ಬಿಸಿ ಬಿಸಿ ಸುದ್ದಿ

ರಂಗಂಪೇಟೆ ಸುರಕ್ಷಾ ಮಹಿಳಾ ಸಂಘದಿಂದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ

ಸುರಪುರ: ನಗರದ ರಂಗಂಪೇಟೆಯ ಸುರಕ್ಷ ಮಹಿಳಾ ಸಹಕಾರ ಸಂಘದಿಂದ ಅಂತರಾಷ್ಟ್ರೀಯ ಮಹಿಳಾ ದಿನವನ್ನು ಆಚರಿಸಲಾಯಿತು.

ಕಾರ್ಯಕ್ರಮವನ್ನು ಜ್ಯೋತಿ ಬೆಳಗುವ ಮೂಲಕ ಉದ್ಘಾಟಿಸಿದ ಸಂಘದ ಅಧ್ಯಕ್ಷೆ ಸುನಂದಾ ಎಂ.ನಾಲವಾರ ಮಾತನಾಡಿ,ಮಹಿಳೆಯರು ಇಂದು ಪುರುಷರಂತೆ ಎಲ್ಲಾ ರಂಗದಲ್ಲೂ ಸರಿಸಮಾನರಾಗಿ ನಿಂತಿದ್ದೇವೆ.ಹಿಂದೆ ಮಹಿಳೆ ಎಂದರೆ ಕೇವಲ ನಾಲ್ಕು ಗೋಡೆಗೆ ಮಾತ್ರ ಸೀಮಿತ ಎನ್ನುವ ಸಂಪ್ರದಾಯವಿತ್ತು,ಆದರೆ ಇಂದು ಮಹಿಳೆಯರು ಪುರುಷರಿಗಿಂತ ಒಂದು ಹೆಜ್ಜೆ ಮುಂದೆ ಹೋಗುವ ನಿಟ್ಟಿನಲ್ಲಿ ಜಾಗೃತರಾಗಿದ್ದೇವೆ.ಶಿಕ್ಷಣದಲ್ಲಿ ನೋಡಿದರೆ ಎಸ್.ಎಸ್.ಎಲ್.ಸಿ,ಪಿಯುಸಿ ಮತ್ತು ಪದವಿಗಳಲ್ಲಿ ಕೂಡ ಪುರುಷರಿಗಿಂತ ಮೊದಲ ಸ್ಥಾನದಲ್ಲಿದ್ದೇವೆ.ಅದರಂತೆ ರಾಜಕೀಯ ರಂಗದಲ್ಲಿ,ಔದ್ಯೋಗಿಕ ರಂಗದಲ್ಲಿ,ಕಲೆ ಮತ್ತು ಸಾಹಿತ್ಯಿಕ ರಂಗದಲ್ಲೂ ಹಿಂದೆ ಬಿದ್ದಿಲ್ಲ.ಇಷ್ಟೆಲ್ಲ ಇದ್ದರು ಮಹಿಳೆಯರಿಗೆ ಇನ್ನೂ ಹೆಚ್ಚಿನ ಪ್ರಾಧಾನ್ಯತೆ ಸಿಗದಿರುವುದು ವಿಷಾಧದ ಸಂಗತಿಯಾಗಿದೆ ಎಂದರು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿದ್ದ ಎಸ್.ಬಿ.ಆರ್.ಕಾಲೇಜಿನ ಉಪನ್ಯಾಸಕಿ ರತ್ನಪ್ರಭಾ ಮಾತನಾಡಿ,ಮಹಿಳೆ ಇಂದು ಪುರುಷರ ಸರಿಸಮಾನವಾಗಿ ನಿಲ್ಲುತ್ತಿದ್ದರು ಇಂದು ಸಮಾಜದಲ್ಲಿ ಮಹಿಳೆಯರ ಮೇಲೆ ನಡೆಯುತ್ತಿರುವ ದೌರ್ಜನ್ಯಗಳು ಕಡಿಮೆಯಾಗುತ್ತಿಲ್ಲ.ಇದರ ವಿರುಧ್ಧ ಮಹಿಳೆಯರು ಜಾಗೃತರಾಗಬೇಕಿದೆ.ಪ್ರತಿ ಮಹಿಳೆಯು ತನಗೆ ತಾನೇ ರಕ್ಷಕಳಾಗಬೇಕಿದೆ.ಮಹಿಳೆಯರು ಇನ್ನೂ ಹೆಚ್ಚಿನ ಮಟ್ಟದಲ್ಲಿ ಸಂಘಟಿತರಾಗಿ ಬರುವ ಯಾವುದೆ ತೊಂದರೆ,ಸಮಸ್ಯೆಗಳ ವಿರುಧ್ಧ ಹೋರಾಟ ನಡೆಸಬೇಕಿದೆ.ಮಹಿಳೆಯರಿಗೆ ಮೀಸಲಾತಿ ನೀಡದೆಯಾದರು ಅದರ ಪ್ರಮಾಣ ಇನ್ನು ಹೆಚ್ಚಬೇಕು ಮತ್ತು ಮೀಸಲಾತಿ ಕಡ್ಡಾಯವಾಗಿ ಜಾರಿಯಾಗಬೇಕು.ಇದರ ಕುರಿತು ನಾವೆಲ್ಲ ದೊಡ್ಡ ಮಟ್ಟದಲ್ಲಿ ಧ್ವನಿ ಎತ್ತುವ ಅವಶ್ಯವಿದೆ ಎಂದರು.

