬಸವ ದಶಮಾನೋತ್ಸವ ಸಭಾಂಗಣದಲ್ಲಿ ಭಾನುವಾರ ಆಯೋಜಿಸಿದ್ದ ವಿಶ್ವ ಮಹಿಳಾ ದಿನಾಚರಣೆ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದ ಅವರು, ವಿಶ್ವ ಮಹಿಳಾ ದಿನಾಚರಣೆಯು ನ್ಯೂಯಾರ್ಕ ಕ್ಲಾರಾ ಜೆಟ್‌ಶಿನ್ ಎಂಬ ಮಹಿಳಾ ಕಾರ್ಮಿಕಳ ಹೋರಾಟದ ಫಲವಾಗಿದೆ. ಆಕೆಯ ಸಂಘರ್ಷದ ಫಲವಾಗಿ ೧೯೭೫ರಲ್ಲಿ ವಿಶ್ವ ಸಂಸ್ಥೆಯು ಈ ದಿನವನ್ನು ವಿಶ್ವ ಮಹಿಳಾ ದಿನಯೆಂದು ಘೊಷಿಸಿದೆ ಎಂದು ಮಾತೋಶ್ರೀ ದಾಕ್ಷಾಯಿಣಿ ಅವ್ವನವರು ಅಭಿಪ್ರಾಯ ಪಟ್ಟರು.

ಮಹಿಳೆಯು ರಾಷ್ಟ್ರಪತಿ, ಪ್ರಧಾನ ಮಂತ್ರಿ, ಸ್ಪೀಕರ್, ರಾಷ್ಟ್ರೀಯ ದಳದ ಅಧ್ಯಕರು, ಆಂತರೀಕ್ಷ ಹೀಗೆ ಹಲವಾರು ಎಲ್ಲ ಕ್ಷೇತ್ರಗಳಲ್ಲಿನ ಸಾಧನೆಯ ಸಂಕೇತವಾಗಿದೆ ಈ ದಿನ. ಮಹಿಳೆಯು ಕೃಷಿಯಲ್ಲಿ ರೈತನ ಹೆಗಲಿಗೆ ಹೆಗಲುಕೊಟ್ಟಿ ಬೆನ್ನೆಲಬುವಾಗಿ ಕಾರ್ಯನಿರ್ವಹಿಸುತ್ತಿದ್ದಾಳೆ. ಜನೇವರಿ ೨೬ರಂದು ನೂರಾರು ಮಹಿಳೆಯರು ರಾಜಪಥದಲ್ಲಿನ ಬೈಕ್ ಶೋ ಮಾಡಿ, ಕೇವಲ ಗಂಡುಮಕ್ಕಳಿಗೆ ಸೀಮಿತವಾಗಿದ್ದ ಬೈಕ್ ಶೋ ಅಧಿಕಾರವನ್ನು ಛೇದಿಸಿ ಎತ್ತರಕ್ಕೇರಿದ್ದಾರೆ ಎಂದರು.

ಹೆಣ್ಣು ಪ್ರಕೃತಿಯ ಮೂಲವಾಗಿದ್ದಾಳೆ. ಸಾಧಕ ಮಹಿಳೆಯರ ಸ್ಮರಣೆಯ ದಿನವಾಗಿದೆ ಈ ಅಂತರಾಷ್ಟ್ರೀಯ ಮಹಿಳಾ ದಿನ. ಹೆಣ್ಣಾಗಿ ಜನ್ಮತಾಳಿದ ನಾವೇಲ್ಲರೂ ಹೆಮ್ಮೆಯಿಂದ ಬದುಕಿ ಹೊಸ ಚರಿತ್ರೆ ನಿರ್ಮಿಸೊಣ – ವಿವಿ ಡೀನ್ ಡಾ. ಲಕ್ಷ್ಮಿ ಮಾಕಾ
ಸ್ತ್ರೀಗೆ ನಮ್ಮ ಸಂಸ್ಕೃತಿಯಲ್ಲಿ ಗೌರವಯುತ ಸ್ಥಾನವಿದೆ. ಎಲ್ಲಾ ಕ್ಷೇತ್ರದಲ್ಲಿ ಹೆಣ್ಣು ಸಾಧನೆ ಗೈದಿದ್ದಾಳೆ. ಹೆಣ್ಣು ಜೀವನದಲ್ಲಿ ಹೆಚ್ಚು ಹೆಚ್ಚು ಜವಬ್ದಾರಿ ತೆಗೆದುಕೊಳ್ಳಬೇಕು. ಕುಟುಂಬದ ಬೆನ್ನೆಲ್ಲುಬಾಗಿ ನಿಲ್ಲಬೇಕು   – ವಿವಿ ಕುಲಪತಿ ಡಾ. ನಿರಂಜನ್ ವಿ. ನಿಷ್ಠಿ.

