ಕಲಬುರಗಿ: ಶೈಕ್ಷಣಿಕ ಕ್ಷೇತ್ರಕ್ಕೆ ಮಹಿಳೆಯ ಕೊಡುಗೆ ಅಪಾರವಾಗಿದೆ. ಇಂದು ಬಹುತೇಕ ಕಡೆಗಳಲ್ಲಿ ಹೆಣ್ಮುಕ್ಕಳೇ ಪಾಠ ಮಾಡುತ್ತಿದ್ದಾರೆ. ಯಶಸ್ವಿ ಶಿಕ್ಷಕಿಯರಾಗುವ ಮೂಲಕ ವಿದ್ಯಾರ್ಥಿಗಳ ಪ್ರಗತಿಗೆ ಶ್ರಮಿಸುತ್ತಿದ್ದಾರೆ ಎಂದು ಕಾಯಕ ಫೌಂಡೇಷನ್ ಏಜುಕೇಷನ್ ಟ್ರಸ್ಟ್ ಅಧ್ಯಕ್ಷೆ ಸಪ್ನಾರಡ್ಡಿ ಶಿವರಾಜ ಪಾಟೀಲ್ ಅಭಿಪ್ರಾಯಿಸಿದರು.
ನಗರದ ರಿಂಗ್‌ರೋಡ್‌ನಲ್ಲಿರುವ ಜಿಡಿಎ ಧರಿಯಾಪುರ-ಕೋಟನೂರ ಬಡಾವಣೆಯಲ್ಲಿರುವ ಕಾಯಕ ಫೌಂಡೇಷನ್ ವಸತಿ ಹೈಸ್ಕೂಲ್ ಮತ್ತು ಪ್ರಾಥಮಿಕ ಶಾಲೆಯಲ್ಲಿ ಮಹಿಳಾ ದಿನಾಚರಣೆ ನಿಮಿತ್ತ ಆಯೋಜಿಸಿದ್ದ ಸಮಾರಂಭದಲ್ಲಿ ಮಾತನಾಡಿ, ಶೈಕ್ಷಣಿಕ ಕ್ರಾಂತಿ ಹೆಚ್ಚಾಗಲು ಮಹಿಳಾ ಶಿಕ್ಷಕರ ಶ್ರಮವೇ ಕಾರಣವಾಗಿದೆ. ಸಮುದಾಯ ಪ್ರಗತಿಗೆ ಅಪಾರವಾಗಿ ಶ್ರಮಿಸುತ್ತಿದ್ದಾರೆ ಎಂದರು.
ಸಂತೃಪ್ತಿ ಹೊಂದಿದ ಮಹಿಳೆ ಆರ್ಥಿಕವಾಗಿ ಬಡವರಿದ್ದರೂ, ಹೃದಯ ಶ್ರೀಮಂತಿಕೆ ಹೊಂದಿರುತ್ತಾರೆ. ಮಹಿಳೆಯರಿಗೆ ಹಕ್ಕು ನೀಡಿದರೆ ಸಬಲೀಕರಣಗೊಳ್ಳಲು ಸಾಧ್ಯ ಎಂಬುದು ಈಚಿನ ಹಲವು ಬೆಳವಣಿಗೆಗಳನ್ನು ಗಮನಿಸಿದಾಗ ನಿಜವಾಗಿದೆ. ಲಿಂಗ ತಾರತಮ್ಯ ದೂರವಾಗಿದೆ. ಮಹಿಳೆಯರು ಪುರುಷರಿಗೆ ಸಮಾನವಾಗಿ ಕೆಲಸ ಮಾಡುವ ಮೂಲಕ ತಾವು ಕಡಿಮೆಯಿಲ್ಲ ಎಂಬುದು ಸಾಬೀತು ಮಾಡಿದ್ದಾರೆ ಎಂದು ಸಪ್ನಾರಡ್ಡಿ ಹೇಳಿದರು.
ಸಂಸ್ಥೆಯ ಅಧ್ಯಕ್ಷೆ ಸಪ್ನಾರಡ್ಡಿ ಶಿವರಾಜ ಪಾಟೀಲ್, ಪ್ರಾಚಾರ್ಯರಾದ ವೈಶಾಲಿ ಗೋಟಗಿ ಮತ್ತು ಶಿಕ್ಷಕಿಯರು ಕೇಕ್ ಕತ್ತರಿಸಿ ಸಂಭ್ರಮಿಸಿದರು. ಅಲ್ಲದೆ ಸಾಂಕೇತಿಕವಾಗಿ ಪರಸ್ಪರ ಗುಲಾಲ್ ಹಚ್ಚುವ ಮೂಲಕ ಹೋಳಿಯನ್ನು ಆಚರಿಸಿದರು. ಶಿಕ್ಷಕಿಯರಾದ ವೇದಾವತಿ ಆಲಂಪಲ್ಲಿ, ಭಾರತಿ ಕುಲಕರ್ಣಿ, ಸಂಧ್ಯಾ, ಮೈತ್ರಾ, ಭಾಗ್ಯಶ್ರೀ, ರೇಣುಕಾ, ಲಾವಣ್ಯ, ಕಾವ್ಯಾ, ವಿದ್ಯಾವತಿ ಆಲೂರ, ಕುಲಸುಂಬಿ ಸೇರಿದಂತೆ ಎಲ್ಲ ಶಿಕ್ಷಕಿಯರಿದ್ದರು. ಸಂಸ್ಥೆ ಸಂಸ್ಥಾಪಕರಾದ ಶಿವರಾಜ ಟಿ.ಪಾಟೀಲ್ ಮತ್ತು ಚಂದ್ರಶೇಖರ ಟಿ.ಪಾಟೀಲ್ ಇದ್ದರು.
ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…