ಶಹಾಬಾದ: ನಗರದಲ್ಲಿ ಬಡ ಕೂಲಿ ಕಾರ್ಮಿಕರು, ದಲಿತರು, ಹಿಂದುಳಿದವಡಿಇ ಹೆಚ್ಚು ವಾಸಿಸುತ್ತಿದ್ದು, ಇಂತಹವರ ಮಕ್ಕಳು ಯಾವುದೇ ಕಾರಣಕ್ಕೂ ಶಿಕ್ಷಣದಿಂದ ವಂಚಿತರಾಗಬಾರದು ಎಂಬ ಉದ್ದೇಶದಿಂದ ಮಕ್ಕಳಿಗೆ ಉಚತವಾಗಿ ನೋಟ್‌ಬುಕ್, ಬ್ಯಾಗ್ ಸೇರಿದಂತೆ ವಿವಿಧ ಕಲಿಕಾ ಸಾಮಗ್ರಿಯನ್ನು ನೀಡಲಾಗುತ್ತಿದೆ ಎಂದು ಬಿಜೆಪಿ ಮುಖಂಡೆ ಜಯಶ್ರೀ ಮತ್ತಿಮಡು ಹೇಳಿದರು.
ಅವರು ನಗರದ ಶಾಸಕರ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಬಸವರಾಜ ಮತ್ತಿಮಡು ಅಭಿಮಾನಿ ಬಳಗದ ವತಿಯಿಂದ ಆಯೋಜಿಸಲಾದ ಉಚಿತ ನೋಟ್ಬುಕ್, ಬ್ಯಾಗ್ ವಿತರಿಸಿ ಮಾತನಾಡಿದರು.
ಬಡ ಮಕ್ಕಳ ಶಿಕ್ಷಣಕ್ಕೆ ಒತ್ತು ನೀಡುವ ಮೂಲಕ ಅವರಿಗೆ ಕಲಿಕಾ ಸಾಮಗ್ರಿ ನೀಡಿ ಅವರನ್ನು ಉತ್ತೇಜಿಸುವ ಕೆಲಸ ಅರ್ಥಪೂರ್ಣವಾದುದು. ಅಲ್ಲದೇ ಶಿಕ್ಷಣದಿಂದ ವಂಚಿತರಾಗುವ ಮಕ್ಕಳಿಗೆ ನೆರವು ನೀಡುವ ಕೆಲಸಕ್ಕೆ ಸಾಂಜದ ಪ್ರತಿಯೊಬ್ಬ ನಾಗರಿಕರ ಕರ್ತವ್ಯ.ಅದನ್ನು ಸಮಾಜದ ಜನರು ಒಟ್ಟೂಗೂಡಿ ಮಾಡುವ ಮೂಲಕ ಇತರರಿಗೆ ಮಾದರಿಯಾಗಿ ಎಂದು ಹೇಲೀದರು.ಶ್ಲಾಘನೀಯ, ಆರ್ಥಪೂರ್ಣವಾಗಿದೆ ಎಂದು ಹೇಳಿದರು.
ಬಿಜೆಪಿ ಮಹಿಳಾ ಘಟಕದ ಮುಖಂಡರಾದ ಭಾಗಿರತಿ ಗುನ್ನಾಪೂರ, ಜಯಶ್ರೀ ಸೂಡಿ, ಮುಖಂಡರಾದ ಅರುಣಕುಮಾರ ಪಟ್ಟಣಕರ, ನಾಗರಾಜ ಮೇಲಗಿರಿ, ನಿಂಗಣ್ಣ ಹುಳಗೋಳ, ಕನಕಪ್ಪ ದಂಡಗುಲಕರ್, ಡಾ.ಅಶೋಕ ಜಿಂಗಾಡೆ, ಸದಾನಂದ ಕುಂಬಾರ, ನಗರ ಸಭೆ ಸದಸ್ಯ ರವಿ ರಾಠೋಡ, ವಿರೇಶ ಬಂದಳ್ಳಿ, ದತ್ತಾ ಫಂಡ್, ಶ್ರೀಧರ ಜೋಶಿ, ಬಸವರಾಜ ಬಿರಾದಾರ, ಭೀಮಯ್ಯ ಗುತ್ತೇದಾರ ಸೇರಿದಂತೆ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.
ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…