ಮಾತುಗಳನ್ನು ಮುಂದುವರೆಸುತ್ತಾ ಅವ್ವಾಜೀ.. ಇಷ್ಟೇಲ್ಲಾ ಸಾಧನೆಗಳ ಮಧ್ಯೆಯೂ ಹೆಣ್ಣು ಲಿಂಗ ತಾರತಮ್ಯ, ಹೆಣ್ಣು ಭ್ಯೂಣ ಹತ್ಯೆ, ವೈಶ್ಯವಾಟಿಕೆ, ಅತ್ಯಾಚಾರ, ಕೊಲೆ, ವರದಕ್ಷಣೆ ಹಿಂಸೆ ಹೀಗೆ ಹತ್ತಾರು ಸಮಸ್ಯೆಗಳಿಂದ ವಿಲವಿಲನೇ ಒದ್ದಾಡುತ್ತಿದ್ದಾಳೆ. ಮಹಿಳೆಯನ್ನು ಶಾಪಗ್ರಸ್ಥಳನ್ನಾಗಿ ಮಾಡಬೇಡಿ. ಅವಳು ವರವಾಗಿ ಬೆಳಕಾಗಿ ಹೊರಹೊಮ್ಮಲು ಬಿಡಿ. ಮಹಿಳೆಯರ ಸಾಧನೆಗೆ ಪ್ರೋತ್ಸಾಹ ನೀಡಬೇಕು. ಮಹಿಳೆಯರಿಗೆ ವಿಶ್ವಾಸ, ಪ್ರೀತಿ, ಮಮತೆ ನಂಬಿಕೆ ನೈತಿಕ ಮೌಲ್ಯಗಳನ್ನು ನಮ್ಮ ಸಮಾಜದ ಕಣ್ಣುಗಳಾಬೇಕೆಂದರೆ, ಪುರುಷರ ನೈತಿಕ ಬೆಂಬಲ ಮುಖ್ಯವಾಗಿದೆ, ಈ ನಿಟ್ಟಿನಲ್ಲಿ ಮಹಿಳಾ ದಿನಚಾರಣೆಯನ್ನು ಅರ್ಥಪೂರ್ಣವಾಗುವುದು ಎಂದು ಆಶಯ ಭಾವ ವ್ಯಕ್ತಪಡಿಸಿದರು.

ಮಹಿಳೆಯರು ಸರ್ವತೋಮುಖ ಅಭಿವೃದ್ಧಿ ಕಾರ್ಯರೂಪಕ್ಕೆ ತರಲು ಶ್ರಮಿಸಿದರೇ, ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಮಹಿಳೆಯರಿಗೆ ವರವಾಗಿ ಅರ್ಥಪೂರ್ಣತೆಯನ್ನಾಗಿಸುತ್ತದೆ ಎಂದರು. ಎಲ್ಲಿ ಹೆಣ್ಣು ಮಕ್ಕಳಿಗೆ ಪೂಜ್ಯಸ್ಥಾನವಿದೆ ಅಲ್ಲಿ, ದೇವರ ನೆಲೆಯಿದೆ ಎನ್ನುವಂತೆ ಶರಣಬಸವೇಶ್ವರ ಸಂಸ್ಥೆಯ ಮಹಾಮನೆಯಲ್ಲಿ ಹೆಣ್ಣು ಮಕ್ಕಳಿಗೆ ತಾಯಿಯ(ಅವ್ವ) ಎಂಬ ಪೂಜ್ಯ ಸ್ಥಾನವಿದೆ ಎಂಬ ಕಾರಣಕ್ಕೆ ಶರಣಬಸವೇಶ್ವರ ದೇವರ ನೆಲೆಯನ್ನು ಕಾಣುತ್ತೇವೆ ಎಂದರು.