ಹರ್ಬಲ್ ನ್ಯೂಟ್ರೆಷನ್ ಕ್ಲಬ್‌ನ ಸುನಿತಾ ಎಸ್.ಪಾಟೀಲ,ರಾಜೇಶ್ವರಿ ಪತ್ತಾರ ವೇದಿಕೆ ಮೇಲಿದ್ದರು.ಶಿಕ್ಷಕಿ ರಸ್ಮಿ,ಸರಸ್ವತಿ ಶಿರವಾಳ,ಮಾಲನಬಿ,ರಜಿಯಾ ಬೇಗಂ, ಶೈಲಶ್ರೀ, ಅಲಿಮಾ, ಸುನಿತಾ, ಬಬಿತಾ, ಸೋಪಮ್ಮಾ, ಗಂಗಮ್ಮಾ, ದೇವಮ್ಮಾ,ವೀಣಾ,ವಿಜಯಲಕ್ಷ್ಮೀ,ನಾಗರತ್ನಾ,ನಿರ್ಮಲಾ,ಇಮಾಂಬಿ,ಗಾಯತ್ರಿ ಇತರರು ಉಪಸ್ಥಿತರಿದ್ದರು,ಉಪನ್ಯಾಸಕಿ ಸ್ನೇಹಾಂಜನಿ ಶಾಬಾದಿ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.

emedialine

Recent Posts

ನಿಧನ ವಾರ್ತೆ; ಆನಂದಪ್ಪ ಉಮ್ಮನಗೋಳ್

ಕಲಬುರಗಿ: ಅಫಜಲಪುರ ತಾಲೂಕಿನ ಸೊನ್ನ ಗ್ರಾಮದ ನಿವಾಸಿ ಆನಂದಪ್ಪ ಶರಣಪ್ಪ ಉಮ್ಮನಗೋಳ್(೮೦) ಅವರು ಸೋಮವಾರ ಬೆಳಗ್ಗೆ ವಯೋಸಹಜವಾಗಿ ನಿಧನರಾದರು. ಮೃತರು…

28 mins ago

ಸಂಘಸಂಸ್ಥೆಗಳು ಸಮಾಜಕ್ಕೆ ನೀಡಿದ ಕೋಡುಗೆ ಅಪಾರ ಪಾಳಾಶ್ರೀ

ಕಲಬುರಗಿ: ಸಂಘಸಂಸ್ಥೆಗಳು ಸಾದಕರನ್ನು ಗುರುತಿಸಿ ಪ್ರಶಸ್ತಿ ಪುರಸ್ಕಾರಗಳನ್ನು ನೀಡುವ ಮುಖಾಂತರಾ ಅವರ ಜವಾಬ್ದಾರಿ ಹೆಚ್ಚಿಸುವುದರಜೋತೆಯಲ್ಲಿ ಸಾಮಾಜಿಕ ಕೆಲಸಗಳನ್ನು ಮಾಡುತ್ತಿರುವುದು ಸಮಾಜಕ್ಕೆ…

30 mins ago

ಹೊಸ ಹೊಸ ಉದ್ಯೋಗ ಸೃಷ್ಟಿಸಲು HKE ಸಂಸ್ಥೆ ಕಾರ್ಯ ಶ್ಲಾಘನೀಯ

ಕಲಬುರಗಿ; ಹೈದ್ರಾಬಾದ್- ಕರ್ನಾಟಕ ಶಿಕ್ಷಣ ಸಂಸ್ಥೆಯ PDACE ಸಭಾಂಗಣದಲ್ಲಿ ನಡೆದ ಕಲ್ಯಾಣ ಕರ್ನಾಟಕ startup conclave ಇಂದು ದಕ್ಷಣ ಶಾಸಕ…

34 mins ago

ಸ್ವಾಭಿಮಾನದ ಬದುಕಿಗೆ ಸಂಗೀತ ಪೂರಕ

ಕಲಬುರಗಿ : ಒತ್ತಡದ ಬದುಕಿನಲ್ಲಿ ಸಂಗೀತ ಆಲಿಸುವುದರಿಂದ ಮಾನಸಿಕ ನೆಮ್ಮದಿ, ಶಾಂತಿ ದೊರೆಯಲು ಸಾಧ್ಯವಿದೆ. ಅನೇಕ ಜನ ಸಂಗೀತ ಕಲಾವಿದರಿಂದು…

38 mins ago

ಅಲ್ಪಸುಖಕ್ಕಾಗಿ ಯುವ ಜನತೆ ಮಾದಕ ಪದಾರ್ಥಗಳಿಗೆ ದಾಸರಾಗಬೇಡಿ

ಕಲಬುರಗಿ; ಅಲ್ಪಸುಖಕ್ಕಾಗಿ ಯುವ ಜನತೆ ಮಾದಕ ಪದಾರ್ಥಗಳಿಗೆ ದಾಸರಾಗಿ ತಮ್ಮ ಜೀವನ ಹಾಳು ಮಾಡಿಕೊಳ್ಳಬಾರದು ಎಂದು ಜಿಲ್ಲಾ ತಂಬಾಕು ನಿಯಂತ್ರಣ…

40 mins ago

ಸೇಡಂ: `ಅಮ್ಮ ಪ್ರಶಸ್ತಿ’ ಪ್ರದಾನ ಸಮಾರಂಭ ನಾಳೆ

ಸೇಡಂ (ಕಲಬುರಗಿ);  ಜಿಲ್ಲೆಯ ಸೇಡಂನ ಮಾತೋಶ್ರೀ ಮಹಾದೇವಮ್ಮ ನಾಗಪ್ಪ ಮುನ್ನೂರ್ ಪ್ರತಿಷ್ಠಾನ ಕೊಡಮಾಡುವ `ಅಮ್ಮ ಪ್ರಶಸ್ತಿ’ 24ನೇ ವರ್ಷದ ಸಮಾರಂಭವು…

1 hour ago