ಕಲಬುರಗಿ: ನಗರದ ಖ್ವಾಜಾ ಬಂದಾ ನವಾಜ್ ವಿಶ್ವ ವಿದ್ಯಾಲಯದಲ್ಲಿ ವಿವಿಧ ಸಂಸ್ಕೃತಿಕ ಕಾರ್ಯಕ್ರಮಗಳು ನಡೆಸುವ ಮೂಲಕ ವಿಶ್ವ ಮಹಿಳಾ ದಿನಾಚರಣೆ ಆಚರಿಸಲಾಯಿತು.
ಕಾರ್ಯಕ್ರಮದಲ್ಲಿ ವಿದ್ಯಾರ್ಥಿನಿಯರು ಲಂಗರ್, ಖಿರತ್, ಕವನ ವಾಚನ, ಕವಿಗೋಷ್ಠಿ ಹಾಗೂ ಭಾಷಣ ಸ್ಪರ್ಧೆಗಳು ಜರುಗಿದವು.ಈ ವೇಳೆಯಲ್ಲಿ ಕಮಲಾಪುರ ದಂಡಾಧಿಕಾರಿ ಅಂಜುಮ್ ತಬಸ್ಸುಮ್, ಪ್ರೌಢ ಶಾಲೆಯ ಪ್ರಾಂಶಿಪಾಲರಾದ ಸಯೀದ್ ಅಕ್ಬರ್ ಹುಸೈನಿ, ಆಯೀನಾ ವಿ ಬ್ರೆಂಡಿಶ್ ಅವರು ಕಾರ್ಯಕ್ರಮಕ್ಕೆ ಮುಖ್ಯಥಿತಿಗಳಾಗಿ ಭಾಗವಹಿಸಿದರು.
ಸುಮ್ಮಯ್ಯ ಸಮರಿನ್ ಲಂಗರ್ ಹಾಕುವ ಮೂಲಕ ಕಾರ್ಯಕ್ರಮ ನಡೆಸಿಕೊಟ್ಟಿದರೆ. ಹೀನಾ ಅಂಜುಮ್ ಮತ್ತು ಸಮರಿನ್ ಆಫರೀನ್ ಖಿರತ ಮತ್ತು ಕ್ಯಾಂಡಲ್ ಬೆಳಗಿಸಿ ಸಮಾರಂಭಕ್ಕೆ ಚಾಲನೆ ನೀಡಿದರು.
ಹೀನಾ ಬೇಗಂ, ಉಮ್ಮೆಸಲ್ಮಾ ಸಯ್ಯದಾ ಆಸ್ನಾ, ಸಫೂರಾ ಮತ್ತು ನೇಹಾರ ಸಂಗಡಿಗರು ಮಹಿಳೆ ಮೇಲೆ ಹಾಡು ಹಾಡಿದರು. ಶಾಫಿಯಾ ಅವರು ಮಹಿಳೆಯರ ಸ್ಥಿತಿಗತಿಗಳ ಬಗ್ಗೆ ಭಾಷಣ ಮಾಡಿದರು. ಆಸ್ನಾ ಅವರು ಕವನ ವಾಚಿಸಿದರು. ಖೈರನ್ನಿಸಾ ಬೇಗಂ, ಹೀನಾ ಸುಲ್ತಾನಾ, ಫರಹಾನಾ ನೌಶೀನ್, ರೇಷ್ಮಾ ಬೇಗಂ ಅಮಿನಾ ಬೇಗಂ, ಶಾಫಿಯಾ ಅಂಜುಮ್, ಜವೇರಿಯಾ ಅಂಜುಮ್ ಅವರಿಂದ ವಿಶ್ವ ಮಹಿಳಾ ದಿನಾಚರಣೆ ಅಂಗವಾಗಿ ನಾಟಕ ಪ್ರದರ್ಶನ ಮಾಡುವ ಮೂಲಕ ಅರ್ಥಪೂರ್ಣವಾಗಿ ದಿನಾಚರಣೆಯನ್ನು ಆಚರಿಸಲಾಯಿತು.
ಕಾರ್ಯಕ್ರಮದಲ್ಲಿ ವಿಶ್ವ ವಿದ್ಯಾಲಯದ ಶಿಕ್ಷಕರು ಸೇರಿದಂತೆ ಸಿಬ್ಬಂದಿ ವರ್ಗದವರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…