ಶರಣಬಸವೇಶ್ವರ ಸಂಸ್ಥಾನದ ೮ನೇ ಪೀಠಾಧಿಪತಿಯಾದ ಪರಮ ಪೂಜ್ಯ ಡಾ. ಶರಣಬಸವಪ್ಪ ಅಪ್ಪಾ ಮಾತನಾಡಿ, ಶಿವನು ಅರ್ಧನಾರೀಶ್ವರ ಎಂಬ ಹೆಸರು ಪಡೆದುಕೊಳ್ಳಲು ಸ್ತ್ರೀಶಕ್ತಿ ಕಾರಣವಾಗಿದೆ. ಸ್ತ್ರೀ ಶಕ್ತಿ ಅಮೂಲ್ಯವಾಗಿದೆ. ಸ್ತ್ರೀ ಪ್ರತಿ ಕುಟುಂಬದ ಬೆನ್ನೆಲಬಾಗಿದ್ದಾಳೆ ಎಂದರು. ಸ್ತ್ರೀ ಎಂಬ ಪದದಲ್ಲಿ ಶಕ್ತಿ ತುಂಬಿಕೊಂಡಿದೆ. ಹೆಣ್ಣು ಜ್ಞಾನಿಯಾಗಿದ್ದಾಳೆ. ತನ್ನ ಜ್ಞಾನಸಂಪತ್ತಿನಿಂದ ಪುರುಷರ ಸರಿಸಮಾನವಾಗಿ ಬಾಳುತ್ತಿದ್ದಾಳೆ ಎಂದರು.

ಬೀದರನ ಬಸವ ಸೇವಾ ಪ್ರತಿಷ್ಠಾನದ ಅಕ್ಕ ಅನ್ನಪೂರ್ಣ ಕಾರ್ಯಕ್ರಮ ಉದ್ಘಾಟಿಸಿ, ಮಾತನಾಡಿದ ಅವರು, ಶಿಕ್ಷಣ ಸಾಮ್ರಾಜ್ಯ ನಿರ್ಮಿಸಿ, ಶಿಕ್ಷಣ ದಾಸೋಹ ನೀಡುತ್ತಿರುವ ಈ ಸಂಸ್ಥೆ ಹೆಣ್ಣಿನ ಶಕ್ತಿಯನ್ನು ಬಲಗೊಳಿಸುತ್ತಿದೆ. ೧೨ನೇ ಶತಮಾನದಲ್ಲಿಯೇ ಹೆಣ್ಣಿಗೆ ವಿಮೋಚನೆ ಸಿಕ್ಕಿದೆ. ಆದರೆ ತುಂಬಾ ತಡವಾಗಿ ಬೆಳಕಿಗೆ ಬಂದಿದೆ. ಕಾಲ್ಪನಿಕ ಕಾಲದಲ್ಲಿ ಜೀವಿಸುವತ್ತಿರುವ ಈ ಸಮಾಜ ಕೇವಲ ಕಾಲ್ಪನಿಕವಾಗಿ ಹೆಣ್ಣಿಗೆ ಸ್ವಾತಂತ್ಯ ಕೊಟ್ಟಿದ್ದೇವೆ ಎಂದು ಹೇಳುತ್ತದೆ ಆದರೆ ಪ್ರಾಯೋಗಿಕವಾಗಿ ನೋಡಿದಾಗ ಗೊತ್ತಾಗುತ್ತದೆ ಹೆಣ್ಣಿಗೆ ಇನ್ನೂ ಸ್ವಾತಂತ್ರ್ಯ ಸಿಕ್ಕಿಲ್ಲ. ಹೆಣ್ಣು ವಸ್ತುವಿನಂತೆ ಮಾರಲ್ಪಟ್ಟವಳು, ಜೂಜಾಟಕ್ಕೆ ಇಡಲ್ಪಟ್ಟಳು ಹೆಣ್ಣಿನ ಕಣ್ಣಿರಿನ ಸಂಕೇತವಾಗಿ ಈ ನದಿಗಳ ಹೆಸರು ಹುಟ್ಟಿಕೊಂಡಿವೆ ಎಂದು ಹೇಳಿದರು.

ಹೆಣ್ಣು ತನಗೆ ಸಿಕ್ಕಿದ ಸ್ವಾತಂತ್ಯದಲ್ಲಿಯೇ ಸಾಧನೆ ಮಾಡಿ ಈ ಜಗತ್ತಿಗೆ ತೊರಿಸಿದ್ದಾಳೆ. ಇಂದಿನ ಯುವತಿಯರು ಸೋಲನ್ನು ಸಮರ್ಥವಾಗಿ ನಿಭಾಯಿಸುವ ಧೈರ್ಯ ಬೆಳಸಿಕೊಳ್ಳಿ. ಬೆಟ್ಟದಂತ ಕಷ್ಟಬಂದರು ಹೆದರಿ ಹಿಂಜರಿಯಬೇಡಿ. ಮರದಂತೆ ಸ್ವತಂತ್ರವಾಗಿ ಬಾಳಿ ಇತರರಿಗೂ ನೆರಳಾಗಿ ಎಂದರು. ಹೆಣ್ಣು ಪರಿಪೂರ್ಣ ಜ್ಞಾನಿಯಾಗಿದ್ದಾಳೆ. ಅದಕ್ಕೆ ಅಕ್ಕಮಹಾದೇವಿ ಮಾದರಿಯಾಗಿದ್ದಾಳೆ. ಕಿತ್ತೂರಾಣಿ ಚೆನ್ನಮ್ಮ ಒಣಕೆ ಓಬ್ಬವ್ವನಂತ ಸ್ವಾವಲಂಬಿ ಮಹಿಳೆಯರು ಇನ್ನೂ ಹೆಚ್ಚು ಹೆಚ್ಚು ಜನ್ಮತಾಳಿದಾಗ ಮಾತ್ರ ಈ ಕಲ್ಯಾಣ ಕರ್ನಾಟಕ ಎಂಬ ನಾಮಧೇಯ ಸಾರ್ಥಕವಾಗುತ್ತದೆ ಎಂದು ಆಶಾಭಾವ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಕರ್ತವ್ಯದಲ್ಲಿ ಉತ್ತಮ ಸಾಧನೆಗೈದ ಮಹಿಳೆಯರಿಗೆ ಪ್ರಶಸ್ತಿ ಪುರಸ್ಕರಿಸಲಾಯಿತು.
’ಸ್ತ್ರೀ ರತ್ನ ಪ್ರಶಸ್ತಿ’ -ಮಾತೋಶ್ರೀ ನೀಲಮ್ಮ ತಾಯಿ ನಿಷ್ಠಿ, ಡಾ. ವಿಲಾಸವತಿ ಖುಬಾ, ಶಾಸಕಿ ಅರುಣಾ ಸಿ. ಪಾಟೀಲ, ಪ್ರಭಾವತಿ ಧರ್ಮಸಿಂಗ್, ಶಕುಂತಲಾ ಭೀಮಳ್ಳಿ ಪ್ರಶಸ್ತಿ ನೀಡಿ ಗೌರವಿಸಲಾಯಿತು.
’ವೀರ ಮಹಿಳೆ ಪ್ರಶಸ್ತಿ’-ಡಾ.ಅರುಂಧತಿ ಪಾಟೀಲ, ಯಶೋಧಾ ಕಟ್ಕೆ, ಅಕ್ಕಮಹಾದೇವಿ ಎನ್. ಭಾರತಿ ಧನ್ನಿ ಅವರಿಗೆ ಸನ್ಮಾನಿಸಲಾಯಿತು. ಸ್ತ್ರೀ ಶಕ್ತಿ ಪ್ರಶಸ್ತಿ ಡಾ. ಗಂಗಾಂಬಿಕಾ ಮಲ್ಲಿಕಾರ್ಜುನ ನಿಷ್ಠಿ, ಡಾ.ಶಾಂತಲಾ ಶರಣಬಸಪ್ಪ ನಿಷ್ಠಿ, ಲಿಂಗಮ್ಮ ಪತಂಗೆ, ನಂದಿನಿ ನಿರಂಜನ್ ನಿಷ್ಠಿ, ಡಾ. ಉಮಾ ಬಸವರಾಜ ದೇಶಮುಖ, ಶೈಲಜಾ ಪಾಟೀಲರ ಅನುಪಸ್ಥಿಯಲ್ಲಿ ಪಂಚಮ್ಮ ಅವ್ವನವರನ್ನು ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಕಾಯಕರತ್ನ ಪ್ರಶಸ್ತಿ ಡಾ. ನೀಲಾಂಬಿಕಾ ಪೊಲೀಸ ಪಾಟೀಲ ಡಾ. ಲಕ್ಷ್ಮಿ ಮಾಕಾ ಪ್ರಶಸ್ತಿ ನೀಡಲಾಯಿತು.
ಡಾ. ನಾನಾಸಾಹೇಬ್ ಹಚ್ಚಡದ್ ಕಾರ್ಯಕ್ರಮ ನಿರೂಪಿಸಿದರು. ಡಾ. ಸೀಮಾಪಾಟೀಲ್ ಮತ್ತು ಪ್ರೊ. ರೇವಯ್ಯ ವಸ್ತ್ರದ ಮಠ್ ಹಾಗೂ ಶೋಭಾ ಮತ್ತು ಸಂಗಡಿಗರು ಪ್ರಾರ್ಥನೆ ಗೀತೆ ಹಾಡಿದರು. ಪ್ರವಾಸೋದ್ಯಮ ವಿಭಾಗದ ವಿದ್ಯಾರ್ಥಿನಿ ವಜ್ರೇಶ್ವರಿ ಉಧ್ಟಾಟನಾ ನೃತ್ಯ ಮಾಡಿದರು. ಡಾ. ಲಕ್ಷ್ಮಿಮಾಕಾ ಸ್ವಾಗತಿಸಿದರು. ಡಾ. ವಾಣೀಶ್ರೀ ವಂದಿಸಿದರು.

ದೊಡ್ಡಪ್ಪ ನಿಷ್ಠಿ, ಶರಣಬಸವಪ್ಪ ನಿಷ್ಠಿ, ಮಲ್ಲಿಕಾರ್ಜುನ ನಿಷ್ಠಿ, ಡಾ. ಶಿವಲಿಂಗ ನಿಷ್ಠಿ, ಕಡಗಂಚಿ ಕೇಂದ್ರೀಯ ವಿಶ್ವವಿದ್ಯಾಲಯದ ಸಹಾಯಕ ಪ್ರಾಧ್ಯಾಪಕರಾದ ಡಾ. ಸಫೀಯಾ ಪರವೀನ್. ಮುಖ್ಯ ಭಾಷಣಕಾರರಾಗಿ ಭಾಗವಹಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಿವಿಕುಲಪತಿ ಡಾ. ನಿರಂಜನ್ ವಿ.ನಿಷ್ಠಿ ವಹಿಸಿದರು. ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಬಸವರಾಜ ದೇಶಮುಖ, ವಿವಿ ಸಮಕುಲಪತಿ, ಡಾ. ವಿಡಿ. ಮೈತ್ರಿ, ಎನ್.ಎಸ್.ದೇವರಕಲ್, ಕುಲಸಚಿವ ಡಾ. ಅನೀಲಕುಮಾರ ಬಿಡವೆ ಡಾ. ಶಶಿಕಲಾ ಉಪಸ್ಥಿತರಿದ್ದರು.

emedialine

Recent Posts

ಶ್ರೀಮತಿ ವಿ. ಜಿ  ಕಾಲೇಜಿನ ವಿದ್ಯಾರ್ಥಿನಿಯರಿಂದ ದಾಂಡಿಯಾ ನೃತ್ಯ

ಕಲಬುರಗಿ: ಹೈದ್ರಾಬಾದ ಕರ್ನಾಟಕ ಶಿಕ್ಷಣ ಸಂಸ್ಥೆಯ ಶ್ರೀಮತಿ ವೀರಮ್ಮ ಗಂಗಸಿರಿ ಪದವಿ ಪೂರ್ವ ಮಹಿಳಾ ಮಹಾವಿದ್ಯಾಲಯ ಕಲಬುರಗಿಯಲ್ಲಿ ಪ್ರತಿ ವರ್ಷದಂತೆ…

3 hours ago

ತೂಕದಲ್ಲಿ ಆಗುವ ವ್ಯತ್ಯಾಸ ಸರಿಪಡಿಸಿ: ಪ್ರತಿ ಟನ್ ಕಬ್ಬಿಗೆ 3500 ಬೆಲೆ ನಿಗದಿ ಪಡಿಸಿ

ಅಫಜಲಪುರ: 2024-25ನೇ ಸಾಲಿನಲ್ಲಿ ಅಫಜಲಪುರ ತಾಲೂಕಿನಲ್ಲಿರುವ ಸಕ್ಕರೆ ಕಾರ್ಖಾನೆಗಳು ರೈತರಿಗೆ ಕನಿಷ್ಠ 3500 ರೂ.ಬೆಲೆ ನಿಗದಿ ಪಡಿಸಿ ಘೋಷಣೆ ಮಾಡಬೇಕು,ಅಲ್ಲದೇ…

9 hours ago

ಕಲಬುರಗಿ: ಯತಿ ನರಸಿಂಹಾನಂದ್ ಬಂಧನಕ್ಕೆ ಆಗ್ರಹಿಸಿ ದಿಢೀರ್ ಪ್ರತಿಭಟನೆ

ಕಲಬುರಗಿ: ಕಾರ್ಯಕ್ರಮ ಒಂದರಲ್ಲಿ ಪ್ರವಾದಿ ಮುಹಮ್ಮದ್ (ಸ.ಅ) ಅವರ ವಿರುದ್ಧ ಅಕ್ರಮಣಕಾರಿ ಮತ್ತು ಪ್ರಚೋದನಕಾರಿ ಹೇಳಿಕೆ ನೀಡಿರುವ ಗಾಜಿಯಾಬಾದ್‌ನ ದಾಸ್ನಾ…

19 hours ago

ದುಶ್ಚಟ ಮುಕ್ತ ಸಮಾಜ ನಿರ್ಮಾಣ ಹಕ್ಕೊತ್ತಾಯ ಪತ್ರ ಜಿಲ್ಲಾಧಿಕಾರಿಗಳಿಗೆ ಮಂಡನೆ

ಕಲಬುರಗಿ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಬಿ.ಸಿ ಟ್ರಸ್ಟ್ ಮತ್ತು ಜಿಲ್ಲಾ ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಸಮಿತಿಯಿಂದ…

21 hours ago

ನೀರಿನ ಬಿಲ್ ಬಡ್ಡಿ ಮನ್ನಾ ಮಾಡಲು ಡಾ.ರಶೀದ್ ಜಿಲ್ಲಾಧಿಕಾರಿಗಳಿಗೆ ಮನವಿ

ಶಹಾಬಾದ: ನಗರಸಭೆ ವ್ಯಾಪ್ತಿಯ ಸಾರ್ವಜನಿಕರ ಕುಡಿಯುವ ನೀರಿನ ಬಿಲ್ ಬಡ್ಡಿ ಮನ್ನಾ ಮಾಡಿ ಅಸಲು ಮಾತ್ರ ಪಾವತಿಸಲು ಅನುಕೂಲ ಮಾಡಿಕೊಡಬೇಕೆಂದು…

21 hours ago

ಕೃಷಿ ಪತ್ತಿನ ಸಹಕಾರ ಸಂಘಗಳು ರೈತರ ಜೀವನಾಡಿ; ಮತ್ತಿಮಡು

ಶಹಾಬಾದ: ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳು ರೈತರ ಜೀವನಾಡಿಯಾಗಿದ್ದು, ಇವುಗಳ ಪ್ರಗತಿಗೆ ಆದ್ಯತೆ ನೀಡುವುದು ಪ್ರತಿಯೊಬ್ಬರ ಜವಾಬ್ದಾರಿ ಎಂದು…

21 hours ago

Notice: ob_end_flush(): Failed to send buffer of zlib output compression (0) in /home3/emedixap/public_html/wp-includes/functions.php on line 5420